ಪಾಕ್‌ ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕ ಶಂಕೆ: ಬೀದರ್‌ನಲ್ಲಿ ಶಂಕಿತ ಉಗ್ರ ವಿಶಾಲ್ ಕುಮಾರ್ ಬಂಧನ

ಬೀದರ್ ಅ. 3 : ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದ ನಿವಾಸಿ ವಿಶಾಲ್ ಕುಮಾರ್ ಮೇತ್ರೆ ಎಂದು ಗುರುತಿಸಲಾಗಿದೆ. ಗುಪ್ತಚರ ಇಲಾಖೆಯಿಂದ ಲಭಿಸಿದ ಮಾಹಿತಿ ಆಧರಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿಶಾಲ್ ಕುಮಾರ್ ಮೇತ್ರೆ ವಾಟ್ಸಪ್ ಮೂಲಕ ಪಾಕಿಸ್ತಾನ ಮೂಲದ ಶಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ ಎಂಬ ಆರೋಪ ಕೇಳಿಬಂದಿದೆ. ಶಹಜಾದ್ ಪಟ್ಟಿ, ರಾನಾ ಹುನೈನ್ ಹಾಗೂ ನೋಮಿಖಾನ್ ಎಂಬವರೊಂದಿಗೆ ಆತ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಈ ಸಂಪರ್ಕಗಳ ಕುರಿತು ತನಿಖೆ ನಡೆಯುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಭಾಲ್ಕಿ ಘಟಕದ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತನ ಮೊಬೈಲ್‌ ಸೇರಿದಂತೆ ಇತರ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಲಾಗುತ್ತಿದ್ದು, ಪಾಕಿಸ್ತಾನ ಮೂಲದ ವ್ಯಕ್ತಿಗಳೊಂದಿಗೆ ನಡೆದಿರುವ ಸಂಪರ್ಕದ ಸ್ವರೂಪ, ಸಂದೇಶಗಳ ವಿಷಯ ಹಾಗೂ ಆತನಿಗೆ ಯಾವುದೇ ಸಂಘಟನೆಯೊಂದಿಗೆ ನೇರ ಸಂಪರ್ಕವಿದೆಯೇ ಎಂಬುದರ ಕುರಿತು ತನಿಖೆ ಮುಂದುವರೆದಿದೆ.

ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನದ ಮೂರನೇ ಪ್ರಕರಣ ಇದಾಗಿದೆ.

More articles

Latest article

Most read