ಜೂ.4 ಕ್ಕೆ ಟಾಕ್ಸಿಕ್‌ ಬಿಡುಗಡೆಯಾಗಲ್ಲ, ಮತ್ತೆ ದಿನಾಂಕ ಮುಂದೂಡಿದ ಚಿತ್ರತಂಡ

ಬೆಂಗಳೂರು :  ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಟ ಯಶ್‌ ಅಭಿನಯನದ ಪ್ಯಾನ್‌ ಇಂಡಿಯಾ  ʼಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆ ಮತ್ತೆ ಮುಂದೂಡಲಾಗಿದೆ. 

ಟಾಕ್ಸಿಕ ಸಿನಿಮಾ ಎರಡನೇ ಬಾರಿಗೆ ಮುಂದೂಡಲ್ಪಡುತ್ತಿದೆ.  ಈ ಹಿಂದೆ ಜೂನ್ 4 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಚಿತ್ರತಂಡ, ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಮತ್ತೆ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಶೀಘ್ರದಲ್ಲೇ ದಿನಾಂಕ ಪ್ರಕಟಿಸುವುದಾಗಿ ಚಿತ್ರ ತಂಡ ಘೋಷಿಸಿದೆ.

ಟಾಕ್ಸಿಕ್ ಪೂರ್ಣಗೊಂಡಿದೆ : ಚಿತ್ರೀಕರಣ ಪೂರ್ಣಗೊಂಡಿದೆ ಆದರೆ ಬಿಡುಗಡೆಗೆ ಮುನ್ನ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೊಂದಾಣಿಕೆ ಅಗತ್ಯವಿದೆ ಎಂದು ಯಶ್‌ ಹೇಳಿದ್ದಾರೆ.  ಪ್ರಸ್ತುತ ಜಾಗತಿಕ ವಿತರಣೆ ಮತ್ತು ಪಾಲುದಾರಿಕೆಗಳನ್ನು ಜೋಡಿಸುತ್ತಿದ್ದೇವೆ. ಇದರ ಹಿನ್ನೆಲೆಯಲ್ಲಿ, ನಮ್ಮ ಬಿಡುಗಡೆಯ ಸಮಯವನ್ನು ಮುಂದೂಡಲು   ನಾವು ನಿರ್ಧರಿಸಿದ್ದೇವೆ.
ಈ ಮೊದಲು ಜೂನ್ 4 ರಂದು ನಾವು ಮೊದಲೇ ಘೋಷಿಸಿದಂತೆ ಬಿಡುಗಡೆಯಾಗುತ್ತಿಲ್ಲ.    ಜಾಗತಿಕವಾಗಿ ಬಿಡುಗಡೆಯಾಗುವ ದಿನಾಂಕವನ್ನು ಶೀಘ್ರವೇ ಪ್ರಕಟಿಸಲು ಉತ್ಸುಕರಾಗಿರುವುದಾಗಿ  ಯಶ್‌ ಹೇಳಿದ್ದಾರೆ. 

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉಂಟಾದ ಅಡಚಣೆಯಿಂದಾಗಿ ಮಾರ್ಚ್ 19 ರಂದು ಬಿಡುಗಡೆಯಾದ ಚಿತ್ರವನ್ನು ಜೂನ್ 4 ಕ್ಕೆ ಮುಂದೂಡಲಾಯಿತು. ಆದಿತ್ಯ ಧಾರ್ ನಿರ್ದೇಶನದ ರಣವೀರ್ ಸಿಂಗ್ ಅವರ ಧುರಂಧರ್ 2 ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಧುರಂಧರ್‌ ಬಿಡುಗಡೆಯಾಗಿ ಸಾವಿರಾರು ಕೋಟಿ ರೂ. ಆದಾಯ ಗಳಿಸುತ್ತಿದೆ.

More articles

Latest article

Most read