ಮೀಸಲಾತಿಯನ್ನು ‘ಕ್ಯಾನ್ಸರ್’ ಎಂದವನು ಈಗ ಬಿಜೆಪಿ ಐಟಿ ಸಹ-ಸಂಯೋಜಕ: ಯಾರೀ ಅಲೋಕ್ ಭಟ್?

ಹೊಸದಿಲ್ಲಿ ಆ 18 : ಬಿಜೆಪಿ ಸಾಮಾಜಿಕ ಮಾಧ್ಯಮ ತಂಡದಲ್ಲಿ ಸಹ-ಸಂಯೋಜಕರಾಗಿ ನೇಮಕಗೊಂಡ ಅಲೋಕ್ ಭಟ್‌ ಎಂಬಾತನ ಹಳೆಯ ಎಕ್ಸ್ ಪೋಸ್ಟ್‌ಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದ ಭಟ್ ಮೀಸಲಾತಿ, ಮಹಿಳೆಯರು, ನ್ಯಾಯಾಂಗ, ಧರ್ಮ ಹಾಗೂ ವಿರೋಧಿಗಳ ವಿರುದ್ಧ ಬಳಸಿದ್ದ ಆಕ್ಷೇಪಾರ್ಹ ಭಾಷೆ ಈಗ ಚರ್ಚೆಗೆ ಗುರಿಯಾಗಿದೆ.

ಸುಮಾರು 95 ಸಾವಿರ ಅನುಯಾಯಿಗಳಿದ್ದ ತನ್ನ ಖಾತೆಯಲ್ಲಿ ‘A proud Indian’ ಎಂದು ಪರಿಚಯಿಸಿಕೊಂಡ ಅಲೋಕ್ ಭಟ್ ಎಡಪಂಥೀಯರು ಮತ್ತು ಉದಾರವಾದಿ ಮಾಧ್ಯಮಗಳ ವಿರುದ್ಧ ನಿರಂತರ ದ್ವೇಷದ ಟೀಕೆ ಮಾಡುತ್ತಿದ್ದರು. ಬಲಪಂಥೀಯರ ಮುಖವಾಣಿ OpIndiaಯಲ್ಲಿ ಕೆಲವು ಲೇಖನಗಳನ್ನೂ ಬರೆದಿದ್ದ.

ಆತನ ಹಳೆಯ ಪೋಸ್ಟ್‌ಗಳಲ್ಲಿನ ಪ್ರಮುಖ ವಿವಾದಾತ್ಮಕ ಹೇಳಿಕೆಗಳು:

  • ಜಿಹಾದಿಸಂ ನಂತರ ಮೀಸಲಾತಿಯನ್ನು “ದೇಶದ 2ನೇ ದೊಡ್ಡ ಕ್ಯಾನ್ಸರ್” ಎಂದು ಬಣ್ಣಿಸಿದ್ದ.
  • 2012-17ರ ಅವಧಿಯಲ್ಲಿ ಮಹಿಳೆಯರನ್ನು ‘slut’, ‘bitch’ ಎಂದು ನಿಂದಿಸಿದ್ದ, ‘khatna’ ಕುರಿತು ಅಸಭ್ಯ ವ್ಯಂಗ್ಯ ಮಾಡಿದ್ದ.
  • 2018ರಲ್ಲಿ ಸುಪ್ರೀಂ ಕೋರ್ಟ್‌ನ ನಾಲ್ಕು ಹಿರಿಯ ನ್ಯಾಯಮೂರ್ತಿಗಳನ್ನು “bastards” ಎಂದು ಕರೆದು “Impeach all 4 bastards” ಎಂದು ಟ್ವೀಟ್ ಮಾಡಿದ್ದ.
  • ಸೋನಿಯಾ ಗಾಂಧಿಯನ್ನು “ಬ್ಲಾಟಂಟ್ಲಿ ಆ್ಯಂಟಿ-ಹಿಂದೂ ನಾಯಕಿ” ಎಂದು ಕರೆದು, ಅವರ ಅಧಿಕಾರಾವಧಿಯಲ್ಲಿ ಮಿಷನರಿಗಳು ಹೆಚ್ಚಾಗಿ, “ಹಿಂದೂ ಟೆರರ್” ನ್ಯಾರೇಟಿವ್ ಮುಂತಾದವುಗಳನ್ನು ಟೀಕಿಸಿದ್ದ.
  • “I have no sympathy for what Islamists are doing to Europeans in Europe. It is called KARMA” ಎಂದು ಬರೆದಿದ್ದರು. ಮುಸ್ಲಿಮರು ಒಂದೇ ಬ್ಲಾಕ್‌ನಲ್ಲಿ ಮತ ಹಾಕುತ್ತಾರೆ ಎಂಬ ವಿಷಯವನ್ನು ಪದೇ ಪದೇ ಒತ್ತಿ ಹೇಳುತ್ತಿದ್ದ.
  • 2016ರಲ್ಲಿ ಟ್ರಿಪಲ್ ತಲಾಕ್ ಕುರಿತು ಮದರಸಾ ಭೇಟಿ ಮಾಡಿ ಥ್ರೆಡ್ ಬರೆದಿದ್ದ; ಅದು ದೊಡ್ಡ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಖಾತೆ ಡಿಆಕ್ಟಿವೇಟ್ ಮಾಡಿದ್ದ.
  • ರಾಣಾ ಅಯ್ಯೂಬ್, ಬರ್ಖಾ ದತ್ ಮುಂತಾದ ಮಹಿಳಾ ಪತ್ರಕರ್ತೆಯರ ವಿರುದ್ಧ ಅಸಭ್ಯ ಪದಗಳನ್ನು ಬಳಸಿದ್ದ.

ಬಿಜೆಪಿ ನೇಮಕಾತಿ ನಂತರ ಆತನ ಎಕ್ಸ್ ಖಾತೆ ಡಿಆಕ್ಟಿವೇಟ್ ಆಗಿದೆ. ಹಳೆಯ ಪೋಸ್ಟ್‌ಗಳನ್ನು ಮರೆಮಾಡುವ ಉದ್ದೇಶದಿಂದ ಡಿ ಆಕ್ಟಿವೇಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮೀಸಲಾತಿ, ಮಹಿಳೆಯರು, ನ್ಯಾಯಾಂಗ ಮತ್ತು ಧಾರ್ಮಿಕ ಸಮುದಾಯಗಳ ಕುರಿತು ಇಂತಹ ಭಾಷೆ ಬಳಸಿದ ವ್ಯಕ್ತಿಗೆ ಪಕ್ಷದ ಡಿಜಿಟಲ್ ಜವಾಬ್ದಾರಿ ನೀಡಿರುವುದು ಸಾಮಾಜಿಕ ನ್ಯಾಯ ಮತ್ತು ಹೊಣೆಗಾರಿಕೆಯ ಕುರಿತು ಬಿಜೆಪಿಯ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

More articles

Latest article

Most read