ವಿಶೇಷ | ದೀಪಾವಳಿಯ ಬೆಳಕಿನಲ್ಲಿ ಮಹಿಳೆಯರ ಸಂಭ್ರಮವೂ ಬೆಳಗಲಿ

ಹಬ್ಬದ ಸಂಭ್ರಮ ಎಲ್ಲರದ್ದಾದರೆ, ಅದರ ಸಿದ್ಧತೆಯ ಜವಾಬ್ದಾರಿಯೂ ಎಲ್ಲರದ್ದಾಗಲಿ. ಮನೆ ಬೆಳಗಿಸುವ ಕೈಗಳ ಬದುಕಿನಲ್ಲೂ ಬೆಳಕು ಇರಲಿ. ಮಹಿಳೆಯರಿಗೂ ಹಬ್ಬವನ್ನು ತಮ್ಮವರೊಂದಿಗೆ ಮನಸಾರೆ ಸಂಭ್ರಮಿಸುವ ಅವಕಾಶ ಸಿಗಲಿ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸೇರಿ ಕೆಲಸ ಹಂಚಿಕೊಳ್ಳುವುದೇ ಹೊಸ ಸಂಪ್ರದಾಯವಾಗಲಿ – ರುಕ್ಮಿಣಿ ನಾಗಣ್ಣವರ, ಬರಹಗಾರ್ತಿ.

ದೀಪಾವಳಿ ಎಂದರೆ ಬರೀ ದೀಪ ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿಕೊಳ್ಳುವ ಹಬ್ಬವಲ್ಲ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಸಂಕೇತವಾಗಿ, ಹೊಸ ಭರವಸೆ ಮತ್ತು ಸಂಭ್ರಮವನ್ನು ಹೊತ್ತು ತರುವ ಹಬ್ಬ. ನಮ್ಮ ಬದುಕಿನಲ್ಲಿ ಸಂಬಂಧಗಳಿಗೂ, ನೆನಪುಗಳಿಗೂ, ನಂಬಿಕೆಗಳಿಗೂ ಈ ಹಬ್ಬದಲ್ಲಿ ವಿಶೇಷವಾದ ಸ್ಥಾನವಿದೆ. ಪ್ರತಿ ಊರಿನಲ್ಲೂ ದೀಪಾವಳಿಯನ್ನು ಆಚರಿಸುವ ರೀತಿ ಬೇರೆಬೇರೆಯಾಗಿರಬಹುದು. ನಮ್ಮ ಕಡೆ ಈ ಹಬ್ಬದ ಸಿದ್ಧತೆ ಸುಮಾರು ಹದಿನೈದು ದಿನಗಳ ಮೊದಲೇ ಶುರುವಾಗುತ್ತದೆ.

ಮನೆಯನ್ನೆಲ್ಲ ಸ್ವಚ್ಛಗೊಳಿಸುವುದು, ಗೋಡೆಗಳಿಗೆ ಸುಣ್ಣ-ಬಣ್ಣ ಬಳಿಯುವುದು, ಹಾಸಿಗೆ-ಹೊದಿಕೆ ಮತ್ತು ಬಟ್ಟೆಗಳನ್ನು ತೊಳೆಯುವುದು, ಮನೆಯಲ್ಲಿರುವ ಪಾತ್ರೆಗಳನ್ನು ತಿಕ್ಕಿ ಹೊಳೆಯಿಸುವುದು, ಪೂಜೆಯ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ ಜೋಡಿಸಿಡುವುದು ಹೀಗೆ ಮನೆಮನೆಗಳಲ್ಲೂ ಕೆಲಸಗಳ ಸರಮಾಲೆಯೇ ಇರುತ್ತದೆ. ಹಬ್ಬ ಬರುವ ಹೊತ್ತಿಗೆ ಮನೆ ಪೂರ್ತಿ ಹೊಸ ಕಳೆ ಪಡೆದುಕೊಂಡಿರುತ್ತದೆ. ಆದರೆ ಈ ಸಿದ್ಧತೆಯ ಹಿಂದೆ ಎಷ್ಟು ಶ್ರಮವಿದೆ ಎಂದು ಗಮನಿಸಿದರೆ, ಬಹುತೇಕ ಕೆಲಸಗಳು ಮಹಿಳೆಯರ ಹೆಗಲಿಗೇ ಬೀಳುತ್ತವೆ ಎನ್ನುವುದು ಗೊತ್ತಾಗುತ್ತದೆ.

ನಮ್ಮ ಕಡೆ ದೀಪಾವಳಿಯ ಆಚರಣೆಗಳಲ್ಲಿ ನೀರು ತುಂಬುವ ಹಬ್ಬವೂ ಒಂದು. ನರಕ ಚತುರ್ದಶಿಯ ಹಿಂದಿನ ದಿನ ಮನೆಯಲ್ಲಿರುವ ಹಂಡೆ, ಕೊಡ, ಬಿಂದಿಗೆ ಸೇರಿದಂತೆ ನೀರು ತುಂಬುವ ಪಾತ್ರೆಗಳನ್ನೆಲ್ಲ ಚೆನ್ನಾಗಿ ತೊಳೆದು, ಅರಿಶಿನ ಕುಂಕುಮ ಹಚ್ಚಿ, ಹೂವಿನಿಂದ ಅಲಂಕರಿಸಿ ಪೂಜೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಎಣ್ಣೆ ಸ್ನಾನ ಮಾಡಲು ಬೇಕಾದ ನೀರನ್ನು ಈ ಪಾತ್ರೆಗಳಲ್ಲಿ ತುಂಬಿಡುತ್ತಾರೆ. ನೀರು ನಮ್ಮ ಬದುಕಿನ ಆಧಾರ, ಅದಕ್ಕೆ ಗೌರವ ಕೊಡಬೇಕು ಎನ್ನುವ ಭಾವ ಈ ಆಚರಣೆಯಲ್ಲಿದೆ. ಆದರೆ ಈ ಹಬ್ಬದ ಸಿದ್ಧತೆ ಅಂದರೆ ಪಾತ್ರೆ ತೊಳೆಯುವುದರಿಂದ ಹಿಡಿದು, ಅಲಂಕರಿಸಿ ನೀರು ತುಂಬಿಡುವವರೆಗೂ ಹೆಚ್ಚಿನ ಕೆಲಸ ಮಹಿಳೆಯರದ್ದೇ ಆಗಿರುತ್ತದೆ. ನೀರನ್ನು ಗೌರವಿಸುವ ನಾವು, ಆ ನೀರನ್ನು ತುಂಬಿಡುವುದರಿಂದ ಹಿಡಿದು ಮನೆಯ ಕೆಲಸಗಳನ್ನೆಲ್ಲ ಮಾಡುವ ಮಹಿಳೆಯರ ಶ್ರಮಕ್ಕೂ ಬೆಲೆ ಕೊಡಬೇಕಲ್ಲವೇ?.

ನೀರು ತುಂಬುವ ಹಬ್ಬ

ದೀಪಾವಳಿಯ ಆಚರಣೆಗಳಲ್ಲಿ ನಮ್ಮನ್ನು ಅಗಲಿದ ಹಿರಿಯರನ್ನು ನೆನಪಿಸಿಕೊಳ್ಳುವ ಸಂಪ್ರದಾಯವೂ ಇದೆ. ನಮ್ಮ ಕಡೆ ಈ ಸಂದರ್ಭದಲ್ಲಿ ‘ಹಿರಿಯರ ಹಬ್ಬ’ ಆಚರಿಸುತ್ತಾರೆ. ಕುಟುಂಬದಲ್ಲಿ ನಮ್ಮನ್ನು ಅಗಲಿದ ಹಿರಿಯರನ್ನು ನೆನಪಿಸಿಕೊಳ್ಳುವ ದಿನವಿದು. ಅವರು ಬದುಕಿದ್ದಾಗ ಯಾವ ರೀತಿಯ ಬಟ್ಟೆಗಳನ್ನು ಉಡುತ್ತಿದ್ದರೋ ಅಂತಹ ಹೊಸ ಬಟ್ಟೆಗಳನ್ನು ತಂದು ಅವರ ಫೋಟೋಗಳ ಮುಂದೆ ಇಡುತ್ತಾರೆ. ಫೋಟೋಗಳಿಗೆ ಹೂವಿನ ಹಾರ ಹಾಕಿ, ಅವರಿಗೆ ಇಷ್ಟವಾದ ತಿಂಡಿ-ತಿನಿಸುಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಿ ಪೂಜೆ ಮಾಡುತ್ತಾರೆ. ಮನೆಯವರೆಲ್ಲ ಸೇರಿ ಹಿರಿಯರ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಬದುಕಿನ ಭಾಗವಾಗಿದ್ದವರನ್ನು ನೆನಪಿಸಿಕೊಳ್ಳುವ ಈ ಆಚರಣೆಯಲ್ಲಿ ಕುಟುಂಬದ ನೆನಪುಗಳೂ ಬೆರೆತಿರುತ್ತವೆ.

ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ ಮಾಡುತ್ತಾರೆ. ಮನೆಗಳಲ್ಲಿ ಮಾತ್ರವಲ್ಲದೆ ಅಂಗಡಿ ಮತ್ತು ವ್ಯಾಪಾರ-ವಹಿವಾಟು ನಡೆಸುವ ಸ್ಥಳಗಳಲ್ಲೂ ಪೂಜೆ ನಡೆಯುತ್ತದೆ. ಕೃಷಿ ಬದುಕಿನ ಭಾಗವಾಗಿರುವ ಟ್ರ್ಯಾಕ್ಟರ್, ವಾಹನಗಳು ಮತ್ತು ಕೃಷಿ ಉಪಕರಣಗಳಿಗೂ ಪೂಜೆ ಸಲ್ಲಿಸುತ್ತಾರೆ. ಆ ದಿನ ಬಹುತೇಕ ಮನೆಗಳಲ್ಲಿ ಮನೆಯವರೆಲ್ಲ ಸೇರಿ ಇಸ್ಪೀಟು ಆಡುತ್ತಾರೆ. ಜಗಲಿಯ ಮೇಲಿನ ದೀಪಗಳು ಆರದಂತೆ ನೋಡಿಕೊಳ್ಳುತ್ತಾರೆ.

ಸಾಯಂಕಾಲ ಮನೆಯಲ್ಲಿರುವ ದನಕರು, ಹಸು, ಎಮ್ಮೆ, ಆಡು ಸೇರಿದಂತೆ ಎಲ್ಲ ಜಾನುವಾರುಗಳಿರುವ ಜಾಗಕ್ಕೆ ಹೋಗಿ ಆರತಿ ಮಾಡುತ್ತಾರೆ. ನೈವೇದ್ಯವನ್ನು ತೆಗೆದುಕೊಂಡು ಹೋಗಿ ಅವುಗಳಿಗೆ ಅರ್ಪಿಸಿ, ದೀಪ ಬೆಳಗಿ ಪೂಜೆ ಸಲ್ಲಿಸುತ್ತಾರೆ. ಇದನ್ನು ‘ಹಟ್ಟಿ ಪೂಜೆ’ ಎಂದು ಕರೆಯುತ್ತಾರೆ. ಕೃಷಿ ಬದುಕಿನಲ್ಲಿ ಜಾನುವಾರುಗಳು ಬರೀ ಸಾಕುಪ್ರಾಣಿಗಳಲ್ಲ. ಅವು ಕುಟುಂಬದ ಬದುಕಿನ ಭಾಗ. ಅವುಗಳನ್ನೂ ಹಬ್ಬದ ಸಂಭ್ರಮದಲ್ಲಿ ಸೇರಿಸಿಕೊಳ್ಳುವ ಈ ಆಚರಣೆ ಬಹಳ ವಿಶೇಷವಾದುದು.

ದೀಪಾವಳಿಯ ಮತ್ತೊಂದು ಪ್ರಮುಖ ಆಚರಣೆ ಬಲಿಪಾಡ್ಯಮಿ. ಸಾಂಪ್ರದಾಯಿಕ ಕಥೆಗಳಲ್ಲಿ ಬಲಿ ಚಕ್ರವರ್ತಿಯನ್ನು ಅಹಂಕಾರಿಯೆಂದು ಬಿಂಬಿಸಿದರೆ, ಜನಪದ ಮತ್ತು ಬಹುಜನ ಪರಂಪರೆಯಲ್ಲಿ ಆತನನ್ನು ಜನರ ಬಗ್ಗೆ ಕಾಳಜಿಯಿದ್ದ, ಕೊಟ್ಟ ಮಾತಿಗೆ ತಪ್ಪದ ರಾಜನೆಂದು ನೆನಪಿಸಿಕೊಳ್ಳುತ್ತಾರೆ. ವಾಮನನ ರೂಪದಲ್ಲಿ ಬಂದ ವಿಷ್ಣು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿ, ಬಲಿಯನ್ನು ಪಾತಾಳಕ್ಕೆ ತುಳಿದನೆಂಬ ಕಥೆಯಿದ್ದರೂ, ಬಲಿ ಚಕ್ರವರ್ತಿಯ ತ್ಯಾಗ ಮತ್ತು ಜನರ ಪರವಾದ ಆಡಳಿತವನ್ನು ನೆನಪಿಸಿಕೊಳ್ಳುವ ದಿನವಾಗಿ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಈ ದಿನ ಮನೆಯಲ್ಲಿ ಶಾವಿಗೆ ಬಸಿದು, ಬೆಲ್ಲ-ತುಪ್ಪದ ನೈವೇದ್ಯ ಹಿಡಿಯಲಾಗುತ್ತದೆ. ಸಾಧಾರಣವಾಗಿ ಮನೆಯ ಗಂಡಸರಿಗೆ ಆರತಿ ಬೆಳಗುತ್ತಾರೆ. ಕೆಲವು ಕಡೆ ಅಕ್ಕಪಕ್ಕದ ಮನೆಗಳಿಗೂ ಹೋಗಿ ಮನೆಯವರೆಲ್ಲರಿಗೂ ಆರತಿ ಬೆಳಗುತ್ತಾರೆ.

ಗೋಪೂಜೆ

ನಮ್ಮ ಕಡೆ ಈ ದಿನದಂದು ಮತ್ತೊಂದು ವಿಶಿಷ್ಟ ಆಚರಣೆಯಿದೆ. ಸಗಣಿಯಿಂದ ಐದು ಪಾಂಡವರ ಆಕೃತಿಗಳನ್ನು ಮಾಡಿ, ಹೂವುಗಳಿಂದ ಅಲಂಕರಿಸಿ, ಉತ್ತರಾಣಿ ಕಡ್ಡಿಗಳನ್ನು ಅವುಗಳ ಮೇಲೆ ಇಟ್ಟು ಅನ್ನ, ಮೊಸರು-ತುಪ್ಪವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ನಂತರ ಪಾಂಡವರನ್ನು ಮನೆಯ ಮೇಲ್ಛಾವಣಿಯಲ್ಲಿ ಸಾಲಾಗಿ ನಿಲ್ಲಿಸಿ, ನೈವೇದ್ಯವನ್ನೂ ಅಲ್ಲಿಯೇ ಇಡುತ್ತಾರೆ. ಇದನ್ನು ‘ಪಾಂಡವರನ್ನು ಕಳಿಸುವುದು’ ಎನ್ನುತ್ತಾರೆ. ಕೆಟ್ಟದ್ದರ ಮೇಲಿನ ಒಳ್ಳೆಯದರ ವಿಜಯವನ್ನು ಸಾರುವ ಕಥೆಯೊಂದನ್ನು ಈ ಆಚರಣೆ ನೆನಪಿಸುತ್ತದೆ. ಇಂತಹ ಆಚರಣೆಗಳು ನಮ್ಮ ಊರಿನ ಸಂಸ್ಕೃತಿ ಮತ್ತು ಜನರ ನಂಬಿಕೆಗಳೊಂದಿಗೆ ಎಷ್ಟು ಹತ್ತಿರವಾಗಿ ಬೆಸೆದುಕೊಂಡಿವೆ ಎನ್ನುವುದಕ್ಕೆ ಇದೂ ಒಂದು ಉದಾಹರಣೆ.

ಹೀಗೆ ದೀಪಾವಳಿಯ ಪ್ರತಿಯೊಂದು ದಿನವೂ ಒಂದೊಂದು ಆಚರಣೆ, ನೆನಪು ಮತ್ತು ಸಂಭ್ರಮವನ್ನು ಒಳಗೊಂಡಿದೆ. ಆದರೆ ಈ ಎಲ್ಲ ಸಂಭ್ರಮಗಳ ಸಿದ್ಧತೆಯಲ್ಲಿ ಮಹಿಳೆಯರ ಪಾತ್ರ ಎಷ್ಟು ದೊಡ್ಡದಿದೆ ಎಂಬುದನ್ನು ನಾವು ಯೋಚಿಸಬೇಕಿದೆ. ಮನೆ ಸ್ವಚ್ಛಗೊಳಿಸುವುದರಿಂದ ಹಿಡಿದು ಪೂಜೆಯ ಸಿದ್ಧತೆ, ಅಡುಗೆ, ತಿಂಡಿ-ತಿನಿಸುಗಳ ತಯಾರಿ, ಅತಿಥಿಗಳ ಆತಿಥ್ಯ, ಮಕ್ಕಳ ಮತ್ತು ಮನೆಯವರ ಅಗತ್ಯಗಳನ್ನು ನೋಡಿಕೊಳ್ಳುವವರೆಗೆ ಮಹಿಳೆಯರ ಕೆಲಸ ಮುಗಿಯುವುದೇ ಇಲ್ಲ. ಎಲ್ಲರೂ ಹಬ್ಬದ ಸಂಭ್ರಮದಲ್ಲಿರುವಾಗಲೂ ಅವರು ಅಡುಗೆಮನೆಯಲ್ಲೋ, ಮನೆಯ ಕೆಲಸಗಳಲ್ಲೋ ತೊಡಗಿಕೊಂಡಿರುತ್ತಾರೆ.

ಇಂದಿನ ಮಹಿಳೆಯರು ಮನೆಯ ಹೊರಗೂ ದುಡಿಯುತ್ತಿದ್ದಾರೆ. ಕಚೇರಿ, ಶಾಲೆ, ಆಸ್ಪತ್ರೆ, ಹೊಲ, ಕಾರ್ಖಾನೆ, ಸಂಘ-ಸಂಸ್ಥೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ ಮನೆಗೆ ಮರಳಿದ ಮೇಲೂ ಮನೆಯ ಕೆಲಸಗಳು ಅವರನ್ನೇ ಕಾಯುತ್ತಿರುತ್ತವೆ. ಹಬ್ಬದ ದಿನಗಳಲ್ಲಂತೂ ಈ ಹೊರೆ ಇನ್ನಷ್ಟು ಹೆಚ್ಚಾಗುತ್ತದೆ. ಹೊರಗಿನ ಕೆಲಸಗಳನ್ನು ಪುರುಷರು ನೋಡಿಕೊಳ್ಳುತ್ತಾರೆ, ಮನೆಯ ಕೆಲಸ ಮಹಿಳೆಯರದ್ದೇ ಎಂಬ ಹಳೆಯ ವಿಭಜನೆ ಇನ್ನೂ ಅನೇಕ ಮನೆಗಳಲ್ಲಿ ಮುಂದುವರಿದಿದೆ. ಹಬ್ಬವೆಂದರೆ ಎಲ್ಲರೂ ಒಟ್ಟಿಗೆ ಸಂತೋಷಪಡಬೇಕಾದ ಸಂದರ್ಭ. ಆದರೆ ಅದರ ಸಿದ್ಧತೆಯ ಜವಾಬ್ದಾರಿ ಒಬ್ಬರ ಮೇಲಷ್ಟೇ ಬೀಳಬಾರದು.

ಮನೆಯ ಸ್ವಚ್ಛತೆ, ಅಡುಗೆ, ಪೂಜೆಯ ಸಿದ್ಧತೆ, ಮಕ್ಕಳನ್ನು ನೋಡಿಕೊಳ್ಳುವುದು ಇವೆಲ್ಲವೂ ಮನೆಯ ಎಲ್ಲರ ಜವಾಬ್ದಾರಿಯಾಗಬೇಕು. ಮನೆಯ ಪುರುಷರು ಮತ್ತು ಮಕ್ಕಳು ಕೂಡ ಕೆಲಸದಲ್ಲಿ ಕೈಜೋಡಿಸಿದರೆ ಮಹಿಳೆಯರ ಮೇಲಿನ ಹೊರೆ ಕಡಿಮೆಯಾಗುತ್ತದೆ. ಆಗ ಅವರಿಗೂ ಮನೆಯವರೊಂದಿಗೆ ಕುಳಿತು ಹಬ್ಬವನ್ನು ಆಸ್ವಾದಿಸಲು ಸಮಯ ಸಿಗುತ್ತದೆ. ಹಬ್ಬದ ದಿನ ಮಹಿಳೆಯರು ಬರೀ ಅಡುಗೆ ಮಾಡಿ ಬಡಿಸುವವರಾಗದೆ, ಮನೆಯವರೊಂದಿಗೆ ಕುಳಿತು ಊಟ ಮಾಡುವ, ನಗುವ, ಮಾತನಾಡುವ ಮತ್ತು ಸಂಭ್ರಮಿಸುವ ಅವಕಾಶವೂ ಇರಬೇಕು.

ಸಂಪ್ರದಾಯಗಳು ನಮ್ಮ ಬದುಕಿನ ಭಾಗ. ಆದರೆ ಅವುಗಳನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕು ಎಂದೇನಿಲ್ಲ. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಮನೆಯ ಕೆಲಸವನ್ನು ಎಲ್ಲರೂ ಹಂಚಿಕೊಳ್ಳುವುದೂ ಒಂದು ಹೊಸ ಸಂಪ್ರದಾಯವಾಗಲಿ. ಹಬ್ಬದ ಸಿದ್ಧತೆಯಲ್ಲಿ ಎಲ್ಲರೂ ಭಾಗವಹಿಸಿದರೆ ಸಂಭ್ರಮ ಕಡಿಮೆಯಾಗುವುದಿಲ್ಲ. ಬದಲಿಗೆ ಅದು ಇನ್ನಷ್ಟು ಹೆಚ್ಚುತ್ತದೆ.

ಹಬ್ಬದ ಆಚರಣೆಗಳಲ್ಲೂ ಪರಿಸರದ ಬಗ್ಗೆ ಕಾಳಜಿ ಇರಲಿ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಆ ಬೆಳಕು ನಮ್ಮ ಮನೆ ಮತ್ತು ಮನಸ್ಸುಗಳನ್ನು ಮಾತ್ರವಲ್ಲ, ನಮ್ಮ ಸುತ್ತಲಿನ ಪರಿಸರವನ್ನೂ ಬೆಳಗಿಸಲಿ. ಪಟಾಕಿಗಳ ಸದ್ದಿನಿಂದ ಉಂಟಾಗುವ ಶಬ್ದ ಮತ್ತು ವಾಯುಮಾಲಿನ್ಯ, ಹಬ್ಬದ ಹೆಸರಿನಲ್ಲಿ ಮಾಡುವ ಅನಗತ್ಯ ಖರ್ಚು ಇವುಗಳ ಬಗ್ಗೆಯೂ ಯೋಚಿಸಬೇಕಿದೆ. ಪರಿಸರಕ್ಕೆ ಹಾನಿಯಾಗದಂತೆ, ಸಾಧ್ಯವಾದಷ್ಟು ಸರಳವಾಗಿ ಹಬ್ಬ ಆಚರಿಸೋಣ. ಪ್ರೀತಿ, ಹಂಚಿಕೆ ಮತ್ತು ಒಟ್ಟುಗೂಡುವಿಕೆಗೆ ಹೆಚ್ಚು ಮಹತ್ವ ಕೊಡೋಣ.

ಹಬ್ಬದ ಸಂಭ್ರಮ ಎಲ್ಲರದ್ದಾದರೆ, ಅದರ ಸಿದ್ಧತೆಯ ಜವಾಬ್ದಾರಿಯೂ ಎಲ್ಲರದ್ದಾಗಲಿ. ಮನೆ ಬೆಳಗಿಸುವ ಕೈಗಳ ಬದುಕಿನಲ್ಲೂ ಬೆಳಕು ಇರಲಿ. ಮಹಿಳೆಯರಿಗೂ ಹಬ್ಬವನ್ನು ತಮ್ಮವರೊಂದಿಗೆ ಮನಸಾರೆ ಸಂಭ್ರಮಿಸುವ ಅವಕಾಶ ಸಿಗಲಿ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸೇರಿ ಕೆಲಸ ಹಂಚಿಕೊಳ್ಳುವುದೇ ಹೊಸ ಸಂಪ್ರದಾಯವಾಗಲಿ.

ಕವಿ ಜಿ.ಎಸ್. ಶಿವರುದ್ರಪ್ಪನವರ ‘ನನ್ನ ಹಣತೆ’ ಕವಿತೆಯ ಈ ಸಾಲುಗಳು ಇಲ್ಲಿ ನೆನಪಾಗುತ್ತವೆ.

‘ಹಣತೆ ಹಚ್ಚುತ್ತೇನೆ ನಾನೂ ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ..’

ಈ ಹಣತೆಯ ಬೆಳಕು ಪರಸ್ಪರರ ಮುಖಗಳಲ್ಲಿ ನಗು ಅರಳಿಸಲಿ, ಬದುಕಿನಲ್ಲಿ ಪ್ರೀತಿ, ಸಮಾನತೆ ಮತ್ತು ಸಂತೋಷ ತುಂಬಲಿ.

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ರುಕ್ಮಿಣಿ ನಾಗಣ್ಣವರ

ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿಯವರು. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ- ವಿಶೇಷ | ನರಕಾಸುರನೋ ಬಲಿಯೋ: ದೀಪಾವಳಿ ಆಚರಣೆ

More articles

Latest article

Most read