ಕಥೆ – ರಿಟೈರ್ಡ್ ರಾಮಯ್ಯ

ಇಸ್ತ್ರಿ ಮಾಡಿದ ಶುಭ್ರ ಬಿಳಿ ಅಂಗಿ, ಪ್ಯಾಂಟ್, ಕಣ್ಣಿಗೆ ಚಶ್ಮಾ ಮತ್ತು ಕೈಯಲ್ಲಿ ಫೈಲ್ ಹಿಡಿದು ಸರ್ಕಾರಿ ತಹಶೀಲ್ದಾರ್ ಕಚೇರಿಯ ಕಡೆಗೆ ಒಂದು ಗಾಂಭೀರ್ಯದ ನಡಿಗೆ ಬಂತು.

ಬೆಳಗ್ಗೆ ಅವರು ಕಚೇರಿಗೆ ಬರುತ್ತಿದ್ದಂತೆಯೇ ಪಿಯೂನ್ ರಂಗಪ್ಪ ಬಾಗಿಲು ತೆರೆಯುತ್ತಾ,

“ನಮಸ್ಕಾರ ಸಾರ್!” ಎಂದು ಕೈಜೋಡಿಸುತ್ತಿದ್ದ.

ಕಚೇರಿಯಲ್ಲಿರುವ ಸಿಬ್ಬಂದಿಯೂ ಎದ್ದು ನಿಂತು ಗೌರವಿಸುತ್ತಿದ್ದರು.

“ರಾಮಯ್ಯ ಸಾರ್ ಇದ್ದಾರೆ ಅಂದ್ರೆ ಕೆಲಸ ಖಂಡಿತ ಆಗುತ್ತದೆ,” ಎಂದು ಜನ ಮಾತಾಡುತ್ತಿದ್ದರು.

ಒಮ್ಮೆ ಹಳ್ಳಿಯ ರೈತನೊಬ್ಬ ಭೂ ದಾಖಲೆ ಸಮಸ್ಯೆಗಾಗಿ ಕಚೇರಿಗೆ ಬಂದಿದ್ದ.

“ಸಾರ್… ಮೂರು ತಿಂಗಳಿಂದ ಓಡಾಡುತ್ತಿದ್ದೀನಿ,” ಎಂದು ಬೇಸರದಿಂದ ಹೇಳಿದ.

ರಾಮಯ್ಯ ಫೈಲ್ ಪರಿಶೀಲಿಸಿ, “ಬಡವನ ಕೆಲಸ ತಡವಾಗಬಾರದು,” ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ಆ ರೈತನ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರು ತುಂಬಿತು.

ಆ ದಿನ ಮನೆಗೆ ಹೋದಾಗ ರಾಮಯ್ಯನವರ ಹೆಂಡತಿ ರತ್ನಮ್ಮ ಹೆಮ್ಮೆಯಿಂದ ಹೇಳಿದಳು:

“ನಿಮ್ಮ ಬಗ್ಗೆ ಊರೇ ಹೊಗಳ್ತಿದೆ.”

ರಾಮಯ್ಯ ಮುಗಳು ನಗುತ್ತಾ: ನಾನು ರತ್ನಮ್ಮನ ಗಂಡ ರಾಮಯ್ಯ ಅಲ್ವಾ “ನಾನು ನನ್ನ ಕೆಲಸ ಮಾಡ್ತಿದ್ದೀನಷ್ಟೆ.” ಎಂದರು.

ರಾಮಯ್ಯನವರಿಗೆ ಇಬ್ಬರು ಮಕ್ಕಳು  ಮಗ ದೊಡ್ಡವ  ರಮೇಶ್ , ಮಗಳು ರಮಾ.

ಮಗ ಇಂಜಿನಿಯರಿಂಗ್ ಓದುತ್ತಿದ್ದ. ಮಗಳು ಶಿಕ್ಷಕಿಯಾಗುವ ಕನಸು ಕಾಣುತ್ತಿದ್ದಳು.

ಪ್ರತಿ ತಿಂಗಳು ಸಂಬಳ ಬಂದ ದಿನ ಮನೆಯಲ್ಲೊಂದು ಹಬ್ಬದ ವಾತಾವರಣ.

“ಅಪ್ಪಾ, ನನಗೆ ಪುಸ್ತಕ ಬೇಕು,” ಎಂದು ಮಗಳು ಕೇಳಿದರೆ,

“ತಗೋ ಮಗಳೇ,” ಎಂದು ರಾಮಯ್ಯ ಪ್ರೀತಿಯಿಂದ ಹಣ ಕೊಡುತ್ತಿದ್ದರು.

ಪಕ್ಕದ ಮನೆಯವರು ಕೂಡ ಅವರನ್ನು ಗೌರವದಿಂದ ನೋಡುತ್ತಿದ್ದರು.

“ರಾಮಯ್ಯ ಸಾರ್ ಮಗ ತುಂಬಾ ಚೆನ್ನಾಗಿ ಓದುತ್ತಿದ್ದಾನೆ.” ಅವ ತಂದೆಗೆ ತಕ್ಕ ಮಗ ಎಂದೆಲ್ಲ ಕೊಂಡಾಡುತ್ತಿದ್ದರು.

“ಅವರ ಮನೆ ಶಿಸ್ತಿನ ಮನೆ.”

ಎಲ್ಲರ ಮಾತಿನಲ್ಲೂ ಗೌರವ ತುಂಬಿರುತ್ತಿತ್ತು.

ಕಾಲ ಯಾರನ್ನೂ ಕಾಯುವುದಿಲ್ಲ.

ಮೂವತ್ತೈದು ವರ್ಷಗಳ ಸೇವೆಯ ನಂತರ ರಾಮಯ್ಯ ನಿವೃತ್ತರಾಗುವ ದಿನ ಬಂತು.

ಕಚೇರಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಯಿತು.

ಹೂಮಾಲೆ ಹಾಕಿ ಸಿಬ್ಬಂದಿ ಸನ್ಮಾನ ಮಾಡಿದರು.

“ರಾಮಯ್ಯ ಸಾರ್ ನಮ್ಮ ಇಲಾಖೆಯ ಆದರ್ಶ ಅಧಿಕಾರಿ,” ಎಂದು ಮೇಲಧಿಕಾರಿ ಭಾಷಣ ಮಾಡಿದರು.

ರಾಮಯ್ಯನವರ ಕಣ್ಣು  ತೇವವಾಯಿತು.

“ನಾನು ನಿಮ್ಮ ಪ್ರೀತಿಯನ್ನು ಮರೆಯುವುದಿಲ್ಲ,” ಎಂದು ಅವರು ಹೇಳಿದರು.

ಸಂಜೆ ಮನೆಗೆ ಬಂದಾಗ ರತ್ನಮ್ಮ ಆರತಿ ತೆಗೆದಳು.

“ಇನ್ನು ನೀವು ವಿಶ್ರಾಂತಿ ಮಾಡಬೇಕು,” ಎಂದು ಹೇಳಿದಳು.

ರಾಮಯ್ಯ ಕೂಡ ಸಂತೋಷಪಟ್ಟರು.

“ಇನ್ನು ಕುಟುಂಬದ ಜೊತೆ ಸಮಯ ಕಳೆಯಬಹುದು,” ಎಂದುಕೊಂಡರು.

ಆದರೆ ಅವರಿಗೆ ಗೊತ್ತಿರಲಿಲ್ಲ, ಅವರ ಬದುಕಿನ ನಿಜವಾದ ಪರೀಕ್ಷೆ ಈಗ ಆರಂಭವಾಗುತ್ತದೆಂದು.

ನಿವೃತ್ತಿಯ ನಂತರ ಮೊದಲ ಕೆಲವು ದಿನಗಳು ಚೆನ್ನಾಗಿದ್ದವು.

ಆದರೆ ನಿಧಾನವಾಗಿ ಪರಿಸ್ಥಿತಿ ಬದಲಾಗತೊಡಗಿತು.

ಮೊದಲು ಬೆಳಿಗ್ಗೆ ಮನೆ ಮುಂದೆ ನಿಂತು ನಮಸ್ಕಾರ ಮಾಡುತ್ತಿದ್ದವರು ಈಗ ಗಮನಕೊಡುತ್ತಿರಲಿಲ್ಲ.

ಒಮ್ಮೆ ರಾಮಯ್ಯ ಮಾರುಕಟ್ಟೆಗೆ ಹೋದರು.

ಹಿಂದೆ ಅಂಗಡಿಯವನು, “ಬನ್ನಿ ಸಾರ್, ಕುಳಿತುಕೊಳ್ಳಿ,” ಎಂದು ಗೌರವಿಸುತ್ತಿದ್ದ.

ಆದರೆ ಆ ದಿನ ಅವನು ವ್ಯಸ್ತನಂತೆ ನಡೆದುಕೊಂಡ.

“ಏನು ಬೇಕು?” ಎಂದು ಸರಳವಾಗಿ ಕೇಳಿದ.

ರಾಮಯ್ಯ ಕ್ಷಣಕಾಲ ಮೌನರಾದರು.

ಅವರಿಗೆ ಅದು ಅಸಹಜ ಎಂದು ಅನಿಸಿತು.

ಮನೆಯಲ್ಲಿಯೂ ವಾತಾವರಣ ಬದಲಾಗಿತ್ತು.

ಮಗ ರಮೇಶ್ ಈಗ ಉದ್ಯೋಗದಲ್ಲಿದ್ದ.

ಅವನ ಮಾತುಗಳಲ್ಲಿ ವ್ಯಸ್ತತೆ ಹೆಚ್ಚಾಗಿತ್ತು.

“ಅಪ್ಪಾ, ನೀವು ಈ ವಿಷಯಗಳಲ್ಲಿ ತಲೆ ಹಾಕ್ಬೇಡಿ,” ಎಂದು ಹೇಳುತ್ತಿದ್ದ.

ಒಮ್ಮೆ ರಾಮಯ್ಯ ಮನೆಯ ಖರ್ಚಿನ ಬಗ್ಗೆ ಸಲಹೆ ನೀಡಿದರು.

“ನಿಮ್ಮ ಕಾಲ ಬೇರೆ ಅಪ್ಪಾ… ಈಗ ಪರಿಸ್ಥಿತಿ ಬೇರೆ,” ಎಂದು ಮಗ ಉತ್ತರಿಸಿದ.

ಆ ಮಾತು ರಾಮಯ್ಯನ ಹೃದಯಕ್ಕೆ ಇರಿಯಿತು

ರತ್ನಮ್ಮ ಮಾತ್ರ ಅವರಿಗೆ ಧೈರ್ಯ ಹೇಳುತ್ತಿದ್ದಳು.

“ನೀವು ಬೇಸರ ಮಾಡ್ಕೋಬೇಡಿ. ಕಾಲ ಹೀಗೇ.”

ರಾಮಯ್ಯ ಮೌನವಾಗಿ ಕಿಟಕಿಯಾಚೆ ನೋಡುತ್ತಿದ್ದರು.

ನಿವೃತ್ತಿಯಾದ ಕೆಲ ಹಿರಿಯರು ಪ್ರತಿದಿನ ಸಂಜೆ ಅರಳಿ ಮರದ ಕೆಳಗೆ ಸೇರುತ್ತಿದ್ದರು.

ಒಬ್ಬ ಶಿಕ್ಷಕ, ಒಬ್ಬ ಪೋಸ್ಟ್ ಮಾಸ್ಟರ್, ಒಬ್ಬ ರೈಲ್ವೆ ನೌಕರ  ಎಲ್ಲರೂ ಒಂದೇ ನೋವಿನ ಕಥೆ ಹೇಳುತ್ತಿದ್ದರು.

“ಕೆಲಸದಲ್ಲಿದ್ದಾಗ ಮಾತ್ರ ಬೆಲೆ,” ಎಂದ ಶಿಕ್ಷಕ.

“ನಿವೃತ್ತಿಯಾದ್ಮೇಲೆ ನಾವು ಅನಗತ್ಯ” ಎಂದ ಪೋಸ್ಟ್ ಮಾಸ್ಟರ್.

ರಾಮಯ್ಯ ನಿಧಾನವಾಗಿ ಹೇಳಿದರು:

“ಹುದ್ದೆಗೆ ಸಿಗೋ ಗೌರವ ಮನುಷ್ಯನಿಗೆ ಸಿಗೋದಿಲ್ಲ ಅನ್ನೋದು ಕಷ್ಟದ ಸತ್ಯ.”

ಎಲ್ಲರೂ ಮೌನರಾದರು.

ಒಂದು ದಿನ ರಾಮಯ್ಯ ಹಳೆಯ ಕಚೇರಿಗೆ ಹೋದರು.

ಒಮ್ಮೆ ಅವರು ಕುಳಿತಿದ್ದ ಕುರ್ಚಿಯಲ್ಲಿ ಈಗ ಹೊಸ ಅಧಿಕಾರಿ ಕುಳಿತಿದ್ದ.

ಪಿಯೂನ್ ರಂಗಪ್ಪ ರಾಮಯ್ಯನನ್ನು ನೋಡಿ ಸಂತೋಷಪಟ್ಟ.

“ಬನ್ನಿ ಸಾರ್!”

ಆದರೆ ಒಳಗೆ ವ್ಯಸ್ತ ವಾತಾವರಣ.

ಹೊಸ ಸಿಬ್ಬಂದಿಗೆ ರಾಮಯ್ಯ ಯಾರು ಎಂಬುದೇ ಗೊತ್ತಿರಲಿಲ್ಲ.

ಒಮ್ಮೆ ಅವರ ಸಹಿಗಾಗಿ ಕಾಯುತ್ತಿದ್ದ ಜನ ಈಗ ಅವರತ್ತ ಗಮನ ಕೊಡುತ್ತಿರಲಿಲ್ಲ.

ರಾಮಯ್ಯ ಮನದಲ್ಲಿ ವಿಚಿತ್ರ ಖಾಲಿತನ ಅನುಭವಿಸಿದರು.

ಕಚೇರಿಯಿಂದ ಹೊರಬರುವಾಗ ಅವರು ತಮ್ಮೊಳಗೆ ಮಾತನಾಡಿಕೊಂಡರು:

“ಕಾಲ ಬದಲಾಗುತ್ತದೆ… ಕುರ್ಚಿಯೂ ಬದಲಾಗುತ್ತದೆ… ಗೌರವವೂ ಬದಲಾಗುತ್ತದೆ.”

ಒಮ್ಮೆ ಊರಿನಲ್ಲಿ ಕಾರ್ಯಕ್ರಮವಿತ್ತು.

ಹಿಂದೆ ಯಾವುದೇ ಕಾರ್ಯಕ್ರಮಕ್ಕೆ ರಾಮಯ್ಯ ಮುಖ್ಯ ಅತಿಥಿಯಾಗುತ್ತಿದ್ದರು.

ಆದರೆ ಆ ದಿನ ಯಾರೂ ಅವರನ್ನು ಆಹ್ವಾನಿಸಲಿಲ್ಲ.

ಅವರು ದೂರದಿಂದ ಕಾರ್ಯಕ್ರಮ ನೋಡುತ್ತ ನಿಂತಿದ್ದರು.

ಅಷ್ಟರಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಯೊಬ್ಬ ಓಡಿ ಬಂದು ಕೈಜೋಡಿಸಿದ.

“ಸಾರ್! ನೀವು ನನ್ನ ವಿದ್ಯಾರ್ಥಿವೇತನಕ್ಕೆ ಸಹಾಯ ಮಾಡಿದ್ದಿರಿ. ಇಂದು ನಾನು ಬ್ಯಾಂಕ್ ಮ್ಯಾನೇಜರ್.”

ರಾಮಯ್ಯ ಆಶ್ಚರ್ಯಪಟ್ಟರು.

“ನಿಮ್ಮ ಆಶೀರ್ವಾದ ಸಾರ್,” ಎಂದು ಯುವಕ ಗೌರವದಿಂದ ಮಾತಾಡಿದ.

ಆ ಕ್ಷಣದಲ್ಲಿ ರಾಮಯ್ಯನ ಮನಸ್ಸಿಗೆ ಒಂದು ಸತ್ಯ ಸ್ಪಷ್ಟವಾಯಿತು.

ಹುದ್ದೆಯಿಂದ ಸಿಗುವ ಗೌರವ ತಾತ್ಕಾಲಿಕ. ಮಾನವೀಯತೆಯಿಂದ ಸಿಗುವ ಗೌರವ ಶಾಶ್ವತ.

ಆ ದಿನದ ನಂತರ ರಾಮಯ್ಯ ತಮ್ಮ ಬದುಕನ್ನು ಬದಲಾಯಿಸಲು ನಿರ್ಧರಿಸಿದರು.

ಅವರು ಹಳ್ಳಿಯ ಮಕ್ಕಳಿಗೆ ಉಚಿತ ಪಾಠ ಹೇಳತೊಡಗಿದರು.

ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಕೊಟ್ಟರು.

ಹಿರಿಯ ನಾಗರಿಕರ ಸಂಘ ಆರಂಭಿಸಿದರು.

ನಿಧಾನವಾಗಿ ಜನ ಮತ್ತೆ ಅವರನ್ನು ಗೌರವದಿಂದ ನೋಡತೊಡಗಿದರು.

ಆದರೆ ಈ ಬಾರಿ ಗೌರವದ ಕಾರಣ ಅವರ ಹುದ್ದೆಯಲ್ಲ.

ಅವರ ವ್ಯಕ್ತಿತ್ವ.

ಒಮ್ಮೆ ಗ್ರಾಮ ಸಭೆಯಲ್ಲಿ ಯುವಕನೊಬ್ಬ ಹೇಳಿದ:

“ರಾಮಯ್ಯ ಸಾರ್ ಈಗ ನಮ್ಮ ಊರಿನ ನಿಜವಾದ ಗುರು.”

ಆ ಮಾತು ಕೇಳಿ ರಾಮಯ್ಯನ ಕಣ್ಣಲ್ಲಿ ಸಂತೋಷದ ಕಣ್ಣೀರು ತುಂಬಿತು.

ಒಂದು ಸಂಜೆ ರಾಮಯ್ಯ ಅರಳಿ ಮರದ ಕೆಳಗೆ ಕುಳಿತಿದ್ದರು.

ಸೂರ್ಯ ಅಸ್ತಮಿಸುತ್ತಿದ್ದ.

ರತ್ನಮ್ಮ ಹತ್ತಿರ ಬಂದು ಕೇಳಿದಳು:

“ಏನು ಯೋಚನೆ?”

ರಾಮಯ್ಯ ಮೃದುವಾಗಿ ನಕ್ಕರು.

“ನಿವೃತ್ತಿ ಕೆಲಸಕ್ಕೆ ಮಾತ್ರ ರತ್ನ… ಬದುಕಿಗೆ ಅಲ್ಲ.”

ಅವರು ಮುಂದುವರಿಸಿದರು:

“ಒಮ್ಮೆ ನಾನು ಹುದ್ದೆಯಿಂದ ಗೌರವ ಪಡೆದಿದ್ದೆ. ಈಗ ಮನುಷ್ಯತ್ವದಿಂದ ಗೌರವ ಪಡೆಯುತ್ತಿದ್ದೇನೆ.”

ಎಂದೂ ಇಲ್ಲದ ಅಂದು ಅರಳಿ ಮರದ  ಗಾಳಿಯ ಸದ್ದು ರಾಮಯ್ಯನ ಮನಸ್ಸಿಗೆ ಹೊಸತನ ಎನಿಸಿತು.

ಶ್ರೀನಿವಾಸ. ಎಸ್, ಕನ್ನಡ ಸಹಾಯಕ ಪ್ರಾಧ್ಯಾಪಕರು

ಮತ್ತು ವಿಭಾಗದ ಮುಖ್ಯಸ್ಥರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು,

ಬಂಗಾರು ತಿರುಪತಿ, ಕೋಲಾರ -563116.

ಮೊಬೈಲ್ ಸಂಖ್ಯೆ: 9964740656

ಇದನ್ನೂ ಓದಿ- https://kannadaplanet.com/theater-experiment-review-mittabail-yamunakka/ ರಂಗ ಪ್ರಯೋಗ ವಿಮರ್ಶೆ | ದ್ವೇಷದ ಜ್ವಾಲೆಯಲಿ ಮಿಂದೆದ್ದ ‘ಮಿತ್ತಬೈಲ್ ಯಮುನಕ್ಕ’

More articles

Latest article

Most read