ನಟ ಶಿವರಾಜ್‌ಕುಮಾರ್ ಜನ ಪರವಾಗಿ ನಿಲ್ಲುವುದಿಲ್ಲವೇ?: ಪ್ರಕಾಶ್‌ರಾಜ್

ಬೆಂಗಳೂರು, ಸೆ.12: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರಿಗೆ ನೋಟಿಸ್ ನೀಡಿದೆ. ಶಿವರಾಜ್‌ಕುಮಾರ್, ಬೇರೆ ಯಾರೇ ಗಣ್ಯರು ಇರಬಹುದು ನಾನು ಅವರನ್ನು ಕೇಳುತ್ತೇನೆ. ಚುನಾವಣಾ ಅಧಿಕಾರಿಗಳು ಮನೆಗೆ ಬಂದ ಕೂಡಲೇ ನೀವು ನಮೂನೆ-6 ಅನ್ನು ಹಾಕಿ ಬಿಡುತ್ತೀರೇ? ಮತಹಕ್ಕು ಕಳೆದುಕೊಳ್ಳುತ್ತಿರುವ ಜನರ ಪರವಾಗಿ ನೀವು ನಿಲ್ಲುವುದಿಲ್ಲವೇ? ಎಂದು ಬಹುಭಾಷಾ ನಟ ಪ್ರಕಾಶ್‌ರಾಜ್ ಪ್ರಶ್ನಿಸಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಯಾವುದೋ ಒಬ್ಬರ ವ್ಯಕ್ತಿತ್ವ ಅಲ್ಲ, ಇದು ಭಾರತ ದೇಶದಲ್ಲಿ ಎಲ್ಲರಿಗೂ ಆಗುತ್ತಿರುವ ಸಮಸ್ಯೆ. ನಾಚಿಕೆ ಮಾನ ಮರ್ಯಾದೆ, ಸಮಾನತೆ ಅನ್ನುವುದು ಇಲ್ಲದೇ, ಚುನಾವಣಾ ಆಯೋಗ ದೊಡ್ಡ ದೊಡ್ಡವರ ಹೆಸರು ಆಕಸ್ಮಿಕವಾಗಿ ತಪ್ಪಾಗಿ ತೆಗೆದರೆ ಅವರವರ ಮನೆಗೆ ಹೋಗಿ ಮಾಹಿತಿ ತುಂಬಿಸಿಕೊಳ್ಳುತ್ತಿದ್ದಾರೆ. ಬೇರೆ ನಾಗರಿಕರು ಅವರಿಗಿಂತ ಕಮ್ಮಿನೇ? ಅವರು ಮನುಷ್ಯರು ಅಲ್ಲವೇ? ಅದೇನು ಕೆಲವರಿಗೆ ಹೊಸ ಮಣೆ ಹಾಕುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಎಸ್‌ಡಿಡಿಒ ವರ್ಗದಲ್ಲಿ ಡಿಲೀಟ್ ಆದವರು, ನಮೂನೆ-6 ತುಂಬಿ ಮರು ನೊಂದಾಯಿಸಿಕೊಳ್ಳಿ ಎಂದು ಆಯೋಗ ಹೇಳುತ್ತಿದೆ. ಇದರಲ್ಲಿ ‘ನಾನು ತಪ್ಪು ಮಾಹಿತಿ ನೀಡಿದ್ದಲ್ಲಿ ಒಂದು ವರ್ಷದ ಶಿಕ್ಷೆಯ ಜೊತೆಗೆ ದಂಡಕ್ಕೆ ಒಳಪಡಬೇಕಾಗುತ್ತದೆ ಎಂಬ ಅರಿವು ನನಗಿದೆ’ ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಿಸಲಾಗುತ್ತಿದೆ. ಆದರೆ, ಅದೇ ಸಂದರ್ಭದಲ್ಲಿ ನಮೂನೆ-6 ತುಂಬುವಾಗ ‘ನಾನು ಮೊದಲ ಬಾರಿಗೆ ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅರ್ಜಿ ನೀಡುತ್ತಿದ್ದೇನೆ’ ಎಂಬ ಸುಳ್ಳು ಘೋಷಣೆ ಕೊಡಿ ಎಂದು ಕೇಳಲಾಗುತ್ತಿದೆ. ಇದು ಅಕ್ರಮ ಅಪರಾಧ. ಚುನಾವಣಾ ಆಯೋಗವೇ ಇಂತಹ ಹಸಿಸುಳ್ಳಿನ ಅಕ್ರಮ ಕೆಲಸವನ್ನು ಮತದಾರರಿಂದ ಮಾಡಿಸಬಹುದೇ? ಎಂದು ಅವರು ಪ್ರಶ್ನಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು, ತಪ್ಪುಗಳು ನಡೆಯುತ್ತಿವೆ. ಎಸ್‌ಐಆರ್ ಅನ್ನುವುದು ಒಂದು ವಂಚನೆ. ಆ.24ರಂದು ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿರುವ ಕರಡುಪಟ್ಟಿಯಲ್ಲಿ ಸಾಕಷ್ಟು ತಪ್ಪುಗಳಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮತಗಟ್ಟೆಯಲ್ಲಿ ಕರಡು ಪಟ್ಟಿಯನ್ನು ಹೋಲಿಕೆ ಮಾಡಿ ನೋಡಿದಾಗ ಒಂದೇ ಎಪಿಕ್ ನಂಬರ್ ಇದ್ದರೂ ಕನ್ನಡ ಮತ್ತು ಇಂಗ್ಲಿಷ್ ಪಟ್ಟಿಗಳಲ್ಲಿ ಬೇರೆ ಬೇರೆ ಹೆಸರುಗಳು ಕಾಣಿಸುತ್ತಿವೆ, ಮತಪಟ್ಟಿಯಲ್ಲಿ ಹಲವು ಲೋಪಗಳಿವೆ ಎಂದು ಅವರು ಆರೋಪ ಮಾಡಿದರು.

ಎಸ್‌ಐಆರ್ ನಿಂದ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾಮಾನ್ಯ ನಾಗರಿಕರು ಕಚೇರಿಗಳ ಮುಂದೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವತ್ತು ಕರ್ನಾಟಕದ ಪ್ರಜೆಗಳು ಲೈನ್‌ನಲ್ಲಿ ನಿಂತುಕೊAಡು ತಮ್ಮ ಮತದಾನದ ಹಕ್ಕಿಗಾಗಿ ಬೇಡಿಕೊಳ್ಳುವ ಸ್ಥಿತಿ ಬಂದಿದೆ. ಭಾರತದಲ್ಲಿ ಮತದಾನದ ಹಕ್ಕು ಎಲ್ಲರಿಗೂ ಸಮಾನವಾಗಿರಬೇಕು. ಶ್ರೀಮಂತ–ಬಡ, ಪ್ರಸಿದ್ಧ–ಸಾಮಾನ್ಯ ಎಂಬ ಯಾವುದೇ ಭೇದ ಇರಬಾರದು. ಭಾರತ ದೇಶದಲ್ಲಿ ನೀವು ಶ್ರೀಮಂತರೋ, ಬಡವರೋ, ಗಣ್ಯರು ಹೌದೋ ಅಲ್ಲವೋ ಎಲ್ಲ ಪ್ರಜೆಗಳೂ ಒಂದೇ ಎಂದು ಪ್ರಕಾಶ್‌ರಾಜ್ ಹೇಳಿದರು.

More articles

Latest article

Most read