10 ತಿಂಗಳಲ್ಲಿ 14 ಬಾರಿ ಚುನಾವಣಾ ಆಯೋಗದ ಕ್ರಮಗಳಿಗೆ ಇಬ್ಬರು ಆಯುಕ್ತರ ಆಕ್ಷೇಪ

ನವದೆಹಲಿ ಸೆ 23: ಭಾರತದ ಚುನಾವಣಾ ಆಯೋಗದ ಒಳಗೇ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ 10 ತಿಂಗಳಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ ಕೈಗೊಂಡ ಹಲವು ಕ್ರಮಗಳಿಗೆ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ದಾಖಲೆ ಸಮೇತ ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಚುನಾವಣಾ ಆಯೋಗದ ಮೂವರು ಸದಸ್ಯರ ಪೈಕಿ ಇಬ್ಬರು ಆಯುಕ್ತರು ಈ ರೀತಿಯಾಗಿ ನಿರಂತರವಾಗಿ ಆಕ್ಷೇಪ ದಾಖಲಿಸಿರುವುದು ಚುನಾವಣಾ ಪ್ರಕ್ರಿಯೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ತನಿಖೆಯ ಪ್ರಕಾರ, ಮತದಾರರ ಪಟ್ಟಿಗೆ ಹೊಸ ಹೆಸರುಗಳನ್ನು ಸೇರಿಸುವುದು, ಮತದಾರರ ಹೆಸರುಗಳನ್ನು ಅಳಿಸುವುದು, ಅಳಿಸಲಾದ ಹೆಸರುಗಳನ್ನು ಮರುಸ್ಥಾಪಿಸುವುದು, ಎಸ್‌ಐಆರ್‌ (Special Intensive Revision) ಪ್ರಕ್ರಿಯೆಗೆ ಸಂಬಂಧಿಸಿದ ಮೇಲ್ಮನವಿಗಳು ಹಾಗೂ ಮತದಾರರ ಪಟ್ಟಿಯ ಸಂಪೂರ್ಣ ಮಾಹಿತಿ ಮತ್ತು ಅದರ ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಇಬ್ಬರು ಆಯುಕ್ತರು ಆಕ್ಷೇಪ ದಾಖಲಿಸಿದ್ದಾರೆ.

ಕೆಲವು ನಿರ್ಧಾರಗಳನ್ನು ತಮ್ಮ ಗಮನಕ್ಕೆ ಅಥವಾ ಒಪ್ಪಿಗೆಗೆ ತರದೆ ಕೈಗೊಳ್ಳಲಾಗಿದೆ ಎಂಬುದು ಇಬ್ಬರು ಆಯುಕ್ತರ ಪ್ರಮುಖ ಆಕ್ಷೇಪವಾಗಿದೆ. ಒಂದು ಪ್ರಕರಣದಲ್ಲಿ, ಚುನಾವಣಾ ಆಯೋಗದ ಕ್ರಮವನ್ನು ‘ಅಧಿಕಾರವಿಲ್ಲದ ಮತ್ತು ಕಾನೂನುಬಾಹಿರ’ ಎಂದು ಸಂಧು ಅವರು ತಮ್ಮ ದಾಖಲೆಯಲ್ಲಿ ಪ್ರಶ್ನಿಸಿರುವುದಾಗಿ ವರದಿ ಹೇಳಿದೆ.

ಹೊಸ ಮತದಾರರ ಅರ್ಜಿಯಲ್ಲೂ ಆಕ್ಷೇಪ

ಹೊಸ ಮತದಾರರು ನೋಂದಣಿಗಾಗಿ ಸಲ್ಲಿಸುವ ಫಾರ್ಮ್–6ರಲ್ಲಿ ಹೊಸ ಪ್ರಶ್ನೆಯೊಂದನ್ನು ಸೇರಿಸಿರುವುದಕ್ಕೂ ಇಬ್ಬರು ಆಯುಕ್ತರು ಆಕ್ಷೇಪಿಸಿದ್ದರು. ಈ ಬದಲಾವಣೆಯನ್ನು ಮಾಡಲು ಚುನಾವಣಾ ನೋಂದಣಿ ನಿಯಮಗಳಿಗೆ ತಿದ್ದುಪಡಿ ಅಗತ್ಯವಿದೆ ಎಂದು ಮೇ ತಿಂಗಳಲ್ಲೇ ವಿವೇಕ್ ಜೋಶಿ ಮತ್ತು ಸುಖಬೀರ್ ಸಿಂಗ್ ಸಂಧು ದಾಖಲಿಸಿದ್ದರು.

ಆದರೆ ನಂತರವೂ ಈ ಬದಲಾವಣೆ ಮುಂದುವರಿದಿದ್ದು, ಆಗಸ್ಟ್ 13ರಂದು ಸಂಧು ಅವರು ಇದನ್ನು ‘ಅಧಿಕಾರವಿಲ್ಲದ ಮತ್ತು ಕಾನೂನುಬಾಹಿರ’ ಕ್ರಮ ಎಂದು ದಾಖಲಿಸಿ, ಅದನ್ನು ತಕ್ಷಣ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದರು ಎಂದು ವರದಿ ತಿಳಿಸಿದೆ.

ಮತದಾರರ ಪಟ್ಟಿಯ ನಿಯಂತ್ರಣ ಕೇಂದ್ರೀಕರಣದ ಬಗ್ಗೆಯೂ ಪ್ರಶ್ನೆ

ಚುನಾವಣಾ ಪಟ್ಟಿಯ ನಿರ್ವಹಣೆಯಲ್ಲಿ ಬಳಸಲಾಗುತ್ತಿರುವ ಸಾಫ್ಟ್‌ವೇರ್ ವ್ಯವಸ್ಥೆಯಲ್ಲಿನ ಬದಲಾವಣೆಗಳ ಬಗ್ಗೆಯೂ ಇಬ್ಬರು ಆಯುಕ್ತರು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಮತದಾರರ ಪಟ್ಟಿಯನ್ನು ನಿರ್ವಹಿಸುವ ಅಧಿಕಾರಿಗಳಿಗೆ ಅಗತ್ಯವಾದ ಸಂಪೂರ್ಣ ಪ್ರವೇಶ ಲಭ್ಯವಿಲ್ಲದಿರುವ ಬಗ್ಗೆ ಅವರು ಪ್ರಶ್ನಿಸಿದ್ದಾರೆ.

ವಿವೇಕ್ ಜೋಶಿ ಅವರು ಮತದಾರರ ಪಟ್ಟಿಯ ದತ್ತಾಂಶ ಕ್ರಮೇಣ ದೆಹಲಿಯಲ್ಲಿ ಕೇಂದ್ರೀಕೃತವಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿ, ಕಾನೂನಿನ ಪ್ರಕಾರ ಅಧಿಕಾರ ಹೊಂದಿರುವ ಸ್ಥಳೀಯ ಅಧಿಕಾರಿಗಳ ಹೊರತಾಗಿ ಬೇರೆ ಯಾರಿಗೂ ಮತದಾರರ ದತ್ತಾಂಶದಲ್ಲಿ ಬದಲಾವಣೆ ಮಾಡಲು ಅವಕಾಶ ಇರಬಾರದು ಎಂದು ಪರಿಶೀಲನೆಗೆ ಒತ್ತಾಯಿಸಿದ್ದರು.

ನಾಲ್ಕು ಆಕ್ಷೇಪಗಳು ಒಂದೇ ದಿನ

ಇಬ್ಬರು ಆಯುಕ್ತರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪ ದಾಖಲಿಸಿದ್ದು, ಅದರಲ್ಲಿ ನಾಲ್ಕು ಆಕ್ಷೇಪಗಳು ಒಂದೇ ದಿನ ದಾಖಲಾಗಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ. ಈ ಎಲ್ಲ ಬೆಳವಣಿಗೆಗಳು ಸುಮಾರು 13 ಕೋಟಿ ಮತದಾರರ ಹೆಸರನ್ನು ಒಳಗೊಂಡ ಎಸ್‌ಐಆರ್ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ನಡೆದಿವೆ.

ಮತದಾರರ ಪಟ್ಟಿಯಲ್ಲಿನ ಹೆಸರು ಸೇರ್ಪಡೆ, ಅಳಿಸುವಿಕೆ ಮತ್ತು ಮರುಸ್ಥಾಪನೆಯಂತಹ ಚುನಾವಣೆಯ ಮೂಲಭೂತ ಪ್ರಕ್ರಿಯೆಗಳ ಕುರಿತು ಆಯೋಗದೊಳಗೇ ಇಬ್ಬರು ಸದಸ್ಯರು ನಿರಂತರವಾಗಿ ಆಕ್ಷೇಪ ದಾಖಲಿಸಿರುವುದು ಈ ಬೆಳವಣಿಗೆಯ ಗಂಭೀರತೆಯನ್ನು ಹೆಚ್ಚಿಸಿದೆ.

ಸೆಪ್ಟೆಂಬರ್ 9ರಂದು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರು ನಾಲ್ಕು ತಿಂಗಳ ಬಳಿಕ ಮೊದಲ ಬಾರಿಗೆ ಪೂರ್ಣ ಸಭೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

More articles

Latest article

Most read