ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ಥ್ಯ ಬಲಿಕೊಡುವ ಬಿಜೆಪಿ

ಇನ್ಸ್‌ಪೆಕ್ಟರ್ ಹೇಳಿಕೆ ವಿವಾದ: ಸತ್ಯ ಮುಚ್ಚಿಟ್ಟು ಪ್ರತಿಭಟನೆ ನಡೆಸಿದ‌ ರಾಜ್ಯ ಬಿಜೆಪಿ

ರಾಜ್ಯ ಸರ್ಕಾರ‌ ಇನ್ಸ್‌ಪೆಕ್ಟರ್ ಧನಂಜಯರ ಮಾತುಗಳನ್ನು ಸ್ಪಷ್ಟವಾಗಿ ಜನರ ಮುಂದಿಡಲಿ. ಅವರ ಬೆಂಬಲಕ್ಕೆ ನಿಲ್ಲುವ ಮೂಲಕ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗಳು ನಿಶ್ಚಿಂತೆಯಿಂದ ಕೆಲಸ ಮಾಡಲು ಸ್ಥೈರ್ಯ ತುಂಬಲಿ, ಪ್ರೇರಣೆ ನೀಡಲಿ

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲೆ ವಿರೋಧ ಪಕ್ಷ ಬಿಜೆಪಿಯ ಹುಮ್ಮಸ್ಸು ಇಮ್ಮಡಿಸಿದೆ. ವಿಪಕ್ಷ ನಾಯಕ ಆರ್.ಅಶೋಕ್ ಅವರ ಉತ್ಸಾಹದ ಹಿಂದೆ, ನಾಯಕತ್ವ ಕೊರತೆ ಎದುರಿಸುತ್ತಿರುವ ರಾಜ್ಯ ಬಿಜೆಪಿಗೆ ತಾನು ಪ್ರಮುಖ ನಾಯಕನಾಗಬೇಕು, ಹೈಕಮಾಂಡ್ ಗಮನ ಸೆಳೆಯಬೇಕು ಎಂಬ ಮನದಾಸೆ ಅಡಗಿರುವುದು ಪ್ರತಿಯೊಂದು ಪ್ರತಿಭಟನೆಯಲ್ಲಿನ ಅವರ ವರ್ತನೆಯೇ ತಿಳಿಸುತ್ತದೆ. ಅದು ಸಹಜ. ಸರ್ಕಾರವೊಂದು ಅಭಿವೃದ್ಧಿ ಹೆಸರಿನಲ್ಲಿ ಜನವಿರೋಧಿ ಯೋಜನೆಗಳಿಗೆ ಕೈ ಹಾಕಿದಾಗ ಅದನ್ನು ಪ್ರತಿಭಟಿಸುವುದು ವಿರೋಧ ಪಕ್ಷದ ಜವಾಬ್ದಾರಿಯೂ ಹೌದು. ಈ ವಿಚಾರದಲ್ಲಿ ಬಿಜೆಪಿಯ ಪ್ರತಿಭಟನೆಗಳು ಸರಿಯಾಗಿವೆ.

ಆದರೆ, ಟಿ.ನರಸೀಪುರದಲ್ಲಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿ ಧನಂಜಯ ಅವರು ಹಿಂದೂ ಸಂಘಟನೆಗಳ ಯುವಕರಿಗೆ ನೀಡಿದ ಸಲಹೆ ಹಾಗೂ ಎಚ್ಚರಿಕೆಯನ್ನೇ ವಿವಾದವನ್ನಾಗಿಸಿ ಪ್ರತಿಭಟನೆ ನಡೆಸಿ ಅಮಾನತ್ತಿಗೆ ಆಗ್ರಹಿಸಿರುವುದು ಬಿಜೆಪಿಯ ನಿಜವಾದ ಮನಸ್ಥಿತಿ ಬಗ್ಗೆ ಸ್ವತಃ ಹಿಂದೂಗಳಲ್ಲಿಯೇ ಅನುಮಾನ ಮೂಡಿಸಿದೆ.

ಅಸ್ತಿತ್ವದ, ಅಸ್ಮಿತೆಯ ಕೊರತೆ ಎದುರಿಸುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ತನಗೆ ಸಿಕ್ಕ ಇಂತಹ ಯಾವ ಅವಕಾಶವನ್ನೂ ಬಿಡಬಾರದು ಎಂಬ ಮನಸ್ಥಿತಿಯವರು. ಇನ್ಸ್‌ಪೆಕ್ಟರ್ ಧನಂಜಯ ವಿಚಾರದಲ್ಲಿ ಹೇಳಿಕೆ ನೀಡಿರುವ ಸಿಂಹ, ‘ನಾನು ಅಲ್ಲಿದ್ದಿದ್ದರೆ ಒದೆಯುತ್ತಿದ್ದೆ, ತರ್ಲೆ ತರ ಮಾತಾಡ್ತಾನೆ, ಇನ್ನು ಮುಂದೆ ಹೀಗೆ ಮಾತನಾಡಿದರೆ ಠಾಣೆಗೆ ನುಗ್ಗುತ್ತೇನೆ’ ಎಂದು ಮಾಧ್ಯಮದ ಮುಂದೆ ಹೇಳಿಕೆ‌ ನೀಡಿದ್ದಾರೆ.

ಆರ್.ಅಶೋಕ್, ‘ನಾವೇನು ಪಾಕಿಸ್ತಾನದಲ್ಲಿದ್ದೀವಾ? ಮಸೀದಿ ಮುಂದೆನೇ ಮೆರವಣಿಗೆ ಹೋಗ್ತೀವಿ,‌ ಪೊಲೀಸರು ಏನು ಬೇಕಾದ್ರೂ ಮಾಡಿಕೊಳ್ಳಲಿ’ ಎಂದು ಹೇಳಿದ್ದಷ್ಟೇ ಅಲ್ಲ, ಮುಖ್ಯಮಂತ್ರಿ ಡಿಕೆಶಿ ಅವರಿಗೆ, ‘ನೀನು ಹಿಂದೂ ಹೌದೋ ಅಲ್ವೋ? ಈಗ ಬಂದು ತೋರಿಸು’ ಎಂದು ಸವಾಲು ಹಾಕಿದ್ದಾರೆ.

ಪ್ರತಾಪ್‌ ಸಿಂಹ ಮತ್ತು ಪೊಲೀಸ್ ಅಧಿಕಾರಿ ಧನಂಜಯ

ಇನ್ಸ್‌ಪೆಕ್ಟರ್ ಹೇಳಿದ್ದೇನು?

ವಾಸ್ತವದಲ್ಲಿ ಇನ್ಸ್‌ಪೆಕ್ಟರ್ ಧನಂಜಯ ಅವರ ಮಾತಿನಲ್ಲಿ ‘ವಿವಾದಿತ’ ಎನಿಸುವ ಒಂದೇ ಒಂದು ಅಂಶವೂ ಇರಲಿಲ್ಲ. ಅವರ ಮಾತಿನ ಪ್ರಮುಖ ಅಂಶಗಳು ಹೀಗಿವೆ;

1. ಹಬ್ಬದ ಸಂದರ್ಭ ಅನ್ನಸಂತರ್ಪಣೆ ಮಾಡುವಾಗ, ಅಡುಗೆ ವಿಚಾರದಲ್ಲಿ ಎಚ್ಚರವಾಗಿರಿ. ಒಬ್ಬರು ಅದರ ಜವಾಬ್ದಾರಿ ವಹಿಸಿ. ಅಡುಗೆ ವೇಳೆ ಯಾರಾದರೂ ಏನನ್ನಾದರೂ ತಂದು ಆಹಾರದಲ್ಲಿ ಬೆರೆಸಿದರೆ ಅಪಾಯ. ಹಾಗಾಗದಂತೆ ಎಚ್ಚರದಿಂದ ನೋಡಿಕೊಳ್ಳಿ. (ಹಿಂದೊಮ್ಮೆ ಈ ರೀತಿ ಘಟನೆ ನಡೆದಿದ್ದನ್ನೂ ಅವರು ಉದಾಹರಿಸಿದರು)

2. ಆರ್ಕೆಸ್ಟ್ರಾ ಮಾಡುವವರು ಯಾವುದೇ ಕಾರಣಕ್ಕೂ ಡಿಜೆ ಮಾದರಿ ಸೌಂಡ್ ಸಿಸ್ಟಂಗಳನ್ನು ತರಬೇಡಿ. ರಾತ್ರಿ 10 ರ ನಂತರ ಮುಂದುವರಿಸಬೇಡಿ. ಅಕ್ಕಪಕ್ಕದ ಮನೆಗಳಲ್ಲಿರುವ ವಿದ್ಯಾರ್ಥಿಗಳ ಓದಿಗೆ ನಿಮ್ಮಿಂದ ತೊಂದರೆ ಆಗುವುದು ಬೇಡ.

3. ಗಣೇಶಮೂರ್ತಿ ವಿಸರ್ಜನೆಗೆ ಮೊದಲೇ ಜಾಗ ನಿಗದಿಪಡಿಸಿ. ಅರ್ಜಿಯಲ್ಲಿ ಜಾಗದ ಬಗ್ಗೆ ಸ್ಪಷ್ಟವಾಗಿ ಬರೆಯಿರಿ. ತಿಳಿಸಿದ ಜಾಗ ಬೇರೆ, ನೀವು ಕೊಂಡು ಹೋಗುವ ಜಾಗ ಬೇರೆ ಆಗಬಾರದು. ಹಿಂದಿನ ಸಲ‌ ಹೀಗೆ ಆಗಿತ್ತು. ರಾತ್ರಿಯೆಲ್ಲಾ ಕುಣಿದಾಡುತ್ತ ಕಳೆಯಬೇಕೆಂಬ ಉದ್ದೇಶದಿಂದ ಹೀಗೆ ಮಾಡುತ್ತೀರಿ. ಅದಕ್ಕೆ ಅವಕಾಶ ಇಲ್ಲ.

4. ವಿಸರ್ಜನೆ ವೇಳೆ ಯಾವುದೇ ಕಾರಣಕ್ಕೂ ‘ಡಿಜೆ’ಗೆ ಅವಕಾಶವಿಲ್ಲ. ತಮಟೆ, ವಾದ್ಯ ಡೋಲು, ನಗಾರಿ, ಡೊಳ್ಳು ಕುಣಿತ ಎಲ್ಲಾ ಇದ್ದಾವಲ್ಲ ನಮ್ಮ ದೇಶಿ ಕಲೆಗಳು, ಅವೆಲ್ಲ ಕರೆಸಿ ಮಾಡಿಸಿ. ಏಕೆ ಡಿಜೆ ಡಿಜೆ ಡಿಜೆ ಅಂತೀರಿ? ತಮಟೆ, ಡೋಲು ಮುಂತಾದ ಸದ್ದುಗಳು ಡಿಜೆಗಿಂತಲೂ ಚೆನ್ನಾಗಿರುತ್ತವೆ.

5. ಮೂರ್ತಿ ವಿಸರ್ಜನೆ ರಾತ್ರಿ 10ರ ಮೊದಲು ಮುಗಿಸಿ. ನಂತರ ಯಾವುದೇ ಸದ್ದುಗದ್ದಲಕ್ಕೆ ಅವಕಾಶವಿಲ್ಲ.

6. ಮೂರ್ತಿ ವಿಸರ್ಜನೆ ಸ್ಥಳಕ್ಕೆ ಈಜು ಬಾರದವರನ್ನು, ಮಕ್ಕಳನ್ನು ಕರೆದುಕೊಂಡು ಹೋಗಬೇಡಿ. ಮಕ್ಕಳು ಉತ್ಸಾಹದಿಂದ ಬರುತ್ತಾರೆ. ಅವರಿಗೆ ಅವಘಡಗಳ ಅರಿವಿರುವುದಿಲ್ಲ. ಈಜು ಬಾರದವರು ದೂರ ನಿಂತುಕೊಂಡು ನೋಡಿ. ಏನಾದರೂ ಅನಾಹುತ ನಡೆದರೆ, ಯಾರ ಹೆಸರಿನಲ್ಲಿ ಅರ್ಜಿ ಕೊಟ್ಟಿರುತ್ತೀರೋ‌ ಅವರು ಜವಾಬ್ದಾರರಾಗುತ್ತಾರೆ.

ಹಬ್ಬ ಏಕೆ ಮಾಡುತ್ತಾರೆ? ಸಂಭ್ರಮ ಸಡಗರಕ್ಕೆ ತಾನೆ? ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿದ್ದರೆ ಈ ಸಂಭ್ರಮವನ್ನು ನಾವೇ ಹಾಳು ಮಾಡಿದಂತಾಗುತ್ತದೆ. ಅಲ್ವಾ?

7. ಗಣಪತಿ ಪೆಂಡಾಲ್‌ ನಲ್ಲಿ ಇಪ್ಪತ್ನಾಲ್ಕು ತಾಸು ಕೂಡ ನಿಮ್ಮ ಸ್ವಯಸೇವಕರ ಕಾವಲು ಇರಲಿ. ಗಣಪತಿ ಮೂರ್ತಿ ಮುಂದೆ ಹೂವು, ಹಣ್ಣು ಹಂಪಲು ಇಟ್ಟಿರುತ್ತೀರಿ. ನೀವು ಯಾರೂ ಅಲ್ಲಿ ಕಾವಲು ಇಲ್ಲದೆ ಇದ್ದರೆ,‌ ನಾಯಿ ಅಥವಾ ಯಾವುದಾದರೂ ಪ್ರಾಣಿ ಬಂದು ಅದನ್ನು ಬೀಳಿಸಿಕೊಂಡು ಹೋಯಿತು ಅಂದುಕೊಳ್ಳಿ. ಬೆಳಿಗ್ಗೆ ಬಂದು ನೋಡಿದಾಗ ನೀವೇನು ಅಂದ್ಕೊಳ್ಳುತ್ತೀರಿ? ಯಾರೋ ಇದನ್ನು‌ ದುರುದ್ದೇಶದಿಂದ ಬೀಳಿಸಿದ್ದಾರೆ ಎಂದುಕೊಳ್ಳುತ್ತೀರಿ. ಹಾಗಾಗದಿರಲು ಕಾವಲು ವ್ಯವಸ್ಥೆ ಮಾಡಿಕೊಳ್ಳಿ.

8. ಇನ್ನೊಂದು ಸೂಕ್ಷ್ಮ ವಿಚಾರಕ್ಕೆ ಬರುತ್ತೇನೆ. ಕಳೆದ ಬಾರಿ ಮೂರು ಗುಂಪುಗಳ ಜನ, ಲಿಂಕ್ ರೋಡ್ ಬಳಿಯ ಮಸೀದಿ ಮುಂದಿನಿಂದಲೇ ಹೋಗಬೇಕೆಂದು ಹಠ ಮಾಡಿಕೊಂಡು ಮೆರವಣಿಗೆ ಹೋಗಿದ್ದಾರೆ. ಅದು ಮುಗಿದ ಮೇಲೆ ನಮ್ಮ ಗಮನಕ್ಕೆ ಬಂದಿತ್ತು.

ಇಲ್ಲಿಂದ ಮೆರವಣಿಗೆ ಹೋಗಿ ಕರೆಕ್ಟಾಗಿ ಮಸೀದಿ‌ ಮುಂದೆ ಹೋಗಿ ಪಟಾಕಿ ಹೊಡೆಯುವುದು ಮಾಡ್ತೀರಿ. ಅಲ್ಲೇನು ಎದ್ದುಬಿಡುತ್ತಾ ನಿಮಗೆ? ಹಬ್ಬ ಎಂಬುದು ಹಬ್ಬದಂಗಿರಬೇಕು. ಇನ್ನೊಂದು ಧರ್ಮದವರು ನಿಮ್ಮ ಆಚರಣೆ ನೋಡಿ ಗೌರವಿಸುವಂತಿರಬೇಕು. ಈ ಸಲ ಹಾಗೇನಾದರೂ ಮಾಡಿದರೆ ಗ್ರಹಚಾರ ಬಿಡಿಸ್ತೀವಿ.

ಇವಿಷ್ಟು ಅಂಶಗಳು ಧನಂಜಯರ ಮಾತಿನ ಪೂರ್ಣ ಸಾರ. ಈ ಅಂಶಗಳಲ್ಲಿ ಒಂದೇ ಒಂದು ಹಿಂದೂ ವಿರೋಧಿ ವಾಕ್ಯವನ್ನು ಆರ್.ಅಶೋಕ್ ಆಗಲಿ,‌ ಪ್ರತಾಪ್ ಸಿಂಹ ಆಗಲಿ ತೋರಿಸಬಲ್ಲರೇ? ಹಬ್ಬ ಆಚರಿಸುವವರಿಗೆ ಇದಕ್ಕಿಂತ ಚೆನ್ನಾಗಿ, ಸ್ಪಷ್ಟವಾಗಿ ಸಲಹೆ, ಎಚ್ಚರಿಕೆ ನೀಡಲು ಸಾಧ್ಯವೆ? ಅವರ ಪ್ರತಿ ಮಾತಿನಲ್ಲಿ ಕೂಡ ಇದ್ದದ್ದು ಸಾಮಾಜಿಕ ಸ್ವಾಸ್ಥ್ಯದ ಬಗೆಗಿನ ಕಾಳಜಿ, ಜನರ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ, ಮಕ್ಕಳ ಬಗ್ಗೆ ಇರುವ ಕಾಳಜಿ. ವಾಸ್ತವದಲ್ಲಿ ಈ ಮಾತುಗಳಿಗೆ ಹಿಂದೂ ಸಮಾಜದಿಂದ ಕೇಳಿಬರಬೇಕಿದ್ದದ್ದು ಅಭಿನಂದನೆಯೇ ಹೊರತು ಈ ಮಟ್ಟಿಗಿನ ವಿರೋಧವಲ್ಲ.

ಅಧಿಕಾರ ದಾಹದಿಂದ ಬಿಜೆಪಿ ಕೋಮುವಾದವನ್ನು, ಹಿಂದುತ್ವವನ್ನು, ಮುಸ್ಲಿಂ ದ್ವೇಷವನ್ನು ಬೇಕಾದಷ್ಟು ದುಡಿಸಿಕೊಂಡಿತು. ಈಗ ಅವರ ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ ಸಮಾಜದ ಹಿತಕ್ಕಾಗಿ ಕಾನೂನು ಆಡುವ ಸರಿಯಾದ ಮಾತನ್ನು ಕೂಡ ವಿರೋಧಿಸಿ ಪ್ರತಿಭಟಿಸುವ ಮಟ್ಟಕ್ಕೆ. ಇದು ಸಮಾಜಕ್ಕೆ ಉಂಟುಮಾಡುವ ಗಾಯಗಳ‌ ಜೊತೆಜೊತೆಗೆ ಸ್ವತಃ ಬಿಜೆಪಿಗೆ ದೀರ್ಘಾವಧಿಯ ಪರಿಣಾಮ ಉಂಟುಮಾಡಲಿದೆ. ಕೇಂದ್ರ ಬಿಜೆಪಿ ಅದರ ಅಂಕೆಗಳನ್ನೆಲ್ಲ ಮೀರಿ ಈಗಾಗಲೇ ವಿಷವೃಕ್ಷವಾಗಿರುವುದರಿಂದ ಅದನ್ನು ಹದಕ್ಕೆ ತರಲು ಸಾಧ್ಯವಿಲ್ಲ. ಆದರೆ ರಾಜ್ಯ ಬಿಜೆಪಿ ‌ಈ ಎಚ್ಚರವನ್ನು ಈಗಲೇ ಅರಿತು, ಮುಂದಕ್ಕೆ ಎಡವದಂತೆ ಸಾಗಿದರೆ, ಕನಿಷ್ಟ ವಿರೋಧ ಪಕ್ಷವಾಗಿಯಾದರೂ ಸುಧಾರಿಸಿಕೊಳ್ಳಬಹುದು.

ಟಿ.ನರಸೀಪುರದಲ್ಲಿ ಬಿಜೆಪಿ ಪ್ರತಿಭಟನೆ

ಇನ್ಸ್‌ಪೆಕ್ಟರ್ ಹೇಳಿಕೆ ವಿಚಾರವನ್ನೇ ಗಮನಿಸಿ. ಅವರ ಮಾತಿನಲ್ಲಿ ತಪ್ಪಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಬಿಜೆಪಿಯವರಿಗೆ ಎಷ್ಟು ಸಮಯ ಬೇಕು? ಬಿಜೆಪಿಯ ಒಬ್ಬರಿಗಾದರೂ ‘ಅವರ ಹೇಳಿಕೆ‌ ಸರಿಯಾಗಿದೆ, ವಿವಾದಿತ ಅಲ್ಲ’ ಎಂದು ಅನಿಸಲಿಲ್ಲವೇ? ಹಾಗಾದರೆ ಅವರಿಗೆ ಅದನ್ನು ಪರಿಶೀಲಿಸುವ ಕನಿಷ್ಟ ವಿವೇಕವೂ ಇಲ್ಲದಾಯಿತೇ? ಹಿಂದೂ ಸಮಾಜದ ಒಳಿತಿಗಾಗಿ,‌ ಒಟ್ಟು ಸಮಾಜದ ಕಾಳಜಿಗಾಗಿ ಇನ್ಸ್‌ಪೆಕ್ಟರ್ ಹೇಳಿದ ಮಾತಿನ‌ ಸತ್ಯಾಸತ್ಯತೆಯನ್ನು ಮರೆಮಾಚಿ ಪ್ರತಿಭಟನೆ ನಡೆಸಿದ, ದ್ವೇಷ ಕಾರಿದ ಬಿಜೆಪಿ‌ ನಿಜಾರ್ಥದಲ್ಲಿ ‘ಹಿಂದೂ ವಿರೋಧಿ’ ಅಲ್ಲವೇ? ಹಿಂದೂಪರ ಆಗಿದ್ದಿದ್ದರೆ ಅದೇಕೆ‌ ಹಬ್ಬದ ಶಾಂತಿಯುತ ಆಚರಣೆಗೆ ಕೊಟ್ಟ ಸಲಹೆಗಳನ್ನು ವಿರೋಧಿಸಬೇಕಿತ್ತು? ಹಿಂದೂಗಳನ್ನು ಕೆರಳಿಸಲೇಬೇಕೆಂಬ ಹಠ ಏಕೆ ಮಾಡಬೇಕಿತ್ತು?

ಅನಗತ್ಯವಾಗಿ ಪ್ರತಿಭಟನೆ ನಡೆಸಿ ರಾಡಿ ಎಬ್ಬಿಸುವ ಬಿಜೆಪಿ ತನ್ನ ಚಾಳಿಯನ್ನು ಈ ವಿಚಾರದಲ್ಲಿಯೂ ಮುಂದುವರಿಸಿರುವುದು ಬೇಸರದ ಸಂಗತಿ. ‘ಸ್ವಸ್ಥ ಸಮಾಜಕ್ಕೆ ಬಿಜೆಪಿ ಮಾರಕ’ ಎಂಬುದನ್ನು ತನ್ನ ನಡೆ ನುಡಿಗಳ‌ ಮೂಲಕ ಸಾಬೀತುಪಡಿಸುತ್ತಲೇ ಬಂದಿರುವ ಬಿಜೆಪಿ, ‌ಈಗ ‘ಸ್ವಸ್ಥ ಸಮಾಜವೇ ಬಿಜೆಪಿಗೆ ಮಾರಕ’ ಎಂಬುದನ್ನು ಜಾಹೀರು ಮಾಡಿದಂತಾಗಿದೆ. ಬಿಜೆಪಿಯ ಇತಿಹಾಸದಲ್ಲಿ, ಜನರ ಸ್ಮೃತಿಯಲ್ಲಿ ಉಳಿಯಬಲ್ಲ,  ದಾಖಲೆಯಾಗಿ ಉಳಿಸಬಹುದಾದ ಸಾಮಾಜಿಕ ಸ್ವಾಸ್ಥ್ಯದ ಪರ, ಸೌಹಾರ್ದದ ಬಗೆಗಿನ ಒಂದೇ ಒಂದು ವಾಕ್ಯ ಕೂಡ ಇಲ್ಲದಿರುವುದು ಅದು ಮಾರಕ‌ ಎನ್ನುವುದಕ್ಕೆ‌ ಪೂರಕ.

ರಾಜ್ಯ ಸರ್ಕಾರ‌ ಇನ್ಸ್‌ಪೆಕ್ಟರ್ ಧನಂಜಯರ ಮಾತುಗಳನ್ನು ಸ್ಪಷ್ಟವಾಗಿ ಜನರ ಮುಂದಿಡಲಿ. ಅವರ ಬೆಂಬಲಕ್ಕೆ ನಿಲ್ಲುವ ಮೂಲಕ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗಳು ನಿಶ್ಚಿಂತೆಯಿಂದ ಕೆಲಸ ಮಾಡಲು ಸ್ಥೈರ್ಯ ತುಂಬಲಿ, ಪ್ರೇರಣೆ ನೀಡಲಿ.

ಶರೀಫ್ ಕಾಡುಮಠ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನವರು. ಪ್ರಸ್ತುತ ಸೌದಿ ಅರೇಬಿಯಾದ ರಿಯಾಧ್‌ನಲ್ಲಿದ್ದಾರೆ. ಇವರ ಅನೇಕ ಬರಹ, ಕವಿತೆಗಳು ಪತ್ರಿಕೆ, ವೆಬ್ ಸೈಟ್‌ಗಳಲ್ಲಿ ಪ್ರಕಟವಾಗಿವೆ.

ಇದನ್ನೂ ಓದಿ- ವಿಶೇಷ | ಹಬ್ಬಗಳ ಸಂಭ್ರಮದಲ್ಲಿರಲಿ ವಿವೇಕ, ಸಂಯಮ

More articles

Latest article

Most read