ಅವನ ಬ್ಯಾಟ್‌ ನಲ್ಲಿ ಚಿಪ್‌ ಇದೆ ಎಂದ ಪಾಕ್ ಆಟಗಾರನ ಮಾತಿಗೆ ವೈಭವ್ ಸೂರ್ಯವಂಶಿ ಕೊಟ್ಟ ಉತ್ತರ ಏನು ಗೊತ್ತೇ?

ನವದೆಹಲಿ, ಏಪ್ರಿಲ್ 29: ಐಪಿಎಲ್ 2026ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ 15 ವರ್ಷದ ಯುವ ಕ್ರಿಕೆಟ್ ಪ್ರತಿಭೆ ವೈಭವ ಸೂರ್ಯವಂಶಿ ಆಟಕ್ಕೆ ಮರುಳಾಗದವರೇ ಇಲ್ಲದಂತಾಗಿದೆ. ಇದೀಗ ಸೂರ್ಯವಂಶಿ ಕುರಿತು ಚರ್ಚೆ ಪಾಕಿಸ್ತಾನದಲ್ಲೂ ಆರಂಭವಾಗಿದ್ದು, ಅಲ್ಲಿನ ಅನೇಕ ಹಿರಿಯ ಆಟಗಾರರು ಈ ಯುವ ಆಟಗಾರನ ಆಟವನ್ನು ಕೊಂಡಾಡುತ್ತಿದ್ದಾರೆ.

ಈ ನಡುವೆ ಪಾಕಿಸ್ತಾನದ ಪ್ರಸಿದ್ಧ ಕ್ರಿಕೆಟ್ ವಿಶ್ಲೇಷಕ ನೌಮಾನ್ ನಿಯಾಜ್ ಅವರು ವೈಭವ ಆಕ್ರಮಣಕಾರಿ ಬ್ಯಾಟಿಂಗ್ ನೋಡಿ “ಅವನ ಬ್ಯಾಟ್‌ನಲ್ಲಿ AI ಚಿಪ್ ಇರಬಹುದು, ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ಮಾಡಬೇಕುʼʼ ಎಂದು ತಮಾಶೆಯಿಂದ ಹೇಳಿದ್ದರು. ವಾಸ್ತವವಾಗಿ ನಿಯಾಜ್‌ ಹದಿನೈದು ವರ್ಷದ ಈ ಹುಡುಗನ ಆಟವನ್ನು ಹೊಗಳಲೆಂದು ಹೀಗೆ ಹೇಳಿದ್ದರು.

ಆದರೆ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು. ಭಾರತದ ಅನೇಕ ಕ್ರಿಕೆಟ್‌ ಪ್ರಿಯರು ನಿಯಾಜ್‌ ಹೇಳಿಕೆಯ ಹಾಸ್ಯವನ್ನು ಗುರುತಿಸದೆ ಕೆಂಡ ಕಾರತೊಡಗಿದ್ದರು.

ಆದರೆ ಈಗ ಸ್ವತಃ ವೈಭವ್‌ ಸೂರ್ಯವಂಶಿ ಈ ವಿವಾದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಈ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ವೈಭವ್‌, ʻʻಹೌದು, ನನ್ನ ಬ್ಯಾಟ್‌ ನಲ್ಲಿ ಚಿಪ್‌ ಇದೆ. ಅದನ್ನು ದೇವರೇ ನನ್ನ ಬ್ಯಾಟ್‌ ಗೆ ಅಳವಡಿಸಿದ್ದಾರೆʼʼ ಎಂದು ಹೇಳಿದ್ದಾರೆ.

ವೈಭವ್‌ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, “ಇದೇ ನಿಜವಾದ ಪ್ರತಿಭೆಯ ಉತ್ತರ” ಎಂದು ಅಭಿಮಾನಿಗಳು ಪ್ರಶಂಸೆಯ ಮಳೆ ಸುರಿಸುತ್ತಿದ್ದಾರೆ.

ಈ ವರ್ಷದ ಐಪಿಎಲ್‌ ನ 9 ಪಂದ್ಯಗಳಲ್ಲಿ ಸುಮಾರು 400 ರನ್‌ ಗಳಿಸಿರುವ ವೈಭವ್‌ ಸ್ಟ್ರೈಕ್‌ ರೇಟ್‌ 238ಕ್ಕೂ ಹೆಚ್ಚು. ಈಗಾಗಲೇ ಆರೆಂಜ್‌ ಕ್ಯಾಪ್‌ ರೇಸ್‌ ನಲ್ಲಿ ಎಲ್ಲರಿಗಿಂತ ಮುಂದೆ ಇರುವ ವೈಭವ್ ಜಸ್ಪ್ರೀತ್ ಬೂಮ್ರಾ, ಜೋಶ್ ಹೇಜಲ್‌ವುಡ್‌, ಭುವನೇಶ್ವರ್‌ ಕುಮಾರ್‌ ರಂಥ ವಿಶ್ವದರ್ಜೆಯ ಬೌಲರ್‌ಗಳನ್ನು ದಂಡಿಸಿದ್ದಾರೆ. ಈ ಸಣ್ಣ ವಯಸ್ಸಿನಲ್ಲೇ ತನ್ನ ಆಟದ ಮೂಲಕ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುತ್ತಿರುವ ವೈಭವ ಸೂರ್ಯವಂಶಿ ಈಗ ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾನೆ.

More articles

Latest article

Most read