ವಿಶೇಷ | ಹಬ್ಬಗಳ ಸಂಭ್ರಮದಲ್ಲಿರಲಿ ವಿವೇಕ, ಸಂಯಮ

ನಮ್ಮ ಹಕ್ಕು ಮತ್ತೊಬ್ಬರ ಹಕ್ಕಿಗೆ ಧಕ್ಕೆ ತರಬಾರದು. ನಮ್ಮ ಭಕ್ತಿ ಇನ್ನೊಬ್ಬರ ನಂಬಿಕೆಯನ್ನು ಅವಮಾನಿಸಬಾರದು. ನಮ್ಮ ಸಂಭ್ರಮ ಮತ್ತೊಬ್ಬರ ಶಾಂತಿಯನ್ನು ಕದಡಬಾರದು. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಗಣೇಶನನ್ನು ಭಕ್ತಿಯಿಂದ ಪೂಜಿಸುವುದು ಒಂದು ಧಾರ್ಮಿಕ ಆಚರಣೆ. ಆದರೆ ಆ ಭಕ್ತಿಯ ಹೆಸರಿನಲ್ಲಿ ಮತ್ತೊಬ್ಬರ ಆರಾಧನಾ ಸ್ಥಳದ ಮುಂದೆ ಪ್ರಚೋದನಕಾರಿ ವರ್ತನೆ ಮಾಡದಿರುವುದು ನಮ್ಮ ಸಂಸ್ಕಾರದ ಪರೀಕ್ಷೆ. ಮಸೀದಿ, ಚರ್ಚ್ ಅಥವಾ ಯಾವುದೇ ಧಾರ್ಮಿಕ ಸ್ಥಳದ ಮುಂದೆ ಸಂಯಮದಿಂದ ಸಾಗುವುದರಿಂದ ನಮ್ಮ ಹಬ್ಬದ ಘನತೆ ಕಡಿಮೆಯಾಗುವುದಿಲ್ಲ; ಬದಲಾಗಿ ನಮ್ಮ ನಂಬಿಕೆಯೊಳಗಿನ ಮಾನವೀಯತೆ ಹೊರಹೊಮ್ಮುತ್ತದೆಪ್ರೊ. ಷಾಕಿರಾ ಖಾನಂ‌, ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

ಕರ್ನಾಟಕದ ಮಣ್ಣಿನ ವಿಶೇಷತೆಯೇ ಅದರ ಸೌಹಾರ್ದ ಸಂಸ್ಕೃತಿ. ಇಲ್ಲಿ ಹಬ್ಬಗಳು ಕೇವಲ ಒಂದು ಧರ್ಮದ ಆಚರಣೆಯಾಗಿ ಉಳಿಯದೆ, ಪರಸ್ಪರರನ್ನು ಅರ್ಥಮಾಡಿಕೊಳ್ಳುವ, ಗೌರವಿಸುವ ಮತ್ತು ಒಟ್ಟಾಗಿ ಬದುಕುವ ಅವಕಾಶಗಳಾಗಿವೆ. ಗಣೇಶ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಇನ್ಸ್‌ಪೆಕ್ಟರ್ ಧನಂಜಯ್ ಅವರು ನೀಡಿದ ಸಂದೇಶ ಈ ನೆಲದ ನಿಜವಾದ ಸಂಸ್ಕೃತಿಯನ್ನು ನೆನಪಿಸುವಂತಿದೆ. “ಮಸೀದಿ ಮುಂದೆ ಹೋಗೋದು, ಅಲ್ಲೇ ಕುಣಿಯೋದು ಇವೆಲ್ಲವೂ ಮಾಡಬೇಡಿ; ನಮ್ಮ ಹಬ್ಬವನ್ನು ನೋಡಿ ಬೇರೆ ಧರ್ಮದವರು ಗೌರವ ಕೊಡಬೇಕು, ಖುಷಿ ಪಡಬೇಕು” ಎಂಬ ಅವರ ಮಾತಿನಲ್ಲಿ ಕೇವಲ ಪೊಲೀಸ್ ಅಧಿಕಾರಿಯ ಸೂಚನೆ ಮಾತ್ರವಿಲ್ಲ; ಕರ್ನಾಟಕದ ಬಹುಧರ್ಮೀಯ ಬದುಕಿನ ಆಳವಾದ ಸಾಂಸ್ಕೃತಿಕ ಪ್ರಜ್ಞೆಯೂ ಇದೆ.

ಹಬ್ಬವೆಂದರೆ ಕೇವಲ ಊಟ, ಡೊಳ್ಳು, ಮೆರವಣಿಗೆ, ಸಂಗೀತ ಮತ್ತು ಸಂಭ್ರಮವಲ್ಲ. ಅದು ನಮ್ಮ ಭಕ್ತಿ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿ ಸಾರ್ವಜನಿಕವಾಗಿ ವ್ಯಕ್ತವಾಗುವ ಸಂದರ್ಭ. ನಮ್ಮ ಆಚರಣೆಯನ್ನು ನೋಡಿ ಮತ್ತೊಬ್ಬರ ಮುಖದಲ್ಲಿ ಸಂತೋಷ ಮೂಡಿದರೆ ಅದೇ ಹಬ್ಬದ ಸಾರ್ಥಕತೆ. ಆದರೆ ನಮ್ಮ ಸಂಭ್ರಮದಿಂದ ಇನ್ನೊಬ್ಬರಲ್ಲಿ ಭಯ, ನೋವು ಅಥವಾ ಅಸುರಕ್ಷಿತ ಭಾವನೆ ಮೂಡಿದರೆ, ಆಚರಣೆಯ ಮೂಲ ಉದ್ದೇಶವೇ ಕಳೆದುಹೋಗುತ್ತದೆ. ಆದ್ದರಿಂದ ಹಬ್ಬದ ಸಂಭ್ರಮದಲ್ಲಿ ನಮ್ಮ ಶಕ್ತಿ ಮಾತ್ರವಲ್ಲ, ನಮ್ಮ ಸಹನಾಶಕ್ತಿಯೂ ಕಾಣಿಸಬೇಕು. ಹಬ್ಬದ ಸಂದರ್ಭವು ನಮ್ಮ ವರ್ತನೆ ಹೇಗಿರಬೇಕು ಎಂಬುದನ್ನು ನೆನಪಿಸುವ ನಾಗರಿಕ ಪಾಠವೂ ಹೌದು.

ಹಬ್ಬ ಆಚರಿಸುವುದು ಪ್ರತಿಯೊಬ್ಬರ ಹಕ್ಕು. ದೇವರನ್ನು ಆರಾಧಿಸುವುದು, ಭಜನೆ ಮಾಡುವುದು, ಮೆರವಣಿಗೆಯಲ್ಲಿ ಭಾಗವಹಿಸುವುದು, ಸಂತೋಷದಿಂದ ಸಂಭ್ರಮಿಸುವುದು ಧಾರ್ಮಿಕ ಸ್ವಾತಂತ್ರ್ಯದ ಭಾಗ. ಆದರೆ ಹಕ್ಕು ಎಂದಿಗೂ ಜವಾಬ್ದಾರಿಯಿಂದ ಬೇರ್ಪಟ್ಟಿಲ್ಲ. ನಮ್ಮ ಹಕ್ಕು ಮತ್ತೊಬ್ಬರ ಹಕ್ಕಿಗೆ ಧಕ್ಕೆ ತರಬಾರದು. ನಮ್ಮ ಭಕ್ತಿ ಇನ್ನೊಬ್ಬರ ನಂಬಿಕೆಯನ್ನು ಅವಮಾನಿಸಬಾರದು. ನಮ್ಮ ಸಂಭ್ರಮ ಮತ್ತೊಬ್ಬರ ಶಾಂತಿಯನ್ನು ಕದಡಬಾರದು. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಗಣೇಶನನ್ನು ಭಕ್ತಿಯಿಂದ ಪೂಜಿಸುವುದು ಒಂದು ಧಾರ್ಮಿಕ ಆಚರಣೆ. ಆದರೆ ಆ ಭಕ್ತಿಯ ಹೆಸರಿನಲ್ಲಿ ಮತ್ತೊಬ್ಬರ ಆರಾಧನಾ ಸ್ಥಳದ ಮುಂದೆ ಪ್ರಚೋದನಕಾರಿ ವರ್ತನೆ ಮಾಡದಿರುವುದು ನಮ್ಮ ಸಂಸ್ಕಾರದ ಪರೀಕ್ಷೆ. ದೇವರ ಹೆಸರನ್ನು ಉಚ್ಚರಿಸುವುದಕ್ಕಿಂತ, ದೇವರು ಬೋಧಿಸುವ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ದೊಡ್ಡ ಆರಾಧನೆ. ಮಸೀದಿ, ಚರ್ಚ್ ಅಥವಾ ಯಾವುದೇ ಧಾರ್ಮಿಕ ಸ್ಥಳದ ಮುಂದೆ ಸಂಯಮದಿಂದ ಸಾಗುವುದರಿಂದ ನಮ್ಮ ಹಬ್ಬದ ಘನತೆ ಕಡಿಮೆಯಾಗುವುದಿಲ್ಲ; ಬದಲಾಗಿ ನಮ್ಮ ನಂಬಿಕೆಯೊಳಗಿನ ಮಾನವೀಯತೆ ಹೊರಹೊಮ್ಮುತ್ತದೆ.

ಗಣೇಶ ಮೆರವಣಿಗೆ- ಸಾಂದರ್ಭಿಕ ಚಿತ್ರ

ನಮ್ಮ ಮನೆಯ ಮುಂದೆ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದರು. ಆ ಗಣೇಶನ ಕೊಡುಗೆ ಸಂಗ್ರಹದ ಆರಂಭವೇ ನಮ್ಮ ಮನೆಯ ದೇಣಿಗೆಯಿಂದ ಆಗುತ್ತಿತ್ತು. ನನ್ನ ಅಜ್ಜಿ ಬಹಳ ಶ್ರದ್ಧೆಯಿಂದ ದೇಣಿಗೆ ನೀಡುತ್ತಿದ್ದ ದೃಶ್ಯವನ್ನು ನಮ್ಮ ಪುಟ್ಟ ಕಣ್ಣುಗಳು ನೋಡಿದ್ದವು. ಆ ನೆನಪು ನನಗೆ ಒಂದು ಸರಳ ಸತ್ಯವನ್ನು ಕಲಿಸಿದೆ. ಧಾರ್ಮಿಕ ಆಚರಣೆಗಳು ಕೇವಲ ಒಂದು ಸಮುದಾಯದ ಒಳಗಿನ ವಿಷಯಗಳಲ್ಲ; ಅವು ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಸಂಸ್ಕೃತಿಯನ್ನೂ ಕಟ್ಟುತ್ತವೆ. ಕರ್ನಾಟಕದ ಮಣ್ಣಿನ ವೈಶಿಷ್ಟ್ಯವೇ ವೈವಿಧ್ಯತೆಯೊಳಗಿನ ಸೌಹಾರ್ದತೆ. ದೇವಸ್ಥಾನದ ಗಂಟೆ, ಮಸೀದಿಯ ಆಜಾನ್, ಚರ್ಚಿನ ಪ್ರಾರ್ಥನೆ ಇವೆಲ್ಲವೂ ಈ ನೆಲದ ಬಹುಮುಖ ಬದುಕಿನ ಧ್ವನಿಗಳು. ಅವು ಪರಸ್ಪರರನ್ನು ಮೀರಿಸುವ ಶಬ್ದಗಳಲ್ಲ; ಒಂದೇ ಸಮಾಜದಲ್ಲಿ ಬದುಕುತ್ತಿರುವ ವಿಭಿನ್ನ ನಂಬಿಕೆಗಳ ಅಭಿವ್ಯಕ್ತಿಗಳು. ಹೀಗಾಗಿ ನಮ್ಮ ಹಬ್ಬಗಳು ವೈವಿಧ್ಯತೆಯನ್ನು ಸಂಘರ್ಷದ ಕಾರಣವನ್ನಾಗಿ ಮಾಡದೆ, ಆತ್ಮೀಯತೆಯ ಅವಕಾಶವನ್ನಾಗಿ ರೂಪಿಸಬೇಕು. ನಮ್ಮ ಹಬ್ಬದ ಘನತೆ ಡೊಳ್ಳಿನ ಸದ್ದು ಎಷ್ಟು ಜೋರಾಗಿದೆ ಎಂಬುದರಲ್ಲಿ ಇಲ್ಲ; ಅದು ಎಷ್ಟು ಹೃದಯಗಳನ್ನು ಗೆದ್ದಿದೆ ಎಂಬುದರಲ್ಲಿ ಇದೆ. ಮೆರವಣಿಗೆ ಎಷ್ಟು ದೂರ ಸಾಗಿತು ಎಂಬುದಕ್ಕಿಂತ, ಅದು ಎಷ್ಟು ಗೌರವವನ್ನು ಹುಟ್ಟಿಸಿತು ಎಂಬುದು ಮುಖ್ಯ. ಕೈಯಲ್ಲಿರುವ ಧ್ವಜಕ್ಕಿಂತ ನಡವಳಿಕೆಯಲ್ಲಿರುವ ಗೌರವ ದೊಡ್ಡದು. ಘೋಷಣೆಗಿಂತ ಸಂಯಮ ಹೆಚ್ಚು ಶಕ್ತಿಶಾಲಿ.

ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಸೇರಿವೆ. ರಸ್ತೆ, ಬೀದಿ, ಮಾರುಕಟ್ಟೆ, ಮೈದಾನ ಇವು ಯಾವುದೋ ಒಂದು ಸಮುದಾಯದ ಸ್ವತ್ತಲ್ಲ. ಆದ್ದರಿಂದ ಸಾರ್ವಜನಿಕ ಆಚರಣೆಯಲ್ಲಿ “ನಾನು”ಗಿಂತ “ನಾವು” ಎಂಬ ಭಾವನೆ ಮುಖ್ಯವಾಗಬೇಕು. ನನ್ನ ಹಬ್ಬಕ್ಕೆ ಜಾಗ ಬೇಕೆಂದರೆ, ಇನ್ನೊಬ್ಬರ ಪ್ರಾರ್ಥನೆಗೂ ಜಾಗ ಬೇಕೆಂಬ ಸರಳ ನ್ಯಾಯವನ್ನು ಒಪ್ಪಿಕೊಳ್ಳಬೇಕು. ಇದೇ ಸಹಬಾಳ್ವೆಯ ಮೊದಲ ಹೆಜ್ಜೆ. ಒಂದು ಸಮುದಾಯದ ಹಬ್ಬ ಮತ್ತೊಂದು ಸಮುದಾಯಕ್ಕೆ ಅಪರಿಚಿತವಾಗಿರಬಹುದು. ಆದರೆ ಗೌರವ ಅಪರಿಚಿತವಾಗಬಾರದು. ನಾವು ಮತ್ತೊಬ್ಬರ ಆಚರಣೆಯ ಪ್ರತಿಯೊಂದು ವಿಧಿಯನ್ನು ಅರ್ಥಮಾಡಿಕೊಳ್ಳಬೇಕಿಲ್ಲ; ಅದನ್ನು ಅನುಸರಿಸಬೇಕಾಗಿಯೂ ಇಲ್ಲ. ಆದರೆ ಅದು ಅವರಿಗೆ ಎಷ್ಟು ಪವಿತ್ರ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ಮಾನವೀಯತೆ ಇರಬೇಕು. ಭಿನ್ನತೆಯನ್ನು ಅಳಿಸುವುದೇ ಏಕತೆ ಅಲ್ಲ; ಭಿನ್ನತೆಯ ನಡುವೆಯೂ ಪರಸ್ಪರ ಗೌರವವನ್ನು ಉಳಿಸಿಕೊಳ್ಳುವುದೇ ನಿಜವಾದ ಏಕತೆ.

ಇಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದು. ಉತ್ಸಾಹವು ಯುವಕರ ಸಹಜ ಗುಣ. ಆದರೆ ಶಕ್ತಿಯ ನಿಜವಾದ ಅರ್ಥ ಇನ್ನೊಬ್ಬರನ್ನು ಹೆದರಿಸುವ ಸಾಮರ್ಥ್ಯದಲ್ಲಿಲ್ಲ; ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯದಲ್ಲಿದೆ. ಸಾವಿರಾರು ಜನರ ಮುಂದೆ ಕುಣಿಯುವುದು ಸುಲಭ. ಆದರೆ ಮತ್ತೊಬ್ಬರ ಭಾವನೆಗೆ ಧಕ್ಕೆ ಆಗುತ್ತದೆ ಎಂದು ತಿಳಿದಾಗ ಒಂದು ಹೆಜ್ಜೆ ಹಿಂದೆ ಸರಿಯುವುದು ದೊಡ್ಡ ಶಕ್ತಿ. ತನ್ನಲ್ಲಿರುವ ಸಾಮರ್ಥ್ಯವನ್ನು ಸೂಕ್ತ ಸಂದರ್ಭದಲ್ಲಿ ನಿಯಂತ್ರಿಸಿಕೊಳ್ಳುವುದೇ ನಾಗರಿಕತೆಯ ಗುರುತು. ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಈ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಒಂದು ಪ್ರಚೋದನಕಾರಿ ಘೋಷಣೆ, ತಪ್ಪು ಮಾಹಿತಿ ಅಥವಾ ಸಣ್ಣ ವಿಡಿಯೊ ಕ್ಷಣಾರ್ಧದಲ್ಲಿ ಸಾವಿರಾರು ಜನರನ್ನು ತಲುಪಬಹುದು. ಸ್ಥಳೀಯ ಘಟನೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಆದ್ದರಿಂದ ವದಂತಿಗಳನ್ನು ಪರಿಶೀಲಿಸದೆ ಹಂಚಬಾರದು. ಪ್ರಚೋದನೆಗೆ ಒಳಗಾಗಬಾರದು. ಸಂಭ್ರಮಕ್ಕೆ ವಿವೇಕವೂ ಜೊತೆಯಾಗಬೇಕು. ಹಬ್ಬದ ಆಯೋಜಕರ ಜವಾಬ್ದಾರಿಯೂ ಕಡಿಮೆಯಲ್ಲ. ಅವರು ಜನರನ್ನು ಒಟ್ಟುಗೂಡಿಸುವವರಷ್ಟೇ ಅಲ್ಲ, ಅವರ ವರ್ತನೆಗೆ ದಿಕ್ಕು ನೀಡುವವರೂ ಹೌದು. ಮೈಕ್ ಹಿಡಿದವರ ಮಾತಿನಲ್ಲಿ ಜವಾಬ್ದಾರಿ ಇರಬೇಕು. ಘೋಷಣೆಗಳು ಭಕ್ತಿಯನ್ನು ವ್ಯಕ್ತಪಡಿಸಲಿ; ಪ್ರಚೋದನೆಯನ್ನು ಅಲ್ಲ. ಸಂಗೀತ ಸಂತೋಷವನ್ನು ಹೆಚ್ಚಿಸಲಿ; ಯಾರದೋ ಪ್ರಾರ್ಥನೆಯನ್ನು ಮುಚ್ಚಿಹಾಕುವ ಸಾಧನವಾಗಬಾರದು. ಮೆರವಣಿಗೆ ತನ್ನ ದಾರಿಯಲ್ಲಿ ಸಾಗಲಿ; ಆದರೆ ಮನಸ್ಸುಗಳು ಪರಸ್ಪರದಿಂದ ದೂರವಾಗದಿರಲಿ. ಕುವೆಂಪು ಅವರು ಈ ಆಶಯಗಳನ್ನು ಸಾಕಾರಗೊಳಿಸಲು’ ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಸತ್ತಂತಿಹರನು  ಬಡಿದೆಚ್ಚರಿಸು ಕಚ್ಚಾಡುವವರನು ಕೂಡಿಸಿ ಒಲಿಸು…. ಎಂಬ ಕರೆ ನೀಡಿರುವುದು ನಾವೆಲ್ಲ ಮರೆಯುತ್ತಿರುವುದಾದರೂ ಏಕೆ?

ಈ ಜವಾಬ್ದಾರಿ ಪೊಲೀಸರದ್ದಷ್ಟೇ ಅಲ್ಲ. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬಹುದು; ಆದರೆ ಸಮಾಜದಲ್ಲಿ ನಂಬಿಕೆ ಮತ್ತು ಸೌಹಾರ್ದತೆ ನಿರ್ಮಿಸುವ ಕೆಲಸ ನಾಗರಿಕರದ್ದೂ ಹೌದು. ಧಾರ್ಮಿಕ ಮುಖಂಡರು ಶಾಂತಿಯ ಸಂದೇಶ ನೀಡಬೇಕು. ಆಯೋಜಕರು ಸಮಯ, ಮಾರ್ಗ ಮತ್ತು ಸಾರ್ವಜನಿಕರ ಅನುಕೂಲದ ಬಗ್ಗೆ ಎಚ್ಚರಿಕೆ ವಹಿಸಬೇಕು. ಯುವಕರು ಉತ್ಸಾಹವನ್ನು ಹೊಣೆಗಾರಿಕೆಯೊಂದಿಗೆ ಬೆರೆಸಬೇಕು. ಸಾರ್ವಜನಿಕರು ವದಂತಿಗಿಂತ ಸತ್ಯಕ್ಕೆ, ಕೋಪಕ್ಕಿಂತ ವಿವೇಕಕ್ಕೆ ಆದ್ಯತೆ ನೀಡಬೇಕು. ಈ ಸಂಸ್ಕಾರ ಮಕ್ಕಳಿಂದಲೇ ಆರಂಭವಾಗಬೇಕು. “ನಮ್ಮ ಧರ್ಮವನ್ನು ಪ್ರೀತಿಸು” ಎಂಬುದರ ಜೊತೆಗೆ “ಇನ್ನೊಬ್ಬರ ಧರ್ಮವನ್ನು ಗೌರವಿಸು” ಎಂದು ಕಲಿಸಬೇಕು. ತನ್ನ ನಂಬಿಕೆಯಲ್ಲಿ ದೃಢವಾಗಿರಲು ಮತ್ತೊಬ್ಬರ ನಂಬಿಕೆಯನ್ನು ತಿರಸ್ಕರಿಸುವ ಅಗತ್ಯವಿಲ್ಲ. ಮತ್ತೊಬ್ಬರನ್ನು ಅವಮಾನಿಸಿ ತನ್ನ ಧರ್ಮವನ್ನು ಎತ್ತರಿಸುವ ಪ್ರಯತ್ನ ಧರ್ಮದ ಘನತೆಯನ್ನು ಹೆಚ್ಚಿಸುವುದಿಲ್ಲ; ನಮ್ಮ ಸಂಸ್ಕಾರದ ಕೊರತೆಯನ್ನು ಮಾತ್ರ ತೋರಿಸುತ್ತದೆ.

ಗಣೇಶ ವಿಸರ್ಜನೆಯ ವೇಳೆ ನಾಗಮಂಗಲದಲ್ಲಿ ಕೋಮು ಸಂಘರ್ಷ

ಕನ್ನಡ ಸಂಸ್ಕೃತಿಯ ಹಿರಿಮೆ ವೈವಿಧ್ಯತೆಯನ್ನು ಕೇವಲ ಸಹಿಸುವುದರಲ್ಲಿ ಇಲ್ಲ; ಅದನ್ನು ಆತ್ಮೀಯವಾಗಿ ಸ್ವೀಕರಿಸುವುದರಲ್ಲಿ ಇದೆ. ಬಸವಣ್ಣನವರ ಸಮಾನತೆಯ ಚಿಂತನೆಯಿಂದ ಕುವೆಂಪು ಅವರ ವಿಶ್ವಮಾನವ ಸಂದೇಶದವರೆಗೆ, ಈ ನೆಲದ ಚಿಂತನಾ ಪರಂಪರೆ ಮನುಷ್ಯನನ್ನು ಮೊದಲು ಮನುಷ್ಯನಾಗಿಯೇ ನೋಡುವುದನ್ನು ಕಲಿಸಿದೆ. ಧರ್ಮ, ಜಾತಿ, ಭಾಷೆ ಮತ್ತು ಆಚರಣೆಗಳು ಬೇರೆಬೇರೆ ಆಗಬಹುದು; ಆದರೆ ಗೌರವ, ನೆಮ್ಮದಿ ಮತ್ತು ಬದುಕುವ ಹಕ್ಕು ಎಲ್ಲರಿಗೂ ಸಮಾನ. ಇದು ಗಣೇಶ ಹಬ್ಬಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ. ಪ್ರತಿಯೊಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಲ್ಲೂ ಇದೇ ಮೌಲ್ಯ ಅನ್ವಯಿಸುತ್ತದೆ. ನಾವು ನಮ್ಮ ಹಬ್ಬವನ್ನು ಗೌರವಿಸುವಂತೆ ಇತರರು ಬಯಸುತ್ತೇವೆ. ಹಾಗಾದರೆ ಮೊದಲು ಅವರ ಹಬ್ಬ ಮತ್ತು ನಂಬಿಕೆಗಳಿಗೆ ಗೌರವ ನೀಡುವ ಮನಸ್ಸು ನಮ್ಮಲ್ಲಿರಬೇಕು. ಗೌರವವನ್ನು ಕೇಳುವುದಕ್ಕಿಂತ, ನಮ್ಮ ನಡವಳಿಕೆಯಿಂದ ಗಳಿಸುವುದು ಶ್ರೇಷ್ಠ. ಸೌಹಾರ್ದತೆ ಎಂದರೆ ಭಿನ್ನಾಭಿಪ್ರಾಯಗಳೇ ಇಲ್ಲದ ಸಮಾಜವಲ್ಲ. ಭಿನ್ನಾಭಿಪ್ರಾಯಗಳಿದ್ದರೂ ಹಿಂಸೆ, ಅವಮಾನ ಮತ್ತು ದ್ವೇಷವನ್ನು ತಿರಸ್ಕರಿಸುವ ಸಮಾಜವೇ ಸೌಹಾರ್ದ ಸಮಾಜ. ಧರ್ಮಗಳು ಬೇರೆ ಇರಬಹುದು; ಆದರೆ ನೆರೆಹೊರೆಯವರ ಬಗ್ಗೆ ಕಾಳಜಿ ಒಂದೇ ಆಗಬಹುದು. ಆಚರಣೆಗಳು ಬೇರೆ ಇರಬಹುದು; ಆದರೆ ಸಂಕಷ್ಟದ ಸಂದರ್ಭದಲ್ಲಿ ಕೈಹಿಡಿಯುವ ಮಾನವೀಯತೆ ಒಂದೇ ಆಗಬಹುದು.

ಹೀಗಾಗಿ ಗಣೇಶ ಹಬ್ಬದ ಮೆರವಣಿಗೆ ಸಂಭ್ರಮದಿಂದ ಸಾಗಲಿ. ಡೊಳ್ಳು ಬಾರಲಿ, ಭಜನೆ ಮೊಳಗಲಿ, ಮಕ್ಕಳು ಮತ್ತು ಯುವಕರು ಸಂತೋಷದಿಂದ ಪಾಲ್ಗೊಳ್ಳಲಿ. ಆದರೆ ಆ ಸಂಭ್ರಮದಿಂದ ಯಾರದೋ ಪ್ರಾರ್ಥನೆಗೆ ಅವಮಾನವಾಗದಿರಲಿ. ನಮ್ಮ ಹಬ್ಬದ ಶಬ್ದ ಮತ್ತೊಬ್ಬರ ಮನಸ್ಸಿನಲ್ಲಿ ನೋವಿನ ಪ್ರತಿಧ್ವನಿಯಾಗಬಾರದು. ಉತ್ಸವವು ಶಕ್ತಿಯ ಪ್ರದರ್ಶನವಾಗದೆ, ಸಂಸ್ಕೃತಿಯ ಅಭಿವ್ಯಕ್ತಿಯಾಗಲಿ.

ಇನ್ಸ್‌ಪೆಕ್ಟರ್ ಧನಂಜಯ್ ಅವರ ಮಾತಿನ ನಿಜವಾದ ಅರ್ಥವೂ ಇಲ್ಲಿಯೇ ಇದೆ. ನಮ್ಮ ಹಬ್ಬದ ಗೌರವವನ್ನು ಮತ್ತೊಬ್ಬರನ್ನು ಅವಮಾನಿಸುವ ಮೂಲಕ ಗಳಿಸಬೇಕಾಗಿಲ್ಲ; ನಮ್ಮ ವರ್ತನೆಯಿಂದ ಗಳಿಸಬೇಕು. ಮಸೀದಿಯ ಮುಂದೆ ಸಂಯಮದಿಂದ ಸಾಗುವುದು ನಮ್ಮ ಭಕ್ತಿಯನ್ನು ಕಡಿಮೆ ಮಾಡುವುದಿಲ್ಲ. ಮತ್ತೊಬ್ಬರ ಪ್ರಾರ್ಥನೆಗೆ ಜಾಗ ನೀಡುವುದು ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುವುದಿಲ್ಲ. ಬದಲಾಗಿ ಅದು ನಮ್ಮೊಳಗಿನ ಮನುಷ್ಯತ್ವವನ್ನು ಬಲಪಡಿಸುತ್ತದೆ. ಹಬ್ಬ ಮುಗಿದ ಮೇಲೆ ಮೂರ್ತಿ ವಿಸರ್ಜನೆಯಾಗುತ್ತದೆ. ಡೊಳ್ಳಿನ ಸದ್ದು ನಿಂತುಹೋಗುತ್ತದೆ. ಅಲಂಕಾರಗಳು ಕಳಚುತ್ತವೆ. ಆದರೆ ನಾವು ಬಿತ್ತಿದ ಭಾವನೆಗಳು ಉಳಿಯುತ್ತವೆ. ದ್ವೇಷ ಬಿತ್ತಿದರೆ ಅಂತರ ಬೆಳೆಯುತ್ತದೆ; ಗೌರವ ಬಿತ್ತಿದರೆ ನಂಬಿಕೆ ಬೆಳೆಯುತ್ತದೆ. ಆದ್ದರಿಂದ ಹಬ್ಬದ ನಿಜವಾದ ಫಲ ವಿಸರ್ಜನೆಯ ನಂತರವೇ ಗೋಚರಿಸುತ್ತದೆ. ನಾವು ಮುಂದಿನ ಪೀಳಿಗೆಗೆ ಯಾವ ಕರ್ನಾಟಕವನ್ನು ನೀಡಬೇಕು? ಧಾರ್ಮಿಕ ಗುರುತುಗಳು ಪರಸ್ಪರ ಅನುಮಾನಕ್ಕೆ ಕಾರಣವಾಗುವ ಕರ್ನಾಟಕವೋ, ಅಥವಾ ಬೇರೆಬೇರೆ ನಂಬಿಕೆಗಳ ಜನರು ತಮ್ಮ ತಮ್ಮ ಹಬ್ಬಗಳನ್ನು ನೆಮ್ಮದಿಯಿಂದ ಆಚರಿಸುವ ಕರ್ನಾಟಕವೋ? ಉತ್ತರ ನಮ್ಮ ಕೈಯಲ್ಲಿದೆ.

ಮೂರ್ತಿ ವಿಸರ್ಜನೆಯಾಗಬಹುದು; ಆದರೆ ನಮ್ಮೊಳಗಿನ ಮಾನವೀಯತೆ ವಿಸರ್ಜನೆಯಾಗಬಾರದು. ಡೊಳ್ಳಿನ ಸದ್ದು ನಿಲ್ಲಬಹುದು; ಆದರೆ ಸೌಹಾರ್ದತೆಯ ಧ್ವನಿ ನಿಲ್ಲಬಾರದು. ಹಬ್ಬದ ದೀಪ ಆರಬಹುದು; ಆದರೆ ಪರಸ್ಪರ ಗೌರವದ ಬೆಳಕು ಆರಬಾರದು. ನಮ್ಮ ಹಬ್ಬದ ಶಕ್ತಿ ಯಾರನ್ನೂ ಮಣಿಸುವ ಶಕ್ತಿಯಾಗಿರದೆ, ಎಲ್ಲರನ್ನೂ ಜೊತೆಯಾಗಿ ನಿಲ್ಲಿಸುವ ಶಕ್ತಿಯಾಗಲಿ. ಆಗ ಮಾತ್ರ ನಮ್ಮ ಭಕ್ತಿ ನಿಜವಾದ ಅರ್ಥವನ್ನು ಪಡೆಯುತ್ತದೆ. ಆಗ ಮಾತ್ರ ಹಬ್ಬವು ಒಂದು ದಿನದ ಆಚರಣೆಯಾಗದೆ, ವರ್ಷಪೂರ್ತಿ ಬದುಕಬೇಕಾದ ಸಂಸ್ಕಾರವಾಗುತ್ತದೆ. ಆಗ ಮಾತ್ರ ನಾವು ಹೆಮ್ಮೆಯಿಂದ ಹೇಳಬಹುದು ಇದು ನಮ್ಮ ಕರ್ನಾಟಕ; ಎಲ್ಲರ ಕರ್ನಾಟಕ.

ಪ್ರೊ. ಷಾಕಿರಾ ಖಾನಂ‌

ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

ಇದನ್ನೂ ಓದಿಕೈಯಲ್ಲಿದ್ದ ಬೆತ್ತಕ್ಕಿಂತ ಭಾರವಾಗಿದ್ದು ಸಮಾಜದ ತೀರ್ಪು!

More articles

Latest article

Most read