ಶಿಕ್ಷಕರ ದಿನಾಚರಣೆ ವಿಶೇಷ | ಬದಲಾಗುತ್ತಿರುವ ಶಿಕ್ಷಕ ಸಂಸ್ಕೃತಿ‌

ಇಂದು ಸಾರ್ವತ್ರಿಕ ಶಿಕ್ಷಣವು ಬಹುಮಟ್ಟಿಗೆ ವ್ಯಾಪಾರೀಕರಣವಾಗಿದೆ. ಶಿಕ್ಷಕರು ಶಿಕ್ಷಣ ಸಂಸ್ಥೆಯ ಮಾಲೀಕನ ಮರ್ಜಿಗನುಗುಣವಾಗಿ ತನ್ನ ಶಿಕ್ಷಕ ಸಂಸ್ಕೃತಿಯನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಇಂಥ ಸಂದರ್ಭದಲ್ಲಿ ಶಿಕ್ಷಕರಲ್ಲಿ ಆದರ್ಶವನ್ನು ಹೇಗೆ ನಿರೀಕ್ಷಿಸಲು ಸಾಧ್ಯ?. ಮೂಲಭೂತ ಸೌಕರ್ಯಗಳು ಮತ್ತು ಸೇವಾಭದ್ರತೆಗಳು ಇದ್ದಲ್ಲಿ ಮಾತ್ರ ಆದರ್ಶ ಶಿಕ್ಷಕ ಸಂಸ್ಕೃತಿಯನ್ನು ರೂಪಿಸಲು ಸಾಧ್ಯ ಡಾ. ಗಣನಾಥ ಎಕ್ಕಾರು, ಸಂಸ್ಕೃತಿ ಚಿಂತಕರು.

ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕ ಕೇಂದ್ರ ಸ್ಥಾನದಲ್ಲಿರುವವರು. ವಿದ್ಯಾರ್ಥಿಯ ಶೈಕ್ಷಣಿಕ ಬದುಕನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರ ಪರಿಣಾಮಕಾರಿಯಾದುದು. ಜಗತ್ತಿನ ಶೈಕ್ಷಣಿಕ ಇತಿಹಾಸವನ್ನು ಗಮನಿಸಿದರೆ ಒಂದು ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಶೈಕ್ಷಣಿಕ ವ್ಯವಸ್ಥೆ ರೂಪುಗೊಂಡಿದೆ. ಭಾರತೀಯ ಶೈಕ್ಷಣಿಕ ಹಿನ್ನೆಲೆಯನ್ನು ಗಮನಿಸಿದರೆ ಹಿಂದೆ ಗುರುಕುಲ ಪದ್ಧತಿ ಪ್ರಚಲಿತವಿತ್ತು. ಅದು ಸರ್ವಜ್ಞ ಹೇಳಿದಂತೆ ದೊಡ್ಡವರ ಕಥೆ. ಇದಕ್ಕೆ ಮಹಾಭಾರತದ ಏಕಲವ್ಯ ಒಂದು ಒಳ್ಳೆಯ ರೂಪಕ. ಈ ದೃಷ್ಟಿಯಿಂದ ಇಂದಿನ ಶಿಕ್ಷಣ ವ್ಯವಸ್ಥೆಗೆ ಅದು ಯಾವ ರೀತಿಯಲ್ಲೂ ಮಾದರಿಯಲ್ಲ. ಆಧುನಿಕ ಭಾರತದಲ್ಲಿ 1835ರ ಟಿ.ಬಿ. ಮೆಕಾಲೆ ಅವರ ಸಮಿತಿಯು ಸಾರ್ವತ್ರಿಕ ಶಿಕ್ಷಣಕ್ಕೆ ಅಡಿಪಾಯ ಹಾಕಿತ್ತು. 1854ರ ವುಡ್ಸ್‍ಡಿಸ್ಟ್ರ್ಯಾಚ್ ಸಾರ್ವತ್ರಿಕ ಶಿಕ್ಷಣದ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಲು ಕಾರಣವಾಯಿತು. ಇದರಿಂದ ಶಿಕ್ಷಣ ವ್ಯವಸ್ಥೆಯ ಚರ್ಚೆಯಲ್ಲಿ ಭಾರತೀಯ ಸಂದರ್ಭದಲ್ಲಿ ಬ್ರಿಟೀಶರ ಆಳ್ವಿಕೆಯ 1850 ರ ಬಳಿಕದ ಸಂದರ್ಭವನ್ನು ಮಾತ್ರ  ಗಮನಿಸಬೇಕಾಗುತ್ತದೆ. ಈ ಸಂದರ್ಭದ ಬಳಿಕ ವಿದ್ಯಾರ್ಥಿ-ಶಿಕ್ಷಕ ಎಂಬುದಕ್ಕೆ ಸ್ಪಷ್ಟ ಸ್ವರೂಪ ದೊರೆಯಿತು.

ಸಾರ್ವತ್ರಿಕವಾಗಿ ಬೋಧನೆ ಎಂಬುವುದು ಶಿಕ್ಷಕನ ಪ್ರಾರ್ಥಮಿಕ ಕರ್ತವ್ಯ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಆದರೆ ನಿಜವಾದ ಅರ್ಥದಲ್ಲಿ ಅದು ಜ್ಞಾನ ಸಂವಹನವಾಗಬಹುದು ಹೊರತು, ವ್ಯಕ್ತಿತ್ವ ಬೆಳವಣಿಗೆ ಅಥವಾ ಈಗಿನ ಅರ್ಥದಲ್ಲಿ ಮಾನವ ಸಂಪನ್ಮೂಲನದ ಬೆಳವಣಿಗೆಯಲ್ಲಿ ಬೋಧನೆಯು ಒಂದು ಘಟಕ ಮಾತ್ರ. ಅಂದರೆ ವಿವೇಕಾನಂದರು ಹೇಳುವಂತೆ ಸಮುದ್ರದ ಆಳದಲ್ಲಿ ಮುತ್ತುಗಳಿರುವಂತೆ ಮನುಷ್ಯನ ಮನಸ್ಸಿನ ಆಳದಲ್ಲಿ ಅಪಾರವಾದ ಶಕ್ತಿಯಿದೆ. ಆ ಶಕ್ತಿಯ ಅರಿವನ್ನು ಉಂಟುಮಾಡಬೇಕಾದುದು ಶಿಕ್ಷಣ.

ತರಗತಿಯಲ್ಲಿ ಪಠ್ಯ ಬೋಧಿಸುವುದು ಅಥವಾ ಉಪನ್ಯಾಸ ನೀಡುವುದು ಮಾತ್ರ ಶಿಕ್ಷಕನಾದವನ ಕೆಲಸವಲ್ಲ. ಅವನು ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿರಬೇಕಾಗಿದೆ. ವಿದ್ಯಾರ್ಥಿಗೆ ಮಾಹಿತಿಗಳನ್ನು ನೀಡುವುದರ ಜೊತೆಗೆ ಕೌಶಲ್ಯಗಳನ್ನು ಕಲಿಸುವುದು ಅವನ ಗೌರವವನ್ನು ಹೆಚ್ಚಿಸಬಲ್ಲುದು. ಶಿಸ್ತಿನ ಕ್ರಮಕ್ಕಿಂತ ಪ್ರೀತಿ ಮತ್ತು ಮನವರಿಕೆ ಮಾಡುವ ಕಲೆಯ ಮೂಲಕ ವಿದ್ಯಾರ್ಥಿಯನ್ನು ರಚನಾತ್ಮಕವಾಗಿ ನಿರ್ಮಿಸುವುದು ಅಗತ್ಯವಾಗಿದೆ.

ಸಾವಿತ್ರಿಬಾಯಿ ಫುಲೆ ಮತ್ತು ಸರ್ವಪಲ್ಲಿ ರಾಧಾಕೃಷ್ಣ

ಈ ದೃಷ್ಟಿಯಿಂದ ಇಂದು ಶಿಕ್ಷಕರ ದಿನಾಚರಣೆಯ  ಸವಿನೆನಪಿಗೆ  ಇದೊಂದು ಪುಟ್ಟ ಟಿಪ್ಪಣಿ.

“ನಾನು ಗುರುವಿಗೆ ಮೊದಲ ಪೂಜೆಯನ್ನು ಮಾಡುತ್ತೇನೆ. ಯಾಕೆಂದರೆ ಅವರು ನನಗೆ ದೇವರು ಮತ್ತು ಮೋಕ್ಷದ ದಾರಿಯನ್ನು ತೋರಿಸಿದವರು” ಎಂದರಂತೆ ಸಂತ ಕಬೀರರು. “ನಾನು ಪಡೆದ ಪ್ರಶಸ್ತಿ ಮತ್ತು ಹುದ್ದೆಗಳಲ್ಲಿ ಶಿಕ್ಷಕ ವೃತ್ತಿಯೇ ಶ್ರೇಷ್ಠವಾದುದು” ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಹೇಳಿದರಂತೆ. ಇವೆಲ್ಲವೂ ಅರ್ಥಪೂರ್ಣವಾದ ಮಾತುಗಳು ನಿಜ. ಆದರೆ ಯಾವ ರೀತಿಯ ಶಿಕ್ಷಕ ಎಂಬ ಪ್ರಶ್ನೆ ಮುಖ್ಯವಾದುದು. ತರಗತಿಯಲ್ಲಿ ಕೇವಲ ಪಾಠ ಮಾಡಿದ್ದಾನೆ ಎಂಬ ಕಾರಣಕ್ಕಾಗಿ ಅವನಿಗೆ ಮೊದಲ ಪೂಜೆ ಸಲ್ಲಿಸಬೇಕೇ?

ಶಿಕ್ಷಕನ ಕಾರ್ಯ ಬಹು ವಿಶಿಷ್ಟವಾದುದು. ಯಾವುದೇ ಉದ್ಯೋಗಗಳಿಗಿಂತ ಹೆಚ್ಚು ಸಂವೇದನಾಶೀಲವಾದುದು. ಅವನು ಪ್ರತೀದಿನ ನೂರಾರು ಮನಸ್ಸುಗಳೊಂದಿಗೆ ವ್ಯವಹರಿಸುತ್ತಾನೆ. ಇದರಿಂದ ಅವನ ಮನಸ್ಥಿತಿ ಮತ್ತು ತಾತ್ವಿಕತೆ ಬಹಳ ಮುಖ್ಯವಾದುದು. ಈ ಮನಸ್ಥಿತಿಯನ್ನು ಶಿಕ್ಷಕ ಸಂಸ್ಕೃತಿಯೆಂದು ಕರೆಯಬಹುದು.

ಹಿಂದೆ ಸಾಂಪ್ರದಾಯಿಕ ಮನೋಭಾವದ ಶ್ರದ್ಧಾವಂತ ಶಿಕ್ಷಕರಿದ್ದರು. ಶಿಸ್ತಿನ ಬೋಧನಾ ವಿಧಾನದೊಂದಿಗೆ ಜ್ಞಾನವನ್ನು ನೀಡುತ್ತಿದ್ದರು. ಅಪಾರವಾದ ಶ್ರದ್ಧೆ ಮತ್ತು ಜ್ಞಾನವಿರುವ ಶಿಕ್ಷಕನನ್ನು ಸಮಾಜ ಗೌರವಿಸುತ್ತಿತ್ತು. ಈ ಶಿಕ್ಷಕರ ಬೋಧನೆ ಮತ್ತು ವಿದ್ಯಾರ್ಥಿಗೆ ಮಾಹಿತಿಗಳನ್ನು ನೀಡುವುದರ ಜೊತೆಗೆ ಕೌಶಲ್ಯಗಳನ್ನು ಕಲಿಸುವುದು ಅವನ ಗೌರವವನ್ನು ಹೆಚ್ಚಿಸಬಲ್ಲದು. ಶಿಸ್ತಿನ ಕ್ರಮಕ್ಕಿಂತ ಪ್ರೀತಿ ಮತ್ತು ಮನವರಿಕೆ ಮಾಡುವ ಕಲೆಯ ಮೂಲಕ ವಿದ್ಯಾರ್ಥಿಯನ್ನು ರಚನಾತ್ಮಕವಾಗಿ ನಿರ್ಮಿಸುವುದು ಅಗತ್ಯವಾಗಿದೆ.

ಆದರೆ ಪ್ರಾಥಮಿಕ ಹಂತದಿಂದ ಕಾಲೇಜಿನ ವರೆಗೂ ಈ ರೀತಿಯ ಸಂಸ್ಕೃತಿ ಅಥವಾ ಮನಸ್ಥಿತಿಯನ್ನು ರೂಪಿಸಿಕೊಳ್ಳುವ ಸ್ಥಿತಿ ಇದೆಯೋ ಎಂಬ ಪ್ರಶ್ನೆ ಮೂಡುತ್ತದೆ. ಒಂದು ಕಡೆ ಮೂಲಭೂತ ಸೌಕರ್ಯಗಳ ಕೊರತೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಎದ್ದು ಕಾಣುತ್ತದೆ. ಇದು ಶಿಕ್ಷಕನು ಎದುರಿಸುತ್ತಿರುವ ಬಹುಮುಖ್ಯ ಸವಾಲು. ಎರಡನೇಯದಾಗಿ ಶಿಕ್ಷಣದ ಭದ್ರತೆಗೆ ಸಂಬಂಧಿಸಿರುವುದು. ಅತಿಥಿ ಶಿಕ್ಷಕ, ಗೌರವಧನ ಶಿಕ್ಷಕ ಹೀಗೆ ಕನಿಷ್ಠ ಜೀವನವನ್ನು ನಡೆಸಲು ಸಾಧ್ಯವಿಲ್ಲದಷ್ಟು ಸಂಭಾವನೆ ಪಡೆಯುವ ಸಂದರ್ಭದಲ್ಲಿ ಶಿಕ್ಷಕರಲ್ಲಿ ಶಿಕ್ಷಕ ಸಂಸ್ಕೃತಿಯ ಬದ್ಧತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇಂದು ಸಾರ್ವತ್ರಿಕ ಶಿಕ್ಷಣವು ಬಹುಮಟ್ಟಿಗೆ ವ್ಯಾಪಾರೀಕರಣವಾಗಿದೆ. ಶಿಕ್ಷಕನು ಶಿಕ್ಷಣ ಸಂಸ್ಥೆಯ ಮಾಲೀಕನ ಮರ್ಜಿಗನುಗುಣವಾಗಿ ತನ್ನ ಶಿಕ್ಷಕ ಸಂಸ್ಕೃತಿಯನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಇಂಥ ಸಂದರ್ಭದಲ್ಲಿ ಶಿಕ್ಷಕನಲ್ಲಿ ಆದರ್ಶವನ್ನು ಹೇಗೆ ನಿರೀಕ್ಷಿಸಲು ಸಾಧ್ಯ. ಮೂಲಭೂತ ಸೌಕರ್ಯಗಳು ಮತ್ತು ಸೇವಾಭದ್ರತೆಗಳು ಇದ್ದಲ್ಲಿ ಮಾತ್ರ ಶಿಕ್ಷಕನಲ್ಲಿ ಆದರ್ಶ ಶಿಕ್ಷಕ ಸಂಸ್ಕೃತಿಯನ್ನು ರೂಪಿಸಲು ಸಾಧ್ಯ.

ಹೊಸ ಶಿಕ್ಷಣ ನೀತಿಯು ಖಂಡಿತವಾಗಿಯೂ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಯ ಶೋಧನೆಯಾಗಿದೆ. ಆದರೆ ಪ್ರಾಯೋಗಿಕವಾಗಿ ನಮ್ಮ ಸಂದರ್ಭದಲ್ಲಿ ಎಷ್ಟು ಅನುಷ್ಠಾನ ಯೋಗ್ಯ ಎಂಬುದನ್ನು ಯೋಚಿಸಬೇಕಾಗಿದೆ. ಈ ದೃಷ್ಟಿಯಿಂದ ಶಿಕ್ಷಕರ ದಿನಾಚರಣೆಯು ಶಿಕ್ಷಕನ ಬದುಕಿನಲ್ಲಿ ಆದ ಹೊಸ ಸ್ಥಿತ್ಯಂತರವನ್ನು ವಿಶ್ಲೇಷಿಸಲು ಒಳ್ಳೆಯ ಸಂದರ್ಭ.

ಡಾ. ಗಣನಾಥ ಎಕ್ಕಾರು

ಕರಾವಳಿಯ ಹಿರಿಯ ಸಂಸ್ಕೃತಿ ಚಿಂತಕರು, ಸಾಹಿತಿ ಹಾಗೂ ಜಾನಪದ ವಿದ್ವಾಂಸರಾಗಿರುವ ಇವರು ಕರಾವಳಿಯ ಸಾಂಸ್ಕೃತಿಕ ಹಾಗೂ ಸೌಹಾರ್ದ ಚಿಂತನೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಯುವ ರೆಡ್‌ಕ್ರಾಸ್‌ನ ರಾಜ್ಯ ಸಂಯೋಜಕರಾಗಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (NSS) ಯಲ್ಲೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ

ಇದನ್ನೂ ಓದಿ- ಮೇಲುಗೈ ಸಾಧಿಸುತ್ತಿರುವ ಮನುವಾದಿಗಳು, ಹಿನ್ನಡೆಯತ್ತ ಸೆಕ್ಯುಲರ್ ದೇಶ

More articles

Latest article

Most read