ಸುಳ್ಯ : ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ “ಮುನಿಸು ತರವೇ ಮುಗುದೆ” ಖ್ಯಾತಿಯ ಸುಳ್ಯದ ಖ್ಯಾತ ಕವಿ, ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಸುಬ್ರಾಯ ಚೊಕ್ಕಾಡಿಯವರಿಗೆ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮವು ದಿನಾಂಕ 11.09.2026 ರಂದು ನಡೆಯಿತು.
ತಂಡವು ಶ್ರೀಯುತ ಚೊಕ್ಕಾಡಿಯವರ ಸ್ವಗೃಹಕ್ಕೆ ಭೇಟಿ ನೀಡಿ ಅವರನ್ನು ಹಾಗೂ ಅವರ ಧರ್ಮಪತ್ನಿಯವರನ್ನು ಸನ್ಮಾನಿಸಿತು.
ಸನ್ಮಾನ ಸ್ವೀಕರಿಸಿದ ಸುಬ್ರಾಯ ಚೊಕ್ಕಾಡಿಯವರು ಮಾತನಾಡಿ ಪ್ರಜಾಧ್ವನಿ ತಂಡಕ್ಕೆ ಧನ್ಯವಾದ ತಿಳಿಸಿ, ತಂಡದ ಸಮಾಜಮುಖಿ ಕಾರ್ಯಕ್ರಮಗಳಿಗೆ ಹಾಗೂ ಉತ್ತಮ ಸಮಾಜ ನಿರ್ಮಾಣದ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷ ಪ್ರವೀಣ್ ಮುಂಡೋಡಿ ಚೊಕ್ಕಾಡಿಯವರ ಕಿರುಪರಿಚಯ ಮಾಡಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ತಂಡದ ಕೆ. ಪಿ. ಮೋಹನ್ ಕಡಬ, ಶಿವಶಂಕರ್ ಕಡಬ, ವಸಂತ ಪೆಲತ್ತಡ್ಕ, ಮಹೇಶ್ ಬೆಳ್ಳಾರ್ಕರ್, ಅಶ್ರಫ್ ಸಾಹುಕಾರ್, ಮಂಜುನಾಥ ಮಡ್ತಿಲ, ಕೇಶವ ಮೊರಂಗಲ್ಲು, ಭರತ್ ಕುಕ್ಕುಜಡ್ಕ, ಚೆನ್ನಕೇಶವ ಕಣಪಿಲ ಉಪಸ್ಥಿತರಿದ್ದರು.


