- Advertisement -spot_img

TAG

karnataka

ರಂಗಪ್ರಯೋಗ ವಿಮರ್ಶೆ | ಮತ್ತೊಂದು ಕೊಲ್ಯಾಜ್ ಮಾದರಿಯ ನಾಟಕ “ನನ್ನ ಅಂಬೇಡ್ಕರ್”

ನೊಂದವರ ನೋವಿಗೆ ಧ್ವನಿಯಾದ, ಭಾರತದ ಭಾಗ್ಯ ವಿಧಾತ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಕುರಿತು ಅದೆಷ್ಟೇ ನಾಟಕಗಳು ಬಂದರೂ ಸ್ವಾಗತಾರ್ಹ. ಅವರ ಬದುಕಿನ ವೇದನೆ ಮತ್ತು ಮೇರು ಸಾಧನೆಗಳನ್ನು ದೃಶ್ಯ ರೂಪದಲ್ಲಿ ಕಟ್ಟಿ ಹೆಚ್ಚು...

ಪ್ರಹಸನ | ಗಂಡಿಗೆ ಬೇಕು ಅಂಕುಶ

(ತಂದೆ ಪೇಪರ್ ಓದುತ್ತಾ ಕೂತಿದ್ದಾನೆ. ತಾಯಿ ಸೊಪ್ಪು ಬಿಡಿಸುತ್ತಾ ಟಿವಿ ನೋಡುತ್ತಿದ್ದಾಳೆ. ಮಗಳು ಹೋಂವರ್ಕ್ ಮಾಡುತ್ತಿದ್ದಾಳೆ. ಟಿವಿಯಲ್ಲಿ ಹಾಡು ಬರುತ್ತೆ) ಸಿನೆಮಾ ಹಾಡು : ಅಂತಿಂತಾ ಹೆಣ್ಣು ನಾನಲ್ಲಾ, ನನ್ನಂತಾ ಹೆಣ್ಣು ಬೇರಿಲ್ಲಾ.. ತಂದೆ :...

ಪ್ರೀತಿ ಏನೆಂದು ಯುವಕರಿಗೆ ಕಲಿಸುವಲ್ಲಿ ನಾವು ಸೋತು ಬಿಟ್ಟೆವೇ?

ಓರ್ವ ಹುಡುಗಿ,  ಅದೂ ತಾನು ಪ್ರೀತಿಸುವ ಹುಡುಗಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬುದು ಓರ್ವ ಯುವಕನಿಗೆ ಅವಮಾನದ ಮತ್ತು ಮಾನಾಪಮಾನದ ಪ್ರಶ್ನೆ ಎನಿಸುವುದು ಏಕೆ? ಆ ಯುವತಿಗೆ ಅವಳದೇ ಆದ ಆಸೆ, ಕನಸು,...

ಬಂಟ್ವಾಳದಲ್ಲಿ ಯುವತಿಯ ಹತ್ಯೆ ; ಕೋಮು ಪ್ರಚೋದನೆಗೆ ತಪ್ಪಿದ ನೆಲೆ

ಧರ್ಮದ ಆಧಾರದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ, ಹಾಗೂ ತಮಗನುಕೂಲವಾಗುವ ಆಯ್ದ ಪ್ರಕರಣಗಳಲ್ಲಿ ಮಾತ್ರ ಹುಯಿಲೆಬ್ಬಿಸುವ ಕೋಮುಪಡೆಗಳ ಹುನ್ನಾರವನ್ನು ಕರಾವಳಿಯ ಪ್ರಜ್ಞಾವಂತ ಜನರು ಅರಿತುಕೊಂಡು ಎಚ್ಚರಗೊಳ್ಳಬೇಕಿದೆ. ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳನ್ನು ತಿರಸ್ಕರಿಸಬೇಕಿದೆ- ಶಶಿಕಾಂತ...

ಗಾಂಜಾ ಮಾರಾಟ ಜಾಲ ಪತ್ತೆ : ಉತ್ತರ ಪ್ರದೇಶ ಮೂಲದ ಆರೋಪಿ ಬಂಧನ

ಕೋಲಾರ : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಗಾಂಜಾ ಮಾರಾಟ ಜಾಲವನ್ನು ಭೇದಿಸಿರುವ ಜಿಲ್ಲಾ ಪೊಲೀಸರು ಉತ್ತರ ಪ್ರದೇಶ ಮೂಲದ ಆರೋಪಿಯೊಬ್ಬನನ್ನು ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದ ಬಳಿ ಬಂಧಿಸಿರುವ ಪೊಲೀಸರು ಆತನ...

ಎಂಎಲ್ಸಿ ಎಂ.ಕೆ.ಪ್ರಾಣೇಶ್‌ ಸದಸ್ಯತ್ವ ರದ್ದುಗೊಳಿಸಿದ ಸುಪ್ರೀಂಕೋರ್ಟ್‌

ನವದೆಹಲಿ : ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರ ಸದಸ್ಯತ್ವವನ್ನು ಸುಪ್ರೀಂಕೋರ್ಟ್ ಅಧಿಕೃತವಾಗಿ ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪ್ರಾಣೇಶ್‌ ಅವರಿಗೆ  ಸುಪ್ರೀಂಕೋರ್ಟ್‌ನಲ್ಲಿ...

ಆ. 8ರವರೆಗೆ SIR ಅವಧಿ ವಿಸ್ತರಣೆ

ಬೆಂಗಳೂರು : ರಾಜ್ಯದಲ್ಲಿ ಎಸ್‌ಐಆರ್‌ ಅವಧಿಯನ್ನು ವಿಸ್ತರಣೆ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಜುಲೈ 29ರಂದು ಮತದಾರರು ಎಸ್‌ಐಆರ್‌ ಗಣತಿ ನಮೂನೆ ಸಲ್ಲಿಸಲು ಕೊನೆ ದಿನವಾಗಿತ್ತು. ಅದನ್ನು ಈಗ ಆಗಸ್ಟ್...

ತಮಿಳುನಾಡಿಗೆ ಸದ್ಯಕ್ಕೆ ನೀರು ಹರಿಸುವಂತಿಲ್ಲ : ತಾತ್ಕಾಲಿಕ ರಿಲೀಫ್ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ

ಬೆಂಗಳೂರು : ಎಲ್‌ ನಿನೋ ಪರಿಣಾಮದಿಂದ ಈ ಬಾರಿ ಮುಂಗಾರು ಮಳೆ ಕೊರತೆ ಆಗಿರುವುದರಿಂದ ಕೆಆರ್‌ಎಸ್‌ ಆಣೆಕಟ್ಟೆಯ ನೀರನ್ನು ಹೊರಗೆ ಬಿಡದೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ)...

ಬೌದ್ಧ ಬಿಕ್ಕುಗಳಿಗೆ  ಆರು ಸಾವಿರ ರೂ. ಗೌರವಧನ ನೀಡಲು ಸರ್ಕಾರ ಆದೇಶ : ವಿಧಾನ ಪರಿಷತ್‌ ಸದಸ್ಯ ಶಿವಕುಮಾರ್

ಮೈಸೂರು : ರಾಜ್ಯ ಸರ್ಕಾರವು ಬೌದ್ಧ ಬಿಕ್ಕುಗಳಿಗೆ ಮಾಸಿಕ ಆರು ಸಾವಿರ ರೂ. ಗೌರವಧನ ನೀಡಲು ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಕಡತೂರು ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೌದ್ಧ ಬಿಕ್ಕುಗಳ ಜೀವನ ನಿರ್ವಹಣೆಗೆ ಮಾಸಿಕ ಗೌರವಧನ ನೀಡುವಂತೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದ ಅವರು, ರಾಜ್ಯದಲ್ಲಿರುವ ಬುದ್ಧವಿಹಾರಗಳಲ್ಲಿ ಸೇವೆ ಸಲ್ಲಿಸುವ ಬೌದ್ಧ ಬಿಕ್ಕುಗಳ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಇದಕ್ಕಾಗಿ ಸರ್ಕಾರದಿಂದ ಯಾವುದೇ ಸಹಾಯಧನ ದೊರಕುತ್ತಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಅಭಿಮಾನಿಗಳು ಸೇರಿದಂತೆ ಬೌದ್ಧಧರ್ಮವನ್ನು ಒಪ್ಪಿಕೊಂಡಿರುವ ಬಹಳಷ್ಟು ಅನುಯಾಯಿಗಳು ಸೇರಿ ಬುದ್ಧವಿಹಾರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಆದ್ದರಿಂದ ಬೌದ್ಧ ಬಿಕ್ಕುಗಳಿಗೆ ಸರ್ಕಾರವು ಗೌರವಧನ ನೀಡವುದರಿಂದ ಬುದ್ಧವಿಹಾರ ನಡೆಸಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2026 - 27ನೇ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಅದರಂತೆ ಈಗಿನ ಸರ್ಕಾರವು ರಾಜ್ಯದಲ್ಲಿನ ಬುದ್ಧವಿಹಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೌದ್ಧ ಧಮ್ಮಾಚಾರಿಗಳ ದೈನಂದಿನ ಜೀವನ ನಿರ್ವಹಣೆಗೆ ಮಾಸಿಕ 6000 ರೂ. ಗೌರವಧನ ನೀಡುವುದಕ್ಕೆ ಆದೇಶ ಹೊರಡಿಸಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ  ಎಂದು ತಿಳಿಸಿದ್ದಾರೆ.

ಬೆಂಗಳೂರು ಭಾರತದ ಹೃದಯವಾಗಬೇಕು :  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು :  ಆಸ್ತಿ ಮಾಲೀಕರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದ್ದು,  ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಇಂದು ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) 2026 ಕುರಿತು ಅಪಾರ್ಟ್...

Latest news

- Advertisement -spot_img