ಸಿನಿಮಾ ವಿಮರ್ಶೆ | ಉತ್ತರ ಎಂಬ ನಿರುತ್ತರ

ಮನುಷ್ಯ ಜಾತಿ ತಾನೊಂದೇ ವಲಂ ಎನ್ನುವ ಮಾದರಿ ಸಂಹಿತೆಯಲ್ಲಿ ಅರಳಿಕೊಂಡ ಚಲನ ಚಿತ್ರ “ಉತ್ತರ”. ಅಮೃತವರ್ಷಿಣಿ ಖ್ಯಾತಿಯ ದಿನೇಶ್ ಬಾಬು ಬರೆದು ನಿರ್ದೇಶಿಸಿರುವ ಸ್ಟಾರ್ ಕಲಾವಿದರಿಗೆ  ಕೇಶ ವಿನ್ಯಾಸ ಮಾಡಿದ ನಾಗೇಶ್ವರ ರಾವ್  ಶ್ರೀ ಲಕ್ಷ್ಮಿ ನರಸಿಂಹ ಆರ್ಟ್ಸ್ ಬ್ಯಾನರ್ ಅಡಿ ನಿರ್ಮಿಸಿರುವ ಕರಾವಳಿಯ ಮಣ್ಣಿನ ಮಗಳು ನಟಿ ಸಂಪ್ರತಿ ಆಳ್ವ ಮೊದಲ ಬಾರಿ ನಾಯಕಿಯಾಗಿ  ನಟಿಸಿರುವ ಈ ‘ಉತ್ತರ’ ಸಿನೆಮಾ ಪುರುಷ ಪ್ರಧಾನ ವ್ಯವಸ್ಥೆಯ  ವರ್ತಮಾನದ ವಾಸ್ತವಗಳಿಗೆ ಉತ್ತರವನ್ನು ಹುಡುಕುವ ಒಂದು ಪ್ರಾಮಾಣಿಕ ಪ್ರಯತ್ನ ಎನ್ನುವ ಕಾರಣಕ್ಕಾಗಿ ಉತ್ತಮ ಕಲಾಭಿವ್ಯಕ್ತಿಯ ಚಲನ ಚಿತ್ರ.  ಸಾಮಾನ್ಯ ಸಿನಿಮಾ ಎಂದ ಕೂಡಲೇ ಅದರಲ್ಲಿ ಹಾಡಿರಬೇಕು. ಫೈಟಿಂಗ್ ಇರಬೇಕು. ದಿನನಿತ್ಯದ ಜಂಜಾಟಗಳಿಂದ ಬಳಲಿ ಮನೋರಂಜನೆಗಾಗಿ ಬಂದವರಿಗೆ, ರಿಲ್ಯಾಕ್ಸ್ ಮೂಡಿನಲ್ಲಿ ಬಂದವರಿಗೆ ಇದು ಥ್ರಿಲ್ ಉಂಟು ಮಾಡಬೇಕು ಎಂದು ಯಾರಾದರೂ ಸಹಜವಾಗಿಯೇ ಭಾವಿಸುತ್ತಾರೆ. ಆದರೆ ‘ಉತ್ತರ’ ಇದಕ್ಕಿಂತ ಭಿನ್ನವಾಗಿ ಹಾಡು ಫೈಟಿಂಗ್ ಇಲ್ಲದೆಯೂ ಪ್ರೇಕ್ಷಕರನ್ನು ತನ್ಮಯತೆಗೆ, ಧ್ಯಾನಸ್ಥ  ಸ್ಥಿತಿಗೆ ಕೊಂಡುಹೋಗಲು ಸಾಧ್ಯ ಎನ್ನುವುದನ್ನು ತನ್ನದೇ ಭಾಷೆಯಲ್ಲಿ ನಿರೂಪಿಸುತ್ತದೆ. ಚಿತ್ರದಲ್ಲಿ ಕಲಾವಿದರ ಪಾತ್ರದೊಂದಿಗಿನ ಅನುಸಂಧಾನ, ಪ್ರತಿ ದೃಶ್ಯದಿಂದ ದೃಶ್ಯಗಳ ನಡುವಿನ ಜೋಡಣೆ ಕಥಾ ಪಾತ್ರಗಳ ಪರಕಾಯ ಪ್ರವೇಶ ಇಡೀ ಚಿತ್ರದ ಅಭಿವ್ಯಕ್ತಿಗೆ ಮುಖ್ಯ ಭೂಮಿಕೆಯನ್ನು ಒದಗಿಸುವಲ್ಲಿ ಯಶಸ್ವಿ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ತಾರ, ನಾರಾಯಣಸ್ವಾಮಿ, ಅಶ್ವಿನಿ ಗೌಡ, ಸಂಪ್ರತಿ ಆಳ್ವ, ಅರ್ಜುನ್ ಚೌಹಾಣ್ ಮುಂತಾದವರು ನಟಿಸಿರುವ ‘ಉತ್ತರ’ ಚಿತ್ರದಲ್ಲಿ ಪ್ರೀತಿಯೇ ಮುಖ್ಯ ಧಾತುವಾಗಿ ಅದಕ್ಕೆ ಸೇತುವಾಗಿ ಮಗು ಅರಳುವ ಸಾಮಾನ್ಯ ಕುಟುಂಬದ ಚಿತ್ರಣವಿದೆ. ಹೈವೇಗಳಲ್ಲಿ ಟ್ರಕ್ ಓಡಿಸುವ ‘ಭರತ್ ಮತ್ತು ಸತಿ’ ದಂಪತಿಗಳ  ಮಗು…, ಒಂದು ದಿನ ಅಚಾನಕ್ಕಾಗಿ ಈ ದಂಪತಿಗಳಿಗೆ ಪರಿಚಯವಾದ ಮೆಡಿಕಲ್ಸ್ ಸ್ಟೋರ್ ಮಾಲೀಕ…., ಈ ವ್ಯಕ್ತಿ ದಂಪತಿಗಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತಾನೆ ಎನ್ನುವ ಯಾವ ಸೂಚನೆಯನ್ನು ಬಿಟ್ಟುಕೊಳ್ಳದೆ ಸಾಗುವ ಕಥೆ ಮುಖ್ಯ ತಿರುವು  ಪಡೆಯುವುದು ಭರತ್ ಸತಿ ದಂಪತಿಗಳ ಮಗುವಿಗೆ ಅನಾರೋಗ್ಯವಾದಾಗ. ಅಲ್ಲಿ ಆಪತ್ಬಾಂಧವರಂತೆ ಒದಗಿ ಬಂದವರು ಮೆಡಿಕಲ್ ಸ್ಟೋರ್ ಮಾಲೀಕ ಮತ್ತವರ ಗೆಳೆಯ ಡಾಕ್ಟರ್. 

ಭರತನ ಅನುಪಸ್ಥಿತಿಯಲ್ಲಿ ಯಾವುದೇ ಪರಿಚಿತರಾದರೂ ಸ್ಪಂದಿಸಬಲ್ಲ ಈ ಸಹಾಯಕ್ಕೆ ಭರತನ ಸತಿ ಯಥಾನುಶಕ್ತಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಆದರೆ ಈ ವಿಷಮ ಘಳಿಗೆ ನಂತರ ಮೆಡಿಕಲ್ ಸ್ಟೋರ್ ಮಾಲೀಕ ಹೊರ ಜಗತ್ತಿನ ಜೊತೆ ಸಂಪರ್ಕ ಸೇತುವಾಗಿ ಅಪ್ಪಟ ಗೃಹಿಣಿಯಾದ ಸತಿಗೆ ಕಾಣಿಸಿಕೊಳ್ಳುತ್ತಾನೆ. ಮಾನಸಿಕ  ಸುರಕ್ಷತೆಯನ್ನು ತಂದು ಕೊಡುವ ಈ ಸ್ನೇಹಕ್ಕೆ ಯಾವುದೇ ಬೆಲೆಯನ್ನು ತೆರಲು ಸಿದ್ಧವಾಗುವ ಮಾನಸಿಕ ಸ್ಥಿತಿಯನ್ನು ಅವರಿಬ್ಬರ ಫೋನ್ ಸಂಭಾಷಣೆ ಮಾಡುತ್ತದೆ. ಭರತನ ಅನುಪಸ್ಥಿತಿ ಮತ್ತು ಮನೆಯ ಉಸಿರುಗಟ್ಟಿಸುವ ವಾತಾವರಣದಲ್ಲಿ ಮಗುವಿನ ಲಾಲನೆ ಪಾಲನೆಯಲ್ಲಿ ಬಳಲಿದ್ದ ಸತಿಗೆ ಮೆಡಿಕಲ್ ಸ್ಟೋರ್ ಮಾಲೀಕನ ಈ ಸ್ನೇಹ ಹಸಿವು ನಿದ್ದೆ ಮೈಥುನಕ್ಕಷ್ಟೇ ಸೀಮಿತವಾಗಿದ್ದ ದಾಂಪತ್ಯಕ್ಕೆ ಮೀರಿದ ಶರೀರ ವಿಜ್ಞಾನದ ಪಾಠ ಹೇಳುತ್ತದೆ. ಕೌಟುಂಬಿಕ ಬದುಕಿನಲ್ಲಿ ಸಾಧ್ಯವಾಗಿಸಿಕೊಳ್ಳಲಾಗದ ವಿಶಿಷ್ಟವಾದ ಅನುಭವವನ್ನು ದಕ್ಕಿಸಿಕೊಡುತ್ತಿದೆ ಎನ್ನುವ ವಿಸ್ಮೃ‌ತಿಗೆ ಆಕೆಯನ್ನು ಕೊಂಡೊಯ್ಯುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯು ದಾಂಪತ್ಯದ ಹೊರಗಿನ ಅಕ್ರಮ ಸಂಬಂಧದಲ್ಲಿ ನುರಿತು ನಾನಿರುವುದೇ ಹೀಗೆ ಎಂದು ಗಂಡು ತೋರಿಸಿಕೊಂಡಷ್ಟು ಹೆಣ್ಣು ಮಕ್ಕಳಿಗೆ ಇದು ಸಾಧ್ಯವಾಗುವುದಿಲ್ಲ. ಕೆಸರಿದ್ದಲ್ಲಿ ತುಳಿಯುವುದು ನೀರಿದ್ದಲ್ಲಿ ತೊಳೆಯುವುದು ಗಂಡಸಿಗೆ ಸುಲಭವಾದಷ್ಟು ಹೆಣ್ಣಿಗೆ ಸುಲಭವಲ್ಲ. ಅವಳ ಒಂದು ತಪ್ಪು ಹೆಜ್ಜೆಯಿಂದ ಇಡೀ ವ್ಯವಸ್ಥೆ ಅವಳ ಹೆಡೆ ಮುರಿಕಟ್ಟಿ ಅವಳನ್ನು ಕಟಕಟೆಯಲ್ಲಿ ನಿಲ್ಲಿಸುವಲ್ಲಿ ಟೊಂಕ ಕಟ್ಟಿ ನಿಲ್ಲುತ್ತವೆ. ವಿವಾಹ ವ್ಯವಸ್ಥೆಯೊಳಗೆ ಇಡೀ ಸಮಾಜವೇ ಶಹಭಾಷ್ ಎನ್ನುವಂತಹ ಗಂಡ ಭರತ್. ಮಗಳ ಪ್ರೀತಿಯ ಅಪ್ಪ.  ಆದರೆ ಸತಿ ದಂಪತಿಗಳ ನಡುವಿನ ಭಾವ ಜಗತ್ತನ್ನು ವಿಸ್ತರಿಸಿಕೊಳ್ಳುವಲ್ಲಿ ಮಾಡಿದ ಅಷ್ಟೂ ನಿಷ್ಠೆಯ ಪ್ರಯತ್ನಗಳು ಸೋತಾಗ ಒಲಿದದ್ದು ಬೇರೆಯವನಿಗೆ.  ಈ ಸಂಬಂಧವನ್ನು ಜಗತ್ತು ಒಪ್ಪುವುದಿಲ್ಲ ಎನ್ನುವುದು ಗೊತ್ತಿದ್ದರೂ ತಪ್ಪುಗಳು ಘಟಿಸುತ್ತವೆ.  ಒಬ್ಬ ಹೆಣ್ಣುಮಗಳು ಸತಿಯನ್ನು ಅರಳಿಸುವಲ್ಲಿ ಸೋತ ಗಂಡನಾಗಿ ಭರತ್ ಕಾಣಿಸಿಕೊಳ್ಳದೆ ವಿಶ್ವಾಸದ್ರೋಹಿ ಪತ್ನಿಯಿಂದ ವಿಚ್ಛೇದನ ಪಡೆಯುವಲ್ಲಿಯವರೆಗೆ ಆ ಇಡೀ ಸಂಸಾರವನ್ನು ಛಿದ್ರವಾಗಿಸುವ ನೆಲೆಯಲ್ಲಿ ಪ್ರಚೋದನೆ ನೀಡುವವರೇ ಇರುತ್ತಾರೆ.

ಹಾಗೆ ನೋಡಿದರೆ ನಮ್ಮ ಇಡೀ ಸಮಾಜವೇ ಇರುವುದು ಹೀಗೆ. ಇದು ಭಾರತಕ್ಕಷ್ಟೇ ಸೀಮಿತವಾದ ವಿಷಯ ಅಲ್ಲ. ಕುಟುಂಬ ವ್ಯವಸ್ಥೆಯೊಳಗೆ ಇಣುಕುವ ಜಾಗತಿಕ ಸತ್ಯಗಳು ನೂರಾರು. ಈ ಜಗತ್ತಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಂಗತಿಗಳು ನಿಯಮ ನಿರ್ದೇಶನಗಳು ಹೆಣ್ಣನ್ನು ಹೆಣ್ಣಾಗಿ ಅರಳಿಸುವಲ್ಲಿ ಸೋತಿವೆ ಎನ್ನುವುದು ಸಾರ್ವಕಾಲಿಕ ಸತ್ಯ. ಇದು ನಮ್ಮ ಜೀವನದುದ್ದಕ್ಕೂ ಹಂತ ಹಂತವಾಗಿ ನಮ್ಮನ್ನು ನಿಯಂತ್ರಿಸುವಾಗ ಬದುಕು ಉಸಿರುಗಟ್ಟಿಸುತ್ತದೆ. ಆಗ ಬದುಕಿನ ಚದುರಂಗದಾಟದಲ್ಲಿ ಪಾತ್ರಧಾರಿಗಳಾಗಿ ಅಷ್ಟೇ ನಾವು ಉಸಿರಾಡುತ್ತೇವೆ. ಬದುಕಿನ ಮೀಮಾಂಸೆಯಲ್ಲಿ ಕಾಣುವ ಸತ್ಯಕ್ಕಿಂತಲೂ ಕಾಣಲಾಗದ ಸತ್ಯಗಳೇ ಹೆಚ್ಚಿರುತ್ತವೆ. ಅಲ್ಲಿ ಪ್ರತಿ ಸ್ಪರ್ಶಕ್ಕೂ ಮುಟ್ಟುವಿಕೆಗೂ ತಟ್ಟುವಿಕೆಗೂ ಶಬ್ದಗಳಿಗೂ ಮೀರಿದ ಮೌನದ ಭಾಷೆ ಇರುತ್ತದೆ ಎನ್ನುವುದನ್ನು ‘ಉತ್ತರ’ ಚಿತ್ರದ ಕಥಾನಕ ಗಿಡದಲ್ಲಿ ಹೂ ಅರಳಿದಷ್ಟೇ ಸಹಜವಾಗಿ  ತೆರೆದಿಡುತ್ತದೆ. ದಾಂಪತ್ಯದಲ್ಲಿ ಗಂಡು-ಹೆಣ್ಣು ಒಂದು ಸೂರಿನಡಿಯ ಆಧಾರಸ್ತಂಭ ಎನ್ನುವುದು ಒಪ್ಪ ತಕ್ಕ ವಿಚಾರ. ಸರಿ ತಪ್ಪುಗಳೆಂಬ ನೂರು ಸುಳಿಗಳ   ನಡುವೆಯೂ ದಾರಿ ಮಾಡಿಕೊಂಡು ಇಡುವ ಹೆಜ್ಜೆ. ಮಗು ಕೇಂದ್ರಿತವಾಗಿರುವ ಇಡೀ ಕುಟುಂಬದಲ್ಲಿ ಅರಳುವ ಸಹಜ ಪ್ರೀತಿ ಪಡೆಯುವ ವಿಸ್ತರಣೆ ಬದುಕು ಕಟ್ಟುವ  ಕ್ರಿಯೆಯಲ್ಲಿ ಯಾವ ನಿಯಮ ನಿರ್ಬಂಧನೆಗಳು ಕಾನೂನು, ಕಟ್ಟಳೆಗಳು ಎಷ್ಟು ಪೊಳ್ಳು ಎನ್ನುವುದನ್ನು ‘ಉತ್ತರ’ ಚಿತ್ರವು ತೆರೆದಿಡುವ  ರೀತಿ ವಿಶೇಷವಾಗಿದೆ. ಹಾಗಂತ ಅಕ್ರಮ ಸಂಬಂಧವನ್ನು ಒಪ್ಪಿ ಈ ಕುಟುಂಬ ಒಪ್ಪಿ ಮುಂದುವರಿಯಬೇಕು ಎಂದು ಇದರ ಅರ್ಥವಲ್ಲ.

ಮಂಗಳೂರಿನ ಪ್ರತಿಭೆ ಸಂಪ್ರತಿ ಆಳ್ವ

ಚಿತ್ರದ ಉತ್ತರಾರ್ಧ ಭಾಗವು ಅನೈತಿಕ ಸಂಬಂಧದಲ್ಲಿ ನಡೆಯುವ ಅವಘಡಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಸತಿಯ ವಕೀಲೆಯ( ಅಶ್ವಿನಿ ಗೌಡ) ಮಗು ಕೇಂದ್ರಿತವಾದ ಸತಿಯ ಬದುಕನ್ನು ನೇರ್ಪುಗೊಳಿಸಲು ತನ್ನ ವಾದ ಪ್ರತಿವಾದಗಳೆಂಬ ಸ್ಪಷ್ಟತೆಗೆ ಮತ್ತು ಅದಕ್ಕೆ ಬೇಕಾದ ಪೂರಕ ವಿಚಾರಗಳನ್ನು ಕಲೆ ಹಾಕುವಲ್ಲಿ ಪ್ರಾಮಾಣಿಕ ಪ್ರಯತ್ನ ಸಾಗುತ್ತಿರುತ್ತದೆ. ಮಹಿಳಾಪರ ದೃಷ್ಟಿಕೋನದಲ್ಲಿ ಅವಳು ಕೋರ್ಟಿ ನಲ್ಲಿ ಕಾನೂನಾತ್ಮಕವಾಗಿ ಸತಿಗೆ  ನ್ಯಾಯ (ತಾರಾ )ದೊರೆಯಲು ತನ್ನ ವಾದ ಪ್ರತಿವಾದಗಳ ಮೂಲಕ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಿರುತ್ತಾಳೆ. ಭರತನ ವಕೀಲರು ಕೂಡ ಭರತ್ ಪರವಾಗಿ ವಕಾಲತ್ತು ಮಂಡಿಸಿ ಪತ್ನಿ ಅಪರಾಧಿ ಎನ್ನುವುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಜಡ್ಜ್ ಕೂಡ ಕಾನೂನು ಕಟಕಟೆ ಒಳಗೆ ನೀಡಲೇಬೇಕಾದ ತೀರ್ಪನ್ನು ನೀಡುತ್ತಾರೆ. ಮನುಷ್ಯ ಭಾಷೆ ಅರ್ಥವಾಗದ ಈ ತೀರ್ಪು ನಿರ್ಣಾಯಕ ಸ್ಥಾನದಲ್ಲಿರುವ ಜಡ್ಜ್ ಹೇಳಬೇಕಾದ ವ್ಯವಸ್ಥೆ ಒತ್ತಾಯಿಸುವ  ತೀರ್ಪು. ಆದರೆ ಅಂತಿಮವಾಗಿ ಜಡ್ಜ್ ಹೇಳುವ ಮನದ ಮಾತುಗಳಲ್ಲಿ ಸಂಬಂಧಗಳನ್ನು ಕಟ್ಟುವಲ್ಲಿ, ಬೆಸೆಯುವಲ್ಲಿ  ಈ ಸಮಾಜದ ಆರೋಗ್ಯಕರ ನಡೆಗೆ ಕೊಡುಗೆ ನೀಡುವಲ್ಲಿ ವಕೀಲರ ಅಂತಿಮವಾಗಿ ಸಮಾಜದ ಪ್ರತಿಯೊಬ್ಬ ಸದಸ್ಯರ ಪಾತ್ರ ಏನು ಎನ್ನುವುದನ್ನು ವ್ಯಕ್ತಪಡಿಸುತ್ತಾರೆ. ಮೂರು ವಾರಗಳಲ್ಲಿ ಎರಡು ಸಲ ಮಾಡಿದ ತಪ್ಪಿಗೆ ದಂಡ ತೆರ ಬೇಕಾದವರು ಯಾರು.. ಎನ್ನುವ ಪ್ರಶ್ನೆಯೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.

ಮಗುವನ್ನು ಬೆಳೆಸುವಲ್ಲಿ ಅದೂ ಉತ್ತಮ ನಾಗರಿಕ ಆಗಿಸುವಲ್ಲಿ ಹೆತ್ತವರ ಕರ್ತವ್ಯ ಏನು ಎನ್ನುವುದನ್ನು ಪೂರ್ತಿ ಮರೆತಂತೆ ಚಿತ್ರದ ಉತ್ತರಾರ್ಧ ಕೋರ್ಟು, ಕಾನೂನು ವ್ಯವಹಾರದ ಮಾದರಿಯಲ್ಲಿ ಕಥೆ ಸಾಗುತ್ತದೆ.  ಕಾನೂನು ಉಪಯೋಗಿಸಿ ಕೇಸು ಗೆಲ್ಲುವುದು ಆದ್ಯತೆಯಾದಾಗ ಮನುಷ್ಯತ್ವದ ಕೊಲೆಯಾಗುತ್ತದೆ ಹೇಗೆ? ಎನ್ನುವ  ಜಡ್ಜ್ ಮಾತು ಇಡೀ ಕಥನದುದ್ದ ಕಾಣಿಸುವ ಸತ್ಯ ತೆರೆದಿಡುತ್ತದೆ. ನಾರಾಯಣ ಸ್ವಾಮಿ, ಮಗು ಮತ್ತು ಸಂಪ್ರತಿ ಆಳ್ವ ಕಥಾ ಪಾತ್ರ ಗಳಲ್ಲಿ ಜೀವ ತುಂಬುವ ಮೂಲಕ ಏರಿದ ಎತ್ತರ ಉಲ್ಲೇಖಾರ್ಹ.  ಕಾರ್ಯ ಕಾರಣ ಸಂಬಂಧಗಳ  ಮೂಲಕ ಹೆಣೆಯುವ ಕುಟುಂಬ ವ್ಯವಹಾರದ ಸಂಘರ್ಷಗಳು ‘ಉತ್ತರ’ ಚಿತ್ರದ ಬೆಳ್ಳಿ ಪರದೆಯಲ್ಲಿ ಎರಡು ಘಂಟೆಯಲ್ಲಿ ಪ್ರದರ್ಶನವಾಗಿ ನಾವು ಕಾಣುವ ಕಾಣಲಾಗದ ಬದುಕಿನ ಕ್ಲೀಷೆಗಳನ್ನು ತೆರೆದಿಟ್ಟು ನಾವು ಹೆಚ್ಚಿನ ಸಂವೇದನಾಶೀಲರಾಗುವ ಆಶಯಕ್ಕೆ ಇಂಬು ಕೊಡುತ್ತದೆ. ಚಿತ್ರದ ಇಡೀಕಥಾನಕ ಒಂದು ಬೃಹತ್ ಕಾದಂಬರಿಯ ಸ್ವರೂಪದ್ದು ಮತ್ತು ಇದು ಬದುಕಿನ ವಾಸ್ತವಕ್ಕೆ ತೀರ ಹತ್ತಿರವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.

ದೇವಿಕಾ ನಾಗೇಶ್

ಲೇಖಕಿ

ಇದನ್ನೂ ಓದಿ- ಆರೆಸ್ಸೆಸ್ ನೋಂದಣಿ ಕಡ್ಡಾಯ ಯಾಕೆಂದರೆ…..

More articles

Latest article

Most read