ದಾಬೋಲ್ಕರ್ ಕೊಲೆಗಾರನ ಶಿಕ್ಷೆ ಅಮಾನತ್ತು, ಏನಿದರ ಹಿಂದಿನ ಅಸಲೀಯತ್ತು

‘ಎಂಟು ವರ್ಷಗಳ ನಂತರ ಪ್ರತ್ಯಕ್ಷದರ್ಶಿಗಳು ಅಂದುರೆಯನ್ನು ಗುರುತಿಸಿರುವುದು ಹಾಗೂ ಅಪರಾಧದಲ್ಲಿ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳುವ ಕಾರ್ಯ ಅಪೂರ್ಣವಾಗಿರುವುದು’ ಶಿಕ್ಷೆ ಅಮಾನತ್ತಿಗೆ ಕಾರಣ ಎಂದು ನ್ಯಾಯಮೂರ್ತಿಗಳು ಕಾರಣ ಕೊಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳ ಸಾಕ್ಷಿ ಇಲ್ಲದೇ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತಾ? ಆಯುಧವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ವ್ಯವಸ್ಥೆ ವಿಫಲವಾಗಿತ್ತಾ? ಕೇಂದ್ರ ಸರಕಾರದ ಸಿಬಿಐ ಸರಿಯಾಗಿ ವಿಚಾರಣೆ ಮಾಡದೇ ಕೊಲೆ ಪ್ರಕರಣವನ್ನು ದುರ್ಬಲಗೊಳಿಸಿತ್ತಾ?. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ವಿವೇಚನೆ, ವಿವೇಕ, ನ್ಯಾಯಪರತೆಗಳು ಇರಲಿಲ್ಲವೇ? ಕೊಲೆ ಮಾಡಿದ್ದು ತಾನೇ ಎಂದು ಹೇಳಿಕೆ ಕೊಟ್ಟ ಅಪರಾಧಿಗೆ ಶಿಕ್ಷೆ ವಿಧಿಸಿದ್ದು ತಪ್ಪಾ? ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಈ ಮನುವಾದಿಗಳ ಆಡಳಿತದಲ್ಲಿ ನ್ಯಾಯಾಲಯಗಳೂ ಸಂಘಿ ಅಪರಾಧಿಗಳ ಶಿಕ್ಷೆಯನ್ನು ಅಮಾನತ್ತು ಮಾಡುವ ಮಹತ್ಕಾರ್ಯವನ್ನು ಮಾಡುತ್ತಿವೆ ಎನ್ನುವುದಕ್ಕೆ ಮತ್ತೊಂದು ಲೇಟೆಸ್ಟ್ ಸಾಕ್ಷಿ ಸಚಿನ್ ಅಂಧುರೆ ಬಿಡುಗಡೆ.

ಮಹಾರಾಷ್ಟ್ರದ ಅಂಧಶೃದ್ಧಾ ನಿರ್ಮೂಲನ ಸಮಿತಿಯ ಸಂಸ್ಥಾಪಕ, ವಿಚಾರವಾದಿ ನರೇಂದ್ರ ದಾಬೋಲ್ಕರ್ ರವರನ್ನು ಪುಣೆಯಲ್ಲಿ ಹಾಡು ಹಗಲೇ ನಡುರಸ್ತೆಯಲ್ಲಿ 2023 ಆಗಸ್ಟ್ 20 ರಂದು ಗುಂಡಿಕ್ಕಿ ಹತ್ಯೆ ಮಾಡಿದ ಸಚಿನ್ ಅಂಧುರೆ ಹಾಗೂ ಶರದ್ ಕಲಾಸ್ಕರ್ ಎ‌ನ್ನುವ ಇಬ್ಬರು ಮತಾಂಧ ಸನಾತನಿ ದುಷ್ಕರ್ಮಿಗಳಿಗೆ ಬಾಂಬೆ ವಿಚಾರಣಾ ನ್ಯಾಯಾಲಯವು 2024 ಮೇ 10 ರಂದು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ಈಗ ಎರಡೂ ಕಾಲು ವರ್ಷಗಳ ನಂತರ ಬಾಂಬೆ ಹೈಕೋರ್ಟ್ ಆಗಸ್ಟ್ 18 ರಂದು ಸಚಿನ್ ಅಂದುರೆಯ ಶಿಕ್ಷೆಯನ್ನೇ ಅಮಾನತ್ತಿನಲ್ಲಿರಿಸಿ ಜಾಮೀನು ಮಂಜೂರು ಮಾಡಿ ಜೈಲಿನಿಂದ ಬಿಡುಗಡೆ ಮಾಡಿದೆ. ಅದಕ್ಕೆ ನ್ಯಾಯಾಧೀಶರಾದ ಸಾರಂಗ್ ಕೋತ್ವಾಲ್ ಹಾಗೂ ರಂಜಿತ್ ಸಿನ್ಹಾ ಭೋನ್ಸಾಲೆ ಪೀಠ ಕೊಟ್ಟ ಕಾರಣವೇನೆಂದರೆ “ಸಚಿನ್ ವಿರುದ್ಧ ಸಾಕ್ಷ್ಯಗಳು ಅತ್ಯಂತ ದುರ್ಬಲವಾಗಿವೆ” ಎಂಬುದಾಗಿದೆ.  ‘ಎಂಟು ವರ್ಷಗಳ ನಂತರ ಪ್ರತ್ಯಕ್ಷದರ್ಶಿಗಳು ಅಂದುರೆಯನ್ನು ಗುರುತಿಸಿರುವುದು ಹಾಗೂ ಅಪರಾಧದಲ್ಲಿ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳುವ ಕಾರ್ಯ ಅಪೂರ್ಣವಾಗಿರುವುದು’ ಶಿಕ್ಷೆ ಅಮಾನತ್ತಿಗೆ ಕಾರಣ ಎಂದು ನ್ಯಾಯಮೂರ್ತಿಗಳು ಕಾರಣ ಕೊಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳ ಸಾಕ್ಷಿ ಇಲ್ಲದೇ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತಾ? ಆಯುಧವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ವ್ಯವಸ್ಥೆ ವಿಫಲವಾಗಿತ್ತಾ? ಕೇಂದ್ರ ಸರಕಾರದ ಸಿಬಿಐ ಸರಿಯಾಗಿ ವಿಚಾರಣೆ ಮಾಡದೇ ಕೊಲೆ ಪ್ರಕರಣವನ್ನು ದುರ್ಬಲಗೊಳಿಸಿತ್ತಾ?. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ವಿವೇಚನೆ ವಿವೇಕ ನ್ಯಾಯಪರತೆಗಳು ಇರಲಿಲ್ಲವೇ? ಕೊಲೆ ಮಾಡಿದ್ದು ತಾನೇ ಎಂದು ಹೇಳಿಕೆ ಕೊಟ್ಟ ಅಪರಾಧಿಗೆ ಶಿಕ್ಷೆ ವಿಧಿಸಿದ್ದು ತಪ್ಪಾ? ಎನ್ನುವ ಹಲವಾರು ಸಂದೇಹಗಳು ಕಾಡುತ್ತಿವೆ.

ಸಿಬಿಐ ತನಿಖೆಯಲ್ಲಿ  ವಿಚಾರವಾದಿ ದಾಬೋಲ್ಕರ್ ರವರನ್ನು ಹತ್ಯೆ ಮಾಡಿದವರು ಸನಾತನ ಸಂಸ್ಥೆ ಹಾಗೂ ಅದರ ಅಂಗಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ವೀರೇಂದ್ರಸಿಂಹ ತಾವಡೆ ಮುಖ್ಯ ಪಿತೂರಿಗಾರನಾಗಿದ್ದು ಸಚಿನ್ ಅಂದುರೆ ಹಾಗೂ ಶರದ್ ಕಲಾಸ್ಕರ್ ಗುಂಡಿಕ್ಕಿದವರು ಎಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸಾಕ್ಷ್ಯಾಧಾರ ಕೊರತೆಯಿಂದ ತಾವಡೆಯನ್ನು ಖುಲಾಸೆ ಮಾಡಿದ ಪುಣೆ ವಿಶೇಷ ನ್ಯಾಯಾಲಯವು ಅಂದುರೆ ಮತ್ತು ಕಲಾಸ್ಕರ್ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತು. ಸಂಘದ ಅಂಗಸಂಸ್ಥೆಯಾದ ಈ ಸನಾತನ ಸಂಸ್ಥೆಯು ಈ ಕೊಲೆಪಾತಕರಿಗೂ ತಮ್ಮ ಸಂಸ್ಥೆಗೂ ಸಂಬಂಧವೇ ಇಲ್ಲ ಎಂದು ವಾದಿಸಿತು. ಹೀಗಾಗಿ ಮುಖ್ಯ ಪಿತೂರಿಗಾರರು ನುಣುಚಿಕೊಂಡರು. ಕಾಲಾಳುಗಳು ಸಿಕ್ಕಿಹಾಕಿ ಕೊಂಡರು.

ಗೋವಿಂದ್ ಪನ್ಸಾರೆ, ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಗಳ ಹಿಂದೆ ಇದೇ ಸನಾತನಿ ಸಂಸ್ಥೆ ಇದೆ. ಈ ಆರೋಪವನ್ನು ಈ ಮತಾಂಧ ಸಂಸ್ಥೆ ನಿರಾಕರಿಸುತ್ತಾ ಬಂದಿದೆ. ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆಗೂ ನಮಗೂ ಸಂಬಂಧವೇ ಇಲ್ಲ ಎಂದು ಆರೆಸ್ಸೆಸ್ ಸಂಸ್ಥೆಯ ಮಾತೃ ಸಂಸ್ಥೆಯಾದ ಹಿಂದೂ ಮಹಾಸಭೆ ಹೇಳಿ ಜಾರಿಕೊಂಡಿತ್ತು. ಹೀಗಾಗಿ ಮುಖ್ಯ ಪಿತೂರಿಗಾರ ಎಂದು ಆರೋಪಿಸಲಾಗಿದ್ದ ಸಾವರ್ಕರ್ ಶಿಕ್ಷೆಯಿಂದ ಪಾರಾಗಿದ್ದರು. ಗೋಡ್ಸೆಯನ್ನು ನೇಣಿಗೇರಿಸಲಾಯ್ತು.

ಸಚಿನ್‌ ಅಂದೂರೆ , ನರೇಂದ್ರ ದಾಬೋಲ್ಕರ್

ನೋಂದಣಿ ರಹಿತ ಬೇನಾಮಿ ಸಂಸ್ಥೆ ಎಂದು ಆರೋಪಿತ ಈ ಆರೆಸ್ಸೆಸ್  ಮನುವಾದಿ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ದೇಶಾದ್ಯಂತ ಆರೆಸ್ಸೆಸ್ ಅಡಿಯಲ್ಲಿ ಸಾವಿರಾರು ಸಂಸ್ಥೆಗಳು ಸಂಘದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿವೆ. ಬಿಜೆಪಿಯು ಸಂಘದ ರಾಜಕೀಯ ಪಕ್ಷವಾಗಿದ್ದು ಈಗ ದೇಶವನ್ನು ಆಳುತ್ತಿದೆ. ವಿಶ್ವ ಹಿಂದೂ ಪರಿಷತ್ತು, ರಾಮಜನ್ಮಭೂಮಿ ನ್ಯಾಸನಂತಹ ಅನೇಕ ಸಂಘಿ ಸಂಸ್ಥೆಗಳ ಮುಖ್ಯ ಮೆದುಳು ಇರುವುದು ಆರೆಸ್ಸೆಸ್ ನಲ್ಲಿ. ಉಳಿದವುಗಳೆಲ್ಲಾ ಕೈ ಕಾಲು ಬಾಯಿಯಂತೆ ವರ್ತಿಸುತ್ತವೆ. ಅದರಲ್ಲಿ ಒಂದು ಈ ಸನಾತನ ಸಂಸ್ಥೆ. ಯಾರು ಆರೆಸ್ಸೆಸ್ ಹಾಗೂ ಹಿಂದುತ್ವವನ್ನು ಪ್ರಖರವಾಗಿ ವಿರೋಧಿಸುತ್ತಾರೊ ಅಂತವರ ಹತ್ಯೆ ಮಾಡುವ ಮೂಲಕ ಪ್ರತಿರೋಧದ ಧ್ವನಿಗಳನ್ನು ಅಡಗಿಸುವುದು ಹಾಗೂ ವಿರೋಧಿಸುವವರಲ್ಲಿ ಜೀವಭಯ ಹುಟ್ಟಿಸುವುದು ಈ ಸಂಸ್ಥೆಯ ಹಿಡನ್ ಅಜೆಂಡಾ ಆಗಿದೆ. ಹೀಗಾಗಿಯೇ ಅನೇಕ ವಿಚಾರವಾದಿಗಳ ಹತ್ಯೆ ನಡೆದುಹೋಗಿದೆ.

ಹೀಗೆ ಹತ್ಯೆ ಮಾಡಿ ಸಿಕ್ಕಾಕಿಕೊಂಡರೆ ಅವರಿಗೂ ತಮಗೂ ಸಂಬಂಧವಿಲ್ಲ ಎಂದು ನುಣುಚಿಕೊಳ್ಳುವುದು ಹಾಗೂ ಪ್ರಭಾವವನ್ನು ಬಳಸಿ ಸಾಕ್ಷಿಗಳನ್ನು ದುರ್ಬಲಗೊಳಿಸುವುದು, ಹಾಗೂ ನ್ಯಾಯಾಲಯಗಳ ಮೂಲಕ ಅಪರಾಧಿಗಳನ್ನು ಬಿಡುಗಡೆಗೊಳಿಸುವುದು ಈ ಸಂಘದ ಅಂಗಗಳ ತಂತ್ರಗಾರಿಕೆಯಾಗಿದೆ. ಮಾಲೆಗಾಂವ್ ಸ್ಪೋಟದ ರೂವಾರಿ ಪ್ರಜ್ಞಾಸಿಂಗ್ ಠಾಕೂರ್ ಗೆ ವಿಧಿಸಿದ ಶಿಕ್ಷೆಯಿಂದ ಕಾಪಾಡಿದ್ದೂ ಇದೇ ರೀತಿ. ಈಗ ಅಂದೂರೆ ಎನ್ನುವ ಕೊಲೆಪಾತಕನಿಗೆ ವಿಧಿಸಲಾದ ಶಿಕ್ಷೆಯನ್ನು ಅಮಾನತ್ತುಗೊಳಿಸಿದ್ದೂ ಇದೇ ರೀತಿ.

ಏನೇ ಮಾಡಿದರೂ ತನ್ನನ್ನು ರಕ್ಷಿಸುವ ಸಂಘ ನಮ್ಮ ಹಿಂದಿದೆ ಎನ್ನುವ ಧೈರ್ಯ ಈ ಮತಿಗೆಟ್ಟ ಮತಾಂಧರಿಗೆ ಬಂದಿದ್ದೇ ಆದರೆ ಇನ್ನೂ ಅನೇಕ ವಿಚಾರವಾದಿಗಳ ಹತ್ಯೆಯಾಗಬಹುದು. ಹಲವಾರು ಗೋಡ್ಸೆ ಸಂತತಿಗಳು ಹೆಚ್ಚಾಗಬಹುದು.

ಪ್ರಶ್ನಿಸುವ ವಿಚಾರವಾದಿಗಳನ್ನು ಪ್ರಧಾನಿ ಮೋದಿಯವರು  ಕೆಂಪು ಕೋಟೆಯ ಮೇಲೆ ನಿಂತು ಬೌದ್ಧಿಕ ನಕ್ಸಲರು (ದಿಮಾಗಿ ನಕ್ಸಲ್) ಎಂದು ಭಾಷಣ ಮಾಡಿದ್ದಾರೆ. ಇದರಿಂದ ಪ್ರಚೋದನೆಗೊಂಡ ಸಂಘಿ ಅಂಧಭಕ್ತರು ವಿಚಾರವಾದಿಗಳ ಮೇಲೆ ಹಲ್ಲೆ ಹತ್ಯೆ ಮಾಡುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಈಗಾಗಲೇ ಸಂಘದ ಅಂಗ ಸಂಸ್ಥೆಗಳು ತ್ರಿಶೂಲ ದೀಕ್ಷೆ ಕೊಡುತ್ತಿವೆ. ಬಂದೂಕಿನ ತರಬೇತಿ ಕೊಟ್ಟು ಬಂದೂಕು ದೀಕ್ಷೆಯನ್ನೂ ಕೊಟ್ಟಿವೆ. ಸಂಘದ ಶಾಖೆಯಲ್ಲಿ ಮಕ್ಕಳು ಹಾಗೂ ಯುವಕರ ಕೈಗೆ ದೊಣ್ಣೆ ಕೊಟ್ಟು ಅವರ ಮೆದುಳಲ್ಲಿ ಹಿಂದೂ ಹೆಸರಲ್ಲಿ ಮತಾಂಧತೆಯನ್ನು ಬಿತ್ತುತ್ತಿವೆ. ಹೀಗೇ ಮುಂದುವರೆದರೆ ಹಿಂದೂ ರಾಷ್ಟ್ರದ ಹೆಸರಲ್ಲಿ ಬ್ರಾಹ್ಮಣವಾದಿ ತಾಲಿಬಾನಿ ಸಂತತಿಯೊಂದು ಈ ದೇಶವನ್ನು ಆಳುತ್ತದೆ. ಅದಕ್ಕಾಗಿಯೇ ಮತಾಂಧ ಯುವಜನರನ್ನು ಸಿದ್ಧಗೊಳಿಸುತ್ತಿದೆ. ಸಂವಿಧಾನವೊಂದೇ ಈ ಸನಾತನಿಗಳಿಗೆ ಅಡ್ಡವಾಗಿದೆ. ಈಗ ಅದನ್ನೂ ದುರುಪಯೋಗ ಪಡಿಸಿಕೊಳ್ಳುವ, ದುರ್ಬಲಗೊಳಿಸುವ ಹಾಗೂ ಸರ್ವಾಧಿಕಾರದತ್ತ ಈ ದೇಶವನ್ನು ತೆಗೆದುಕೊಂಡು ಹೋಗುವ ಎಲ್ಲಾ ವಿಧದ ಪ್ರಯತ್ನಗಳು ನಡೆಯುತ್ತಿವೆ.

ಈಗಲಾದರೂ ಎಲ್ಲಾ ಪ್ರಜ್ಞಾವಂತರು ಎಚ್ಚರಗೊಳ್ಳಬೇಕಿದೆ. ಸಂಘದ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಬೇಕಿದೆ. ಸಂವಿಧಾನ ವಿರೋಧಿಗಳನ್ನು ಪಟ್ಟದಿಂದ ಕೆಳಗಿಳಿಸಬೇಕಿದೆ. ಹೇಗಾದರೂ ಮಾಡಿ ಬಹುತ್ವ ಭಾರತದ ಐಕ್ಯತೆ ಹಾಗೂ ಸಂವಿಧಾನದ ಸಮಗ್ರತೆಯನ್ನು ಕಾಪಾಡಿಕೊಳ್ಳಲೇಬೇಕಿದೆ.

ಶಶಿಕಾಂತ ಯಡಹಳ್ಳಿ

ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ- ಸಂಪಾದಕೀಯ |ಕಾಡುಪ್ರಾಣಿಗಳನ್ನು ಕಾಪಾಡಬೇಕಾದ ಬಂದೂಕು ಮನುಷ್ಯರನ್ನು ಕೊಲ್ಲಬಹುದೇ?

More articles

Latest article

Most read