ಸೌಜನ್ಯ ಪ್ರಕರಣ : ಮರು ತನಿಖೆಯ ಎಸ್‌ಐಟಿ ರಚನೆಯಲ್ಲಿ ಸಣ್ಣ ಸಂಶಯವಿದೆ : ಕಲ್ಲಡ್ಕ ಪ್ರಭಾಕರ್‌ ಭಟ್‌

ಮಂಗಳೂರು, ಸೆ.28 :  ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ಬಗ್ಗೆ ಸಣ್ಣ ಸಂಶಯ ಇದೆ ಎಂದು  ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಎಸ್ ಐ ಟಿ ರಚನೆಯಾಗಿರೋದು ಒಳ್ಳೆಯದು. ಅದರಲ್ಲಿರುವ ಎಲ್ಲಾ ಅಧಿಕಾರಿಗಳು ಪರಿಪೂರ್ಣ ಇಲ್ಲ ಅನ್ನೋ ಸಂಶಯ ಬಂದಿದೆ ಎಂದು ಹೇಳಿದ್ದಾರೆ.

ಕಳೆದ 14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ. ಬೇರೆ ಯಾವ ಪ್ರಕರಣವೂ ಈ ರೀತಿಯಾಗಿಲ್ಲ. ಅಧಿಕಾರಿಗಳು ನ್ಯಾಯ ಕೊಡುವ ಕೆಲಸ ಮಾಡಲಿ. ಎಸ್‌ಐಟಿಯವರ ಬಳಿ ನನ್ನ ವಿನಂತಿ. ಅಧಿಕಾರಿಗಳು ಆ ಕಡೆ, ಈ ಕಡೆ ನೋಡದೆ ಸತ್ಯ ಏನೆಂದು ಹುಡುಕಲಿ. ನೂರಕ್ಕೆ ನೂರು ಸತ್ಯ ಸಿಗುತ್ತದೆ ಎಂದು ಪ್ರಭಾಕರ ಭಟ್ ಹೇಳಿದ್ದಾರೆ.

ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಒಳ್ಳೆಯವರು. ಅವರು ಆ ಕಡೆ ಈ ಕಡೆ ಹೋಗ್ಲಿಕ್ಕಿಲ್ಲ. ಆದರೆ ಉಳಿದವರ ಬಗ್ಗೆ ನಮಗೆ ಸಂಶಯ ಇದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು. 

ಕೋರ್ಟ್ ಈ ಬಾರಿ ಸ್ಪಷ್ಟವಾಗಿಯೇ ಹೇಳಿದೆ. ತನಿಖೆಯಲ್ಲಿ ಸಂತೋಷ್ ರಾವ್ ನನ್ನ ಸೇರಿಸಬೇಡಿ, ಈ ಹಿಂದೆ ತನಿಖೆ ಮಾಡಿದ ಅಧಿಕಾರಿಗಳನ್ನ ಸೇರಿಸಬೇಡಿ ಎಂದು ಹೇಳಿದೆ. ಅಪರಾಧಿಗಳನ್ನ ಹುಡುಕುವ ತಾಕತ್ತು ಪೊಲೀಸರಿಗೆ ಇದೆ. ಮಂಗಳೂರು ಕಮಿಷನರ್ ರೀತಿಯ ಬಲವಾದ ಇನ್ನೊಂದಷ್ಟು ಅಧಿಕಾರಿಗಳನ್ನ ಇಟ್ಟುಕೊಳ್ಳಬೇಕಿತ್ತು.

ಆಗ ಎಸ್‌ಐಟಿ ತಂಡದ ಬಗ್ಗೆ ಜನರಿಗೆ ವಿಶ್ವಾಸ ಬರ್ತಾ ಇತ್ತು. ತಂಡದಲ್ಲಿ ಇರುವ ಉಳಿದವರು ಏನು ಅಂತಾ ಜನರಿಗೂ ಗೊತ್ತು, ನಿಮಗೂ ಗೊತ್ತಿದೆ. ಆ ರೀತಿಯ ಸಣ್ಣ ಒಂದು ಗೊಂದಲ ಇದೆ ಎಂದು ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. 

More articles

Latest article

Most read