ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ : ಟಿ.ಜಿ. ಮೋಹನ್‌ದಾಸ್‌ ಬಂಧನ

ತಿರುವನಂತಪುರಂ :  ನವದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ  ನೀಟ್‌ ಪತ್ರಿಕೆ  ಸಂಬಂಧ  ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ನ ಟಿ.ಜಿ. ಮೋಹನ್‌ದಾಸ್ ರನ್ನು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಭಾನುವಾರ ಕೊಚ್ಚಿಯ ಕೂವಪಾದಂನಲ್ಲಿರುವ ಅವರ ನಿವಾಸದಿಂದ ತಿರುವನಂತಪುರಂ ಸೈಬರ್ ಪೊಲೀಸ್ ಠಾಣೆಯ ತಂಡವೊಂದು ಭಾನುವಾರ ಸಂಜೆ ಮಟ್ಟಂಚೇರಿಯಲ್ಲಿ ಮೋಹನ್‌ದಾಸ್‌ರನ್ನು  ವಶಕ್ಕೆ ತೆಗೆದುಕೊಂಡಿದೆ.  ಕುರಿತು ಯೂಟ್ಯೂಬ್ ವಿಡಿಯೋವೊಂದರಲ್ಲಿ ನೀಡಿದ ಹೇಳಿಕೆಗಳಿಗಾಗಿ, ಬಲಪಂಥೀಯ ರಾಜಕೀಯ ವಿಶ್ಲೇಷಕ ಟಿ.ಜಿ. ಮೋಹನ್‌ದಾಸ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಮೋಹನ್‌ದಾಸ್ ಅವರನ್ನು ಮಧ್ಯರಾತ್ರಿಯ ಸುಮಾರಿಗೆ ತಿರುವನಂತಪುರದ ಸೈಬರ್ ಪೊಲೀಸ್ ಠಾಣೆಗೆ ಕರೆತರಲಾಯಿತು. ಬಳಿಕ ಬಂಧನವನ್ನು ಅಧಿಕೃತವಾಗಿ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ “ಅತ್ಯಾಚಾರವೆಂದರೆ ಇಷ್ಟ” ಮತ್ತು “ಅತ್ಯಾಚಾರಕ್ಕೊಳಗಾಗುವುದನ್ನು ಆನಂದಿಸುವ” ಯುವತಿಯರೂ ಇದ್ದಾರೆ ಎಂದು ಟಿಜಿ ಮೋಹನ್‌ದಾಸ್‌ ಯೂಟ್ಯೂಬ್‌ ಸಂದರ್ಶನದಲ್ಲಿ ಹೇಳಿದ್ದರು.

More articles

Latest article

Most read