ನೀಟ್ ಪರೀಕ್ಷೆ; ಹುಸಿಯಾದ ನಿರೀಕ್ಷೆ

ಒಂದು ಹಿನ್ನೋಟ

ಕೇಂದ್ರ ಸರಕಾರವು ಮೊದಲು ಈ ನೀಟ್ ಪರೀಕ್ಷೆಗಳನ್ನೇ ನಿಲ್ಲಿಸಬೇಕಿದೆ. NTA ಯನ್ನು ರದ್ದು ಮಾಡಬೇಕಿದೆ. ವೈದ್ಯಕೀಯ ಕಾಲೇಜಿನ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ರಾಜ್ಯಸರಕಾರಗಳಿಗೆ ವಹಿಸಿಕೊಟ್ಟು ವಿಕೇಂದ್ರೀಕರಣಗೊಳಿಸಬೇಕಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿರುವುದು ಸೂಕ್ತ ಬೇಡಿಕೆಯಾಗಿದೆ. ಅದರ ಜೊತೆಗೆ ಮೆಡಿಕಲ್ ಕಾಲೇಜ್ ಪ್ರವೇಶ ಪರೀಕ್ಷೆ ಹಾಗೂ ಕೌನ್ಸೆಲಿಂಗ್ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ವರ್ಗಾಯಿಸಬೇಕೆಂದೂ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಈಗ ದೇಶಾದ್ಯಂತ ನೀಟ್ ಪರೀಕ್ಷೆ ಪೇಪರ್ ಸೋರಿಕೆ ಹಾಗೂ ಅದನ್ನು ವಿರೋಧಿಸಿ  ಜಿರಲೆ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ ನ ವಿದ್ಯಾರ್ಥಿ ಯುವಜನರ ಬೃಹತ್ ಪ್ರತಿಭಟನೆಯದೇ ಸುದ್ದಿ.‌

ಈ ನೀಟ್ ಪರೀಕ್ಷೆ ಸುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. NEET ಅಂದರೆ “National Eligibility Entrance Test” ಎಂಬುದು ಭಾರತದಲ್ಲಿ MBBS, BDS, BAMS, BHMS, BUMS ಹಾಗೂ BSMS ಅಂದರೆ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ದ ಮುಂತಾದ ಕೋರ್ಸ್‌ ಗಳಿಗಾಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೇಂದ್ರ ಸರಕಾರದ ಸುಪರ್ದಿಯಲ್ಲಿ ನಡೆಸುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.

ಮೊದಲು ಈ ಪ್ರವೇಶ ಪರೀಕ್ಷೆಗಳನ್ನು CBSC ಮೂಲಕ AIPMT ಅಂದರೆ All India Pre-Medical Test ಹೆಸರಲ್ಲಿ ನಡೆಸಲಾಗುತ್ತಿತ್ತು. ಕಾಂಗ್ರೆಸ್ ಸರಕಾರದ ಕೊನೆಯ ವರ್ಷ ಅಂದರೆ 2013 ರಲ್ಲಿ ಈ ನೀಟ್ ಪ್ರವೇಶ ಪರಿಕ್ಷೆ ಪರಿಚಯಿಸಲಾಯಿತಾದರೂ ಕೆಲವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರಿಂದ ಆ ತೀರ್ಪಿನ ಪ್ರಕಾರ ರದ್ದಾಗಿ ಮತ್ತೆ AIPMT ಮೂಲಕವೇ ಪರೀಕ್ಷೆ ನಡೆಯಿತು.

ಆದರೆ ಯಾವಾಗ ಬಿಜೆಪಿಯ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂತೋ ಆಗ ಈ ಮೆಡಿಕಲ್ ಸೀಟ್ ದಂಧೆ ಎನ್ನುವುದು ತಾರಕಕ್ಕೇರಿತು. ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆಯುವುದಕ್ಕೆ ವಿಪರೀತ ಪೈಪೋಟಿ ಆರಂಭವಾಯ್ತು. ಆಗ ಕೇಂದ್ರ ಸರಕಾರ ತನ್ನ ಶಿಕ್ಷಣ ಇಲಾಖೆಯ ಅಡಿಯಲ್ಲಿ ನೀಟ್ ಪ್ರವೇಶ ಪರೀಕ್ಷೆಯನ್ನು 2016 ರಲ್ಲಿ ಮತ್ತೆ ಆರಂಭಿಸಿ ದೇಶದಲ್ಲಿರುವ ಎಲ್ಲಾ ಸರಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನೀಟ್ ಪರೀಕ್ಷೆಯನ್ನು ಕಡ್ಡಾಯ ಮಾಡಲಾಯ್ತು. ಈ ಪ್ರವೇಶ ಪರೀಕ್ಷೆಗಳನ್ನು ನಿರ್ವಹಿಸಲೆಂದೇ 2019 ರಲ್ಲಿ NAT ಅಂದರೆ “National Testing Agency” ಎನ್ನುವುದನ್ನು ಸರಕಾರ ಹುಟ್ಟುಹಾಕಿ ದೇಶಾದ್ಯಂತ ಏಕಕಾಲದಲ್ಲಿ ಪರೀಕ್ಷೆ ನಡೆಸುವ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿತು. 2019 ರಲ್ಲಿ ಜಾರಿಗೆ ತಂದ ನ್ಯಾಶನಲ್ ಮೆಡಿಕಲ್ ಕಾಲೇಜ್ ( NMC Act) ಕಾಯಿದೆ ಪ್ರಕಾರ AIIMS ಮತ್ತು JIPMER ಸಹ ನೀಟ್ ಮೂಲಕವೇ ಪ್ರವೇಶ ನೀಡುತ್ತಿವೆ.

ಪಿಯುಸಿ ಯಲ್ಲಿ Physics, Chemistry, Biology ಅಥವಾ Biotechnology ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು 180 ನಿಮಿಷಗಳ ಅವಧಿಯ, ಒಟ್ಟು 180 ಪ್ರಶ್ನೆಗಳಿರುವ  ಒಟ್ಟು 720 ಅಂಕಗಳಿರುವ ಈ ನೀಟ್ ಪರೀಕ್ಷೆ ಬರೆಯಬಹುದಾಗಿದೆ. ಫಿಸಿಕ್ಸ್ 45, ಕೆಮೆಸ್ಟ್ರಿ 45 ಹಾಗೂ ಬಾಟನಿ + ಜಿಯಾಲಜಿ ಸೇರಿ 90 ಪ್ರಶ್ನೆಗಳಿದ್ದು ಒಟ್ಟು 180 ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕಿದೆ. ಪ್ರತಿ ಸರಿಯಾದ ಉತ್ತರಕ್ಕೆ ನಾಲ್ಕು ಅಂಕಗಳು ಹಾಗೂ ತಪ್ಪಾದ ಉತ್ತರಕ್ಕೆ – 1 ಅಂಕ. ಇಂಗ್ಲೀಷ್ ಹಿಂದಿ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಈ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಭಾರತದಲ್ಲಿರುವ ಎಲ್ಲಾ ಸರಕಾರಿ, ಖಾಸಗಿ ಹಾಗೂ ಕೇಂದ್ರೀಯ ಸಂಸ್ಥೆಗಳ ವೈದ್ಯಕೀಯ ಕಾಲೇಜುಗಳಿಗೆ ಒಂದೇ ಪರೀಕ್ಷೆಯ ಮೂಲಕ ಏಕರೂಪದ ಪ್ರವೇಶ ನೀಡುವುದು ನೀಟ್ ಪರೀಕ್ಷೆಯ ಮೇಲ್ನೋಟದ ಉದ್ದೇಶವಾಗಿದೆ.

ಆದರೆ ನಿಜವಾದ ಉದ್ದೇಶವೇ ಬೇರೆಯಾಗಿದೆ. ವೈದ್ಯಕೀಯ ಶಿಕ್ಷಣವನ್ನು ಕೇಂದ್ರ ಸರಕಾರದ ನಿಯಂತ್ರಣಕ್ಕೆ ಪಡೆಯುವುದೇ ಈ ಏಕರೂಪದ ಪರೀಕ್ಷೆಯ ಹಿಂದಿರುವ ಹುನ್ನಾರವಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ನಿರ್ಲಕ್ಷಿಸಿ ರಾಷ್ಟ್ರೀಯ ಹೆಸರಲ್ಲಿ ಈ ರಾಷ್ಟ್ರೀಯವಾದಿ ಬಿಜೆಪಿ ಸರಕಾರ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ. “ಒಂದು ರಾಷ್ಟ್ರ ಒಂದು ಪರೀಕ್ಷೆ” ಎನ್ನುವುದು ಬಿಜೆಪಿ ಪ್ರೊಪಗಂಡಾ  ಆಗಿದೆ. ಈ ದೇಶದ ಬಹುತ್ವವನ್ನು ನಾಶ ಮಾಡಿ ಏಕೀಕೃತ ಹಿಂದುತ್ವವನ್ನು ಜಾರಿಗೆ ಮಾಡುವುದೇ ಬಿಜೆಪಿ ಹಾಗೂ ಅದರ ಸೂತ್ರಧಾರರಾಗಿರುವ ಆರೆಸ್ಸೆಸ್ ಅಜೆಂಡಾ ಆಗಿದೆ. ಆ ಗುರಿ ಮುಟ್ಟುವಲ್ಲಿ ನೀಟ್ ಎನ್ನುವುದು ಒಂದು ಮೆಟ್ಟಿಲಾಗಿದೆ.

ಹೋಗಲಿ ನೀಟ್ ಪರೀಕ್ಷೆಯನ್ನಾದರೂ ನೀಟಾಗಿ ಮಾಡಲಾಗುತ್ತಾ ಅಂದ್ರೆ ಅದೂ ಈ ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುವವರು ಹಾಗೂ ಕೋಚಿಂಗ್ ಕ್ಲಾಸ್ ನಡೆಸುವವರು ಮತ್ತು ದಲ್ಲಾಳಿಗಳ ಅಕ್ರಮ ದಂಧೆಯಿಂದಾಗಿ ನೀಟ್ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೆ ಮುನ್ನವೇ ಸೋರಿಕೆಯಾಗಿ ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾದವು. 2024 ಮೇ 5 ರಂದು ನೀಟ್ ಪರೀಕ್ಷೆ ನಿಗದಿಯಾಗಿತ್ತು. ಜಾರ್ಖಂಡಿನ ಹಜಾರೀನಾಗ್ ನ ಓಯಸಿಸ್ ಪಬ್ಲಿಕ್ ಶಾಲೆಯಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮಾರಾಟವಾಗಿತ್ತು. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು 720 ಕ್ಕೆ 730 ಅಂಕ ಪಡೆದಿದ್ದರು. ಈ ಅಸಹಜ ಘಟನೆಯ ತನಿಖೆಯನ್ನು ಸಿಬಿಐ ಗೆ ವಹಿಸಲಾಯ್ತು. ಹಗರಣದಲ್ಲಿ 45 ಆರೋಪಿಗಳನ್ನು ಬಂಧಿಸಲಾಗಿತ್ತು. ಅವರಿಗೆ ಕಠಿಣ ಶಿಕ್ಷೆ ಕೊಡಿಸುವುದಾಗಿ ಸಂಸತ್ತಿನಲ್ಲಿ ಉದುರಿತ್ತು ಮೋದಿಯವರ ಅಣಿ ಮುತ್ತು. ಆದರೆ ಅದರಲ್ಲಿ 44 ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಕೆಲವರಿಗೆ ಕ್ಲೀನ್ ಚಿಟ್ ಸಹ ದಕ್ಕಿತು‌. 4500 Fast Track ಕೇಸುಗಳಲ್ಲಿ,1200 ಮಾತ್ರ ಫೈಸಲು. ಬಾಕಿ ಕೇಸ್ ಗಳ ಗತಿ ಗೋವಿಂದಾ. ಈಗ 2026 ರ ನೀಟ್ ಪೇಪರ್ ಲೀಕ್ ಹಗರಣದ ಕುರಿತು ಮತ್ತೆ ಪ್ರಧಾನಿಗಳದ್ದು ಅದೇ ಮಾತು “ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲಾಗುವುದು, ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸಲಾಗುವುದು. ಇತ್ಯಾದಿ. ಆದರೆ ಯಾರಿಗೂ ಶಿಕ್ಷೆಯೂ ಆಗುವುದಿಲ್ಲ, ಕಾನೂನಿನ ಭಯವೂ ಇಲ್ಲಾ. ಯಾಕೆಂದರೆ ಹಗರಣದಲ್ಲಿ ಕೇಂದ್ರ ಸರಕಾರದ ಪಾಲು ಇರುತ್ತಲ್ಲಾ? ಇಡೀ ಪೇಪರ್ ಲೀಕ್ ಸ್ಕ್ಯಾಮಿನ ಕಿಂಗ್ ಪಿನ್ ಸಂಜೀವ್ ಮುಖಿಯಾ ಸಹಿತ ಕೆಲವರ ಬಂಧನಗಳಾದವು. ನಂತರ ಕೆಲವರನ್ನು ಬಿಡುಗಡೆಗೊಳಿಸಲಾಯ್ತು. ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾನಿಗೆ ಸಿಬಿಐ ಕ್ಲೀನ್ ಚಿಟ್ ಕೊಟ್ಟು ಬಿಡುಗಡೆ ಮಾಡಿತು. ಆಗಲೇ ನೀಟ್ ಪರೀಕ್ಷೆಯ ಪಾರದರ್ಶಕತೆಯ ಬಗ್ಗೆ ದೇಶಾದ್ಯಂತ ಅನುಮಾನಗಳು ಪ್ರತಿಧ್ವನಿಸತೊಡಗಿದವು. ಪೇಪರ್ ಲೀಕ್ ಕುರಿತು ಸಂಸತ್ತಿನಲ್ಲಿ ವಾದ ವಿವಾದ ಚರ್ಚೆಗಳಾದವು. ಹಗರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಕೊಡಲಾಗುತ್ತದೆ ಎಂದು ಪ್ರಧಾನಿ ಮೋದಿಯವರು ಅಬ್ಬರಿಸಿದರು. ಆದರೆ ಯಾವ ಶಿಕ್ಷೆಯೂ ಆಗದೇ ಮಾಸ್ಟರ್ ಮೈಂಡಗಳನ್ನೇ ಸಾಕ್ಷಿ ಕೊರತೆ ಹೆಸರಲ್ಲಿ ಬಿಡುಗಡೆಗೊಳಿಸಲಾಯ್ತು. ಈ ವಿಚಾರಣೆ, ತನಿಖೆ ಇವೆಲ್ಲವೂ ಬೃಹನ್ನಾಟಕ ಎಂಬುದು ಆಗಲೇ ಜನರಿಗೆ ಗೊತ್ತಾಗಿತ್ತು.

ಈ ಹಗರಣದಿಂದ ಕೇಂದ್ರ ಸರಕಾರ ಪಾಠ ಕಲಿತು ಎಚ್ಚೆತ್ತು ನೀಟ್ ಪರೀಕ್ಷೆಗಳನ್ನು ಟೈಟ್ ಮಾಡಬಹುದಾಗಿತ್ತು. ಆದರೆ ಅದೂ ಆಗಲಿಲ್ಲ. ಈ ವರ್ಷ ಮೇ 3,  2026 ರಂದು ನೀಟ್ ಪರೀಕ್ಷೆ ಇತ್ತು. ದೇಶಾದ್ಯಂತ ಸರಿಸುಮಾರು 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ಪರೀಕ್ಷೆಯನ್ನೂ ಬರೆದ ನಂತರ ಆಘಾತಕಾರಿ ಸುದ್ದಿಯೊಂದು ವಿದ್ಯಾರ್ಥಿಗಳಿಗೆ ಅಪ್ಪಳಿಸಿತು. ಕೇಂದ್ರ ಸರಕಾರ ನಡೆದ ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಿತ್ತು.

ದೆಹಲಿಯ ಜಂತರ್‌ ಮಂತರ್‌ ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಆಗಿದ್ದೇನೆಂದರೆ ಮತ್ತೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಮಹಾರಾಷ್ಟ್ರದ ನಾಶಿಕ್, ಪುಣೆ, ಲಾತೂರ್ ಹಾಗೂ ರಾಜಸ್ಥಾನ, ಹರಿಯಾಣ, ಉತ್ತರಾಕಾಂಡ್ ಕೇರಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪರೀಕ್ಷೆ ಪತ್ರಿಕೆಗಳು ಐದರಿಂದ ಹತ್ತು ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದ್ದವು. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿತ್ತು. ನೀಟ್ ಪ್ರಶ್ನೆ ಪತ್ರಿಕೆ ಸಿದ್ಧ ಮಾಡುವವರು, ನೀಟ್ ಪರೀಕ್ಷೆ ನಡೆಸುವ NTA ಒಳಗಿನವರು ಹಾಗೂ ಕೋಚಿಂಗ್ ಸೆಂಟರ್ ಮಾಫಿಯಾದವರು ಸೇರಿ ಪ್ರಶ್ನೆ ಪತ್ರಿಕೆ ಮಾರಾಟ ಜಾಲದ ಭಾಗವಾಗಿದ್ದರು. ಯಾವಾಗ ಸುದ್ದಿ ಮಾಧ್ಯಮಗಳಲ್ಲಿ ಈ ಸೋರಿಕೆ ಸುದ್ದಿ ಪ್ರಸಾರವಾಯ್ತೋ ಆಗ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿತು. ಮೇ 12, 2026 ರಂದು ಈ NTA ಮೊದಲ ಬಾರಿ ತಾನೇ ನಡೆಸಿದ ನೀಟ್ ಪರೀಕ್ಷೆಗಳನ್ನು ತಾನೇ ರದ್ದು ಗೊಳಿಸಿತು. ಇದರಿಂದ ಆಘಾತಕ್ಕೊಳಗಾಗಿ 20 ಕ್ಕೂ ಹೆಚ್ಚು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡರು. ಆಗ ದೇಶಾದ್ಯಂತ ವಿರೋಧ ವ್ಯಕ್ತವಾಯಿತು.  ಇಡೀ ಹಗರಣದ ತನಿಖೆಯನ್ನು ಕೇಂದ್ರ ಸರಕಾರ ಸಿಬಿಐ ಗೆ ವಹಿಸಿತು. ಕೆಲವು ಶಿಕ್ಷಕರು, ಕೋಚಿಂಗ್ ಸೆಂಟರ್ ಮಾಲೀಕರು ಹಾಗೂ NTA ಸಿಬ್ಬಂದಿಗಳನ್ನು ಬಂಧಿಸಲಾಯ್ತು. ಕಾಕ್ರೋಚ್‌ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ ನಲ್ಲಿ ನೀಟ್ ಪೇಪರ್ ಲೀಕ್ ವಿರುದ್ಧ ಜೂನ್ 20 ರಿಂದ ಪ್ರತಿಭಟನೆ ಹಮ್ಮಿಕೊಂಡು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರವರ ರಾಜೀನಾಮೆಗೆ ಆಗ್ರಹಿಸಲಾಯ್ತು. ಜೂನ್ 21 ರಂದು ನೀಟ್ ಮರು ಪರೀಕ್ಷೆಯನ್ನು ನಡೆಸಿ ನಂತರ ಫಲಿತಾಂಶವನ್ನೂ ಘೋಷಿಸಲಾಯ್ತು. ಆದರೆ ವಿದ್ಯಾರ್ಥಿ ಯುವಜನರ ಆಕ್ರೋಶ ಕಡಿಮೆಯಾಗಲಿಲ್ಲ. ಯುವಜನರ ಬೇಡಿಕೆ ಈಡೇರಿಸುವಂತೆ ಜೂನ್ 28 ರಂದು ಲಡಾಕಿನ ಪರಿಸರ ಹೋರಾಟಗಾರರಾದ ಸೋನಮ್ ವಾಂಗ್ಚುಕ್ ರವರು ಆಮರಣಾಂತ ಉಪವಾಸ ಕೂತರು. ಆದರೂ ಮೋದಿ ಸರಕಾರ ಸ್ಪಂದಿಸಲಿಲ್ಲ ಹಾಗೂ ಮಾತುಕತೆಗೂ ಮುಂದಾಗಲಿಲ್ಲ. ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವ ದಿನ ಸಂಸತ್ ಮುತ್ತಿಗೆ ಹೋರಾಟವನ್ನು ಜೆನ್ ಜಿ ಗಳು ಹಮ್ಮಿಕೊಂಡರು. ಪೊಲೀಸರ ಮೂಲಕ ಹೋರಾಟಗಾರರನ್ನು ದಮನಿಸುವ ಕ್ರೂರತೆಯನ್ನು ಮೋದಿ ಸರಕಾರ ಮಾಡಿತು. ವಿರೋಧ ಪಕ್ಷಗಳು ಸಂಸತ್ತಿನ ಒಳಗೂ ಹೊರಗೂ ಪ್ರತಿಭಟನೆಗೆ ಇಳಿದವು. ಸರಕಾರ ಇಕ್ಕಟ್ಟಿಗೆ ಸಿಲುಕಿಗೊಂಡು ಹೋರಾಟಗಾರರ ಜೊತೆ ಮಾತುಕತೆಗೆ ಮುಂದಾಯಿತು. ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಕೊಡಲು ಒಪ್ಪಿಕೊಂಡು ವಾಂಕ್ಚುಕ್ ರವರು ತಮ್ಮ ಉಪವಾಸವನ್ನು ಅಂತ್ಯಗೊಳಿಸುವಂತೆ ಮಾಡಲಾಯ್ತು. ಪ್ರಧಾನ ಬೇಡಿಕೆಯಾದ ಧರ್ಮೇಂದ್ರ ಪ್ರಧಾನರವರು ರಾಜೀನಾಮೆ ಕೊಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೋರಾಟಗಾರರು ಧರಣಿ ಸತ್ಯಾಗ್ರಹವನ್ನು ತೀವ್ರಗೊಳಿಸಿದರು.

2024 ರಲ್ಲಿ ನೀಟ್ ಪೇಪರ್ ಲೀಕ್ ಆದಾಗ ಸರಕಾರ ಸಮಿತಿಯೊಂದನ್ನು ರಚಿಸಿತ್ತು. ರಾಧಾಕೃಷ್ಣನ್ ನೇತೃತ್ವದ ಆ ಸಮಿತಿಯು ಭದ್ರತಾ ಸುಧಾರಣೆಗಳ ಕುರಿತು ಶಿಫಾರಸ್ಸುಗಳನ್ನು ಸರಕಾರಕ್ಕೆ ಸಲ್ಲಿಸಿತ್ತು. ಆದರೆ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ  ತರದೇ ನಿರ್ಲಕ್ಷಿಸಿದ ಪರಿಣಾಮ ಪೇಪರ್ ಲೀಕ್ ಹಗರಣ ಮರುಕಳಿಸಿತು‌.

ಕೊನೆಗೂ ವಿದ್ಯಾರ್ಥಿ ಯುವಜನರ ತೀವ್ರ ಪ್ರತಿಭಟನೆಗೆ ತಲೆಬಾಗಿದ  ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದು ಹೇಳುತ್ತಿದ್ದ ಪ್ರಧಾನ್ ರವರ ತಲೆದಂಡವನ್ನು ಪ್ರಧಾನಿಯವರು ಪಡೆಯಲೇಬೇಕಾಯ್ತು. ಜನಾಂದೋಲನ ಅಂದ್ರೆ ಇದು. ಜನರು ಅದರಲ್ಲೂ ಯುವಜನರು ಸಿಡಿದೆದ್ದರೆ ಅದೆಂತುಹುದೆ ಸರ್ವಾಧಿಕಾರಿ ಇದ್ದರೂ ಮಂಡಿ ಊರಲೇಬೇಕು. ಅದೆಂತಹುದೇ ದುರಹಂಕಾರಿ ಇದ್ದರೂ ತಲೆ ತಗ್ಗಿಸಲೇ ಬೇಕು. ಅದೇ ಪ್ರಜಾಪ್ರಭುತ್ವದ ತಾಕತ್ತು. ಅದೇ ಜೆನ್ ಜಿ ತಲೆಮಾರಿನ ಹೋರಾಟದ ತಾಕತ್ತು. ಬಾಬಾಸಾಹೇಬರ ಸಂವಿಧಾನದ ಮುಂದೆ ಸರ್ವಾಧಿಕಾರಕ್ಕೆ ಸೋಲು ಪಕ್ಕಾ ಎನ್ನುವುದಕ್ಕೆ ಪಂಜಾಬ್ ರೈತರ ಹೋರಾಟ ಹಾಗೂ ಜೆನ್‌ ಜಿ ಯುವಕರ ಹೋರಾಟಗಳ ಯಶಸ್ಸೇ ಸಾಕ್ಷಿಯಾಗಿದೆ. ಜಿರಳೆಗಳ ಹೋರಾಟಕ್ಕೆ ಜಯವಾಗಿದೆ.

ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಸಾದ್

ಈಗ ನೀಟ್ ಪರೀಕ್ಷೆಯ ಉಸ್ತುವಾರಿಯಾಗಿರುವ NTA ಯನ್ನು ವಿಸರ್ಜಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಕೇಂದ್ರ ಸರಕಾರ ನಡೆಸುತ್ತಿರುವ ಮೆಡಿಕಲ್ ಪ್ರವೇಶ ಪರೀಕ್ಷೆಯ ಹೊಣೆಗಾರಿಕೆಯನ್ನು ಆಯಾ ರಾಜ್ಯಗಳಿಗೆ ವಹಿಸಿಕೊಡಬೇಕೆಂಬ ಒತ್ತಾಯವನ್ನು ತಮಿಳುನಾಡಿನ ಸಿಎಂ ವಿಜಯನ್ ರವರು ಹಾಗೂ ಡಿಎಂಕೆ ನಾಯಕ ಸ್ಟಾಲಿನ್ ರವರು ಮಾಡತೊಡಗಿದ್ದಾರೆ. ಆದರೆ ಮೋದಿಯವರು ಪ್ರಶ್ನೆ ಪತ್ರಿಕೆಯ ಲೀಕಾಸುರರಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಹತ್ತು ಕೋಟಿ ದಂಡ ವಿಧಿಸುವ ಕಾನೂನು ಜಾರಿ ಮಾಡುವುದಾಗಿ ಹಾಗೂ ಶೀಘ್ರ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಆದರೆ ಅವರ ಮಾತನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಈ ಹಿಂದೆ ಪೇಪರ್ ಲೀಕ್ ಮಾಡಿದವರಿಗೆ ಯಾಕೆ ಶಿಕ್ಷೆಯಾಗಿಲ್ಲ ಎಂದು ಜನ ಕೇಳುತ್ತಿದ್ದಾರೆ. ಶಿಕ್ಷೆ ಪ್ರಮಾಣ ಎಷ್ಟೇ ಮಾಡಿದರೂ ಈ ಅಕ್ರಮ ದಂಧೆ ನಿಲ್ಲುವುದು ಈ ವ್ಯವಸ್ಥೆಯಲ್ಲಿ ಅಸಾಧ್ಯವಾಗಿದೆ.

ಹೀಗಾಗಿ ಕೇಂದ್ರ ಸರಕಾರವು ಮೊದಲು ಈ ನೀಟ್ ಪರೀಕ್ಷೆಗಳನ್ನೇ ನಿಲ್ಲಿಸಬೇಕಿದೆ. NTA ಯನ್ನು ರದ್ದು ಮಾಡಬೇಕಿದೆ. ವೈದ್ಯಕೀಯ ಕಾಲೇಜಿನ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ರಾಜ್ಯಸರಕಾರಗಳಿಗೆ ವಹಿಸಿಕೊಟ್ಟು ವಿಕೇಂದ್ರೀಕರಣಗೊಳಿಸಬೇಕಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿರುವುದು ಸೂಕ್ತ ಬೇಡಿಕೆಯಾಗಿದೆ. ಅದರ ಜೊತೆಗೆ ಮೆಡಿಕಲ್ ಕಾಲೇಜ್ ಪ್ರವೇಶ ಪರೀಕ್ಷೆ ಹಾಗೂ ಕೌನ್ಸೆಲಿಂಗ್ ಜವಾಬ್ದಾರಿಯನ್ನು ರಾಜ್ಯ ಸರಕಾರಗಳಿಗೆ ವರ್ಗಾಯಿಸಬೇಕೆಂದೂ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಿದೆ. ರಾಜ್ಯ ಸರಕಾರಗಳು ಪಿಯುಸಿ ಕಾಲೇಜು ಪರೀಕ್ಷೆಗಳನ್ನೇ ಕಟ್ಟುನಿಟ್ಟಾಗಿ ನಡೆಸಿ ಫಲಿತಾಂಶದ ಆಧಾರದಲ್ಲಿ ಕೌನ್ಸೆಲಿಂಗ್ ಮಾಡಿ ವೈದ್ಯಕೀಯ ಕಾಲೇಜುಗಳಿಗೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದಾಗಿದೆ. ಇದರಿಂದಾಗಿ ನೀಟ್ ಪರೀಕ್ಷೆಯೆಂಬ ಮಾನಸಿಕ ಟಾರ್ಚರ್ ನಿಂದ ವಿದ್ಯಾರ್ಥಿಗಳನ್ನು ಮುಕ್ತಗೊಳಿಸಬಹುದಾಗಿದೆ. ಈ ಕೋಚಿಂಗ್ ಸೆಂಟರ್ ಮಾಫಿಯಾವನ್ನು ಮಟ್ಟ ಹಾಕಬಹುದಾಗಿದೆ.

ಶಶಿಕಾಂತ ಯಡಹಳ್ಳಿ

ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ  ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ- ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ವಿದ್ಯಾರ್ಥಿಗಳ ಹೋರಾಟಕ್ಕೆ ದಿಗ್ವಿಜಯ

More articles

Latest article

Most read