ಬೆಂಗಳೂರಿನಲ್ಲಿ ದಾಳಿ ಮಾಡಿದ್ದ ಕಾಡಾನೆ ಸೆರೆ : ಬನ್ನೇರುಘಟ್ಟ ಅರಣ್ಯಕ್ಕೆ ರವಾನೆ

ಬೆಂಗಳೂರು, ಸೆಪ್ಟೆಂಬರ್ 29 : ರಾಜರಾಜೇಶ್ವರಿ ಆಸ್ಪತ್ರೆ ಹಿಂಭಾಗದ ಅಂಚೆಪಾಳ್ಯದಲ್ಲಿ ನಾಗರಾಜ್ (60) ಎಂಬವರ ಮೇಲೆ ದಾಳಿ ನಡೆಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಕಾಡಿಗೆ ಕಳುಹಿಸಿದ್ದಾರೆ.

ಡಿಸಿಎಫ್ ಚಕ್ರಪಾಣಿ ಅವರ ನೇತೃತ್ವದಲ್ಲಿ  ನಿನ್ನೆ ರಾತ್ರಿ ಇಡೀ ನಡೆದ ಕಾರ್ಯಾಚರಣೆಯ ಮೂಲಕ ಬಿ.ಎಂ. ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಈ ಕಾಡಾನೆಯನ್ನು ಸುರಕ್ಷಿತವಾಗಿ ಎಲಿಫೆಂಟ್ ಕಾರಿಡಾರ್ ಮೂಲಕ ಕಾಡಿಗೆ ಬಿಡಲಾಯಿತು. ಕಾರ್ಯಾಚರಣೆಗೆ ಎರಡು ಥರ್ಮಲ್ ಡ್ರೋನ್​ಗಳನ್ನು ಬಳಸಿಕೊಳ್ಳಲಾಗಿತ್ತು ಮತ್ತು ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ  ತೊಡಗಿಸಿಕೊಂಡಿದ್ದರು. 

ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್‌ ಅವರನ್ನು ಆಸ್ಪತ್ರೆಗೆ ದಾಖಲಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಸರ್ಕಾರ ಅವರ ಕುಟುಂಬದವರಿಗೆ 20 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದೆ. ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಮಲ್ದಾರ್ ಅವೆನ್ಯೂನಲ್ಲಿ ದುರ್ಘಟನೆ ಸಂಭವಿಸಿತ್ತು..

ಬನ್ನೇರು ಘಟ್ಟ ಅಕ್ಕಪಕ್ಕದಲ್ಲಿ ಕಾಡಾನೆ ಉಪಟಳ ಜೋರಾಗಿದ್ದು. ಈ ಭಾಗದಲ್ಲೂ ಅಲ್ಲಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಆನೆ ಸಂಚಾರ ಆತಂಕವಿತ್ತು. ಸಮೀಪದಲ್ಲೇ ಬಿಎಂ ಕಾವಲ್ ಅರಣ್ಯ ಪ್ರದೇಶವೂ ಇರುವುದರಿಂದ ಆನೆ ಸಂಚಾರದ ಅನುಮಾನ ಇತ್ತು. ಆರು ವರ್ಷದಿಂದ ಯಾರ ಮೇಲೂ ದಾಳಿ ಮಾಡಿದ ಪ್ರಕರಣ ವರದಿಯಾಗಿರಲಿಲ್ಲ ಎನ್ನಲಾಗಿದೆ. 

More articles

Latest article

Most read