ಜನಿವಾರ ವಿವಾದ ಜೋರು; ಶ್ರೇಷ್ಠತೆಯ ವ್ಯಸನದ ಕಾರುಬಾರು

ಲಿಂಗ ತಾರತಮ್ಯ ಮಾಡುವ ಜನಿವಾರವನ್ನು ಕಿತ್ತೆಸೆದ ಬಸವಣ್ಣ ಮಾನವತಾವಾದಿಯಾದ. ವೇದಕ್ಕೆ ವರೆಯ ಕಟ್ಟುವೆನೆಂದ, ಶಾಸ್ತ್ರಕ್ಕೆ ನಿಗಳ ನಿಕ್ಕುವೆನೆಂದ, ಆಗಮಗಳ ಮೂಗು ಕೊಯ್ಯುವೆನೆಂದ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಲ್ಲಮಪ್ರಭುಗಳು ಪುರಾಣಗಳನ್ನೇ ಪುಂಡರ ಗೋಷ್ಠಿ ಎಂದು ಟೀಕಿಸಿದ. ಹೀಗಾಗಿ ಯಾವುದೇ ಧಾರ್ಮಿಕ ಆಚರಣೆಗಳು ಸಂಕೇತಗಳು ವೈಯಕ್ತಿಕವಾಗಿರಲಿ. ಸಾರ್ವತ್ರಿಕ ನಿಯಮಗಳಿಗೆ, ಸಾಮಾಜಿಕ ಸಮಾನತೆಗೆ ಧಕ್ಕೆ ತಾರದೇ ಇರಲಿ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೆಷಕರು.

ಇತ್ತೀಚೆಗೆ ಕೆಸೆಟ್ ಪರೀಕ್ಷೆ ಸಮಯದಲ್ಲಿ ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆದಿರಿಸಿದ್ದು ಭಾರೀ ಸುದ್ದಿಯಾಗತೊಡಗಿತು. ಅಲ್ಲಿನ ಮೂವರು ಸಿಬ್ಬಂದಿಗಳನ್ನು ಕಾಲೇಜಿನಿಂದ ಅಮಾನತ್ತು ಮಾಡಲಾಯ್ತು. ಸಕಲ ಬ್ರಾಹ್ಮಣ ಸಂಘಗಳೂ ತಮ್ಮ ಆಕ್ರೋಶವನ್ನು ಹೊರಗೆ ಹಾಕತೊಡಗಿದವು.

“ಬ್ರಾಹ್ಮಣರನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಆ ಕಾಲೇಜಿನ ಮಾನ್ಯತೆಯನ್ನೇ ರದ್ದು ಮಾಡಬೇಕು, ಸಂಬಂಧಪಟ್ಟವರನ್ನು ಕೂಡಲೇ ಬಂಧಿಸಬೇಕು” ಎಂದು ಜನಿವಾರಿಗರು ಎತ್ತರದ ಧ್ವನಿಯಲ್ಲಿ ಆಗ್ರಹಿಸತೊಡಗಿದರು. ದೂರನ್ನು ದಾಖಲಿಸಿದರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಬ್ರಾಹ್ಮಣರ ಮೇಲೆ ದಬ್ಬಾಳಿಕೆ ಎಂದು ಹುಯಿಲೆಬ್ಬಿಸ ತೊಡಗಿದರು.

ಕಳೆದ ವರ್ಷ 2025 ರಲ್ಲೂ ಬೀದರ್, ಶಿವಮೊಗ್ಗ, ಧಾರವಾಡ ಜಿಲ್ಲೆಗಳ ಸಿಇಟಿ ಕೇಂದ್ರಗಳಲ್ಲೂ ಜನಿವಾರ ತೆಗೆಸಿದ ಪ್ರಕರಣಗಳು ನಡೆದಿದ್ದವು. ಆಗಲೂ ಹೀಗೆಯೇ ವಿರೋಧ ವ್ಯಕ್ತವಾಗಿತ್ತು. ಈ ವಿಷಯವನ್ನು ಹೀಗೆಯೇ ಬಿಟ್ಟರೆ ಮುಂದೆಯೂ ಜನಿವಾರದ ಮೂಲಕ ಬ್ರಾಹ್ಮಣ ಸಮುದಾಯದ ಮೇಲೆ ಅಪಚಾರ ಮಾಡಲಾಗುತ್ತದೆ ಎನ್ನುವ ಆತಂಕಕ್ಕೆ ಬ್ರಾಹ್ಮಣ ಸಮುದಾಯದವರು ಒಳಗಾದರು.

“ಜನಿವಾರ ಎನ್ನುವುದು ಧಾರ್ಮಿಕ ಆಚರಣೆ, ಅದನ್ನು ತೆಗೆಯಲು ಬಲವಂತ ಪಡಿಸುವುದು ಧಾರ್ಮಿಕ ಹಕ್ಕಿಗೆ ಧಕ್ಕೆ. ಪರೀಕ್ಷೆಗೂ ಮೊದಲು ಜನಿವಾರ ತೆಗೆಸಿದರೆ ವಿದ್ಯಾರ್ಥಿಗೆ ಮಾನಸಿಕ ಒತ್ತಡ  ಹಾಗೂ ಅವಮಾನದ ಭಾವನೆ ಉಂಟಾಗಿ ಪರೀಕ್ಷೆ ಬರೆಯಲು ಏಕಾಗ್ರತೆ ಇಲ್ಲದಾಗುತ್ತದೆ” ಎನ್ನುವುದು ಕೆಲವು ಬ್ರಾಹ್ಮಣರ ವಾದವಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲರಿಗೂ ಒಂದೇ ರೀತಿಯ ನಿಯಮ ಅನ್ವಯವಾಗಬೇಕು. ಜನಿವಾರದಲ್ಲೂ ನೋಟ್ಸ್, ಮೈಕ್ರೋ ಡಿವೈಸ್ ಅಡಗಿಸಿಡುವ ಸಾಧ್ಯತೆಗಳಿವೆ. ಯಾವುದು ಜನಿವಾರ ಯಾವುದು ಬೇರೆ ದಾರ ಎನ್ನುವುದನ್ನು ಸಿಬ್ಬಂದಿಗೆ ಗುರುತಿಸುವುದು ಕಷ್ಟ, ಸಾವಿರಾರು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಲು ಸಮಯ ಸಾಲದು, ಜನಿವಾರಿಗರಿಗೆ ಮಾತ್ರ ಯಾಕೆ ಪ್ರತ್ಯೇಕ ರಿಯಾಯಿತಿ” ಎಂಬುದು ಸಮಾನತೆಯನ್ನು ಬಯಸುವವರ ವಾದವಾಗಿದೆ.

ಬ್ರಾಹ್ಮಣ ಸಮುದಾಯದ ಪ್ರತಿರೋಧ ಹಾಗೂ ವಿರೋಧ ಪಕ್ಷಗಳ ವಾಗ್ದಾಳಿಯ ನಂತರ ಕರ್ನಾಟಕ ಸರಕಾರವು 2025 ರಲ್ಲಿ “ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಬಾರದು, ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತದೆ. ಘಟನೆ ನಡೆದ ಕಾಲೇಜುಗಳಲ್ಲಿ ವರದಿ ಪಡೆಯಲಾಗುತ್ತದೆ, ಸಿಬ್ಬಂದಿ ವಿರುದ್ಧ  ಕ್ರಮ ಜರುಗಿಸಲಾಗುತ್ತದೆ, ಕಾಲೇಜು ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ” ಎಂದು ಹೇಳುತ್ತಾ ಬಂದಿರುವ ಕಾಂಗ್ರೆಸ್ ಸರಕಾರ ತಿಪ್ಪೆ ಸಾರಿಸಿ ರಂಗೋಲಿ ಹಾಕುತ್ತಿದೆ, ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡ ಹಿಂದುತ್ವವಾದಿ ಬಿಜೆಪಿ ಪಕ್ಷವು ‘ಇದೊಂದು ಹಿಂದೂ ವಿರೋಧಿ ಸರಕಾರ’ ಎಂದು ಆರೋಪಿಸುತ್ತಿದೆ.

ಈ ಜನಿವಾರ ಪ್ರಕರಣವನ್ನು  ಆರ್ಟಿಕಲ್ 25 ರ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಹಾಗೂ ಆರ್ಟಿಕಲ್ 21 A ಶಿಕ್ಷಣದ ಹಕ್ಕು ಅಡಿಯಲ್ಲಿ ಪ್ರಶ್ನಿಸಲಾಗಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಈ ಕುರಿತು ಸರಕಾರಕ್ಕೆ ಸ್ಪಷ್ಟವಾದ ಮಾರ್ಗಸೂಚಿ ಕೊಡಬೇಕು ಹಾಗೂ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅನುಮತಿಸಬೇಕು ಎಂದೂ ಆಗ್ರಹಿಸಲಾಗಿದೆ. ನ್ಯಾಯಾಲಯವು ಸರಕಾರಕ್ಕೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೋಟೀಸ್ ನೀಡಿ ವಿಚಾರಣೆ ಆರಂಭಿಸಿದೆ. ಆದರೆ ಇಲ್ಲಿವರೆಗೂ ಅಂತಿಮ ತೀರ್ಪು ಬಂದಿಲ್ಲ.

ಆರ್ಟಿಕಲ್ 25 ರ ಅಡಿಯಲ್ಲಿ ರಕ್ಷಣೆ ಪಡೆಯಲು ಅತ್ಯಾವಶ್ಯಕ ಧಾರ್ಮಿಕ ಆಚರಣೆ ಆಗಿರಬೇಕು. ಹಿಜಾಬ್ ಪ್ರಕರಣದಲ್ಲಿ ಹಿಜಾಬ್‌ ಅತ್ಯಾವಶ್ಯಕ ಧಾರ್ಮಿಕ ಆಚರಣೆ ಅಲ್ಲ ಎಂದು ಹೈಕೋರ್ಟ್ ಆದೇಶ ಮಾಡಿತ್ತು. ಜನಿವಾರವೂ ಸಹ ಇದೇ ರೀತಿಯ ಆದೇಶವನ್ನು ಪಡೆಯಬಹುದು ಎಂಬುದು ವೈದಿಕರ ಆತಂಕವಾಗಿದೆ.

ಇಲ್ಲಿ ಪ್ರಶ್ನೆ ಇರುವುದು.. ಜನಿವಾರ ಧರಿಸುವುದು ” Essential religious practice” ಹೌದೋ ಅಲ್ಲವೋ ಎಂಬುದು. ಪರೀಕ್ಷಾ ಭದ್ರತಾ ನಿಯಮಗಳು ಧಾರ್ಮಿಕ ಹಕ್ಕುಗಳಿಗಿಂತಲೂ ಮೇಲಿವೆಯಾ ಎಂಬುದು. ಇವೆರಡರ ನಡುವೆ ಸಮತೋಲನದ ಆದೇಶವನ್ನು ಕೋರ್ಟ್ ಕೊಡಬೇಕಿದೆ.

ಪರೀಕ್ಷೆಯ ಭದ್ರತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಧಾರ್ಮಿಕ ಸಂಕೇತಗಳನ್ನು ತೆಗೆದಿರಿಸುವುದು ಸರಿಯಾದ ಕ್ರಮ. ಜನಿವಾರದ ಕಾರಣಕ್ಕೆ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳೇನಿಲ್ಲ. ವಿದ್ಯಾರ್ಥಿಗಳು ಶಾಲೆ ಕಾಲೇಜು ಪರೀಕ್ಷೆಗಳಿಗೆ ಹೋಗುವುದು ಅವರ ಮುಂದಿನ ಭವಿಷ್ಯಕ್ಕಾಗಿಯೇ ಹೊರತು ಧಾರ್ಮಿಕ ಆಚರಣೆಗಳಿಗಾಗಿ ಅಲ್ಲ. ಪರೀಕ್ಷಾ ಕೊಠಡಿ ಪ್ರವೇಶಿಸುವ  ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ನಿಯಮ ರೂಪಿಸಬೇಕು ಹಾಗೂ ಎಲ್ಲಾ ರೀತಿಯ ಧಾರ್ಮಿಕ ಸಂಕೇತಗಳನ್ನೂ ತೆಗೆದಿರಿಸುವುದನ್ನು ಕಡ್ಡಾಯ ಮಾಡಬೇಕು. ಇಲ್ಲದೇ ಹೋದರೆ ಈ ಆಧುನಿಕ ವೈಜ್ಞಾನಿಕ ಯುಗದಲ್ಲಿ ಒಂದು ಪುಟ್ಟ ಚಿಪ್ ನಲ್ಲಿ ಬ್ರಹ್ಮಾಂಡ ಮಾಹಿತಿಯನ್ನು ಅಡಗಿಸಿಡಬಹುದಾದ ಸಾಧ್ಯತೆ ಇದೆ.

ಇದು ಕೇವಲ ಜನಿವಾರ ಬೇಕು ಬೇಡ ಎನ್ನುವ ಪ್ರಶ್ನೆಯಲ್ಲ. ಧಾರ್ಮಿಕ ಹಕ್ಕು, ಪರೀಕ್ಷಾ ಭದ್ರತೆ, ಸಮಾನ ನಿಯಮ ಹಾಗೂ ಮಾನವ ಗೌರವಗಳೆಂಬ ನಾಲ್ಕೂ ಅಂಶಗಳನ್ನು ಪರಿಗಣಿಸಬೇಕಿದೆ.

ಜನಿವಾರದ ಹಾಗೆಯೇ ಹಿಜಾಬ್ ಕೂಡಾ ಮುಸ್ಲಿಂ ಸಮುದಾಯದ ಮಹಿಳೆಯರ ಧಾರ್ಮಿಕ ಸಂಕೇತ ಆಗಿದೆ ಅಲ್ಲವೇ? ಹಿಜಾಬ್ ಧರಿಸಿ ಶಾಲೆ ಕಾಲೇಜಿಗೆ ಬರಕೂಡದು ಎಂದು ಗಲಾಟೆ ಎಬ್ಬಿಸಿ ವಿದ್ಯಾರ್ಥಿಗಳಲ್ಲಿ ಕೋಮುವಾದ ಬಿತ್ತಿದವರು ಯಾರು? ಈ ರೀತಿಯ ಮಾತಾಂಧ ವಿರೋಧದಿಂದಾಗಿ ಅದೆಷ್ಟೋ ವಿದ್ಯಾರ್ಥಿನಿಯರು ಕಾಲೇಜಿಗೂ ಬರಲಿಲ್ಲ, ಪರೀಕ್ಷೆ ಬರೆಯಲಿಲ್ಲ. ಅವರ ಭವಿಷ್ಯ ಹಾಳು ಮಾಡಿದವರು ಯಾರು? ಅವರಿಗೆಲ್ಲಾ ಧಾರ್ಮಿಕ ಭಾವನೆಗಳು ಇರೋದಿಲ್ವಾ? ಹಿಜಾಬ್ ಮುಸ್ಲಿಂ ಧಾರ್ಮಿಕ ಆಚರಣೆಯ ಭಾಗ ಅಲ್ಲಾ ಎನ್ನುವುದಾದರೆ ಈ ಜನಿವಾರ ಕೂಡಾ ಅದೇ ಕೆಟಗರಿಗೆ ಸೇರಬೇಕಲ್ಲವೇ?

ವೈಯಕ್ತಿಕ ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪ ಸಲ್ಲದು? ಎಂದು ವೈದಿಕರು ವಾದಿಸುತ್ತಾರೆ. ಆದರೆ  ದೇವಸ್ಥಾನಗಳಿಗೆ ವೈದಿಕೇತರರು ಹೋದರೆ ಬಟ್ಟೆ ಬಿಚ್ಚಿಸಿ ಅರೆನಗ್ನ ಮಾಡುತ್ತಾರೆ. ಇದ್ಯಾವ ನ್ಯಾಯ? ಬಂದ ಭಕ್ತರಲ್ಲಿ ಬ್ರಾಹ್ಮಣರು ಯಾರು, ಅಬ್ರಾಹ್ಮಣರು ಯಾರು ಎಂದು ಗುರುತಿಸಲು ಪುರೋಹಿತಶಾಹಿಗಳು ಮಾಡಿದ ತಂತ್ರ ಇದೆಂಬುದು ಗೊತ್ತಿರುವ ಸತ್ಯ. ಹೀಗೆ ಬಟ್ಟೆ ಬಿಚ್ಚಿಸಿದಾಗ ಕೆಲವರು ಮುಜುಗರ ಅನುಭವಿಸುತ್ತಾರಲ್ಲಾ ಆ ಅವಮಾನ ಲೆಕ್ಕಕ್ಕಿಲ್ವಾ? ಹೋಗಲಿ ಮಂತ್ರಾಲಯ ಉಡುಪಿಯಂತಹ ಕೆಲವು ದೇವಸ್ಥಾನಗಳಲ್ಲಿ ವೈದಿಕರ ಪಂಕ್ತಿಯಲ್ಲಿ ಊಟಕ್ಕೆ ಕುಳಿತವರನ್ನೂ ಜನಿವಾರ ಇಲ್ಲವೆಂದು ದೂರಿ ದೂರ ಕಳಿಸುತ್ತಾರಲ್ಲಾ. ಅದು ಅಬ್ರಾಹ್ಮಣರಿಗೆ ಮಾಡುವ ಅವಮಾನ ಅಲ್ಲವೇ? ದೇವಸ್ಥಾನಕ್ಕೆ ಬಂದ ದಲಿತರನ್ನು ಒಳಕ್ಕೂ ಬಿಡದೇ, ಪೂಜೆಗೂ ಅವಕಾಶ ಕೊಡದೆ ಅಪಮಾನ ಮಾಡಿ ಹೊರಗಟ್ಟುತ್ತಾರಲ್ಲಾ, ಇದು ಹಕ್ಕಿನ ಉಲ್ಲಂಘನೆ ಅಲ್ಲವಾ?

ಜನಿವಾರ ಎನ್ನುವುದು ವೈದಿಕಶಾಹಿಗಳ ಶ್ರೇಷ್ಟತೆಯ ವ್ಯಸನದ ದ್ಯೋತಕವಾಗಿದೆ. ವರ್ಣ ವ್ಯವಸ್ಥೆಯ ಸಂಕೇತವಾಗಿದೆ. ಜನಿವಾರ ಶಿವದಾರ ಆ ದಾರ ಈ ದಾರ ಯಾವುದೇ ದಾರಗಳನ್ನು ಹಾಕಿಕೊಳ್ಳಲು ಸಂವಿಧಾನ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಅದನ್ನು ವ್ಯಕ್ತಿಗತವಾಗಿ ಆಚರಿಸಿದರೆ, ತಮ್ಮ ಮನೆ ಮನದಲ್ಲಿ ಆರಾಧಿಸಿದರೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಸಾರ್ವಜನಿಕವಾಗಿ ಶ್ರೇಷ್ಠತೆಯನ್ನು ಮೆರೆದರೆ, ಸಾರ್ವತ್ರಿಕವಾಗಿ ತಾರತಮ್ಯವನ್ನು ಆಚರಿಸಿದರೆ, ಬ್ರಾಹ್ಮಣರಿಗೊಂದು ನಿಯಮ ಅನ್ಯರಿಗಿನ್ನೊಂದು ಎಂದು ಹೇರಿಕೆ ಮಾಡಿದರೆ ಅದು ಖಂಡಿತಾ ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇಲ್ಲಿ ಸಮಸ್ಯೆ ಇರೋದು ಬ್ರಾಹ್ಮಣ ಜಾತಿಯದ್ದಲ್ಲ, ಎಲ್ಲಾ ಬ್ರಾಹ್ಮಣರೂ ಕರ್ಮಠರೂ ಅಲ್ಲ. ಆದರೆ ಬ್ರಹ್ಮನ ತಲೆಯಿಂದ ಜನಿಸಿದ್ದೇವೆಂದು ನಂಬಿಕೊಂಡು ಶ್ರೇಷ್ಠತೆಯ ಸೊಕ್ಕಿಗೆ ಬಿದ್ದ ಬ್ರಾಹ್ಮಣ್ಯವಾದಿಗಳ ಜೀವವಿರೋಧಿತನವನ್ನು ಮಾತ್ರ ಕ್ಷಮಿಸಲು ಸಾಧ್ಯವಿಲ್ಲ. ಬಸವಣ್ಣನವರು ಹೇಳಿದಂತೆ ” ಇವನಾರವ ಇವನಾರವ ಎನ್ನದೇ, ಇವ ನಮ್ಮವ, ಇವ ನಮ್ಮವ” ಎನ್ನುವುದಾದರೆ ಬ್ರಾಹ್ಮಣ ಜಾತಿಯವರೂ ನಮ್ಮವರೇ. ನಾವೇ ಬೇರೆ, ನಾವು ಎಲ್ಲರಿಗಿಂತ ಮೇಲೆ ಎನ್ನುವುದಾದರೆ ವೈದಿಕರೇ ಬೇರೆ.

ಹೀಗಾಗಿ.. ವಿದ್ಯಾರ್ಥಿಗಳಲ್ಲಿ ಈ ದಾರಗಳ ಶ್ರೇಷ್ಠತೆಯ ವ್ಯಸನವನ್ನು ಬಿತ್ತುವ ಪ್ರಯತ್ನವನ್ನು ಬ್ರಾಹ್ಮಣ್ಯವಾದಿಗಳು ಬಿಡಬೇಕು. ಪರೀಕ್ಷಾ ಭದ್ರತೆಯ ನಿಯಮಗಳು ಎಲ್ಲರಿಗೂ ಸಮಾನವಾಗಿರಬೇಕು. ಅಸಮಾನತೆ ಸಾರುವ ಹಿಂದುತ್ವ, ಸನಾತನ, ಬ್ರಾಹ್ಮಣ್ಯ, ಮನುವಾದ ಎನ್ನುವುದನ್ನು ಕಟ್ಟಿಟ್ಟು ಸಂವಿಧಾನದ ಸಮಾನತೆಯ ಆಶಯಕ್ಕೆ ಬದ್ಧರಾಗುವವರೆಲ್ಲಾ ಮಾನವೀಯತಾ ವಾದಿಗಳು. ಶ್ರೇಷ್ಠತೆಯ ವ್ಯಸನ ಹೊಂದಿದವರೆಲ್ಲಾ ಮನುವಾದಿಗಳು. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಮಾನವತಾವಾದಿಗಳನ್ನಾಗಿ ಮಾಡಲು ಬಯಸುತ್ತಾರೊ ಇಲ್ಲವೇ ಸನಾತನ ಮನುವಾದಿಗಳನ್ನಾಗಿಯೋ ಎಂಬುದನ್ನು ನಿರ್ಧರಿಸಬೇಕಿದೆ. ಲಿಂಗ ತಾರತಮ್ಯ ಮಾಡುವ ಜನಿವಾರವನ್ನು ಕಿತ್ತೆಸೆದ ಬಸವಣ್ಣ ಮಾನವತಾವಾದಿಯಾದ. ವೇದಕ್ಕೆ ವರೆಯ ಕಟ್ಟುವೆನೆಂದ, ಶಾಸ್ತ್ರಕ್ಕೆ ನಿಗಳ ನಿಕ್ಕುವೆನೆಂದ, ಆಗಮಗಳ ಮೂಗು ಕೊಯ್ಯುವೆನೆಂದ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಲ್ಲಮಪ್ರಭುಗಳು ಪುರಾಣಗಳನ್ನೇ ಪುಂಡರ ಗೋಷ್ಠಿ ಎಂದು ಟೀಕಿಸಿದ.

ಹೀಗಾಗಿ ಯಾವುದೇ ಧಾರ್ಮಿಕ ಆಚರಣೆಗಳು ಸಂಕೇತಗಳು ವೈಯಕ್ತಿಕವಾಗಿರಲಿ. ಸಾರ್ವತ್ರಿಕ ನಿಯಮಗಳಿಗೆ, ಸಾಮಾಜಿಕ ಸಮಾನತೆಗೆ ಧಕ್ಕೆ ತಾರದೇ ಇರಲಿ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಸಾರಾ ಗೋವಿಂದು ಸಿಟ್ಟಿನ ಗುಟ್ಟು!

More articles

Latest article

Most read