ಈ ಬಾರಿ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆ

ಬೆಂಗಳೂರು, ಸೆ.24:  ಈ ವರ್ಷದ ದಸರಾ ಕಾರ್ಯಕ್ರಮವನ್ನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದರು.

ವಿಧಾನಸಭೆಯಲ್ಲಿ ಬರದ ಮೇಲೆ ನಡೆದ ಚರ್ಚೆಗೆ ಗುರುವಾರ ಸಂಜೆ ಉತ್ತರ ನೀಡುವ ವೇಳೆ ಅವರು ಈ ವಿಷಯ ಪ್ರಕಟಿಸಿದರು.

ಮುಂದಿನ ತಿಂಗಳು ದಸರಾ ಆರಂಭವಾಗುತ್ತದೆ. ದಸರಾ ಉದ್ಘಾಟಿಸುವಂತೆ ಗವಿಸಿದ್ದೇಶ್ವರ ಶ್ರೀಗಳಿಗೆ ಪತ್ರ ಬರೆಯಲಾಗಿದೆ. ನಾನೂ ಸಹ ದೂರವಾಣಿ ಮೂಲಕ ಮಾತನಾಡಿ ದಸರಾ ಉದ್ಘಾಟಿಸುವಂತೆ ಕೋರಿದ್ದೇನೆ. ಅದಕ್ಕೆ ಅವರೂ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದರು.

ದಸರಾ ನಾಡಹಬ್ಬವನ್ನು ಬರದ ಮಧ್ಯೆಯೂ ಉತ್ತಮ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಈ ಸದನದ ಮೂಲಕವೇ ಪ್ರತಿಪಕ್ಷದ ನಾಯಕರುಗಳು ಸೇರಿ ಎಲ್ಲ ಶಾಸಕರಿಗೂ ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಪಾಲ್ಗೊಳ್ಳಬೇಕು ಎಂದು ಸಿಎಂ ಮನವಿ ಮಾಡಿದರು.

ಕೊಪ್ಪಳದ ಅಪ್ಪನ ಜಾತ್ರೆ
ಕೊಪ್ಪಳ ಗವಿಮಠದ 18ನೇ ಪೀಠಾಧಿಪತಿ ಆಗಿರುವ ಗವಿಸಿದ್ದೇಶ್ವರ ಸ್ವಾಮೀಜಿಗಳು, ಸದ್ಯ ಇಡೀ ಕರ್ನಾಟಲದ ಭಾವೈಕ್ಯತೆಯ ಪ್ರತಿರೂಪ ಆಗಿದ್ದಾರೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುವ ಕೊಪ್ಪಳದ ‌ಗವಿಸಿದ್ದೇಶ್ವರ ಜಾತ್ರೋತ್ಸವದಲ್ಲಿ ನಾಡಿನ ನಾನಾ ಭಾಗದಿಂದ ಬರುವ ಸುಮಾರು 10 ಲಕ್ಷ ಭಕ್ತರು ಭಾಗಿ ಆಗುತ್ತಾರೆ. ಗವಿಮಠದ ಜಾತ್ರೋತ್ಸವ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಶ್ರೀಮಠದ ಜಾತ್ರೆಯ ಖ್ಯಾತಿಗೆ ಗವಿಸಿದ್ದೇಶ್ವರ ಶ್ರೀಗಳ ಪಾತ್ರ ಹಿರಿದಿದೆ.‘ಅಜ್ಜನ ಜಾತ್ರೆ’ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ.

ಶಿಕ್ಷಣ ಅರಸಿ ಬಂದಿದ್ದ ಬಾಲಕ!

ಕೊಪ್ಪಳ ಗವಿಮಠದ 18ನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿಗಳು ಕೊಪ್ಪಳಕ್ಕೆ ಶಿಕ್ಷಣ ಅರಸಿ ಬಂದಿದ್ದರು. ಈ ಹಿಂದಿನ ಪೀಠಾಧಿಪತಿಗಳಾದ ಶಿವಶಾಂತವೀರ ಮಹಾಸ್ವಾಮಿಗಳು ಇವರಲ್ಲಿನ ಛಾತ್ರತೆ ಗುರುತಿಸಿ, ಶ್ರೀಗಳನ್ನು ತಮ್ಮ ಮುಂದಿನ ಪೀಠಾಧಿಕಾರಿಗಳಾಗಿ ನೇಮಿಸಿದ್ದರು. ಕಳೆದ 2002 ರಿಂದ ಕೊಪ್ಪಳ ‌ಗವಿಮಠದ ಪೀಠಾಧಿಪತಿ ಆಗಿ ನೇಮಕಗೊಂಡು ಗವಿಶ್ರೀಗಳು, ಶ್ರೀಮಠದಿಂದ ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರೋತ್ಸವ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವಂತೆ ಮಾಡಿದ್ದರು. ಜೊತೆಗೆ ಶ್ರೀಗಳ ಸ್ಪೂರ್ತಿದಾಯಕ ನುಡಿಗಳಿ ಇಡೀ ರಾಜ್ಯದ ಜನರ ಮನಸ್ಸು ಸೆಳೆದಿದ್ದವು.

ಸೋಷಿಯಲ್ ‌ಮೀಡಿಯಾ ಕಿಂಗ್ !

ಕೊಪ್ಪಳದ ‌ಗವಿಸಿದ್ದೇಶ್ವರ ಸ್ವಾಮೀಜಿಗಳು ಸದ್ಯ ಸೋಷಿಯಲ್ ಮೀಡಿಯಾದ ಕಿಂಗ್ ಎಂದೇ ಹೇಳಬಹುದು. ಶ್ರೀಗಳ ಆಧ್ಯಾತ್ಮಿಕ ನುಡಿಗಳು ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತವೆ. ಕಳೆದ ಎರಡು ವರ್ಷದ ಹಿಂದೆ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ್ದ ಸಿಎಂ ಡಿಕೆಶಿ ಪಲ್ಲಕ್ಕಿ ಹೊತ್ತು, ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

More articles

Latest article

Most read