ಮನುವಾದಿ ಮಾತುಗಾರನಿಗೆ ಮಾನವತಾವಾದಿಯ ವಚನ ಸಾಹಿತ್ಯಶ್ರೀ ಪ್ರಶಸ್ತಿ

ಡಾ.ಗುರುರಾಜ ಕರ್ಜಗಿಯವರ ವಾಕ್ಚಾತುರ್ಯದಲ್ಲಿ ತಕರಾರೇನಿಲ್ಲ, ಅವರು ವ್ಯಕ್ತಿತ್ವ ವಿಕಸನದ ಪಾಠ ಪ್ರವಚನ ಪ್ರಚಾರ ಮಾಡುವುದರಲ್ಲಿ ಆಕ್ಷೇಪಗಳೇನಿಲ್ಲ, ಜಾತಿಯಲ್ಲಿ ಬ್ರಾಹ್ಮಣ ಎನ್ನುವುದೂ ಸಮಸ್ಯೆ ಏನಲ್ಲ. ಆದರೆ ಬಸವಣ್ಣನವರು ಹಾಗೂ ಅವರ ವಚನಗಳಿಗೂ ಮತ್ತು ಕರ್ಜಗಿಯವರಿಗೂ ಯಾವ ರೀತಿಯ ಸಂಬಂಧವಿದೆ?. ಬಸವ ತತ್ವ ಹಾಗೂ ಶರಣರ ವಚನ ಸಿದ್ಧಾಂತಗಳಿಗೆ ಕರ್ಜಗಿಯವರ ಕೊಡುಗೆಗಳೇನು? ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲು ಇರುವ ಮಾನದಂಡವೇನು? ಎನ್ನುವ ಪ್ರಶ್ನೆಗಳು ಕಾಡುತ್ತವೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಬಸವಣ್ಣನವರ ತತ್ವ ಸಿದ್ಧಾಂತದ ವಿರೋಧಿಗಳು ಕೇವಲ ಪುರೋಹಿತಶಾಹಿ ವೈದಿಕರು ಮಾತ್ರವಲ್ಲ, ಲಿಂಗಾಯತರಲ್ಲಿರುವ ಮನುವ್ಯಾಧಿ ಪೀಡಿತರೂ ಸಹ ಎಂಬುದೂ ಕೆಲವಾರು ಬಾರಿ ಸಾಬೀತಾಗಿದೆ. “ವಚನ ದರ್ಶನ” ಎಂಬ ವಿಕೃತ ಪುಸ್ತಕದಲ್ಲಿ ‘ವೇದ ಉಪನಿಷತ್ತುಗಳ ಉತ್ಪತ್ತಿ ವಚನಗಳು’ ಎಂದು ಸಾಬೀತುಪಡಿಸುವ ಪ್ರಯತ್ನವನ್ನು ಈ ಬಸವ ದ್ರೋಹಿಗಳಿಂದ ಮಾಡಿಸಲಾಗಿತ್ತು. ಲಿಂಗಾಯತ ವಿರಕ್ತ ಮಠದ ಕನ್ನೇರಿ ಸ್ವಾಮಿಯಿಂದಲೇ ಶರಣರ ವಚನಗಳು ಹಾಗೂ ಲಿಂಗಾಯತ ಸ್ವಾಮಿಗಳ ಮೇಲೆ ಅಶ್ಲೀಲ ಪದಪ್ರಯೋಗ ಮಾಡಿಸಲಾಯ್ತು. ನೇರವಾಗಿ ಬಸವ ತತ್ವವನ್ನು ವಿರೋಧಿಸಿ ಜೀರ್ಣಿಸಿಕೊಳ್ಳಲಾಗದ ಮನುವಾದಿಗಳು ಈಗ ಬಸವಾನುಯಾಯಿಗಳು ಎಂದು ಹೇಳಿಕೊಳ್ಳುವವರ ಮೂಲಕವೇ ವಚನ ಚಳುವಳಿಯನ್ನು ಹೀಗಳಿಯುವ ಶಡ್ಯಂತ್ರಗಳನ್ನು ಮಾಡುತ್ತಿದ್ದಾರೆ. ಲಿಂಗಾಯತದ ಪರ ಎನ್ನುತ್ತಲೇ ಆಚರಣೆಯಲ್ಲಿ ವಿರೋಧಿಗಳಾದ ಬಹುದೇವೋಪಾಸಕ ವೀರಶೈವ ಗುರು ಪೀಠದವರೂ ಈ ಕುತಂತ್ರದ ಹಿಂದಿದ್ದಾರೆ.

ಹೇಗಾದರೂ ಮಾಡಿ ಹೆಚ್ಚುತ್ತಿರುವ ಬಸವಣ್ಣನವರ ಪ್ರಭಾವವನ್ನು ಕಡಿಮೆ ಮಾಡಬೇಕು ಹಾಗೂ ಪುರೋಹಿತಶಾಹಿ ವಿರುದ್ಧದ ಪ್ರತಿಭಟನೆಯಾದ ವಚನಗಳನ್ನು ವೇದ ಉಪನಿಷತ್ತುಗಳಿಂದ ಪಡೆದ ಪ್ರೇರಣೆ ಎಂದು ಸಾಬೀತು ಪಡಿಸಬೇಕು ಎನ್ನುವ ಹಠಕ್ಕೆ ಬಸವ ವಿರೋಧಿಗಳು ಬಿದ್ದಿದ್ದಾರೆ. ಇದಕ್ಕೆ ಕೆಲವು ಬಸವಾನುಯಾಯಿ ಬಸವದ್ರೋಹಿಗಳು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕೈಗೂಡಿಸಿದ್ದಾರೆ.

ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಮಾನವತಾವಾದಿ ಬಸವಣ್ಣನವರ ಹೆಸರಿನ ಪ್ರಶಸ್ತಿಯನ್ನು ಮನುವಾದಿಗೆ ನೀಡಿದ್ದು. ಹೌದು.. “ಬಸವ ವೇದಿಕೆ” ಅಂತಾ ಒಂದಿದೆ. ಐಎಎಸ್‌ ಅಧಿಕಾರಿಯಾಗಿದ್ದ ಡಾ.ಸಿ.ಸೋಮಶೇಖರ್ ಎನ್ನುವವರು ಇದರ ಅಧ್ಯಕ್ಷರು. ಶರಣ ಸಾಹಿತ್ಯ ಪರಿಷತ್ತಿನ ನೇತಾರರೂ ಇವರೇ.  ಪ್ರತಿ ವರ್ಷ ಬಸವ ವೇದಿಕೆಯಿಂದ “ವಚನ ಸಾಹಿತ್ಯಶ್ರೀ” ಎನ್ನುವ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾ ಬಂದಿದ್ದಾರೆ.

ಕರ್ಜಗಿಯವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ

ಹಾಗೆಯೇ ಈ ಸಲ ಎಪ್ರಿಲ್ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ಜಯಂತಿ ಕಾರ್ಯಕ್ರಮದಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿಯವರಿಗೆ “ವಚನ ಸಾಹಿತ್ಯ ಶ್ರೀ” ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದ ಎಚ್.ಕೆ.ಪಾಟೀಲರನ್ನು ಹೊರತು ಪಡಿಸಿ ಬಹುತೇಕ ಅತಿಥಿಗಣ್ಯರೆಲ್ಲಾ ಕೋಮುವಾದಿ ಬಿಜೆಪಿ ಪಕ್ಷದವರೇ ಆಗಿದ್ದು ಈ ಕಾರ್ಯಕ್ರಮದ ರೂವಾರಿಗಳ ಸುಪ್ತ ಅಜೆಂಡಾ ಏನೆಂಬುದನ್ನು ತೋರಿಸಿಕೊಟ್ಟಿದೆ. ಬಿಜೆಪಿಯ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ ಇವರೆಲ್ಲಾ ಲಿಂಗಾಯತರೇ ಆದರೂ ಮನುವಾದಿ ಪಕ್ಷದವರು. ಡಾ.ಸಿ.ಎನ್.ಮಂಜುನಾಥರವರೂ ಸಹ ಬಿಜೆಪಿಯ ಎಂಪಿ. ಹೀಗಾಗಿ ಬಸವದ್ರೋಹಿಗಳೆಲ್ಲಾ ಸೇರಿ ಮನುವಾದಿಗೆ ‘ಬಸವ ವೇದಿಕೆ’ಯಲ್ಲಿ “ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಿದ್ದು ಪ್ರಶ್ನಾರ್ಹವಾಗಿದೆ. ಈ ಸಮಾರಂಭದಲ್ಲಿ ಮಾತಾಡಿದ ಸಚಿವ ಎಚ್‌ ಕೆ ಪಾಟೀಲರು ” ವಚನ, ಭಗವದ್ಗೀತೆ, ಉಪನಿಷತ್ತುಗಳಿಗೆ ಕಾನೂನಿನ ಬಲ ದೊರೆತು ಅಳವಡಿಕೆ ಕಡ್ಡಾಯವಾದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ” ಎಂದು ಹೇಳಿರುವುದೂ ಪ್ರಶ್ನಾರ್ಹವೇ.  ಬ್ರಾಹ್ಮಣ್ಯದ ವರ್ಣಸಿದ್ಧಾಂತವನ್ನು ಸಾರುವ ಭಗವದ್ಗೀತೆ ಹಾಗೂ ಉಪನಿಷತ್ತುಗಳನ್ನು ವರ್ಣಸಿದ್ಧಾಂತ ವಿರೋಧಿ ವಚನಗಳ ಜೊತೆ ಸೇರಿಸಿದ್ದು ಖಂಡನೀಯ.

ಡಾ.ಗುರುರಾಜ ಕರ್ಜಗಿಯವರ ವಾಕ್ಚಾತುರ್ಯದಲ್ಲಿ ತಕರಾರೇನಿಲ್ಲ, ಅವರು ವ್ಯಕ್ತಿತ್ವ ವಿಕಸನದ ಪಾಠ ಪ್ರವಚನ ಪ್ರಚಾರ ಮಾಡುವುದರಲ್ಲಿ ಆಕ್ಷೇಪಗಳೇನಿಲ್ಲ, ಜಾತಿಯಲ್ಲಿ ಬ್ರಾಹ್ಮಣ ಎನ್ನುವುದೂ ದೊಡ್ಡ ಸಮಸ್ಯೆ ಏನಲ್ಲ. ಆದರೆ ಪ್ರಶ್ನೆ ಇರುವುದು ಬಸವಣ್ಣನವರು ಹಾಗೂ ಅವರ ವಚನಗಳಿಗೂ ಮತ್ತು ಕರ್ಜಗಿಯವರಿಗೂ ಯಾವ ರೀತಿಯ ಸಂಬಂಧವಿದೆ?. ಬಸವ ತತ್ವ ಹಾಗೂ ಶರಣರ ವಚನ ಸಿದ್ಧಾಂತಗಳಿಗೆ ಕರ್ಜಗಿಯವರ ಕೊಡುಗೆಗಳೇನು? ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲು ಇರುವ ಮಾನದಂಡವೇನು? ಎನ್ನುವ ಪ್ರಶ್ನೆಗಳು ಕಾಡುತ್ತವೆ.

ಹೋಗಲಿ.. ಸಾಮಾಜಿಕವಾಗಿ ಒಂದಿಷ್ಟು ಜಾಗೃತಿ ಮೂಡಿಸುವ ಕೆಲಸವನ್ನು ತಮ್ಮ ಭಾಷಣ ಉಪದೇಶ ಪ್ರವಚನಗಳ ಮೂಲಕ ಮಾನ್ಯ ಗುರುರಾಜರವರು ಮಾಡುತ್ತಿರುವುದರಿಂದ ಪ್ರಶಸ್ತಿ ಕೊಡಲಾಗಿದೆ ಎಂದು ಸಮರ್ಥನೆ ಕೊಡಬಹುದಾಗಿದೆ. ಆದರೆ.. ಇಲ್ಲಿ ಸೈದ್ಧಾಂತಿಕ ಸಮಸ್ಯೆ ಇದೆ. ಅದೇನೆಂದರೆ… ಇದು ಬಸವಣ್ಣನವರ ಹೆಸರಿನ ವೇದಿಕೆ ಕೊಡುತ್ತಿರುವ ವಚನ ಸಾಹಿತ್ಯ ಪ್ರಶಸ್ತಿ, ಇದನ್ನು ಒಳಗೆ ಮತ್ತು ಹೊರಗೆ ಪಕ್ಕಾ ಮನುವಾದಿಯಾಗಿರುವ ಗುರುರಾಜ ಕರ್ಜಗಿಯವರಿಗೆ ಯಾಕೆ ಕೊಡಲಾಯ್ತು? ಎನ್ನುವುದೇ ಆಕ್ಷೇಪಣೆ. ವೈದಿಕಶಾಹಿ ಮನುವಾದಿ ಸಿದ್ಧಾಂತವನ್ನು ಬಸವಾದಿ ಶರಣರು ವಿರೋಧಿಸಿದ್ದರು, ಈಗ ವರ್ಣಾಶ್ರಮ ಧರ್ಮದ  ಮನುಸ್ಮೃತಿಯನ್ನು ‘ಪವಿತ್ರ ಗ್ರಂಥ’ ಎಂದು ಪ್ರತಿಪಾದನೆ ಮಾಡುವಂತಹ ವ್ಯಕ್ತಿಗೆ ಬಸವ ವೇದಿಕೆ ಪ್ರಶಸ್ತಿ ಕೊಟ್ಟಿದ್ದು ಈ ವೇದಿಕೆಯ ರೂವಾರಿಗಳ ಬಸವ ನಿಷ್ಠೆ ಮತ್ತು ನೈತಿಕತೆಯನ್ನು ಪ್ರಶ್ನಿಸುವಂತಿದೆ.

ಗುರುರಾಜ ಕರ್ಜಗಿಯವರು ಮನುವಾದಿ ಎಂಬುದಕ್ಕೆ ಪುರಾವೆಗಳೇನು? ಎಂದು ಕೇಳಬಹುದಾಗಿದೆ. ಅವರು ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾದವರಿಗಾಗಿ ಸಂಯುಕ್ತ ಕರ್ನಾಟಕ ಡಿಜಿಟಲ್ ಮಾಧ್ಯಮಕ್ಕೆ ಕೊಟ್ಟ ಸಂದರ್ಶನವನ್ನೊಮ್ಮೆ ಪರಾಂಬರಿಸಬೇಕು.

ಅದರಲ್ಲಿ ” ನಾವೆಲ್ಲಾ ಮನುಷ್ಯರು, ಮನುವಿನ ಮಕ್ಕಳು. ನಮ್ಮ ಪರಂಪರೆಯಲ್ಲಿ ಯಾವುದು ಒಳ್ಳೆಯದೋ ಅದು ಬ್ರಾಹ್ಮಣ್ಯದ ಅಂಶ. ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಅಪಾರವಾದ ಗೌರವವಿದೆ, ಮನುಸ್ಮೃತಿಯಲ್ಲಿ ವರ್ಣಗಳಿವೆಯೇ ಹೊರತು ಜಾತಿಗಳಿಲ್ಲ, ವರ್ಣಗಳು ಬೇಕು ಇವತ್ತಿಗೂ ಬೇಕು, ಬ್ರಾಹ್ಮಣ ಎಂದರೆ ಜ್ಞಾನ, ಬ್ರಾಹ್ಮಣ್ಯ ಎಂಬುದು ಪ್ರವೃತ್ತಿಯೇ ಹೊರತು ಜಾತಿಯಲ್ಲ” ಎಂದೆಲ್ಲಾ ತಮ್ಮೊಳಗಿನ ಬ್ರಾಹ್ಮಣ್ಯವನ್ನು ಬಿಚ್ಚಿಟ್ಟಿದ್ದಾರೆ.

ಗುರುರಾಜ ಕರ್ಜಗಿ

ಗುರುರಾಜರವರು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮನುಸ್ಮೃತಿಯಲ್ಲಿ ಇಷ್ಟೊಂದೆಲ್ಲಾ ಉತ್ತಮ ಅಂಶಗಳಿದ್ದಲ್ಲಿ ಡಾ.ಅಂಬೇಡ್ಕರ್ ರವರು 1929 ಡಿಸೆಂಬರ್ 27 ರಂದು ಮನುಸ್ಮೃತಿಯನ್ನು ಮನುಷ್ಯ ವಿರೋಧಿಯೆಂದು ಸಾರ್ವಜನಿಕವಾಗಿ ಯಾಕೆ ಸುಟ್ಟರು?. ಈ ಕೃತಿಯಲ್ಲಿರುವ ಚಾತುರ್ವರ್ಣ ವ್ಯವಸ್ಥೆಯನ್ನು ವಿರೋಧಿಸಿದರು?, ವರ್ಣ ಜಾತಿ ಅಸ್ಪೃಶ್ಯತೆ ಎನ್ನುವುದು ಹಿಂದೂ ಧರ್ಮಕ್ಕೆ ಅಂಟಿದ ಕಳಂಕ ಎಂದು ಯಾಕೆ ಹೇಳಿದರು?. ಇಂತಹುದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಾಗದೇ ಮನುಷ್ಯ ವಿರೋಧಿ, ಸ್ತ್ರೀ ವಿರೋಧಿ, ಸಮಾನತಾ ವಿರೋಧಿ ಮನುಸ್ಮೃತಿಯನ್ನು ಸಮರ್ಥಿಸಿಕೊಳ್ಳುವ ಗುರುರಾಜ ಕರ್ಜಗಿಯವರು ಮನುವಾದಿ ಎಂಬುದು ಅವರ ಮಾತುಗಳಿಂದಲೇ ಸಾಬೀತಾಗುತ್ತದೆ.

ಮನುಸ್ಮೃತಿಯನ್ನು ತಮ್ಮ ಬ್ರಾಹ್ಮಣ್ಯದ ದೃಷ್ಟಿಯಿಂದ ವಿವರಿಸಿ ಅದರಲ್ಲಿರುವ ಮನುಕುಲ ವಿಕಾರಗಳನ್ನು ನಿರ್ಲಕ್ಷಿಸುವ ಗುರುರಾಜರವರ ಉದ್ದೇಶಪೂರ್ವಕ ವಿಕೃತಿ ಖಂಡನೀಯ. “ಮನುವಾದಿಗಳೆಂದು ಬೈಯುವ ಮುನ್ನ ಮನುಸ್ಮೃತಿಯನ್ನು ಒಮ್ಮೆ ಓದಿ” ಎಂದು ಉಪದೇಶಿಸುವ ಕರ್ಜಗಿಯವರು ತಮ್ಮ ಬ್ರಾಹ್ಮಣ್ಯದ ಕನ್ನಡಕವನ್ನು ತೆಗೆದಿರಿಸಿ ಮನುಷ್ಯರ ದೃಷ್ಟಿಕೋನದಲ್ಲಿ ಮನುಸ್ಮೃತಿಯನ್ನು ಮೊದಲು ಓದಲಿ. ತಮ್ಮ ಮಾತುಗಾರಿಕೆಯನ್ನೇ ಬಂಡವಾಳವಾಗಿರಿಸಿಕೊಂಡು ಮನುಸ್ಮೃತಿಯನ್ನು ಸಮರ್ಥಿಸಿಕೊಂಡು ಜನರ ದಿಕ್ಕು ತಪ್ಪಿಸುವ ಕಪಟ ಪ್ರಯತ್ನವನ್ನು ಬಿಡಲಿ.

ವೈದಿಕಶಾಹಿಗಳ ಧಾರ್ಮಿಕ ಶೋಷಣೆಗೆ ಬಸವಾದಿ ಶರಣರು ವಚನಗಳ ಮೂಲಕ ಒಡ್ಡಿದ ಪ್ರತಿರೋಧಕ್ಕೆ ವಿರುದ್ಧವಾದ ಮನುವಾದಿ ನಿಲುವನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಗೆ “ವಚನ ಸಾಹಿತ್ಯಶ್ರೀ” ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದು ಬಸವದ್ರೋಹದ ಕುಕೃತ್ಯವಾಗಿದೆ. ಯಾವ ಪುರೋಹಿತಶಾಹಿ ಸನಾತನಿಗಳು ಹೇಗಾದರೂ ಮಾಡಿ ಬಸವಣ್ಣನವರ ತತ್ವ ಸಿದ್ಧಾಂತಗಳ ಪ್ರಭಾವವನ್ನು ಕಡಿಮೆ ಮಾಡಲು ಸತತವಾಗಿ ಪ್ರಯತ್ನಿಸುತ್ತಿದ್ದಾರೋ ಅಂತವರ ಸಮರ್ಥಕರಿಗೆ ಕರೆದು ಪ್ರಶಸ್ತಿ ಗೌರವ ಕೊಟ್ಟು ಸನ್ಮಾನಿಸುತ್ತಿರುವುದರ ಹಿಂದಿರುವ ಶಡ್ಯಂತ್ರವನ್ನು ಗುರುತಿಸಬೇಕಿದೆ. ಬಸವ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನವರ ಬಸವ ಬದ್ಧತೆಯನ್ನು ಪ್ರಶ್ನಿಸಬೇಕಿದೆ. ಲಿಂಗಾಯತ ಧರ್ಮೀಯರೊಳಗಿನ ಬಸವದ್ರೋಹಿಗಳನ್ನು ವಿರೋಧಿಸಲೇಬೇಕಿದೆ. ಬಸವಣ್ಣನವರನ್ನು ತಮ್ಮ ‘ತೋರುಂಭ ಲಾಭ’ಕ್ಕೆ ಬಳಸಿಕೊಳ್ಳುತ್ತಿರುವ ಎಲ್ಲಾ ವ್ಯಕ್ತಿಗಳು ಹಾಗೂ ಶಕ್ತಿಗಳನ್ನು ಸಂದೇಹದಿಂದ ನೋಡಬೇಕಿದೆ. ಮನುವಾದವನ್ನು ಪ್ರಶಂಸಿಸುವ, ಸಮರ್ಥಿಸಿಕೊಳ್ಳುವ ಮನಸ್ಥಿತಿ ಇರುವವರಿಂದ ಎಚ್ಚರದಿಂದ ಇರಬೇಕಿದೆ.

ನಿಜವಾದ ಲಿಂಗಾಯತ ಎಂದೂ ಬಸವ ದ್ರೋಹ ಮಾಡಲಾರ. ಬಸವ ದ್ರೋಹಿ ಎಂದೂ ಲಿಂಗಾಯತ ಆಗಲಾರ.

ಚೆನ್ನಬಸವಣ್ಣನವರ ವಚನವೊಂದು ಹೀಗಿದೆ..

ನಾಲ್ಕು ವೇದವನೋದಿದ ವಿಪ್ರರ ಮನೆಯ
ಎಣ್ಣೆ ಹೋಳಿಗೆ ತುಪ್ಪ ಸಕ್ಕರೆ ಎಂದಡೆ
ನಮ್ಮ ಶಿವಭಕ್ತರ ಮನೆಯ ಶ್ವಾನ
ಮೂಸಿನೋಡಿ ಒಲ್ಲದೇ ಹೋಯಿತ್ತು..

ಅಂಬಿಗರ ಚೌಡಯ್ಯರು ಬಸವದ್ರೋಹಿಗಳಿಗೆ ಮೆಟ್ಟು ತೆಗೆದು ಹೊಡೆಯುವಂತೆ ಬರೆದ ವಚನ ಹೀಗಿದೆ..

ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿಮೇಲಾಗಿ ಬೀಳುವ
ಲೊಟ್ಟೆ ಮೂಳರ ಕಂಡರೆ
ಗಟ್ಟಿ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೇ ಹೊಡೆಯಂದ
ಅಂಬಿಗರ ಚೌಡಯ್ಯ..

ಇದನ್ನೂ ಓದಿ- ಟಾಲ್ಸ್ಟಾಯ್ ಕಣ್ಣಲ್ಲಿ ಜಾಗತಿಕ ಯುದ್ಧಗಳು

More articles

Latest article

Most read