ಮರಣಶಯ್ಯೆಯತ್ತ ಸೋನಮ್ ವಾಂಗ್ಚುಕ್; ಲೋಕಸಂಚಾರಿ ಪ್ರಧಾನಿ ಗಪ್ಚುಪ್‌

ಕೇವಲ 14 ದಿನದ ಹಜಾರೆಯವರ ಉಪವಾಸಕ್ಕೆ ಆಗಿನ ಕಾಂಗ್ರೆಸ್ ಸರಕಾರ ಸ್ಪಂದಿಸಿತ್ತು. ಮನಮೋಹನ್ ಸಿಂಗ್ ರವರ ಸರಕಾರದ ಸಚಿವರು ಹಜಾರೆಯವರೊಂದಿಗೆ ಮಾತುಕತೆಗೆ ಬರುತ್ತಿದ್ದರು. ಆದರೆ ಈ ಮೋದಿ ಸರಕಾರ ಮಾತುಕತೆಗೂ ಮುಂದಾಗುತ್ತಿಲ್ಲ. ಬದಲಾಗಿ ವಾಂಗ್‌ಚುಕ್ ರವರ ಸತ್ಯಾಗ್ರಹವನ್ನು ದಮನಿಸಲು ಪ್ರಯತ್ನಿಸುತ್ತಿದೆ. ‘ಉಪವಾಸ ಮಾಡಿ ಸತ್ತರೆ ಸಾಯಲಿ ಬಿಡಿ’ ಎನ್ನುವ ಅಮಾನವೀಯ ಧೋರಣೆಯನ್ನು ಹೊಂದಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಸರಿಸುಮಾರು ಎಂಟು ವರ್ಷಗಳ ಹಿಂದೆ ಪ್ರೊ.ಜಿ.ಬಿ.ಅಗರವಾಲ್ ಎನ್ನುವ ಪರಿಸರವಾದಿಗಳು 111 ದಿನಗಳ ಕಾಲ ಅಮರಣಾಂತ ಉಪವಾಸ ಮಾಡಿ ಮರಣ ಹೊಂದಿದರು. ‘ಗಂಗಾ ನದಿ ಸ್ವಚ್ಛ ವಾಗಬೇಕು ಹಾಗೂ ಅಲ್ಲಿ ಮರಳು ದಂಧೆ ನಿಲ್ಲಬೇಕು’ ಎನ್ನುವುದೊಂದೇ ಅವರ ಬೇಡಿಕೆಯಾಗಿತ್ತು. ಗಂಗಾ ನದಿಯನ್ನು ಭಾವನಾತ್ಮಕವಾಗಿ ಬಳಸಿಕೊಂಡು ಮತಗಳನ್ನು ಪಡೆದು ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿಯವರ ಕಲ್ಲು ಹೃದಯ ಕರಗಲಿಲ್ಲ. ಅಗರವಾಲ್‌ರವರ ಜೀವ ಹೋಯಿತೇ ಹೊರತು ಆಸೆ ಈಡೇರಲಿಲ್ಲ. ಅವರು ಸತ್ತ ಮಾರನೆಯ ದಿನ ಮೋದಿಯವರಿಂದ ವಿಷಾದದ ಟ್ವೀಟ್ ಪ್ರಕಟವಾಯ್ತು ಅಷ್ಟೇ.

ಆಳುವ ಪ್ರಭುಗಳಿಗೆ ತನ್ನ ಪ್ರಜೆಗಳ ಬಗ್ಗೆ ಕನಿಷ್ಠ ಕಾಳಜಿ ಇರಬೇಕು. ಮಾನವೀಯ ತುಡಿತ, ಸಂವೇದನೆ ಹಾಗೂ ಹೃದಯವಂತಿಕೆ ಇರಬೇಕು. ಆದರೆ ಅದು ಪ್ರಧಾನಿ ಮೋದಿಯವರಿಗೆ ಇಲ್ಲವೆಂಬುದು ಹಲವಾರು ಬಾರಿ ಸಾಬೀತಾಗಿದೆ.

ಈಗ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಧೆಗೊಳಪಟ್ಟರು. ಹತಾಶೆಯಿಂದ 20 ಯುವಜನ ಆತ್ಮಹತ್ಯೆ ಮಾಡಿಕೊಂಡರು. ಇದು ಶಿಕ್ಷಣ ವ್ಯವಸ್ಥೆಯ ಮೇಲೆ ನಡೆದ ಭಯೋತ್ಪಾದಕ ಧಾಳಿಯಾಗಿದೆ. ಈ ದಾರುಣತೆಯ ಹೊಣೆ ಹೊತ್ತು ತಕ್ಷಣ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಭಿಜೀತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿಯು ದೆಹಲಿಯ ಜಂತರ್ ಮಂತರ್ ನಲ್ಲಿ ಯುವಜನರ ಬೆಂಬಲದೊಂದಿಗೆ ಕಳೆದ ನಾಲ್ಕು ವಾರಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹೋರಾಟ ಮಾಡುತ್ತಿದೆ. ದೇಶಾದ್ಯಂತ ಯುವ ಸಮೂಹ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯುವ ಜನರ ಪ್ರತಿಭಟನೆಯನ್ನು ದಮನಿಸುವುದಕ್ಕಾಗಿ ಹೋರಾಟ ನಿರತ ಮುಖಂಡರ ಮೇಲೆ ಕೇಂದ್ರ ಸರಕಾರ ಹಾಗೂ ಅದರ ಸಮರ್ಥಕ ಮಾಧ್ಯಮಗಳು ತೀವ್ರ ಅಪಪ್ರಚಾರ ಆರಂಭಿಸಿದವು. ಸಿಜೆಪಿ ಪಕ್ಷದ ಹಿಂದೆ ವಿದೇಶಿ ಹಿತಾಸಕ್ತಿಗಳಿವೆ ಎಂದು ಬಿಂಬಿಸಲು ಪ್ರಯತ್ನಿಸಿತು. ಯಾವಾಗ ಈ ಪ್ರತಿಭಟನೆಗೆ ವಾಂಗ್ ಚುಕ್ ರವರು ಕೈಜೋಡಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರೊ ಆಗ ಹೋರಾಟದ ತೀವ್ರತೆ ಹೆಚ್ಚಾಯಿತು.

ಉಪವಾಸ ನಿರತ ಸೋನಮ್‌ ವಾಂಗ್‌ಚುಕ್

ಈ ಯುವಜನರ ನ್ಯಾಯಯುತ  ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸೋನಮ್ ವಾಂಗ್‌ಚುಕ್ ರವರು ಕಳೆದ 20 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಆರೋಗ್ಯ ಕ್ಷೀಣಿಸುತ್ತಿದೆ, ಆಯಸ್ಸು ಕರಗುತ್ತಿದೆ. ಅವರ ಜೊತೆಗೆ ಉಪವಾಸ ಆರಂಭಿಸಿದ ಆರು ವಿದ್ಯಾರ್ಥಿಗಳ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೂ ಪ್ರಧಾನಿಗಳಿಗೆ ಕಿಂಚಿತ್ತು ಕರುಣೆ ಕನಿಕರ ಇಲ್ಲವಾಗಿದೆ.

ಲಡಾಕ್ ಪ್ರಾಂತ್ಯದ ಸೋನಮ್ ರವರು ಇಂಜಿನೀಯರ್ ಆಗಿದ್ದು, ಶಿಕ್ಷಣ ತಜ್ಞ ಪರಿಸರ ಹೋರಾಟಗಾರರಾಗಿದ್ದಾರೆ. ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ತ್ರೀ ಈಡಿಯೆಟ್ ಎನ್ನುವ ಜನಪ್ರಿಯ ಹಿಂದಿ ಚಲನಚಿತ್ರದಲ್ಲಿ ಅಮಿರ್ ಖಾನ್ ರವರು ಅಭಿನಯಿಸಿದ ಪಾತ್ರಕ್ಕೆ ಸೋನಮ್ ವಾಂಗ್‌ಚುಕ್ ರವರ ಬದುಕು ಮತ್ತು ಸಾಧನೆಯೇ ಪ್ರೇರಣೆಯಾಗಿದೆ. ಇಂತಹ ಅಪ್ರತಿಮ ಪ್ರತಿಭಾವಂತ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆದ ಅನಾಹುತಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ನ್ಯಾಯಾಲಯ ಸೋನಮ್ ರವರ ಆರೋಗ್ಯದ ವೈದ್ಯಕೀಯ ತಪಾಸಣೆಗೆ ಆದೇಶಿಸಿದೆ.

ಆದರೆ ವಿದೇಶ ಪ್ರವಾಸಗಳ ಲೋಕಸಂಚಾರದಲ್ಲಿರುವ ಪ್ರಧಾನಿ ಮೋದಿಯವರು ಈ ಜೆನ್ ಜೀ (Gen-Z) ಹೋರಾಟ ಹಾಗೂ ವಾಂಗ್‌ಚುಕ್ ರವರ ಉಪವಾಸ ಸತ್ಯಾಗ್ರಹದ ಬಗ್ಗೆ  ದಿವ್ಯ ಮೌನ ತಾಳಿದ್ದಾರೆ. ಕೇಂದ್ರ ಸರಕಾರದಿಂದ ಕನಿಷ್ಠ ಸೌಜನ್ಯಕ್ಕಾದರೂ ಯಾರೂ ಹೋರಾಟದ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಮಾತುಕತೆಗೆ ಮುಂದಾಗಿಲ್ಲ. ಮೋದಿಯಾದಿಯಾಗಿ ಇಡೀ ಕೇಂದ್ರ ಸರಕಾರ ತಮ್ಮ ಪಂಚೇಂದ್ರಿಯಗಳನ್ನು ಬಂದ್ ಮಾಡಿಕೊಂಡಿವೆ.

ಇದೇ ಮೋದಿಯವರು ಈ ಹಿಂದೆ ವಾಂಗ್‌ಚುಕ್ ರವರನ್ನು ಹೊಗಳಿದ್ದರು. ಯಾಕೆಂದರೆ ಕಾಶ್ಮೀರದಿಂದ ಲಡಾಕ್ ಪ್ರತ್ಯೇಕವಾದಾಗ ಅದನ್ನು ವಾಂಗ್‌ಚುಕ್ ರವರು ಸ್ವಾಗತಿಸಿದ್ದರು. ಯಾವಾಗ ಲಡಾಕ್ ಜನರಿಗೆ ಕೊಟ್ಟ ಮಾತನ್ನು ಕೇಂದ್ರ ಸರಕಾರ ಈಡೇರಿಸುವ ಪ್ರಯತ್ನವನ್ನು ಮಾಡಲಿಲ್ಲವೊ ಆಗ ವಾಂಗ್‌ಚುಕ್ ರವರು ತಿರುಗಿ ಬಿದ್ದರು. ಯಾವಾಗ ಲಡಾಕಿನಲ್ಲಿ ಕಾರ್ಪೋರೇಟ್ ಶಕ್ತಿಗಳು ಅತಿಕ್ರಮಣ ಶುರುಮಾಡಿದವೋ ಆಗ ವಾಂಗ್‌ಚುಕ್ ಲಡಾಕ್ ಜನರನ್ನು ಸಂಘಟಿಸಿ ಮೈನಸ್ 10 ಡಿಗ್ರಿ ಚಳಿಯಲ್ಲಿ 21 ದಿನಗಳ ಕಾಲ ಸಾವಿರಾರು ಲಡಾಕ್ ಜನರ ಜೊತೆಗೆ ಉಪವಾಸ ಸತ್ಯಾಗ್ರಹ ಮಾಡಿದ್ದರು. ಆಮೇಲೆ ಲಡಾಕಿನ ಲೇಹ್ ನಿಂದ ದಿಲ್ಲಿವರೆಗೆ ಪಾದಯಾತ್ರೆಯನ್ನೂ ಮಾಡಿ ಕೇಂದ್ರ ಸರಕಾರದ ಜನದ್ರೋಹದ ವಿರುದ್ಧ ದೇಶದ ಜನರ ಗಮನ ಸೆಳೆದರು. ವಾಂಗ್‌ಚುಕ್ ರವರ ರ್ಯಾಲಿಯನ್ನೂ ಕೇಂದ್ರ ಸರಕಾರ ದಮನಿಸುವ ಪ್ರಯತ್ನವನ್ನು ಮಾಡಿ, ಪಾಕಿಸ್ತಾನದ ಜೊತೆ ವಾಂಗ್‌ಚುಕ್ ರವರಿಗೆ ಸಂಬಂಧ ಜೋಡಿಸಿ ಕ್ರೂರ ಕಾಯಿದೆಯಾದ NSA ಅಡಿಯಲ್ಲಿ ಬಂಧಿಸಿ ಅವರನ್ನು ದೇಶದ್ರೋಹಿಯಾಗಿ ಬಿಂಬಿಸಲು ಪ್ರಯತ್ನಿಸಿತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರು ಉಪವಾಸ ಸತ್ಯಾಗ್ರಹ ಆರಂಭಿಸಿದರೆ ಅಂತಹ ಕ್ರೂರಿ ವಸಾತುಶಾಹಿ ಬ್ರಿಟೀಷರೇ ಭಯಪಡುತ್ತಿದ್ದರು. ಆದರೆ ಪ್ರಜಾಪ್ರಭುತ್ವ ಮುಖವಾಡದ ಸರ್ವಾಧಿಕಾರಿ ಮೋದಿ ಸರಕಾರವು ಬ್ರಿಟೀಷರಿಗಿಂತ ಕ್ರೂರವಾಗಿ ವರ್ತಿಸುತ್ತಿದೆ. ಪ್ರತಿಭಟನೆಗಳನ್ನು ನಿರ್ಲಕ್ಷಿಸುವ ಹಾಗೂ ದಮನಿಸುವ ದುಷ್ಟ ಕಾರ್ಯವನ್ನು ಮಾಡುತ್ತಿದೆ.

ಈ ಹಿಂದೆ ಬ್ರಿಜ್ ಭೂಷಣ್ ಎನ್ನುವ ಮೋದಿ ಸರಕಾರದ ಸ್ತ್ರೀ ಪೀಡಕ ಕ್ರೀಡಾ ಸಚಿವನ ವಿರುದ್ಧ ಮಹಿಳಾ ಕ್ರೀಡಾಪಟುಗಳು ತೀವ್ರವಾಗಿ ಪ್ರತಿಭಟಿಸಿ ಆತನ ರಾಜೀನಾಮೆಗೆ ಆಗ್ರಹಿಸಿದಾಗಲೂ ಯಾವ ಕ್ರಮವನ್ನೂ ತೆಗೆದುಕೊಳ್ಳದ ಸರ್ವಾಧಿಕಾರಿ ಮೋದಿ ಸರಕಾರ ಈಗ ವಾಂಗ್‌ಚುಕ್ ರವರ ಉಪವಾಸಕ್ಕೆ ಸ್ಪಂದಿಸಿ ಶಿಕ್ಷಣ ಸಚಿವರ ರಾಜೀನಾಮೆ ಪಡೆಯುತ್ತದೆ ಎಂದು ಯಾರಿಗೂ ನಂಬಿಕೆ ಇಲ್ಲ.

ಆದ್ದರಿಂದ ಹಲವಾರು ಪ್ರಮುಖರುಗಳು “ದೇವೇಂದ್ರ ಪ್ರಧಾನ್‌ರವರ ರಾಜೀನಾಮೆಗಿಂತಲೂ ಸೋನಮ್ ವಾಂಗ್‌ಚುಕ್ ರವರ ಜೀವ ದೊಡ್ಡದು, ಆದ್ದರಿಂದ ಅವರು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ವಾಂಗ್‌ಚುಕ್ ರವರ ಜೀವವನ್ನು ಕಾಪಾಡಿಕೊಂಡು ಹೋರಾಟವನ್ನು ಮುಂದುವರೆಸಿಕೊಂಡು ಹೋಗಬೇಕು ಎನ್ನುವುದು ಅವರ ಆಶಯವಾಗಿದೆ.

ಎರಡು ದಶಕಗಳಿಗೂ ಬಹು ಹಿಂದೆ ಗಾಂಧಿವಾದಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇತ್ತು. ಆಗ ಬಿಜೆಪಿ ಹಾಗೂ ಸಂಘಪರಿವಾರವು ಕಾರ್ಪೋರೇಟ್ ಶಕ್ತಿಗಳ ಸಹಾಯದಿಂದ ಹಜಾರೆ ಪ್ರತಿಭಟನೆಯನ್ನು ದೇಶಾದ್ಯಂತ ತೀವ್ರಗೊಳಿಸಿದ್ದವು.  ಸುದ್ದಿ ಮಾಧ್ಯಮಗಳು ಸಿಕ್ಕಾಪಟ್ಟೆ ಕ್ರಿಯಾಶೀಲವಾಗಿ ಅಣ್ಣಾ ಹಜಾರೆಯವರನ್ನು ಮಹಾತ್ಮ ಗಾಂಧಿಯವರಿಗೆ ಹೋಲಿಸಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ಎಂದು ದೇಶದ ಜನರನ್ನು ನಂಬಿಸಿದ್ದವು.  ಈ ಎಲ್ಲಾ ರೀತಿಯ ಅಪಪ್ರಚಾರದಿಂದಾಗಿ ಯುಪಿಎ ಸರಕಾರ ಪತನವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೇರಿ ಮೋದಿ ಸಾಮ್ರಾಜ್ಯ ಸ್ಥಾಪನೆಯಾಯ್ತು.

ಕೇವಲ 14 ದಿನದ ಹಜಾರೆಯವರ ಉಪವಾಸಕ್ಕೆ ಆಗಿನ ಕಾಂಗ್ರೆಸ್ ಸರಕಾರ ಸ್ಪಂದಿಸಿತ್ತು. ಮನಮೋಹನ್ ಸಿಂಗ್ ರವರ ಸರಕಾರದ ಸಚಿವರು ಹಜಾರೆಯವರೊಂದಿಗೆ ಮಾತುಕತೆಗೆ ಬರುತ್ತಿದ್ದರು. ಆದರೆ ಈ ಮೋದಿ ಸರಕಾರ ಮಾತುಕತೆಗೂ ಮುಂದಾಗುತ್ತಿಲ್ಲ. ಬದಲಾಗಿ ವಾಂಗ್‌ಚುಕ್ ರವರ ಸತ್ಯಾಗ್ರಹವನ್ನು ದಮನಿಸಲು ಪ್ರಯತ್ನಿಸುತ್ತಿದೆ. ‘ಉಪವಾಸ ಮಾಡಿ ಸತ್ತರೆ ಸಾಯಲಿ ಬಿಡಿ’ ಎನ್ನುವ ಅಮಾನವೀಯ ಧೋರಣೆಯನ್ನು ಹೊಂದಿದೆ.

ಸೋನಮ್ ವಾಂಗ್‌ಚುಕ್ ರವರು ತಮ್ಮ ಉದ್ದೇಶದಿಂದ ಹಿಂದೆ ಸರಿಯುತ್ತಿಲ್ಲ. ಕೇಂದ್ರ ಸರಕಾರ ಮಾತುಕತೆಗೆ ಮುಂದಾಗುತ್ತಿಲ್ಲ. ಪ್ರೊ.ಅಗರವಾಲ್ ರವರಿಗೆ ಬಂದ ದುರಂತ ಸ್ಥಿತಿ ವಾಂಗ್‌ಚುಕ್ ರವರಿಗೆ ಬಾರದೇ ಇರಲಿ. ಈಗ ಅವರ ಜೀವವನ್ನೂ ಉಳಿಸಿಕೊಂಡು ಯುವಜನರ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಸುಪ್ರೀಂ ಕೋರ್ಟ್ ಈಗ ಮಧ್ಯಪ್ರವೇಶಿಸಿ ಕೇಂದ್ರ ಸರಕಾರಕ್ಕೆ ಚಿಕಿತ್ಸೆ ಕೊಡಬೇಕಿದೆ. ವಾಂಗ್‌ಚುಕ್ ರವರು ಉಪವಾಸ ನಿಲ್ಲಿಸಬೇಕೆಂದು ಆಗ್ರಹಿಸುವವರೆಲ್ಲಾ ಈ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಾಂದೋಲನವನ್ನು ಗಟ್ಟಿಗೊಳಿಸಿದರೆ ಮಾತ್ರ ಸರ್ವಾಧಿಕಾರಿಯನ್ನು ಮಣಿಸಬಹುದಾಗಿದೆ. ಭ್ರಷ್ಟ ರಾಜಕಾರಣಿಗಳಿಂದ ಶಿಕ್ಷಣ ವ್ಯವಸ್ಥೆಯನ್ನು ಬಿಡುಗಡೆಗೊಳಿಸಬಹುದಾಗಿದೆ. ಭ್ರಷ್ಟ ಶಿಕ್ಷಣ ವ್ಯವಸ್ಥೆಯಿಂದಾಗಿ ನಾಶವಾಗುತ್ತಿರುವ ಯುವಜನರ ಬದುಕು ಹಾಗೂ ಭವಿಷ್ಯವನ್ನು ಕಾಪಾಡಬೇಕಿದೆ. ಪ್ರತಿಭಟನಾ ನಿರತ ಯುವಜನರ ಜೊತೆಗೆ ಸಮಸ್ತ ದೇಶವಾಸಿಗಳು ಕೈಜೋಡಿಸುವ ತುರ್ತು ಅಗತ್ಯ ಇದೆ. ಹೇಗಾದರೂ ಮಾಡಿ ಸರ್ವಾಧಿಕಾರಿಯ ಸೊಕ್ಕು ಮುರಿಯಲೇಬೇಕಿದೆ.

ಜುಲೈ 20 ರಂದು ಪ್ರತಿಭಟನಾಕಾರರು ಸಂಸತ್ತಿನತ್ತ ಮೆರವಣಿಗೆ ಹೊರಡುತ್ತಿದ್ದಾರೆ. ಇದಕ್ಕೆ ಎಲ್ಲಾ ವಿದ್ಯಾರ್ಥಿ ಯುವಜನರು, ವಿರೋಧ ಪಕ್ಷದವರು, ರೈತಪರ ಹೋರಾಟಗಾರರು, ಪ್ರಜ್ಞಾವಂತ ಪ್ರಗತಿಪರರು, ಕಲಾವಿದರು, ಸೆಲೆಬ್ರಿಟಿಗಳು ಬೆಂಬಲಿಸಿ ಭಾಗವಹಿಸಬೇಕಿದೆ. ಈ ಜೆನ್ ಜಿ ಹೋರಾಟವನ್ನು ಯಶಸ್ವಿಗೊಳಿಸಬೇಕಿದೆ. ಯಾವುದೇ ಕಾರಣಕ್ಕೂ ಸೋನಮ್ ವಾಂಗ್‌ಚುಕ್ ರವರ ಬಲಿದಾನ ಆಗದಂತೆ ನೋಡಿಕೊಳ್ಳಬೇಕಿದೆ. ಅದಕ್ಕೆ ಜನಾಂದೋಲನವೊಂದೇ  ದಾರಿಯಾಗಿದೆ.

( ಈ ಲೇಖನ ಪ್ರಕಟವಾಗುವ ಹೊತ್ತಲ್ಲಿ ದೆಹಲಿ ಪೊಲೀಸರು ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಒಯ್ದಿದ್ದಾರೆ. ಪ್ರತಿಭಟನಾಕಾರರನ್ನು ಬಲಪ್ರಯೋಗಿಸಿ ಸ್ಥಳದಿಂದ ಚದುರುಸಿದ್ದಾರೆ ಎಂದು ಸುದ್ದಿಯಾಗಿದೆ)

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಬಂಟ್ವಾಳದಲ್ಲಿ ಯುವತಿಯ ಹತ್ಯೆ ; ಕೋಮು ಪ್ರಚೋದನೆಗೆ ತಪ್ಪಿದ ನೆಲೆ

More articles

Latest article

Most read