ಜ್ಞಾನದ  ಹಸಿವನ್ನು ನೀಗಿಸಿದ ಅಶೋಕ

“ಭಾರತದ ಇಡೀ ಭೂಮಿಯು ಪ್ರಸಿದ್ಧ ಪುರುಷರ ಸಮಾಧಿಯಾಗಿದೆ. ಅಶೋಕನನ್ನು ಅವನ ಸ್ವಂತ ಭೂಮಿಯಲ್ಲಿ ಸ್ತಂಭಗಳು ಮತ್ತು ಶಾಸನಗಳಿಂದ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಕಲ್ಲಿನ ಮೇಲಲ್ಲದೆ, ಜನರ ಹೃದಯ ಮತ್ತು ಮನಸ್ಸಿನಲ್ಲಿ ಕೆತ್ತಿದ ಸ್ಮಾರಕಗಳ ಮೂಲಕ ಗೌರವಿಸಲಾಗುತ್ತದೆ” ಎಂದು ಅಶೋಕನ ಕುರಿತಂತೆ ʼಥುಸಿಡೈಡ್ಸ್, ಪೆಲೋಪೊನೇಸಿಯನ್ ಯುದ್ಧದ ಇತಿಹಾಸʼ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾನೆ.

“ಪ್ರಾಚೀನ ಬ್ರಾಹ್ಮಣ ಪುರಾಣಗಳಲ್ಲಿ ಅಶೋಕರಾಜನು, ‘ದುಃಖವಿಲ್ಲದ ರಾಜ’ ಎಂದು ಕರೆಸಿಕೊಂಡ ಚಕ್ರವರ್ತಿಯಾಗಿದ್ದಾನೆ. ಸುಮಾರು 2250 ವರ್ಷಗಳ ಹಿಂದೆ ಅಖಂಡ ಭಾರತವನ್ನು ಆಳಿದವನು ಅವನು. ಸುಮಾರು ನಲವತ್ತು ವರ್ಷಗಳ ಆಡಳಿತಾವಧಿಯಲ್ಲಿ ಅಶೋಕನು ಭಾರತವೆಂಬ ಉಪಖಂಡವನ್ನು ಒಂದೇ ಸರ್ಕಾರದ ಅಡಿಯಲ್ಲಿ ಏಕೀಕರಿಸಿದವನು, ಒಂದು ಸಣ್ಣ ಧಾರ್ಮಿಕ ಪಂಥವನ್ನು ವಿಶ್ವದ ಧರ್ಮವಾಗಿ ಪರಿವರ್ತಿಸಿದವನು ಮತ್ತು ನೈತಿಕ ಪರಿಕಲ್ಪನೆಗಳನ್ನು ಪರಿಚಯಿಸಿದವನು. ಅದರ ಪ್ರಭಾವವನ್ನು ಇಂದಿಗೂ ಏಷ್ಯಾ ಖಂಡದ ಮೇಲೆ ನಾವು ಕಾಣಬಹುದು ಮತ್ತು ಅನುಭವಿಸಬಹುದು. ಅಶೋಕನು ಭಾರತದ ಸ್ಥಾಪಕ ಪಿತಾಮಹ ಎಂದು ಹೇಳಬಹುದು, ಭಾರತವನ್ನು ಒಂದೇ ರಾಷ್ಟ್ರ ರಾಜ್ಯವಾಗಿ ರೂಪಿಸಿದ ಮೊದಲ ಆಡಳಿತಗಾರ.

ಅಶೋಕ ಚಕ್ರವರ್ತಿಯು ಅಹಿಂಸೆಯಿಂದ, ನೈತಿಕ ಬಲದಿಂದ ಮಾತ್ರ ಸಂಪೂರ್ಣವಾಗಿ ವಿಜಯ ಸಾಧಿಸುವ ನವೀನ ಪರಿಕಲ್ಪನೆಯನ್ನು ಪ್ರತಿಪಾದಿಸಿದನು. ಬಹುಶಃ ಅವನು ಇತಿಹಾಸದಲ್ಲಿ ಕಲ್ಯಾಣ ರಾಜ್ಯವನ್ನು ಸ್ಥಾಪಿಸಿದ ಮೊದಲ ಆಡಳಿತಗಾರನಾಗಿದ್ದನು. ಅಶೋಕನು ಭಾರತದ ಪ್ರಾಚೀನ ರಾಜವಂಶಗಳಲ್ಲಿ ವಿಶಿಷ್ಟವಾಗಿ ಗುರುತಿಸಬಹುದಾದ ಧ್ವನಿಯನ್ನು ಹೊಂದಿರುವ ಮೊದಲ ರಾಜನಾಗಿದ್ದಾನೆ. ಅದು ಸಾಮಾನ್ಯ ಧ್ವನಿಯಲ್ಲ, ಏಕೆಂದರೆ ಅವನು ಹೇಳಬೇಕಾಗಿರುವುದು ಆಡಳಿತ ತತ್ವಗಳ ಹೇಳಿಕೆಯಾಗಿ ಸಂಪೂರ್ಣವಾಗಿ, ನಿಸ್ಸಂದಿಗ್ಧವಾಗಿ ವಿಶಿಷ್ಟವಾಗಿದೆ ಮತ್ತು ಉಳಿದಿದೆ” ಎಂದು “ಚಾರ್ಲ್ಸ್ ಅಲೆನ್ Ashoka the Search for India’s Lost Emperor” ಎಂಬ ಪುಸ್ತಕದ ಮುನ್ನುಡಿಯಲ್ಲಿ ದಾಖಲಿಸಿದ್ದಾನೆ.

ಅಶೋಕನನ್ನು 2ನೇ ಬುದ್ಧನೆಂದು ಸಹ ಕರೆಯುತ್ತಾರೆ, ಏಕೆಂದರೆ ಬುದ್ಧರ ನಂತರ ಧಮ್ಮ ಪ್ರಚಾರವನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ದೇಶ ವಿದೇಶಗಳಿಗೆ ಹರಡುವ ಘನ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿದವನು ಅಶೋಕ. ತನ್ನ ಸ್ವಂತ ಇಬ್ಬರು ಮಕ್ಕಳನ್ನು ಶ್ರೀಲಂಕಾಗೆ ಕಳುಹಿಸಿದನು. ತನ್ನ ಸಾಮ್ರಾಜ್ಯದಲ್ಲಿ ಧಮ್ಮ ಮಹಾಮಾತ್ರರು ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿದನು. ಇವರು ಭಿಕ್ಷುಗಳಲ್ಲ ಆದರೆ ಭಿಕ್ಷುಗಳ ರೀತಿಯಲ್ಲಿ ಊರೂರು ಸುತ್ತಿ ಸಾಮಾನ್ಯ ಜನರಿಗೆ ಅವರ ದೈನಂದಿನ ವ್ಯವಹಾರಗಳಲ್ಲಿ ಕೌಟುಂಬಿಕ ಕಲಹಗಳಲ್ಲಿ ನೇರವಾಗಿ ಭಾಗವಹಿಸಿ ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಅಷ್ಟೇ ಅಲ್ಲದೆ ಸಾಮಾನ್ಯ ಜನರಲ್ಲಿ ಧಮ್ಮದ ಬಗ್ಗೆ ಆಸಕ್ತಿ ತಳೆಯುವಂತೆ ಮಾಡುತ್ತಿದ್ದರು, ಅವರನ್ನು ನೈತಿಕವಾಗಿ ಬದುಕುವಂತೆ ಮರು ರೂಪಿಸುತ್ತಿದ್ದರು.

ಅಶೋಕ ತನ್ನ ಸಾಮ್ರಾಜ್ಯದಲ್ಲಿ ಪ್ರಾಣಿ-ಪಕ್ಷಿಗಳನ್ನು ಹಿಂಸಿಸುವುದನ್ನು, ಕೊಲ್ಲುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದನು. ಅದರಲ್ಲೂ ಆರು ತಿಂಗಳ ಒಳಗಿನ ಎಲ್ಲಾ ರೀತಿಯ ಜೀವಿಗಳ ವಧೆಯನ್ನು ನಿಷೇಧ ಮಾಡಿದನು. ಪಶು ಪಕ್ಷಿಗಳಿಗಾಗಿ ಪಶು ವೈದ್ಯರನ್ನು ನೇಮಿಸಿದನು ಅಲ್ಲದೆ ಪಶು ಆಸ್ಪತ್ರೆಗಳನ್ನು ನಿರ್ಮಿಸಿದನು. ವಯಸ್ಸಾದ ತಂದೆ ತಾಯಿಗಳನ್ನು ಮಕ್ಕಳಾದವರು ಗೌರವದಿಂದ ಕಾಣಬೇಕು ಮತ್ತು ಅವರನ್ನು ಸಾಕಬೇಕು, ಸ್ನೇಹಿತರಿಗೆ, ಪರಿಚಯಸ್ಥರಿಗೆ, ಸಂಬಂಧಿಕರಿಗೆ ಮತ್ತು ಶ್ರಮಣರಿಗೆ ಗೌರವ ನೀಡಬೇಕು. ಜೀವಿಗಳ ಬಗೆಗೆ ದಯೆಯಿಂದ ನಡೆದುಕೊಳ್ಳಬೇಕು. ಈ ರೀತಿಯಲ್ಲಿ ಬುದ್ಧರ ತತ್ವಗಳು ಸಾಮಾನ್ಯ ಜನರ ಜೀವನದಲ್ಲಿ ನೆಲೆಗೊಳ್ಳಲು, ನೈತಿಕ ಮೌಲ್ಯಗಳನ್ನು ಸಮಾಜದಲ್ಲಿ ಸ್ಥಾಪಿಸಲು ಸಾಕಷ್ಟು ಶ್ರಮಿಸಿದ್ದಾನೆ.

ಅಶೋಕನ ಕಾಲದಲ್ಲಿ ಪ್ರಸಿದ್ಧಿಗೆ ಬಂದ ಪ್ರಮುಖ ವಿಶ್ವವಿದ್ಯಾಲಯಗಳು:

1. ತಕ್ಷಶಿಲೆ (Taxila/Takshashila)

ಇದು ಪ್ರಪಂಚದ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದು. ಪ್ರಸ್ತುತ ಪಾಕಿಸ್ತಾನದಲ್ಲಿದೆ. ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಇದು ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು. ಚಾಣಕ್ಯ (ಕೌಟಿಲ್ಯ) ಇಲ್ಲಿ ಪ್ರಾಧ್ಯಾಪಕನಾಗಿದ್ದನು ಮತ್ತು ಚಂದ್ರಗುಪ್ತ ಮೌರ್ಯ ಇಲ್ಲೇ ಶಿಕ್ಷಣ ಪಡೆದಿದ್ದನು ಎನ್ನಲಾಗುತ್ತದೆ. ಇಲ್ಲಿ ಬೌದ್ಧ ದರ್ಶನ (Buddhist Philosophy),  ವೇದಗಳು, ತತ್ವಶಾಸ್ತ್ರ, ಆಯುರ್ವೇದ, ಬಿಲ್ಲುಗಾರಿಕೆ ಮತ್ತು ರಾಜಕೀಯ ಶಾಸ್ತ್ರಗಳನ್ನು ಬೋಧಿಸಲಾಗುತ್ತಿತ್ತು. ಅಶೋಕನು ರಾಜಕುಮಾರನಾಗಿದ್ದಾಗ ತಕ್ಷಶಿಲೆಯ ವೈಸರಾಯ್ ಆಗಿದ್ದನು.

2. ನಲಂದಾ ವಿಶ್ವವಿದ್ಯಾಲಯ (Nalanda University)

ನಲಂದಾವು ಬಿಹಾರ ರಾಜ್ಯದಲ್ಲಿದೆ. ಇದು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ್ದು ಗುಪ್ತರ ಕಾಲದಲ್ಲಾದರೂ, ಇದರ ಅಡಿಪಾಯ ಅಶೋಕನ ಕಾಲದಲ್ಲೇ ಹಾಕಲ್ಪಟ್ಟಿತ್ತು. ಅಶೋಕನು ನಲಂದಾದಲ್ಲಿ ಒಂದು ದೊಡ್ಡ ಬೌದ್ಧ ವಿಹಾರವನ್ನು ನಿರ್ಮಿಸಿದನು ಎಂದು ಇತಿಹಾಸಕಾರರು ಹೇಳುತ್ತಾರೆ. ಇಲ್ಲಿ ಮುಖ್ಯವಾಗಿ ಬೌದ್ಧ ದರ್ಶನ (Buddhist Philosophy), ತರ್ಕಶಾಸ್ತ್ರ, ಗಣಿತ ಮತ್ತು ಖಗೋಳಶಾಸ್ತ್ರವನ್ನು ಕಲಿಸಲಾಗುತ್ತಿತ್ತು.

3. ಸಾಂಚಿ ಮತ್ತು ಉಜ್ಜಯಿನಿ (Sanchi and Ujjain)

ಮಧ್ಯಪ್ರದೇಶದ ಈ ಕೇಂದ್ರಗಳು ಅಶೋಕನ ಕಾಲದಲ್ಲಿ ಪ್ರಸಿದ್ಧ ವಿಹಾರಗಳಾಗಿದ್ದವು. ಅಶೋಕನ ಪತ್ನಿ ದೇವಿಯು ವಿದಿಶಾದವಳು. ಸಾಂಚಿಯ ಸ್ತೂಪ ಮತ್ತು ಅಲ್ಲಿನ ವಿಹಾರಗಳು ಜಾಗತಿಕ ಮಟ್ಟದ ಭಿಕ್ಷುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನದ ಕೇಂದ್ರಗಳಾಗಿದ್ದವು.

4. ಪಾಟಲಿಪುತ್ರ (Pataliputra)

ಮೌರ್ಯರ ರಾಜಧಾನಿಯಾಗಿದ್ದ ಪಾಟಲಿಪುತ್ರವು (ಇಂದಿನ ಪಾಟ್ನಾ) ಕೇವಲ ಆಡಳಿತ ಕೇಂದ್ರವಾಗಿರದೆ, ದೊಡ್ಡ ವಿದ್ವತ್ ಕೇಂದ್ರವಾಗಿತ್ತು. ಅಶೋಕನು ಇಲ್ಲಿ ಮೂರನೇ ಬೌದ್ಧ ಧಮ್ಮ ಸಮ್ಮೇಳನವನ್ನು (Third Buddhist Council) ಆಯೋಜಿಸಿದ್ದನು, ಇದು ಶೈಕ್ಷಣಿಕ ಮತ್ತು ಧಾರ್ಮಿಕ ಚರ್ಚೆಗಳಿಗೆ ದೊಡ್ಡ ವೇದಿಕೆಯಾಗಿತ್ತು.

ನಲಂದಾ ಯೂನಿವರ್ಸಿಟಿ

ವಿಶ್ವವಿದ್ಯಾಲಯಗಳ ವೈಶಿಷ್ಠ್ಯಗಳು

ಧಮ್ಮದ ಪ್ರಸಾರ: ಈ ಕೇಂದ್ರಗಳು ಕೇವಲ ಭಾರತೀಯರಿಗೆ ಮಾತ್ರವಲ್ಲದೆ, ಶ್ರೀಲಂಕಾ, ಬರ್ಮಾ ಮತ್ತು ಆಗ್ನೇಯ ಏಷ್ಯಾದ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದವು. ಹೆಚ್ಚಿನ ಬೋಧನೆಗಳು ಪಾಲಿ (Pali) ಭಾಷೆಯಲ್ಲಿ ನಡೆಯುತ್ತಿದ್ದವು, ಇದು ಸಾಮಾನ್ಯ ಜನರಿಗೂ ಅರ್ಥವಾಗುವಂತಿತ್ತು. ಪ್ರತಿಯೊಂದು ವಿಶ್ವವಿದ್ಯಾಲಯವು ಬೌದ್ಧ ವಿಹಾರಗಳನ್ನು ಒಳಗೊಂಡಿದ್ದು, ಅಲ್ಲಿ ಶಿಸ್ತು ಮತ್ತು ಧ್ಯಾನಕ್ಕೆ (Meditation) ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಸಾಮ್ರಾಟ್ ಅಶೋಕನು ತನ್ನ ಶಾಸನಗಳ ಮೂಲಕ “ಧಮ್ಮ”ವನ್ನು ಕಲಿಸುವುದರ ಜೊತೆಗೆ ಇಂತಹ ಶೈಕ್ಷಣಿಕ ಕೇಂದ್ರಗಳಿಗೆ ಸಾಕಷ್ಟು ಅನುದಾನವನ್ನು ನೀಡುತ್ತಿದ್ದನು. ಇದರಿಂದಾಗಿ ಭಾರತವು ‘ವಿಶ್ವಗುರು’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಶಿಕ್ಷಣ ವ್ಯವಸ್ಥೆ ಮತ್ತು ವಿಷಯಗಳು (Curriculum)

ಈ ವಿಶ್ವವಿದ್ಯಾಲಯಗಳಲ್ಲಿ ಕೇವಲ ಧಾರ್ಮಿಕ ಶಿಕ್ಷಣ ಮಾತ್ರವಲ್ಲದೆ, ಸರ್ವತೋಮುಖ ಜ್ಞಾನವನ್ನು ನೀಡಲಾಗುತ್ತಿತ್ತು. ಬೌದ್ಧ ಧರ್ಮದ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳ (ವಿನಯ ಪೀಟಕ, ಸುತ್ತ ಪೀಟಕ ಮತ್ತು ಅಭಿದಮ್ಮ ಪೀಟಕ) ಆಳವಾದ ಅಧ್ಯಯನ ಮತ್ತು ಬೋಧನೆ ಮಾಡಲಾಗುತ್ತಿತ್ತು. ಹೇತು-ವಿದ್ಯಾ (Logic): ತರ್ಕಶಾಸ್ತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ವಾದ-ವಿವಾದಗಳ ಮೂಲಕ ಸತ್ಯವನ್ನು ಅರಿಯುವುದು ಇದರ ಮುಖ್ಯ ಉದ್ದೇಶವಾಗಿತ್ತು. ಶಬ್ದ-ವಿದ್ಯಾ (Grammar/Linguistics) ಬೋಧಿಸಲಾಗುತ್ತಿತ್ತು, ಪಾಲಿ ಮತ್ತು ಸಂಸ್ಕೃತ ಭಾಷೆಯ ವ್ಯಾಕರಣದ ಮೇಲೆ ಹಿಡಿತ ಸಾಧಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಚಿಕಿತ್ಸಾ-ವಿದ್ಯಾ (Medicine) ಗಳಾದ ಆಯುರ್ವೇದ ಮತ್ತು ಶಸ್ತ್ರಚಿಕಿತ್ಸೆಯ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಶಿಲ್ಪಕಲೆ ಮತ್ತು  ಚಿತ್ರಕಲೆ, ಸ್ತೂಪ ನಿರ್ಮಾಣ ಮತ್ತು ಕೆತ್ತನೆ ಕಲೆಗಳನ್ನು ಕಲಿಸಲಾಗುತ್ತಿತ್ತು.

ಪ್ರವೇಶ ಪ್ರಕ್ರಿಯೆ (Admission Process)

ನಳಂದಾದಂತಹ ವಿಶ್ವವಿದ್ಯಾಲಯಗಳಿಗೆ ದಾಖಲಾಗುವುದು ಸುಲಭವಾಗಿರಲಿಲ್ಲ. ದ್ವಾರಪಾಲಕರು ವಿಶ್ವವಿದ್ಯಾಲಯದ ದ್ವಾರದಲ್ಲಿ ಇರುತ್ತಿದ್ದರು ಇವರನ್ನು ‘ದ್ವಾರ ಪಂಡಿತರು’ ಎಂದು ಕರೆಯುತ್ತಿದ್ದರು. ವಿದ್ಯಾರ್ಥಿಯು ಒಳಗೆ ಹೋಗಬೇಕಾದರೆ ಮೊದಲು ಇವರು ಕೇಳುವ ಕಠಿಣ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಇವರು ಭಿಕ್ಷುಗಳಿಕ್ಕಿಂತ ಕಡಿಮೆಯೆನು ತಿಳಿದಿರಲಿಲ್ಲ, ಈ ಪ್ರಕ್ರಿಯೆಯಲ್ಲಿ ತೇರ್ಗಡೆಯ ದರ ಕೇವಲ ಶೇ.20 ರಿಂದ ಶೇ.30% ರಷ್ಟು ಮಾತ್ರ ಇತ್ತು. ಈ ಕಠಿಣ ಹಂತಗಳ ಪರೀಕ್ಷೆಯಲ್ಲಿ ಯಶಸ್ವಿಯಾದವರಿಗೆ ಮಾತ್ರ ವಿದ್ಯಾರ್ಥಿಗಳಾಗಿ ಪ್ರವೇಶಾವಕಾಶ ದೊರೆಯುತ್ತಿತ್ತು. ನಳಂದಾ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ‘ಧಮ್ಮಗಂಜ್’ ಎಂದು ಕರೆಯುತ್ತಿದ್ದರು. ನಳಂದಾದ ಗ್ರಂಥಾಲಯವು ಜಗತ್ತಿನ ಅತಿದೊಡ್ಡ ಜ್ಞಾನ ಭಂಡಾರವಾಗಿತ್ತು. ಇದರಲ್ಲಿ ಮೂರು ಪ್ರಮುಖ ಕಟ್ಟಡಗಳಿದ್ದವು, ಮೊದಲನೆಯದು ರತ್ನಸಾಗರವೆಂಬ (Ocean of Jewels) ಒಂಬತ್ತು ಅಂತಸ್ತಿನ ಕಟ್ಟಡ ಇದಾಗಿತ್ತು, ಎರಡನೆಯದು ರತ್ನೋದಧಿ (Ocean of Gems) ಮತ್ತು ಮೂರನೆಯದು ರತ್ನರಂಜಕ (Collection of Jewels) ಎಂಬ ಮಹಲ್‌ಗಳಿದ್ದವು. ದಾಖಲೆಗಳ ಪ್ರಕಾರ, ಆಕ್ರಮಣಕಾರರು ಬೆಂಕಿ ಹಚ್ಚಿದಾಗ ಈ ಗ್ರಂಥಾಲಯವು ಸತತ ಮೂರು ತಿಂಗಳುಗಳ ಕಾಲ ಉರಿಯುತ್ತಿತ್ತು ಎಂದರೆ ಅಲ್ಲಿ ಎಷ್ಟು ಪುಸ್ತಕಗಳಿದ್ದವು ಎಂದು ಊಹಿಸಬಹುದು.

ಪ್ರಸಿದ್ಧ ಆಚಾರ್ಯರು (Scholars)

ಈ ವಿಶ್ವವಿದ್ಯಾಲಯಗಳು ಜಗತ್ಪ್ರಸಿದ್ಧ ವಿದ್ವಾಂಸರನ್ನು ಜಗತ್ತಿಗೆ ನೀಡಿದವು. ಅವರಲ್ಲಿ ಕೆಲವರನ್ನು ಹೆಸರಿಸುವುದಾದರೆ; ನಾಗಾರ್ಜುನ, ಇವನು ಮಾಧ್ಯಮಿಕ ಶೂನ್ಯವಾದದ ಪ್ರತಿಪಾದಕ. ಆರ್ಯದೇವ, ಇವನು ಬೋಧಿಸತ್ವರ ತತ್ವಗಳ ಪ್ರಸಾರಕ. ಧರ್ಮಪಾಲ. ಇವನು ಭಾರತೀಯ ತರ್ಕಶಾಸ್ತ್ರಜ್ಞ. ಅತಿಶ ದೀಪಂಕರ ವಿಕ್ರಮಶಿಲಾ ವಿಶ್ವವಿದ್ಯಾಲಯದ ಪ್ರಮುಖ ಪ್ರಾಧ್ಯಾಪಕ. ಇವರು ಟಿಬೆಟ್‌ನಲ್ಲಿ ಬೌದ್ಧ ಧರ್ಮವನ್ನು ಪುನರುಜ್ಜೀವನಗೊಳಿಸಿದರು ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಇವೆಲ್ಲವನ್ನು ಗಮನಿಸಿದಾಗ ಸಾಮ್ರಾಟ್‌ ಅಶೋಕನ ಕಾಲದಲ್ಲಿ ಸಾಕ್ಷರತೆ ಪ್ರಮಾಣದ ಕುರಿತು ಪ್ರಶ್ನೆಗಳು ಏಳುತ್ತವೆ, ಅದಕ್ಕೆ ಉತ್ತರವಾಗಿ ನಾವು ಮೇಲಿನ ಚಿತ್ರಣವನ್ನು ನೋಡಬಹುದು. ಸಾಕಷ್ಟು ಜನರು ಶಿಕ್ಷಿತರಾಗಿದ್ದಾರೆ, ಅವರಿಗೆ ಜ್ಞಾನದ ಹಸಿವಿತ್ತು, ಅವರು ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿದ್ದರು ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಡಾ. ನಾಗೇಶ್ ಮೌರ್ಯ

ಬೌದ್ಧ ಚಿಂತಕರು, ಬೆಂಗಳೂರು

More articles

Latest article

Most read