‘ಸರ್ವಾಧಿಕಾರಿ ಎಸ್‌ಐಆರ್ ಪ್ರಕ್ರಿಯೆ’ಯನ್ನು ತಿರಸ್ಕರಿಸಲು ಎಸ್‌ಐಆರ್ ವಿರೋಧಿ ಒಕ್ಕೂಟ ತೀರ್ಮಾನ

ಬೆಂಗಳೂರು, ಸೆ.12: ಚುನಾವಣಾ ಆಯೋಗ ಅಕ್ರಮ ಮತ್ತು ಅರಾಜಕತೆಯಿಂದ ತಾನು ಹೇಳಿದ್ದೇ ಸರಿ ಎಂಬ ಸರ್ವಾಧಿಕಾರಿ ನಡೆಯ ಮೂಲಕ ಕರ್ನಾಟಕದ ಮತದಾರರ ಪಟ್ಟಿಯನ್ನು ಅಭಿವೃದ್ಧಿಪಡಿಸುವ ಬದಲು, ಸಂಪೂರ್ಣವಾಗಿ ಧ್ವಂಸಗೊಳಿಸಿಬಿಟ್ಟಿದೆ. ಈ ಪ್ರಕ್ರಿಯೆಯ ಮೂಲಕ ಅರ್ಹ ಮತದಾರರನ್ನು ಒಳತಂದುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಕಾರಣದಿಂದಾಗಿ ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟವು ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನೇ ತಿರಸ್ಕರಿಸಲು ತೀರ್ಮಾನಿಸಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎದ್ದೇಳು ಕರ್ನಾಟಕದ ಪದಾಧಿಕಾರಿ ನೂರ್ ಶ್ರೀಧರ್, ಗಣತಿ ನಮೂನೆ ಹಂತದಲ್ಲಿ ನಡೆದಿವೆ ಎನ್ನಲಾದ ಲೋಪಗಳ ಕುರಿತು ಈ ಹಿಂದೆ ‘ಎಫ್‌ಐಆರ್–1’ ಬಿಡುಗಡೆ ಮಾಡಿದ್ದ ನಾಗರಿಕ ಸಮಾಜದ ಪ್ರತಿನಿಧಿಗಳು, ಇದೀಗ ನೋಟಿಸ್ ಮತ್ತು ಹಿಯರಿಂಗ್ ಹಂತದಲ್ಲೂ ಚುನಾವಣಾ ಆಯೋಗ ಗಂಭೀರ ಅಕ್ರಮಗಳನ್ನು ಎಸಗುತ್ತಿದೆ. ಹಾಗಾಗಿ ಇದೀಗ ‘ಎಸ್‌ಐಆರ್ ವಿರುದ್ಧ ನಾಗರಿಕ ಸಮಾಜದ ಎಫ್‌ಐಆರ್-2’ ಅನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಎಸ್‌ಐಆರ್ ಪ್ರಕ್ರಿಯೆಗೆ ನಾವು ಆರಂಭದಿAದಲೂ ತಾತ್ವಿಕ ವಿರೋಧ ವ್ಯಕ್ತಪಡಿಸಿದ್ದೇವೆ. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಹಲವು ತಿಂಗಳು ರಚನಾತ್ಮಕವಾಗಿ ಕೆಲಸ ಮಾಡಿದ್ದೇವೆ. ಜನರಿಗೆ ಜಾಗೃತಿ ಮೂಡಿಸುವುದು, ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು, ತಾಂತ್ರಿಕ ನೆರವು ನೀಡುವುದು, ಸರಳ ಆ್ಯಪ್‌ಗಳ ಮೂಲಕ ನೋಂದಣಿ ಪ್ರಕ್ರಿಯೆಗೆ ಸಹಕರಿಸುವುದು, ಗ್ರಾಮ ಹಾಗೂ ವಾರ್ಡ್ ಸಭೆಗಳನ್ನು ನಡೆಸುವಂತೆ ಸರಕಾರ ಮತ್ತು ಚುನಾವಣಾ ವ್ಯವಸ್ಥೆಗೆ ಸಲಹೆ ನೀಡುವುದು ಮುಂತಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ನೂರ್ ಶ್ರೀಧರ್ ತಿಳಿಸಿದರು.

ಆದರೂ ಕೊನೆಯಲ್ಲಿ ಬಂದ ಎಎಸ್‌ಡಿಡಿಒ ಪಟ್ಟಿಯೇ ಆತಂಕಕಾರಿ ಆಗಿದ್ದು, ಅದರಲ್ಲಿ ಸಾಕಷ್ಟು ನೈಜ ಹಾಗೂ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಗಣತಿ ನಮೂನೆ ಪ್ರಕ್ರಿಯೆಯಲ್ಲಿ ಜನರಿಗೆ ಸಮರ್ಪಕ ಮಾಹಿತಿ ನೀಡದೆ, ಬಿಎಲ್‌ಒಗಳಿಗೆ ಸೂಕ್ತ ತರಬೇತಿ ನೀಡದೆ, ಗಡಿಬಿಡಿಯಲ್ಲಿ ಪ್ರಕ್ರಿಯೆ ನಡೆಸಲಾಗಿದ್ದು, 1.08 ಕೋಟಿ ಮತದಾರರನ್ನು ಎಎಸ್‌ಡಿಡಿಒ ಮೂಲಕ ಡಿಲೀಟ್ ಮಾಡಲಾಗಿದೆ ಎಂಬುದು ಎಫ್‌ಐಆರ್-1ರ ಪ್ರಮುಖ ಆರೋಪವಾಗಿತ್ತು. ಇದೀಗ ಎಸ್‌ಐಆರ್-2, ನೋಟಿಸ್ ವಿತರಣೆ, ದಾಖಲೆ ಪರಿಶೀಲನೆ, ಹಿಯರಿಂಗ್ ಹಾಗೂ ಮರುನೋಂದಣಿ ಹಂತದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನೇ ಕೇಂದ್ರೀಕರಿಸಿದೆ ಎಂದು ಅವರು ವಿವರಿಸಿದರು.

ಎಸ್‌ಐಆರ್ ನೋಟಿಸ್ ಅವಧಿ ಆ.24 ರಿಂದಲೇ ಆರಂಭವಾಗಿದ್ದರೂ, ಸೆ.4ರ ವರೆಗೆ ಅನೇಕ ಕಡೆ ನೋಟಿಸ್‌ಗಳನ್ನು ವಿತರಿಸಿಲ್ಲ. ಹಲವೆಡೆ ಸೆ.5ರಂದು ನೋಟಿಸ್ ನೀಡಿ, ಸೆ.7 ರಂದೇ ದಾಖಲೆಗಳೊಂದಿಗೆ ಇಆರ್‌ಒ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಬಹುಪಾಲು ಜನರು ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ವಲಸೆ ಕೆಲಸಗಾರರು. ಹಲವರು ಕೆಲಸಕ್ಕಾಗಿ ಬೇರೆ ಊರುಗಳಲ್ಲಿ ಇದ್ದಾರೆ. ನಿನ್ನೆ ನೋಟಿಸ್ ನೀಡಿ ಇಂದು ದಾಖಲೆಗಳೊಂದಿಗೆ ಬನ್ನಿ ಎಂದರೆ ಅವರು ಹೇಗೆ ಬರಬೇಕು? ಹಲವರಿಗೆ ನೋಟಿಸ್ ಅರ್ಥವಾಗುವುದೇ ಇಲ್ಲ. ಯಾವ ದಾಖಲೆ ತರಬೇಕು, ಎಲ್ಲಿ ಪಡೆಯಬೇಕು ಎಂಬುದನ್ನೂ ಯಾರೂ ಸಮರ್ಪಕವಾಗಿ ತಿಳಿಸುತ್ತಿಲ್ಲ ಎಂದು ನೂರ್ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದರು.

ನಾಗರಿಕ ಸಮಾಜವು ಎಸ್‌ಐಆರ್ ವಿರುದ್ಧದ ಆರೋಪಗಳನ್ನು ದಾಖಲೆಗಳೊಂದಿಗೆ ಸಾಬೀತುಪಡಿಸಲು ರಾಜ್ಯದ 100 ಮತಗಟ್ಟೆಗಳಲ್ಲಿ ್ಲ ‘ಮತಕಾವಲು ಸಾಕ್ಷಿ ಸಮೀಕ್ಷೆ’ ನಡೆಸಲಿದೆ. ಈ ಸಮೀಕ್ಷೆಯಲ್ಲಿ ಮತದಾರರ ಹೆಸರು ಹೇಗೆ ಹೊರಗುಳಿಯಿತು, ಯಾವ ವರ್ಗದಲ್ಲಿ ಗುರುತಿಸಲಾಯಿತು, ನೋಟಿಸ್ ಬಂದಿತೇ ಇಲ್ಲವೇ, ಹಿಯರಿಂಗ್ ಹೇಗೆ ನಡೆಯಿತು, ಯಾವ ದಾಖಲೆಗಳನ್ನು ಕೇಳಲಾಯಿತು, ಅರ್ಹ ಮತದಾರರು ಯಾವ ತೊಂದರೆ ಅನುಭವಿಸಿದರು ಎಂಬುದನ್ನು ದಾಖಲಿಸಲಾಗುತ್ತದೆ ಎಂದು ನೂರ್ ಶ್ರೀಧರ್ ಹೇಳಿದರು.

ಸಿಪಿಎಂನ ಕೆ.ಮಹಂತೇಶ್ ಮಾತನಾಡಿ, ದೋಷಪೂರಿತ ಮತ್ತು ದುರುದ್ದೇಶಪೂರಿತ ಎಸ್‌ಐಆರ್ ರದ್ದಾಗಲೇಬೇಕು. ಇಡೀ ದೇಶವನ್ನು ಈ ರೀತಿಯ ಆತಂಕಕ್ಕೆ ತಳ್ಳಿದ ಮತ್ತು ಪ್ರಜಾತಂತ್ರದ ಅಡಿಪಾಯವನ್ನು ನಾಶಗೊಳಿಸುವ ಅಪರಾಧದ ಹೊಣೆಹೊತ್ತು ಚುನಾವಣಾ ಆಯೋಗ ರಾಜೀನಾಮೆ ನೀಡಬೇಕು. ಈ ಅಕ್ರಮ ನಡೆಸುವ ಸರ್ವಾಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಿದ ಮತ್ತು ಪಕ್ಷಪಾತಿ ರೀತಿಯಲ್ಲಿ ಅದನ್ನು ಆಯ್ಕೆ ಮಾಡಿದ ಮೋದಿ ಸರಕಾರ ಜನರಲ್ಲಿ ಕ್ಷಮೆ ಕೋರಬೇಕು ಹಾಗೂ ಚುನಾವಣಾ ಆಯೋಗದ ಆಯ್ಕಾ ಪದ್ದತಿಯನ್ನೇ ರದ್ದುಗೊಳಿಸಿ, ಮೊದಲಿನ ಸ್ಥಿತಿಗೆ ತರಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಕಾಶ್ ರಾಜ್, ಹೋರಾಟಗಾರರಾದ ಬಿ.ಟಿ.ಲಲಿತಾ ನಾಯಕ್, ಜೆ.ಎಂ.ವೀರಸAಗಯ್ಯ, ಕೆ.ಮಹಾಂತೇಶ್, ಸೀತಾರಾಮ್ ಗುಂಡಪ್ಪ, ಅಮ್ಜದ್ ಪಾಷಾ, ನಾಗೇಶ್ ಅರಳಕುಪ್ಪೆ, ರಾಮಕೃಷ್ಣ, ಇಂದಿರಮ್ಮ ಉಪಸ್ಥಿತರಿದ್ದರು.

‘ನನ್ನನ್ನು ಒಳಗೊಂಡಂತೆ ವಿವಿಧ ಸಂಘಟನೆಗಳ ಮುಖಂಡರು, ಹೋರಾಟಗಾರರು ಸೇರಿ ಸೆ.22 ರಿಂದ 30ರ ವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ‘ಎಸ್‌ಐಆರ್ ಅಧ್ಯಯನ ಅಭಿಯಾನ’ ನಡೆಸಲಾಗುವುದು. ತಂಡಗಳು ರಾಜ್ಯದಾದ್ಯಂತ ಸಂಚರಿಸಿ ಮತದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ತಿಂಗಳ ಅಂತ್ಯದಲ್ಲಿ ಸಮಗ್ರ ವರದಿ ಬಿಡುಗಡೆ ಮಾಡಲಾಗುವುದು. ಎಸ್‌ಐಆರ್ ಜಾರಿಯಲ್ಲಿರುವ ಅಥವಾ ಜಾರಿಯಾಗಿರುವ ವಿವಿಧ ರಾಜ್ಯಗಳ ಜೀವಂತ ಸಾಕ್ಷö್ಯಗಳನ್ನು ಒಟ್ಟುಗೂಡಿಸಿ ಅ.15 ರಂದು ದಿಲ್ಲಿಯಲ್ಲಿ ‘ರಾಷ್ಟಿçÃಯ ಪಬ್ಲಿಕ್ ಹಿಯರಿಂಗ್’ ನಡೆಸಲಾಗುತ್ತದೆ’.

ಇದೇ ಸೆ.21, 22, 23 ರಂದು ಕಸ್ತೂರಿ ರಂಗನ್ ಮತ್ತು ಬರದ ವಿಚಾರಕ್ಕೆ ವಿಶೇಷ ಅಧಿವೇಶನ
‘ರಾಜ್ಯ ಸರಕಾರ ಇದೇ ಸೆ.21, 22, 23 ರಂದು ಕಸ್ತೂರಿ ರಂಗನ್ ಮತ್ತು ಬರದ ವಿಚಾರಕ್ಕೆ ವಿಶೇಷ ಅಧಿವೇಶನ ಕರೆದಿದೆ. ಈ ಎರಡು ವಿಷಯಗಳ ಜೊತೆಗೆ ಎಸ್‌ಐಆರ್ ಅನ್ನು ಮೂರನೇ ವಿಷಯವಾಗಿ ಚರ್ಚೆಗಿಡಬೇಕು. ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯನ್ನು, ಇದು ಹೊರತರಲಿರುವ ದೋಷಪೂರಿತ ಮತದಾರರ ಪಟ್ಟಿಯನ್ನು ಅಸಹಾಯಕತೆಯೊಂದಿಗೆ ಸ್ವೀಕರಿಸಬಾರದು ಮತ್ತು ಸ್ಥಳೀಯ ಚುನಾವಣೆಗಳಿಗೂ ಬಳಸಬಾರದು. ಈ ಅಕ್ರಮ ಪಟ್ಟಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ನ್ಯಾಯಾಲಯದಲ್ಲೂ ಹೋರಾಟ ಮಾಡಬೇಕು ಮತ್ತು ರಾಜ್ಯವ್ಯಾಪಿ ಸೋಷಿಯಲ್ ಆಡಿಟಿಂಗ್ ಅನ್ನು ಕೈಗೆತ್ತಿಕೊಳ್ಳುವ ಮೂಲಕ ಅರ್ಹ ಮತದಾರರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಗೆ ಕರೆತರುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಬೇಕು’.

  • ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ

More articles

Latest article

Most read