ಪಾದಚಾರಿಗಳ ಸುಗಮ ಸಂಚಾರಕ್ಕೆ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ : 15 ಮುಖ್ಯ ರಸ್ತೆಗಳ 16.35 ಕಿ.ಮೀ. ಕಾರ್ಯಾಚರಣೆ

15 ಪ್ರಮುಖ ರಸ್ತೆಗಳ 16.35 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು

ಬೆಂಗಳೂರು : ಗ್ರೇಟರ್‌ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣ ಬೈರೆಗೌಡ ರ ಆದೇಶದಂತೆ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್.ಜಿ ರವರ ನಿರ್ದೇಶನದಂತೆ ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಪಾದಚಾರಿ ಮಾರ್ಗ ರಸ್ತೆ ಒತ್ತುವರಿಯನ್ನು ತೆರವುಗೊಳಿಸಲಾಯಿತು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಿಂದ 6 ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳ ವಿವಿಧ ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಂಗಡಿಗಳು, ತಳ್ಳುವ ಗಾಡಿಗಳು, ಕಟ್ಟಡ ತ್ಯಾಜ್ಯ, ಅನಧೀಕೃತ ಕೇಬಲ್‌ಗಳು ಹಾಗೂ ಇತರೆ ಒತ್ತುವರಿಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೋಲಿಸ್ ವಿಭಾಗದ ಅಧಿಕಾರಿ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ಕೇಂದ್ರ ನಗರ ಪಾಲಿಕೆ ವತಿಯಿಂದ ಪಾದಚಾರಿ ಮಾರ್ಗ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಚರಣೆ ಕೈಗೊಂಡಿದ್ದು ಯಶಸ್ವಿಯಾಗಿದೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್.ಜಿ ತಿಳಿಸಿದ್ದಾರೆ.

ಆರು ವಿಭಾಗಗಳಲ್ಲಿ ಸಮನ್ವಯದೊಂದಿಗೆ ಕಾರ್ಯಾಚರಣೆ

ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸಾರ್ವಜನಿಕರಿಂದ ಬಂದಿದ್ದ ದೂರುಗಳು ಹಾಗೂ ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಪಾಲಿಕೆಯ ಶಾಂತಿನಗರ, ಸಿ.ವಿ.ರಾಮನ್ ನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ ಹಾಗೂ ಶಿವಾಜಿನಗರ ವಿಭಾಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಒಟ್ಟು 15 ಪ್ರಮುಖ ರಸ್ತೆಗಳ 16.35 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಕಾರ್ಯಾಚರಣೆಯ ವೇಳೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಪೆಟ್ಟಿ ಅಂಗಡಿಗಳು, ಶಾಶ್ವತವಾಗಿ ನಿಲ್ಲಿಸಿದ್ದ ತಳ್ಳುಗಾಡಿಗಳು, ಕಟ್ಟಡ ತ್ಯಾಜ್ಯ, ಕೇಬಲ್‌ಗಳು, ತಾತ್ಕಾಲಿಕ ಕಟ್ಟಡ ಪ್ರೊಜೆಕ್ಷನ್‌ಗಳು ಹಾಗೂ ಇತರೆ ಅಡಚಣೆಗಳನ್ನು ತೆರವುಗೊಳಿಸಲಾಯಿತು. ಕೆಲವು ಸ್ಥಳಗಳಲ್ಲಿ ಮಳೆನೀರು ಸರಾಗವಾಗಿ ಹರಿಯುವಂತೆ ಚರಂಡಿ ಸ್ಲ್ಯಾಬ್‌ಗಳನ್ನು ಸಹ ಅಳವಡಿಸಲಾಗಿದೆ.

ಕಾರ್ಯಾಚರಣೆಗೆ 150 ಸಿಬ್ಬಂದಿ, 13 ಜೆಸಿಬಿಗಳು, 34 ಟ್ರ್ಯಾಕ್ಟರ್‌ಗಳು ಹಾಗೂ 16 ಟಿಪ್ಪರ್ಗಳ ಬಳಕೆ

ಸದರಿ ಕಾರ್ಯಾಚರಣೆಯಲ್ಲಿ ಸುಮಾರು 150 ಸಿಬ್ಬಂದಿ, 13 ಜೆಸಿಬಿಗಳು, 34 ಟ್ರ್ಯಾಕ್ಟರ್‌ಗಳು ಹಾಗೂ 16 ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಗಿದ್ದು, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಶಾಂತಿನಗರ ವಿಭಾಗ

  • ಮಹಾತ್ಮ ಗಾಂಧಿ ರಸ್ತೆ, ಟ್ರಿನಿಟಿ ವೃತ್ತದಿಂದ ಅನಿಲ್ ಕುಂಬ್ಳೆ ಸರ್ಕಲ್ ರವರೆಗೆ 2.2 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಸುಮಾರು 14 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 12 ತಳ್ಳುವ ಗಾಡಿಗಳನ್ನು ಹಾಗೂ ಕೇಬಲ್‌ಗಳನ್ನು ತೆರೆವುಗೊಳಿಸಲಾಗಿರುತ್ತದೆ.
  • ಯೋಗಾನಂದ ಪರಮಹಂಸ ರಸ್ತೆಯಿಂದ 10 ನೇ ಮುಖ್ಯರಸ್ತೆ ಇಂದಿರಾನಗರದಿಂದ 100 ಅಡಿ ರಸ್ತೆ ಇಂದಿರಾನಗರ ದವರೆಗೆ 2.5 ಕಿ.ಮೀ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಶಾಶ್ವತವಾಗಿ ನಿಲ್ಲಿಸಿದ್ದ 06 ತಳ್ಳುಗಾಡಿಗಳು ಸೇರಿದಂತೆ ಕಟ್ಟಡದ ತ್ಯಾಜ್ಯಗಳನ್ನು ಹಾಗೂ ಕೇಬಲ್‌ ಗಳನ್ನು ತೆರೆವುಗೊಳಿಸಲಾಗಿರುತ್ತದೆ.

ಸಿ.ವಿ.ರಾಮನ್ ನಗರ ವಿಭಾಗ

  • ಹಳೆ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೇಟ್ರೋ ನಿಲ್ಧಾಣದಿಂದ ಬೆನ್ನಿಗಾನಹಳ್ಳಿ ಸೇತುವೆ ವರೆಗೆ 2.0 ಕಿ.ಮೀ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಸುಮಾರು 22 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 12 ತಳ್ಳುವ ಗಾಡಿಗಳು ಸೇರಿದಂತೆ ಕಟ್ಟಡದ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿದೆ ಕೆಲವು ಭಾಗಗಳಲ್ಲಿ ಮಳೆ ನೀರು ಚರಂಡಿಗಳ ಸ್ಲ್ಯಾಬ್‌ಗಳನ್ನು ಅಳವಡಿಸಲಾಗಿರುತ್ತದೆ.
  • ಇಂದಿರಾನಗರ 100 ಅಡಿ ರಸ್ತೆ-ಹಳೇ ಮದ್ರಾಸ್ ರಸ್ತೆಯಿಂದ ದೊಮ್ಮಲೂರು ಮೇಲ್ಸೇತುವೆ ವರೆಗೆ 2.4 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಸುಮಾರು 20 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 05 ತಳ್ಳುವ ಗಾಡಿಗಳು ತೆರವುಗೊಳಿಸಲಾಗಿದೆ.

ಚಿಕ್ಕಪೇಟೆ ವಿಭಾಗ

  • ಟಿ. ಮರಿಯಪ್ಪ ರಸ್ತೆ ಅಶೋಕ ಪಿಲ್ಲರ್ ರಸ್ತೆಯಿಂದ ಮಾದವನ್ ಪಾರ್ಕ್ ವರೆಗೆ 0.85 ಕಿ.ಮೀ ರಸ್ತೆಯ 2 ಬದಿಯ ಪಾದಚಾರಿ ಮಾರ್ಗಗಳಲ್ಲಿ ಪೆಟ್ಟಿ ಅಂಗಡಿಗಳನ್ನು, ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಹೋಟೆಲ್‌ನ್ನು ಕಟ್ಟಡದ ತ್ಯಾಜ್ಯಗಳನ್ನು ಹಾಗೂ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.

ಚಾಮರಾಜಪೇಟೆ ವಿಭಾಗ

  • 5ನೇ ಮುಖ್ಯರಸ್ತೆಯಲ್ಲಿ 1.00 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಪೆಟ್ಟಿ ಅಂಗಡಿಗಳನ್ನು ಹಾಗೂ ತಳ್ಳುವ ಗಾಡಿಗಳನ್ನು ಸೇರಿದಂತೆ ಕಟ್ಟಡದ ತ್ಯಾಜ್ಯ ಹಾಗೂ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.
  • 9 ನೇ ಮುಖ್ಯರಸ್ತೆಯಲ್ಲಿ 0.4 ಕಿ.ಮೀ ರಸ್ತೆಯ ಒಂದು ಭಾಗದಲ್ಲಿ ಮಾತ್ರ ರಸ್ತೆಯ ಒತ್ತುವರಿ ಕಾರ್ಯಾಚಾರಣೆಯನ್ನು ನಡೆಸಲಾಗಿದ್ದು ತಳ್ಳುವ ಗಾಡಿಗಳನ್ನು ಸೇರಿದಂತೆ ಕಟ್ಟಡದ ತ್ಯಾಜ್ಯ ಹಾಗೂ ಕೇಬಲ್‌ಗಳನ್ನು ತೆರೆವುಗೊಳಿಸಲಾಗಿದೆ.
  • ಶಿರಸಿ ವೃತ್ತದಿಂದ ಮೈಸೂರು ರಸ್ತೆಯ ರಂಗನಾಥ ಹೋಟೆಲ್ ವರೆಗೆ 0.3 ಕಿ.ಮೀ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಕಟ್ಟಡದ ತ್ಯಾಜ್ಯ ಹಾಗೂ ಕೇಬಲ್‌ಗಳನ್ನು ತೆರೆವುಗೊಳಿಸಲಾಗಿದೆ.

ಗಾಂಧಿನಗರ ವಿಭಾಗ

  • 5ನೇ ಎ ಮುಖ್ಯರಸ್ತೆ ಸುಭಾಷ್‌ನಗರದಿಂದ 0.6 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಸುಮಾರು 20 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 06 ತಳ್ಳುವ ಗಾಡಿಗಳು, ಕಟ್ಟಡದ ತಾತ್ಕಾಲಿಕ ಪ್ರೋಜೆಕ್ಷನ್ ಸೇರಿದಂತೆ ಕಟ್ಟಡದ ತ್ಯಾಜ್ಯಗಳನ್ನು ಹಾಗೂ ಕೇಬಲ್‌ಗಳನ್ನು ತೆರೆವುಗೊಳಿಸಲಾಗಿರುತ್ತದೆ
  • ಎಂಡಿ ಬ್ಲಾಕ್ ಮುಖ್ಯ ರಸ್ತೆಯ 0.550 ಕಿ.ಮೀ ರಸ್ತೆಪಾದಚಾರಿ ಮಾರ್ಗಗಳಲ್ಲಿ ಸುಮಾರು 3 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 10 ತಳ್ಳುವ ಗಾಡಿಗಳು. ಕಟ್ಟಡದ ತಾತ್ಕಾಲಿಕ ಪ್ರೋಜೆಕ್ಷನ್ ಸೇರಿದಂತೆ ಕಟ್ಟಡದ ತ್ಯಾಜ್ಯಗಳನ್ನು ಹಾಗೂ ಕೇಬಲ್‌ಗಳನ್ನು ತೆರವುಗೊಳಿಸಲಾಗಿರುತ್ತದೆ.
  • ಗುಬ್ಬಿತೊಟ್ಟದಪ್ಪ ರಸ್ತೆ ಯಿಂದ ರೈಲ್ವೆ ನಿಲ್ಧಾಣ ರಸ್ತೆ 1 ಕಿ.ಮೀ ರಸ್ತೆ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ತೆರವುಗೊಳಿಸಲಾಗಿದೆ ಸುಮಾರು 5 ಪೆಟ್ಟಿ ಅಂಗಡಿಗಳನ್ನು ಹಾಗೂ ಶಾಶ್ವತವಾಗಿ ನಿಲ್ಲಿಸಿದ್ದ 05 ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಗಿರುತ್ತದೆ.
  • ಕೆಂಪೇಗೌಡ ರಸ್ತೆ ಕಂದಾಯಭವನದಿಂದ ಕೆ.ಜಿ.ವೃತ್ತದ ವರೆಗೆ 0.75 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ 15 ತಳ್ಳುವ ಗಾಡಿಗಳು. ಡೆಬ್ರೀಸ್ ಹಾಗೂ ತ್ಯಾಜ್ಯಗಳನ್ನು ತೆರೆವುಗೊಳಿಸಲಾಗಿರುತ್ತದೆ

ಶಿವಾಜಿನಗರ ವಿಭಾಗ

  • 8 ನೇ ಮುಖ್ಯರಸ್ತೆ ವಸಂತನಗರ ಮೌಂಟ್ ಕಾರ್ಮಲ್ ಕಾಲೇಜ್ ರಸ್ತೆಯಿಂದ ಮಿಲ್ಲರ್‌ ರಸ್ತೆಯವರೆಗೆ 0.80 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ 10 ತಳ್ಳುವ ಗಾಡಿಗಳು. ಡೆಬ್ರೀಸ್ ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿರುತ್ತದೆ.
  • ಕನ್ನಿಂಗ್‌ಯ್ಯಾಮ್ ರಸ್ತೆ ಬಾಳೆಕುಂದ್ರಿ ವೃತ್ತದಿಂದ ಚಂದ್ರಿಕಾ ಹೋಟೆಲ್ ವರೆಗೆ 0.50 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಪೆಟ್ಟಿ ಅಂಗಡಿಗಳನ್ನು ಹಾಗೂ ತಳ್ಳುವ ಗಾಡಿಗಳನ್ನು ಸೇರಿದಂತೆ ಕಟ್ಟಡದ ತ್ಯಾಜ್ಯ ಹಾಗೂ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.
  • ಕಾರ್ಕ ಬನ್ ರಸ್ತೆ ಎಚ್‌ಕೆಪಿ ರಸ್ತೆಯಿಂದ ಕಾಂಟೋನ್ಮೆಂಟ್ ರಸ್ತೆಯವರೆಗೆ 0.5 ಕಿ.ಮೀ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಪೆಟ್ಟಿ ಅಂಗಡಿಗಳನ್ನು ಹಾಗೂ ತಳ್ಳುವ ಗಾಡಿಗಳನ್ನು ಸೇರಿದಂತೆ ಕಟ್ಟಡದ ತ್ಯಾಜ್ಯ ಹಾಗೂ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.

ಆಯುಕ್ತರ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ

ಈ ಕಾರ್ಯಾಚರಣೆಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರು ಹಾಗೂ ಅಪರ ಆಯುಕ್ತರು (ಅಭಿವೃದ್ಧಿ) ಅವರ ನೇತೃತ್ವದಲ್ಲಿ ಕಾಮಗಾರಿ ವಿಭಾಗದ ಎಲ್ಲಾ ಅಭಿಯಂತರರು ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿ ನಿರ್ವಹಿಸಿದರು.

ಒತ್ತುವರಿ ಮುಕ್ತ ನಗರ ನಿರ್ಮಾಣಕ್ಕೆ ಬದ್ಧತೆ

ಬೆಂಗಳೂರು ಕೇಂದ್ರ ನಗರ ಪಾಲಿಕೆ ಸಾರ್ವಜನಿಕರ ಸುರಕ್ಷತೆ, ಪಾದಚಾರಿಗಳ ಹಿತ ಹಾಗೂ ನಗರದಲ್ಲಿ ಸುಗಮ ಸಂಚಾರವನ್ನು ಖಾತ್ರಿಪಡಿಸುವ ಉದ್ದೇಶದಿಂದ ಇಂತಹ ಒತ್ತುವರಿ ತೆರವು ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ ಎಂದು ಆಯುಕ್ತರಾದ ಜಗದೀಶ್ ರವರು ತಿಳಿಸಿದ್ದಾರೆ.

More articles

Latest article

Most read