ಜಂತರ್ ಮಂತರ್, ಛೂ.. ಮಂತರ್ !!

ತನಕ ನಾನ್ ಬಯಾಲಾಜಿಕಲ್, ಮಹಾ ಮಾನವತೆಯ ಪ್ರಭಾ ವಲಯವನ್ನು ಕಟ್ಟಿಕೊಂಡಿದ್ದ ಮಹಾ ಮಾನವ ಮತ್ತವರ ಪಡೆಗೆ ತಮ್ಮದೇ ರೀತಿಯಲ್ಲಿ ಉತ್ತರ ನೀಡಲು ತಮಾಷೆಯ ಘೋಷಣೆಗಳು, ರೀಲ್ಸ್ ಗಳು, ಕಾರ್ಟೂನ್ ಗಳೆಲ್ಲ ಜೆನ್‌ ಝೀ ಗಳೆಂಬ ಎಳೆ ತಲೆಗಳಿಂದ ಹೊರ ಬಂದವು. ಆ ಮೂಲಕ  ದೇಶವನ್ನು ಆವರಿಸಿದ್ದ ಒಂದು ಪೊಳ್ಳು ಇಮೇಜಿನ ಪರದೆಯನ್ನೇ ಕಿತ್ತೆಸೆಯಲಾಯಿತು ಶಂಕರ್‌ ಸೂರ್ನಳ್ಳಿ, ಲೇಖಕರು.

12 ವರ್ಷಗಳ ಬಳಿಕ ದೇಶ ಇದೀಗ ನೈಜ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಜನರೊಳಗಿದ್ದ ಸುಪ್ತ ಭಯವೂ  ಕೂಡ ಇದೀಗ ಇಲ್ಲವಾಗಿದೆ -ಸೌರಭ ದಾಸ್, ಸಿಜೆಪಿ ಮುಖಂಡ

‘ಬಿತ್ತಿದಂತೆ ಬೆಳೆʼ ಕನ್ನಡದ ಒಂದು ನಾಣ್ಣುಡಿ. ನಾವು ಏನನ್ನು ಬಿತ್ತಿರುತ್ತೇವೋ ಅದನ್ನೇ ಪಡೆದುಕೊಳ್ಳಬೇಕೆಂಬುದು ಪ್ರಕೃತಿಯ ನಿಯಮ. ನೀವು ವಿಷವನ್ನು ಬಿತ್ತಿ ಅಮೃತದ  ನಿರೀಕ್ಷೆಯಲ್ಲಿದ್ದರೆ ಅದು ಆಗುಹೋಗದ ಸಂಗತಿ ಎನಿಸೀತು. ಯಾವುದೊ ಒಂದು ಅಜೆಂಡಾದ ಕಾರ್ಯ ಸಾಧನೆಗಾಗಿ ಜನರ ಜನರ ನಡುವೆ ದ್ವೇಷ ಹರಡಿದರೆ. ಅದೇ ರೀತಿ,  ಈ ಕಾರ್ಯಸಾಧನೆಯ ಹುಮ್ಮಸ್ಸಿನಲ್ಲಿ ಅಗತ್ಯವಿರಬೇಕಾದ ಅಭಿವೃದ್ಧಿ ಕಾರ್ಯ ಇತ್ಯಾದಿಗಳನ್ನು ಮರೆತು ನೆವನಗಳಲ್ಲೇ ಕಾಲಕಳೆಯ ಹೋದರೆ ಮುಂದೆ ಅದರ ಪರಿಣಾಮವನ್ನು ಎದುರಿಸಲೇ ಬೇಕಾಗಿ  ಬರುವುದು ಅನಿವಾರ್ಯ

ಕೆಲವೇ ಕೆಲವು ದಿವಸಗಳ ಹಿಂದೊಂದು ಕಾಲವಿತ್ತು. ಆ ಮಹಾ ಮಾನವಜೀಯ  ಕುರಿತಂತೆ ವಿಮರ್ಶಿಸಿ ಮಾತನಾಡುವುದೆಂದರೆ  ಅದು ಬಹುತೇಕ ಅಸಾಧ್ಯದ ಸಂಗತಿಯಾಗಿತ್ತು. ಜಾಲತಾಣಗಳಲ್ಲಿ ಅವರ ಹಾಗು ಅವರ ಕಾರ್ಯಗಳ ಕುರಿತಂತೆ ಪ್ರಶ್ನಿಸ ಹೋದರೆ ಅದಕ್ಕಾಗೇ ಸಂಬಳ ಕೊಟ್ಟು ಸಾಕಿಕೊಂಡಿರುವ ಐಟಿ ಜೀವಿಗಳು ಆ ಮಗ.. ಈ ಮಗ.. ಎಂದು ಆಕ್ರಮಣಕ್ಕಿಳಿಯುವಂತಹ ಸ್ಥಿತಿಯಿತ್ತು. ಬರಿದೆ  ದೇಶದ್ರೋಹಿ, ನಕ್ಸಲ್ (ಈಗ ಹೊಚ್ಚ ಹೊಸತು ದಿಮಾಗಿ ನಕ್ಸಲ್) ಎನ್ನಿಸಿಕೊಳ್ಳಬೇಕಿತ್ತು

ಈ ಟ್ರೈನ್ಡ್ ಜೀವಿಗಳು ಉದ್ದೇಶಪೂರ್ವಕವಾಗಿ ತೀರಾ ಕೆಟ್ಟ ಶಬ್ದಗಳಲ್ಲಿ ತಂದೆ ತಾಯಿಗಳನ್ನೂ ಎಳೆತಂದು ಮಾಡುವ ಅಸಹ್ಯ ಬೈಗುಳಗಳನ್ನು ಕೇಳಿಸಿಕೊಳ್ಳಬೇಕಾದ ಕಾರಣ ಇಂತಹ ದುಸ್ಸಾಹಸಕ್ಕೆ ಸಾಮಾನ್ಯವಾಗಿ ಯಾರೂ ಹೋಗರು. ಜಾಲತಾಣಗಳನ್ನು ಹೊರತು ಪಡಿಸಿ ಟಿವಿ ಮಾಧ್ಯಮಗಳಂತೂ ಯಾವತ್ತೋ ಮಾರಲ್ಪಟ್ಟು ಧಣಿಗಳ ಹಿಡಿತದಲ್ಲಿರುವ ಕಾರಣ ಮಹಾ ಮಾನವಜೀಯ  ಭಜನಾ ಸೇವೆಯನ್ನು ಬಿಟ್ಟು ವಿಮರ್ಶಾತ್ಮಕ ವಿಚಾರಗಳನ್ನು ಯಾವತ್ತೋ ಮರೆತಿವೆ. ಇಂತಹ ಏಕಮುಖಿ ವಾತಾವರಣ ಮಹಾ ಮಾನವಜೀಯ ದೇವತಾ ಇಮೇಜನ್ನು ಜನ ಸಾಮಾನ್ಯರಲ್ಲಿ ಮತ್ತಷ್ಟು ಗಟ್ಟಿಗೊಳಿಸಲು ಮತ್ತಷ್ಟು ಕಸುವು ಕೊಟ್ಟ ಕಾರಣ ದೇಶದಲ್ಲಿ ಮಹಾ ಮಾನವಜೀಯ ಕುರಿತಂತೆ ತುಟಿ ಬಿಚ್ಚುವುದು ಸುಲಭಸಾಧ್ಯದ ಸಂಗತಿಯಾಗಿದ್ದಿರಲಿಲ್ಲ

ಆದರೆ ದೆಹಲಿಯ ಐತಿಹಾಸಿಕ ಜಂತರ್ ಮಂತರ್ ನಲ್ಲಿ ಮೊನ್ನೆ ಜು. 20 ರಂದು ಹದಿನೈದಿಪ್ಪತ್ತು ವರ್ಷಗಳವರೆಗೆ ಕಟ್ಟಿ ಪೋಷಿಸಿದ್ದ (ಅಧಿಕಾರಕ್ಕೇರುವ ಮುನ್ನವೇ ವ್ಯವಸ್ಥಿತವಾಗಿ ಇಮೇಜ್ ಬಿಲ್ಡಪ್ ಕಾರ್ಯ ನಡೆದಿತ್ತು. 2014 ರ ಚುನಾವಣೆಗೂ ಮುನ್ನವೇ  ಈ ಮಹಾ ಮಾನವರ ಹುಲಿ ಸಿಂಹಗಳ ಹಿನ್ನೆಲೆ ಇರುವ  ದೊಡ್ಡ ದೊಡ್ಡ ಫ್ಲೆಕ್ಸ್ ಗಳು ಬೀದಿ ಬೀದಿಗಳಲ್ಲಿ ರಾರಾಜಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.  ಅಂದರೆ ದೇಶವನ್ನು ಕಾಪಾಡಿ ಅದನ್ನು ಜಗತ್ತಿನೆತ್ತರಕ್ಕೆ ಕೊಂಡೊಯ್ಯೋ ನಾಯಕನೆಂಬ  ಚಿತ್ರಣವನ್ನು ಜನರ ಮನಕ್ಕೆ ತಲುಪಿಸುವ ವ್ಯವಸ್ಥೆಯಿದು.  ಅಲ್ಲದೆ 56 ಇಂಚಿನ ಈ ತಂತ್ರ ಯಶಸ್ವಿಯೂ ಆಗಿತ್ತು) ಇಮೇಜ್ ನುಚ್ಚು ನೂರಾಗಿಸುವ ಐತಿಹಾಸಿಕ ಘಟನೆ ನಡೆದಿತ್ತು

ಅಂದು ಜಂತರ್ ಮಂತರ್ ನಲ್ಲಿ ಕೆಟ್ಟ ಕೊಳಕು ಪದಗಳ ನಿಂದನೆ, ಐಟಿ ರೈಡ್ ಗಳು, ಬೆದರಿಕೆ  ಇತ್ಯಾದಿ ಯಾವ ಭಯಗಳ ಹಂಗಿರದ ಯುವ ಸಮುದಾಯ  ಹಲವಾರು ಕಾರಣಗಳಿಂದ ಈ ತನಕ ಯಾರಿಗೂ ಸಾಧ್ಯವಾಗದ  ಭ್ರಮೆಯ ಗುಳ್ಳೆಯೊಂದನ್ನು ಒಡೆದು ನುಚ್ಚುನೂರಾಗಿಸಿ ಅದರ ಟೊಳ್ಳುತನವನ್ನು ಜಗಜಾಹೀರಾಗಿಸಿತ್ತು. ಹಿಂದೆ ಇದೇ ಸರಕಾರದ ವಿರುದ್ಧ ರೈತ ಸಮುದಾಯ ವ್ಯವಸ್ಥಿತವಾಗಿ ಹಲವು ದಿನಗಳ ಕಾಲ ಬೃಹತ್ ಪ್ರತಿಭಟನೆ ನಡೆಸಿತ್ತು. ಮಾರ್ಗ ಬಂದ್, ಮಾರ್ಗಗಳಲ್ಲಿ  ಸಾಲು ಸಾಲು ಮೊಳೆಗಳ ನಾಟಿಯೇ  ಮೊದಲಾದ  ಹತ್ತಿಕ್ಕುವಿಕೆಗಳ ಮೂಲಕ ಇಂತಹ ವಿರೋಧ ಪ್ರತಿಭಟನೆಗಳಿಗೆಲ್ಲ ಸೊಪ್ಪು ಹಾಕದ ಸರಕಾರ ಅಂದು ಗೆದ್ದು ಬೀಗಿತ್ತು. ಅಂತಹ ಗೆಲುವಿನೆದುರು ಯಃಕಶ್ಚಿತ್ ಜೆನ್ ಝೀ ಗಳೆಂಬ ಎಳೆಯರ ಮಟ್ಟ ಹಾಕುವುದು ಕಷ್ಟವೇನಲ್ಲ ಎಂಬ ಹುಂಬತನಕ್ಕೆ ಪ್ರತಿಯಾಗಿ ಅವರನ್ನು ಬೆದರಿಸಲು ಪೆಲೆಟ್ ಗನ್ ಗಳ  ಬಳಕೆ, ಮೊಳೆಯುಕ್ತ ಲಾಠಿಗಳು, ಟಿಯರ್ ಗ್ಯಾಸ್,  ಊಟ ವ್ಯವಸ್ಥೆ ಮಾಡಿದವನಿಗೆ ಬೆದರಿಕೆ, ಇಂಟರ್ ನೆಟ್ ಕಡಿತ,  ಅಲ್ಲದೇ ಅವರು ಹಾದಿ ತಪ್ಪಿದವರು, ಪಾಕಿಸ್ಥಾನದವರು, ಕಾಂಗ್ರೆಸ್ ನವರು,  ಭಯೋತ್ಪಾದಕರು, ಇತ್ಯಾದಿಯಾಗಿ ಜೆನ್ ಝೀ ಹೋರಾಟಗಾರರ ಕುರಿತಂತೆ ವ್ಯವಸ್ಥಿತ ಅಪಪ್ರಚಾರವನ್ನೂ ನಡೆಸಲಾಯಿತು.

ಆದರೆ ಇವ್ಯಾವುಗಳಿಗೂ ತಲೆ ಕೆಡಿಸಿಕೊಳ್ಳದ ಜೆನ್ ಝೀ ಗಳು  ಇದರಿಂದ ಮತ್ತಷ್ಟು ಪ್ರೇರಿತಗೊಂಡು ತಮ್ಮದೇ ರೀತಿಯಲ್ಲಿ ಹೋರಾಟವನ್ನು ರೂಪಿಸಿಕೊಂಡರು. ಈ ತನಕ ನಾನ್ ಬಯಾಲಾಜಿಕಲ್, ಮಹಾ ಮಾನವತೆಯ  ಪ್ರಭಾ ವಲಯವನ್ನು ಕಟ್ಟಿಕೊಂಡಿದ್ದ ಮಹಾ ಮಾನವ ಮತ್ತವರ ಪಡೆಗೆ ತಮ್ಮದೇ ರೀತಿಯಲ್ಲಿ ಉತ್ತರ ನೀಡಲು ತಮಾಷೆಯ ಘೋಷಣೆಗಳು, ರೀಲ್ಸ್ ಗಳು, ಕಾರ್ಟೂನ್ ಗಳೆಲ್ಲ  ಈ ಎಳೆ  ತಲೆಗಳಿಂದ ಹೊರ ಬಂದವು. ಆ ಮೂಲಕ  ದೇಶವನ್ನು ಆವರಿಸಿದ್ದ ಒಂದು ಪೊಳ್ಳು ಇಮೇಜಿನ ಪರದೆಯನ್ನೇ ಕಿತ್ತೆಸೆಯಲಾಯಿತು. ಇದಕ್ಕೆ ಬೆದರಿದ ಮಹಾ ಮಾನವರು ಯಾವುದೇ ಮೇಕಪ್, ಟಚಪ್  ಗಳಿಲ್ಲದೆ ರಾತ್ರೋ ರಾತ್ರಿ ಇನ್ಸ್ಟ್ರಾಗ್ರಾಮ್ ನಲ್ಲಿ ಬಂದು ಮಾತನಾಡುವಂತಾಯಿತು.  ಆದರೆ ಕಾಲ ಮೀರಿತ್ತು. ಏನು ನಡೆದಿರಬೇಕಿತ್ತೋ ಅದು ನಡೆದಿತ್ತು. ಅಹಂ, ಹುಂಬತನಕ್ಕೆಲ್ಲ ಎಳೆ ಸಮುದಾಯ ಮದ್ದೆರೆದು  ಆಗಿತ್ತು.

ಗೀತೆಯಲ್ಲೊಂದು ಮಾತಿದೆ ‘ಆಗುವುದೆಲ್ಲ ಒಳ್ಳೆಯದಕ್ಕೆ ‘ ಎಂದು. ಜವಾಬ್ದಾರಿಯುತ ಸ್ಥಾನದಲ್ಲಿರುವವರೊಬ್ಬರ  ಬಾಯಿಯಿಂದ ಹೊರಬಿದ್ದ ಯಃಕಶ್ಚಿತ್ ಜಿರಳೆಯೊಂದು ಇಷ್ಟೆಲ್ಲಾ ಕರಾಮತ್ತಿಗೆ  ಕಾರಣವಾಯ್ತೆಂದರೆ  ಜಿರಳೆ ದೇವನಿಗೊಂದು ಸಲಾಂ ಹೇಳದಿರಲಾದೀತೇ …!?

ಶಂಕರ್ ಸೂರ್ನಳ್ಳಿ

ಲೇಖಕರು

ಇದನ್ನೂ ಓದಿ- ಸಂಪಾದಕೀಯ |ಕಾಡುಪ್ರಾಣಿಗಳನ್ನು ಕಾಪಾಡಬೇಕಾದ ಬಂದೂಕು ಮನುಷ್ಯರನ್ನು ಕೊಲ್ಲಬಹುದೇ?

More articles

Latest article

Most read