ಧರ್ಮಸ್ಥಳ ಪ್ರಕರಣ: ಸತ್ಯ ಹೊರಬರಲು ಪ್ರಶ್ನಿಸುವುದು ಅಗತ್ಯ; ಕೊಂದವರು ಯಾರು ವಿಚಾರಗೋಷ್ಟಿಯಲ್ಲಿ ಆಗ್ರಹ

ಬೆಂಗಳೂರು ಅ. 3: ಧರ್ಮಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೊಲೆಗಳ ಆರೋಪಗಳಿಗೆ ಸಂಬಂಧಿಸಿದಂತೆ ಸತ್ಯವನ್ನು ಹೊರತರುವ ನಿಟ್ಟಿನಲ್ಲಿ ಪ್ರಶ್ನಿಸುವುದು ಮತ್ತು ಹೊಣೆಗಾರಿಕೆ ನಿಗದಿಪಡಿಸುವುದು ಅಗತ್ಯ ಎಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ವಿಚಾರಸಂಕಿರಣದ ಮೊದಲ ಗೋಷ್ಠಿಯಲ್ಲಿ ಒತ್ತಾಯಿಸಲಾಯಿತು.

ʼಕೊಂದವರು ಯಾರು?ʼ ಆಂದೋಲನದ ವತಿಯಿಂದ ಅಕ್ಟೋಬರ್ 2ರಂದು ಬೆಂಗಳೂರಿನ ಶಿವಾಜಿನಗರದ ಸಭಾ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣದ ಮೊದಲ ಗೋಷ್ಠಿ ‘ಅಪರಾಧಿಗಳ ನಿರ್ಭೀತಿ: ಪ್ರಶ್ನಿಸುವುದು, ಉತ್ತರಕ್ಕಾಗಿ ಆಗ್ರಹಿಸುವುದು’ ಎಂಬ ವಿಷಯದ ಮೇಲೆ ನಡೆಯಿತು.

ಗೋಷ್ಠಿಯ ಆರಂಭದಲ್ಲಿ ಮಹಿಳೆಯರ ನೇತೃತ್ವದಲ್ಲಿ ನಗಾರಿ ಪ್ರದರ್ಶನ ನಡೆಯಿತು. ಮಂಡ್ಯದ ಪೂರ್ಣಿಮಾ ಅವರು ನಗಾರಿ ತಂಡವನ್ನು ಪರಿಚಯಿಸಿ, ನಗಾರಿ ಮತ್ತು ಡೊಳ್ಳು ಬಾರಿಸುವುದು ಪುರುಷರಿಗೆ ಮಾತ್ರ ಸೀಮಿತ ಎಂಬ ಸಾಮಾಜಿಕ ಸಂಪ್ರದಾಯವನ್ನು ಪ್ರಶ್ನಿಸುವ ಉದ್ದೇಶದಿಂದ ತಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಬಳಿಕ ‘ಕೊಂದವರು ಯಾರು?’ ಅಭಿಯಾನದ ತಂಡ ಸಿದ್ಧಪಡಿಸಿದ್ದ ಸತ್ಯಶೋಧನಾ ವರದಿಯ ಕುರಿತು ಸಂಕ್ಷಿಪ್ತ ಚರ್ಚೆ ನಡೆಸಿ, ವರದಿಯನ್ನು ಮರುಬಿಡುಗಡೆ ಮಾಡಲಾಯಿತು. ಇಂಗ್ಲಿಷ್ ಉಪನ್ಯಾಸಕಿ ಚಂಪಾವತಿ ಎಚ್.ಎಸ್. ಅವರು 2025ರ ಡಿಸೆಂಬರ್‌ನಲ್ಲಿ ಬೆಳ್ತಂಗಡಿಯಲ್ಲಿ ವರದಿಯನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು.

ಆ ಸಂದರ್ಭದಲ್ಲಿ ಸಂತ್ರಸ್ತರ ಕುಟುಂಬಗಳು ತಮ್ಮ ಅನುಭವಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿದಿದ್ದವು ಎಂದು ಅವರು ಹೇಳಿದರು.

ರಂಗಭೂಮಿ ಕಲಾವಿದೆ ಮಾಯಾ ರಾವ್ ಮಾತನಾಡಿ, “ಧರ್ಮಸ್ಥಳದಲ್ಲಿ ಶವಗಳೊಂದಿಗೆ ಸತ್ಯವನ್ನೂ ಹೂಳಲಾಗುತ್ತಿದೆ” ಎಂದು ಹೇಳಿದರು. ನೈಜ ಸಂಗತಿಗಳನ್ನು ಹೊರತರುವ ಹೋರಾಟಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸುನಂದಮ್ಮ ಅವರು, ಹಲವು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಮರುಪರಿಶೀಲಿಸುವುದು ಮತ್ತು ಅವುಗಳನ್ನು ಸಾರ್ವಜನಿಕ ನೆನಪಿನಲ್ಲಿ ಉಳಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಸಾರ್ವಜನಿಕ ನೆನಪು ಇಲ್ಲದಿರುವ ಸಂದರ್ಭದಲ್ಲಿ ಧಾರ್ಮಿಕ ನಾಯಕರಿಂದಲೂ ಅಪರಾಧಗಳು ನಡೆಯಬಹುದು ಎಂಬುದನ್ನು ಜನರು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಇಂತಹ ಘಟನೆಗಳನ್ನು ದಾಖಲಿಸುವುದು ಮತ್ತು ಅವುಗಳ ಕುರಿತು ನಿರಂತರವಾಗಿ ಪ್ರಶ್ನಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

More articles

Latest article

Most read