ಮಹಿಳಾ ಮೀಸಲಾತಿಯ ಸವಾಲು; ಕ್ಷೇತ್ರ ಪುನರ್ವಿಂಗಡಣೆ ಶಡ್ಯಂತ್ರಕ್ಕೆ ಸೋಲು

ಮೋಸ ವಂಚನೆ ಮಾಡಿದ್ದು ಮೋದಿಯವರು, ಈಗ ಮಹಿಳಾ ವಿರೋಧಿ ಎಂದು ಆರೋಪಿಸುತ್ತಿರುವುದು ಪ್ರತಿಪಕ್ಷಗಳ ಮೇಲೆ. ಇದೇ ಬಿಜೆಪಿಯ ರಾಜಕೀಯ. ಈ ರಾಜಕೀಯ ಶಡ್ಯಂತ್ರವನ್ನು ಜನರಿಗೆ ಅದರಲ್ಲೂ ಮಹಿಳೆಯರಿಗೆ ಮನದಟ್ಟು ಮಾಡುವ ಕೆಲಸವನ್ನು ಪ್ರತಿಪಕ್ಷಗಳು, ಸಾಮಾಜಿಕ ಮಾಧ್ಯಮಗಳು, ಪ್ರಜ್ಞಾವಂತರು ಮಾಡಬೇಕಿದೆ. ಬಿಜೆಪಿಯ ನಕಾರಾತ್ಮಕ ಪ್ರಪಗಂಡಾಕ್ಕೆ ವಿರುದ್ಧವಾಗಿ ಅವರಿಗಿಂತ ದೊಡ್ಡ ಧ್ವನಿಯಲ್ಲಿ “ಮೋದಿ ಸರಕಾರದಿಂದ ಮಹಿಳೆಯರಿಗಾದ ಮೋಸ ವಂಚನೆ ಚಾರಿತ್ರಿಕ ಅನ್ಯಾಯವನ್ನು ಬಿಡಿಸಿ ಬಿಡಿಸಿ ತಿಳಿಸಿ ಹೇಳಬೇಕಾಗಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಶಾಸನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕೊಡಬೇಕೆಂದು 2023 ರಲ್ಲಿ ಸಂಸತ್ತು ಬಹುಮತದಿಂದ ಅಂಗೀಕರಿಸಿತ್ತು. 543 ಸಂಸದರಲ್ಲಿ 454 ರಷ್ಟು ಸಂಸದರು ಈ ಮಸೂದೆಯನ್ನು ಬೆಂಬಲಿಸಿದ್ದರು. ಮೂರನೇ ಎರಡು ಭಾಗದಷ್ಟು ಸಂಸದರು ಬೆಂಬಲಿಸಿದರೆ ಮಾತ್ರ ಮಸೂದೆ ಊರ್ಜಿತವಾಗುತ್ತದೆಯಾದ್ದರಿಂದ ಪಕ್ಷಾತೀತವಾಗಿ ಬಹುತೇಕ ಸಂಸದರು ಮಸೂದೆಯ ಪರವಾಗಿ ಇದ್ದುದರಿಂದ ಮಹಿಳಾ ಮೀಸಲು ಕಾನೂನಿಗೆ ತಿದ್ದುಪಡಿ ಮಾಡಲಾಗಿತ್ತು. ಈ ತಿದ್ದುಪಡಿ ಕಾನೂನಿನ ಪ್ರಕಾರ 2024 ರಲ್ಲಿ ಲೋಕಸಭೆಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ 33 % ಮೀಸಲಾತಿ ಜಾರಿಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು.

ಆದರೆ ಬಿಜೆಪಿ ನೇತೃತ್ವದ ಮೋದಿ ಸರಕಾರ 2024 ರ ಲೋಕಸಭಾ ಚುನಾವಣೆಯಲ್ಲಿ ” ನಾವು ಮಹಿಳೆಯರಿಗೆ 33% ಮೀಸಲಾತಿ ದೊರಕಿಸಿಕೊಟ್ಟಿದ್ದೇವೆ” ಎಂದು ದೇಶಾದ್ಯಂತ ಪ್ರಚಾರ ಮಾಡಿ ಒಂದಿಷ್ಟು ಮತಗಳನ್ನೂ ಗಿಟ್ಟಿಸಿಕೊಂಡಿತ್ತು. ಆದರೆ ಮಸೂದೆ ಅನುಮೋದನೆಗೊಂಡು ಮೂರು ವರ್ಷಗಳು ಉರುಳಿದರೂ ಮಸೂದೆ ನೋಟಿಫೈ ಆಗಲೇ ಇಲ್ಲ. ಜಾರಿ ಮಾಡಬೇಕೆಂಬ ಇಚ್ಚೆಯೂ ಮೋದಿ ಸರಕಾರಕ್ಕೆ ಇರಲಿಲ್ಲ.

ಅಧಿಸೂಚನೆ ಹೊರಡಿಸದೇ ಇದ್ದರೆ ಮತ್ತೆ ತಿದ್ದುಪಡಿ ಮಾಡಲು ಸಂವಿಧಾನ ಒಪ್ಪುವುದಿಲ್ಲವಾದ್ದರಿಂದ ಈಗಾಗಲೇ 2023 ರಲ್ಲಿ ಮಂಡನೆಯಾಗಿದ್ದ ಮಸೂದೆಯ ಜಾರಿಗೆ 2026 ಎಪ್ರಿಲ್ 16ರಂದು ರಾತ್ರಿ 10 ಗಂಟೆಗೆ ತರಾತುರಿಯಲ್ಲಿ ಕೇಂದ್ರ ಕಾನೂನು ಸಚಿವಾಲಯದಿಂದ ಅಧಿಸೂಚನೆ ಹೊರಡಿಸಲಾಯ್ತು. ಹಾಗೂ ಮರುದಿನ ಎಪ್ರಿಲ್ 17 ರಂದು ಕರೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ 131 ನೇ ತಿದ್ದುಪಡಿ ಮಂಡನೆ ಮಾಡಲಾಯ್ತು. ನಿನ್ನೆ ಅಧಿಸೂಚನೆ ಹೊರಡಿಸಿ ಇಂದು ಅದೇ ಕಾನೂನಿಗೆ ತಿದ್ದುಪಡಿ ತರುವ ಮಸೂದೆ ಕುರಿತು ಚರ್ಚೆ ನಡೆಸುವುದು ಯಾಕೆ? ಎಂಬುದು ಪ್ರತಿಪಕ್ಷಗಳ ಪ್ರಶ್ನೆಯಾಗಿತ್ತು.‌

ಯಾಕೆಂದರೆ… 2023 ರ ಮಹಿಳಾ ಮೀಸಲಾತಿ ಮಸೂದೆ 543 ಸಂಸದ ಸ್ಥಾನಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಅಂದರೆ 180 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರಿಸಬೇಕಿತ್ತು. ಆದರೆ ಈಗ 2011 ರ ಜನಗಣತಿ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಮರು ವಿಂಗಡಿಸಲಾಗುತ್ತಿದ್ದು ಲೋಕಸಭಾ ಸ್ಥಾನಗಳನ್ನು 543 ರಿಂದ 850 ಕ್ಕೆ ಏರಿಕೆ ಮಾಡಲಾಗುತ್ತಿದೆ. ಹಾಗೂ ಹೀಗೂ ಏರಿಕೆಯಾದ 850 ಸ್ಥಾನಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿರಿಸಲಾಗುವುದು ಎಂಬುದು ಸದರಿ ತಿದ್ದುಪಡಿಗೆ ಮೋದಿ ಸರಕಾರದ ಸಮರ್ಥನೆಯಾಗಿತ್ತು. 2026 ರಲ್ಲಿ ಜನಗಣತಿ ಮಾಡಲಾಗುತ್ತಿದ್ದು ಅದರ ದತ್ತಾಂಶಗಳ ಆಧಾರದಲ್ಲಿ ಸ್ಥಾನ ಹಂಚಿಕೆ ಮಾಡದೇ 2011 ರ ಜನಗಣತಿ ಪರಿಗಣಿಸುವುದು ಸರಿಯಲ್ಲ ಹಾಗೂ ಜನಗಣತಿ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಿದರೆ ಜನಸಂಖ್ಯೆ ನಿಯಂತ್ರಣ ಮಾಡಿದ ದಕ್ಷಿಣ ಭಾರತದ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯತೆ ಕಡಿಮೆಯಾಗಿ ಪ್ರಾದೇಶಿಕ ಅಸಮಾನತೆಗೆ ಕಾರಣವಾಗುತ್ತದೆ ಎಂಬುದು ವಿರೋಧ ಪಕ್ಷಗಳ ತಕರಾರಾಗಿತ್ತು.

ಈ ಆತುರದ ಅಧಿವೇಶನ ಹಾಗೂ ತಿದ್ದುಪಡಿ ಮಸೂದೆ ಮಂಡನೆಗೆ ಪ್ರಬಲವಾದ ಕಾರಣವೂ ಇತ್ತು. ಅದೇನೆಂದರೆ ಕ್ಷೇತ್ರಗಳ ಮರುವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿಯನ್ನು ಜೋಡಿಸುವುದು ಮೋದಿ ಸರಕಾರದ ಉದ್ದೇಶವಾಗಿತ್ತು. ಈ ಶಡ್ಯಂತ್ರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಮಹಿಳಾ ಮೀಸಲಾತಿ ಕಾಯ್ದೆಗೆ ಬೆಂಬಲವನ್ನು ವ್ಯಕ್ತಪಡಿಸಿದ ಪ್ರತಿಪಕ್ಷಗಳು ಕ್ಷೇತ್ರಗಳ ಮರು ವಿಂಗಡಣೆಯನ್ನು ತಳಕು ಹಾಕಿದ್ದನ್ನು ವಿರೋಧಿಸಿದವು. 23 ಗಂಟೆಗಳ ಸುದೀರ್ಘ ಚರ್ಚೆಯ ನಂತರ ಮತಕ್ಕೆ ಹಾಕಿದಾಗ‌  543 ಸಂಸದರ ಪೈಕಿ ತಿದ್ದುಪಡಿ ಪರವಾಗಿ 298 ಮತಗಳು ಹಾಗೂ ವಿರುದ್ಧವಾಗಿ 230 ಮತಗಳು ಬಿದ್ದಿದ್ದವು. ಆದರೆ ಮಸೂದೆ ಊರ್ಜಿತವಾಗಲು ಬಹುಮತಕ್ಕೆ ಮೂರನೇ ಎರಡರಷ್ಟು ಮತಗಳು ಕಡ್ಡಾಯವಾಗಿ ಬೇಕಾಗಿತ್ತು. ಅಗತ್ಯ ಬಹುಮತ ಸಿಗದೇ ಇರುವುದರಿಂದ ತಿದ್ದುಪಡಿ ಮಸೂದೆ ಬಿದ್ದು ಹೋಗಿ ಬಿಜೆಪಿ ಸರಕಾರಕ್ಕೆ ಮುಖಭಂಗವಾಯ್ತು. ವಿಪಕ್ಷಗಳ ಸಂಭ್ರಮಕ್ಕೆ ಸದನ ಸಾಕ್ಷಿಯಾಯ್ತು.

ಬಿಜೆಪಿ ಸರಕಾರಕ್ಕೆ ಮಹಿಳಾ ಮೀಸಲಾತಿಯ ನೆಪದಲ್ಲಿ ಮುಂದಿನ ಚುನಾವಣೆಗೆ ಅನುಕೂಲವಾಗಬಹುದಾದ ಕ್ಷೇತ್ರ ಮರುವಿಂಗಡಣೆ ವಿಧೇಯಕ ಅತ್ಯಂತ ಮಹತ್ವದ್ದಾಗಿತ್ತು. ಈಗಾಗಲೇ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಂಡು ಬೇರೆ ಎರಡು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸರಕಾರ ರಚಿಸುವ ಅನಿವಾರ್ಯತೆಗೆ ಬಿಜೆಪಿ ಒಳಗಾಯ್ತು.  ‘ಅಬ್ ಕೀ ಬಾರ್ ಚಾರ್ ಸೌ ಪಾರ್’ ಎಂದು ಹೊರಟಿದ್ದ ಬಿಜೆಪಿಗೆ 2024ರ ಚುನಾವಣಾ ಫಲಿತಾಂಶ ತೀವ್ರವಾದ ಹಿನ್ನಡೆಯನ್ನುಂಟು ಮಾಡಿತ್ತು. ಹೀಗಾಗಿ 2029 ರ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಅತೀ ಹೆಚ್ಚು ಬಹುಮತದೊಂದಿಗೆ ಸರಕಾರ ರಚಿಸಿ ತನಗಿಷ್ಟ ಬಂದಂತೆ ಸಂವಿಧಾನವನ್ನು ಬದಲಾಯಿಸುವ ಸಾಮರ್ಥ್ಯವನ್ನು ದಕ್ಕಿಸಿಕೊಳ್ಳುವುದು ಮೋದಿ-ಶಾ ರವರ ಮಹತ್ವಾಂಕಾಕ್ಷೆಯಾಗಿತ್ತು. ಅದಕ್ಕೆ ಪ್ರಾದೇಶಿಕ ಪಕ್ಷಗಳೇ ಅಡೆತಡೆಯಾಗಿದ್ದರಿಂದ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರಾಬಲ್ಯ ಇಲ್ಲದೇ ಇರುವುದರಿಂದ ಮತ್ತು ದಕ್ಷಿಣ ಭಾರತೀಯರು ಬಿಜೆಪಿಗರ ಮತಾಂಧತೆಗೆ ಮಹತ್ವ ಕೊಡದೇ ಇರುವುದರಿಂದ ಲೋಕಸಭಾ ಕ್ಷೇತ್ರಗಳಲ್ಲಿ ದಕ್ಷಿಣ ಭಾರತೀಯರಿಗೆ ಇರುವ ಪ್ರಾತಿನಿಧ್ಯತೆಯ ಸಂಖ್ಯೆಯನ್ನು ಕಡಿಮೆ ಮಾಡುವುದು ಹಾಗೂ ಬಿಜೆಪಿಯ ಪ್ರಾಬಲ್ಯ ಮತ್ತು ಸರಕಾರ ಇರುವ ಉತ್ತರ ಭಾರತದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚು ಮಾಡುವುದು ಮೋದಿ ಶಾ ರವರ ಮಾಸ್ಟರ್ ಪ್ಲಾನ್ ಆಗಿತ್ತು. ಅದಕ್ಕೆ ಜನಗಣತಿಯ ದತ್ತಾಂಶಗಳನ್ನು ಮಾನದಂಡವಾಗಿ ಬಳಸಬೇಕೆಂಬುದು ಬಿಜೆಪಿಯ ತಂತ್ರವಾಗಿತ್ತು. ಅದಕ್ಕಾಗಿ ಮಹಿಳಾ ಮೀಸಲಾತಿ ನೆಪದಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ತಿದ್ದುಪಡಿಗೆ ಸಂಸತ್ತಿನ ಅನುಮೋದನೆ ಪಡೆಯಲು ಎಪ್ರಿಲ್ 17 ರಂದು ವಿಶೇಷ ಅಧಿವೇಶನ  ಕರೆಯಲಾಯ್ತು.

ಈ ಮಸೂದೆಗಳ ಮೂಲಕ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಉಪಾಯ ಬಿಜೆಪಿಯದ್ದಾಗಿತ್ತು.

* ತಿದ್ದುಪಡಿ ಮಸೂದೆ ಅಂಗೀಕಾರವಾದರೆ ಈಗಿರುವ 543 ಸೀಟುಗಳಿಗೆ ಬಾಧೆಯಾಗುವುದಿಲ್ಲ ಹಾಗೂ ಹೆಚ್ಚಿಸಲಾದ ಕ್ಷೇತ್ರಗಳ ಸಂಖ್ಯೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕೊಟ್ಟರೂ ತೊಂದರೆ ಇಲ್ಲ. ಆಗ ಹಾಲಿ ಇರುವ ಎಂಪಿ ಗಳು ತಕರಾರು ಎತ್ತುವುದಿಲ್ಲ.

* ತಿದ್ದುಪಡಿ ಅಂಗೀಕಾರವಾದರೆ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ಬಿಜೆಪಿ ಪ್ರಾಬಲ್ಯದ ಉತ್ತರ ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆಗಳನ್ನು ಗಣನೀಯವಾಗಿ ಹೆಚ್ಚಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಭಾರೀ ಬಹುಮತವನ್ನು ಪಡೆಯುವುದು.

* ತಿದ್ದುಪಡಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತ ಬರದೇ ಹೋದರೆ ಆಗ ಪ್ರತಿಪಕ್ಷಗಳ ಮೇಲೆ ಮಹಿಳಾ ವಿರೋಧಿ ಎಂದು ಆರೋಪ ಮಾಡುವುದು. ಮಹಿಳಾ ಮೀಸಲಾತಿಗೆ ವಿರೋಧ ಪಕ್ಷಗಳು ತಡೆ ಒಡ್ಡಿದವು ಎಂದು ವ್ಯಾಪಕ ಪ್ರಚಾರ ಮಾಡಿ ಮಹಿಳೆಯರ ಕಣ್ಣಲ್ಲಿ ಪ್ರತಿಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳನ್ನು ಖಳನಾಯಕರನ್ನಾಗಿಸುವುದು.

* ಸಮಸ್ತ ಗೋದಿ ಮಾಧ್ಯಮಗಳ ಮೂಲಕ ಮಸೂದೆ ವಿರೋಧಿಸಿದ ಪ್ರತಿಪಕ್ಷ ಮತ್ತು ಪ್ರಾದೇಶಿಕ ಪಕ್ಷಗಳನ್ನು ಮಹಿಳಾ ವಿರೋಧಿಗಳು ಎಂದು ಬಿಂಬಿಸುವುದು, ಬಿಜೆಪಿಯ ಐಟಿ ಸೆಲ್ ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಪಪ್ರಚಾರ ನಡೆಸುವುದು ಹಾಗೂ ಈಗ ನಡೆಯುತ್ತಿರುವ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರ ಮತಗಳನ್ನು ಪಡೆದು ಬಿಜೆಪಿ ಸರಕಾರವನ್ನು ರಚಿಸುವುದು.

ಹೀಗೆ.. ಪ್ರಸ್ತಾವಿತ ಮಸೂದೆ ಪಾಸಾದರೂ ಇಲ್ಲ ಫೇಲಾದರೂ ಅದರ ಲಾಭವನ್ನು ಬಿಜೆಪಿ ಪಕ್ಷದ ಪರವಾಗಿ ಪಡೆದುಕೊಳ್ಳುವುದೇ ಈ ತರಾತುರಿಯ ಮಸೂದೆ ಮಂಡನೆಯ ಹಿಂದಿನ ಬಿಜೆಪಿಯ ಮಸಲತ್ತಾಗಿತ್ತು.

ವಿರೋಧ ಪಕ್ಷದ ನಾಯಕ ಮತ್ತು ಅಮಿತ್‌ ಶಾ

ಈಗ ಪ್ರತಿಪಕ್ಷಗಳೆಲ್ಲಾ ಒಂದಾಗಿ ಬಿಜೆಪಿ ಸರಕಾರದ ಮಹಿಳಾ ಮೀಸಲಾತಿ ತಿದ್ದುಪಡಿ ಹಿಂದಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಸೋಲಿಸಿದ್ದಾರೆ. ಇದಕ್ಕಾಗಿಯೇ ಕಾಯುತ್ತಿದ್ದ ಬಿಜೆಪಿಯ ಐಟಿ ಸೆಲ್ ಗಳು ಹಾಗೂ ಗೋದಿ ಮಾಧ್ಯಮಗಳು “ಪ್ರತಿಪಕ್ಷಗಳಿಂದ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲು” ಎಂಬ ಪೂರ್ವಯೋಜಿತ ಅಪಪ್ರಚಾರವನ್ನು ಆರಂಭಿಸಿವೆ. ಇದಕ್ಕೆ ಪೂರಕವೆಂಬಂತೆ ಎಪ್ರಿಲ್ 18 ರಂದು ರಾತ್ರಿ 8.30 ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಅತ್ಯಂತ ಕೀಳು ಮಟ್ಟದ ಹಾಗೂ ದ್ವೇಷಪೂರಿತ ಮಾತುಗಳಿಂದ ವಿಪಕ್ಷಗಳ ಮೇಲೆ ಕೆಂಡ ಕಾರಿದ್ದಾರೆ. ಮಸೂದೆಯ ಸೋಲಿಗೆ ಕಾರಣರಾದ ಕಾಂಗ್ರೆಸ್ ಹಾಗೂ ಇತರೇ ಪಕ್ಷಗಳನ್ನು ಮಹಿಳಾ ವಿರೋಧಿಗಳು ಎಂದು ಬಿಂಬಿಸುವ ಸರ್ವಪ್ರಯತ್ನವನ್ನು ಮಾಡಿದ್ದಾರೆ.

ಖಂಡಿತವಾಗಿ ಬಿಜೆಪಿ ಪಕ್ಷಕ್ಕಾಗಲೀ ಇಲ್ಲವೇ ಅದರ ಮಾತೃ ಸಂಸ್ಥೆಯಾದ ಆರೆಸ್ಸೆಸ್ ಗೆ ಆಗಲೀ ಮಹಿಳೆಯರಿಗೆ ಮೀಸಲಾತಿ ಕೊಡುವ ಇಚ್ಚೆಯಂತೂ ಇಲ್ಲ. ಈ ಸನಾತನಿ ವರ್ಣವ್ಯವಸ್ಥೆಯ ಮನುವಾದಿ ಪ್ರತಿಪಾದಕರಿಗೆ “ನ ಸ್ತ್ರಿ ಸ್ವಾತಂತ್ರ್ಯಂ ಅರ್ಹತಿ” ಎನ್ನುವುದೇ ಹಿಡನ್ ಸಿದ್ಧಾಂತವಾಗಿದೆ. ತಿದ್ದುಪಡಿ ಮಸೂದೆಯ ಗೆಲುವಿಗೆ ಅಗತ್ಯವಾದಷ್ಟು ಬಹುಮತದ ಬೆಂಬಲ ಇಲ್ಲವೆಂಬುದು ಗೊತ್ತಿದ್ದೂ, ಕೆಲವು ರಾಜ್ಯಗಳ ಚುನಾವಣಾ ಸಂದರ್ಭದಲ್ಲಿ  ಉದ್ದೇಶಪೂರ್ವಕವಾಗಿ ತರಾತುರಿಯಲ್ಲಿ ಈ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವ ಮಹಾ ಕುತಂತ್ರಗಾರಿಕೆಯನ್ನು ಮೋದಿ-ಶಾ ರವರು ರೂಪಿಸಿದ್ದಾರೆ. ಅವರ ಅಸಂವಿಧಾನಿಕ ನಡುವಳಿಕೆ ಕೆಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

* 33% ಮಹಿಳಾ ಮೀಸಲಾತಿ ಕೊಡುವುದೇ ಆಗಿದ್ದರೆ 2023 ರಲ್ಲಿ ಬಹುಮತದಿಂದ ಅಂಗೀಕಾರವಾದ ಮಹಿಳಾ ಮೀಸಲಾತಿ ವಿಧೇಯಕವನ್ನು ಮೂರು ವರ್ಷಗಳಾದರೂ ಮೋದಿ ಸರಕಾರ ಯಾಕೆ ಜಾರಿ ಮಾಡಲಿಲ್ಲ?.

* ಮೂರು ವರ್ಷಗಳ ನಂತರ  ತಮಿಳುನಾಡು ಹಾಗೂ ಪಶ್ಚಿಮ ಬಂಗಾಲದಲ್ಲಿ ಮತದಾನಕ್ಕೆ ಐದೇ ದಿನ ಬಾಕಿ ಇರುವಾಗ ಇದ್ದಕ್ಕಿದ್ದಂತೆ ಅಧಿಸೂಚನೆ ಹೊರಡಿಸಿ ಮಾರನೆಯ ದಿನ ಮತ್ತೆ ತಿದ್ದುಪಡಿ ಮಸೂದೆ ಮಂಡಿಸಿದ್ದಾದರೂ ಯಾಕೆ?

* ಈಗಾಗಲೇ ಅಂಗೀಕಾರಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸದೇ ಮೂರು ವರ್ಷ ನಿರ್ಲಕ್ಷಿಸಿದ್ದು ಮಹಿಳಾ ವಿರೋಧಿತನ ಅಲ್ಲವೇ?

* 33% ಮಹಿಳಾ ಮೀಸಲಾತಿ ಜಾರಿ ಮಾಡಿದ್ದೇವೆ ಎಂದು 2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರಮಾಡಿದ್ದ ಬಿಜೆಪಿಗರು ಮೂರು ವರ್ಷವಾದರೂ ಆ ಮಸೂದೆಯನ್ನು ನೋಟಿಫೈ ಮಾಡಿ ಜಾರಿಗೊಳಿಸದೇ ಇದ್ದಿದ್ದು ಸಮಸ್ತ ಮಹಿಳೆಯರಿನ್ನು ವಂಚಿಸಿದಂತೆ ಅಲ್ಲವೇ?

* ಈಗ ಮಹಿಳಾ ವಿರೋಧಿಗಳು ಯಾರು? ಮಹಿಳೆಯರಿಗೆ ಮೀಸಲಾತಿ ಕೊಟ್ಟಂತೆ ಮಾಡಿ ಕೊಡದೇ ಇದ್ದಿದ್ದು ಮಹಿಳೆಯರಿಗೆ ಮಾಡಿದ ಮಹಾಮೋಸ ಅಲ್ಲವೇ?

ಮೋಸ ವಂಚನೆ ಮಾಡಿದ್ದು ಮೋದಿಯವರು, ಈಗ ಮಹಿಳಾ ವಿರೋಧಿ ಎಂದು ಆರೋಪಿಸುತ್ತಿರುವುದು ಪ್ರತಿಪಕ್ಷಗಳ ಮೇಲೆ. ಇದೇ ಬಿಜೆಪಿಯ ರಾಜಕೀಯ. ಕೋತಿ ತಾನು ಬೆಣ್ಣೆ ತಿಂದು ಮೇಕೆ ಬಾಯಿಗೆ ಒರೆಸಿ ಆರೋಪಿಸಿದಂತೆ ಇದು ಬಿಜೆಪಿಯ ಕುತಂತ್ರಗಾರಿಕೆ. ಈ ರಾಜಕೀಯ ಶಡ್ಯಂತ್ರವನ್ನು ಜನರಿಗೆ ಅದರಲ್ಲೂ ಮಹಿಳೆಯರಿಗೆ ಮನದಟ್ಟು ಮಾಡುವ ಕೆಲಸವನ್ನು ಪ್ರತಿಪಕ್ಷಗಳು, ಸಾಮಾಜಿಕ ಮಾಧ್ಯಮಗಳು, ಪ್ರಜ್ಞಾವಂತರು ಮಾಡಬೇಕಿದೆ. ಬಿಜೆಪಿಯ ನಕಾರಾತ್ಮಕ ಪ್ರಪಗಂಡಾಕ್ಕೆ ವಿರುದ್ಧವಾಗಿ ಅವರಿಗಿಂತ ದೊಡ್ಡ ಧ್ವನಿಯಲ್ಲಿ “ಮೋದಿ ಸರಕಾರದಿಂದ ಮಹಿಳೆಯರಿಗಾದ ಮೋಸ ವಂಚನೆ ಚಾರಿತ್ರಿಕ ಅನ್ಯಾಯವನ್ನು ಬಿಡಿಸಿ ಬಿಡಿಸಿ ತಿಳಿಸಿ ಹೇಳಬೇಕಾಗಿದೆ. ಇಲ್ಲದೇ ಹೋದರೆ ಬಿಜೆಪಿಗರ ಸುಳ್ಳು ಪ್ರಚಾರದ ಮಾಧ್ಯಮಗಳು ಹೇಳುವುದೇ ಸತ್ಯವೇನೋ ಎನ್ನಿಸುತ್ತದೆ. ಹಾಗಾದಾಗ ಮೋದಿ ಶಾ ರವರ ಶಡ್ಯಂತ್ರ ಗೆಲ್ಲುತ್ತದೆ. ಈ ದೇಶದ ಸಂವಿಧಾನಕ್ಕೆ ಆಪತ್ತು ಹೆಚ್ಚುತ್ತಲೇ ಹೋಗುತ್ತದೆ.

ಇಷ್ಟಕ್ಕೂ ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಈಗಾಗಲೇ 2023 ರಲ್ಲಿ ಸಂಸತ್ತಿನ ಮಾನ್ಯತೆ ಪಡೆದಿರುವುದರಿಂದ ಹಾಗೂ 2026 ಎಪ್ರೀಲ್ 16 ರಂದು ನೋಟಿಪೈ ಆಗಿರುವುದರಿಂದ ಅದು ಅಧಿಕೃತವಾಗಿ ಕಾಯಿದೆ ಆದಂತಾಗಿದೆ. ಅದಕ್ಕೆ ಮತ್ತೆ ತಿದ್ದುಪಡಿ ತರುವ ಕುತಂತ್ರಕ್ಕೆ ಸೋಲಾಗಿದೆ. ಹೀಗಾಗಿ ಈಗಿರುವ 543 ಲೋಕಸಭಾ ಸಂಖ್ಯೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಕೇಂದ್ರ ಸರಕಾರ ಜಾರಿ ಮಾಡಲೇಬೇಕಿದೆ. ಅದಕ್ಕಾಗಿ ಪ್ರತಿಪಕ್ಷಗಳು ಒತ್ತಾಯಿಸಬೇಕಿದೆ. ಮಹಿಳಾ ಸಂಘಟನೆಗಳು ದ್ವನಿ ಎತ್ತಬೇಕಿದೆ. ಜಾರಿ ಮಾಡದೇ ಹೋದರೆ ಸುಪ್ರಿಂ ಕೋರ್ಟ ಮೊರೆ ಹೋಗಬೇಕಿದೆ. ಒಟ್ಟಿನ ಮೇಲೆ ಮಹಿಳಾ ಮೀಸಲಾತಿಯ ಸುತ್ತ ಕಟ್ಟಲಾದ ಕ್ಷೇತ್ರ ವಿಂಗಡನೆಯ ಸಂಕೋಲೆಯಿಂದ ಮಹಿಳಾ ಪ್ರಾತಿನಿಧ್ಯತೆಯ ಹಕ್ಕನ್ನು ವಿಮೋಚನೆಗೊಳಿಸಬೇಕಿದೆ. ಮೂರು ದಶಕಗಳ ಮಹಿಳಾ ಮೀಸಲಾತಿಯ ಪ್ರಯತ್ನಕ್ಕೆ ಗೆಲುವು ದೊರೆಯಲೇ ಬೇಕಿದೆ. ಬಿಜೆಪಿಯ ಶಡ್ಯಂತ್ರ ಸೋಲಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೆಷಕರು

 ಇದನ್ನೂ ಓದಿ- ಡಿಲಿಮಿಟೇಷನ್‌ ಆತುರದ ಹಿಂದಿತ್ತೇ ಬಿಜೆಪಿಯ 2029ರ ಸೋಲಿನ ಭೀತಿ?

More articles

Latest article

Most read