ಕಳೆದ 12 ವರ್ಷಗಳಿಂದ ಒಬ್ಬ ಬಿಜೆಪಿಯ ಮುಖಂಡನ ಮೇಲೆ ಇಡಿ ದಾಳಿ ಯಾಕೆ ನಡೆದಿಲ್ಲ ? : ಸಾಮಾಜಿಕ ನ್ಯಾಯಕ್ಕಾಗಿ ST ಯೂತ್‌ ಪ್ರಶ್ನೆ

ಬೆಂಗಳೂರು : ಕಳೆದ 12 ವರ್ಷಗಳಿಂದ ಬಿಜೆಪಿಯ ಒಬ್ಬ ನಾಯಕನ ಮೇಲೂ ಇಡಿ ದಾಳಿ ಯಾಕೆ ನಡೆದಿಲ್ಲ ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ.

ಸಚಿವ ಸತೀಶ್‌ ಜಾರಕಿಹೊಳಿಯವರ ಮೇಲೆ ಇಡಿ ದಾಳಿಯಾಗಿರುವ ಹಿನ್ನಲೆಯಲ್ಲಿ ತನಿಖಾ ಸಂಸ್ಥೆಗಳು, ಬಿಜೆಪಿ,ಆರ್‌ಎಸ್‌ಎಸ್‌ ಹಾಗೂ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ನ್ಯಾಯಕ್ಕಾಗಿ ST ಯೂತ್‌ ಸಂಘಟನೆ ಕೆಲವು ಪ್ರಶ್ನೆಗಳನ್ನು ಕೇಳಿದೆ.

ಸಚಿವ ಸತೀಶ್‌ ಜಾರಕಿಹೊಳಿಯವರ ಮೇಲೆ ಇಡಿ ದಾಳಿಯಾಗಿರುವ ಹಿನ್ನಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಾಯಕ ಸಮುದಾಯದ ಯುವಜನರಾದ ನಾವು ಯಾವುದೇ ತನಿಖೆಯನ್ನು ಸ್ವಾಗತಿಸುತ್ತೇವೆ. ಆದರೆ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ತನಿಖಾ ಸಂಸ್ಥೆಗಳನ್ನು ತನ್ನ ಕೈಗೊಂಬೆಗಳಂತೆ ಬಳಸಿಕೊಳ್ಳುತ್ತಿರುವುದು ಸಹಜವಾಗಿರುವ ಈ ಹೊತ್ತಿನಲ್ಲಿ, ನಾವು ತನಿಖಾ ಸಂಸ್ಥೆಗಳು ಹಾಗೂ ಬಿಜೆಪಿ/ಆರ್‌ಎಸೆಸ್‌ ಹಾಗೂ ಕೇಂದ್ರಸರ್ಕಾರಕ್ಕೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಎಂದು ಸಂಘಟನೆ ಹೇಳಿದೆ.

  1. ಸಿಐಡಿ ತನಿಖೆಯಲ್ಲಿ ಕನಿಷ್ಠ ಪುರಾವೆಯೂ ಇಲ್ಲದೇ ಹೊರಬಂದ ನಾಯಕ ಸಮುದಾಯದ ಬಿ.ನಾಗೇಂದ್ರ ಅವರನ್ನು ಇಡಿ ಬಂಧಿಸಿದ್ದು ಏಕೆ?
  2. ರಾಜಕಾರಣಿ ಅಷ್ಟೇ ಅಲ್ಲದ, ದಶಕಗಳಿಂದ ಉದ್ದಿಮೆದಾರರಾಗಿರುವ ಸತೀಶ್‌ ಜಾರಕಿಹೊಳಿಯವರ ಮೇಲೆಯೇ ಏಕೆ ಈ ದಾಳಿ?
  3. ಕರ್ನಾಟಕದಲ್ಲಿ ಇದುವರೆಗೆ – ಕಳೆದ 12 ವರ್ಷಗಳಿಂದ ಒಬ್ಬನೇ ಒಬ್ಬ ಬಿಜೆಪಿ ನಾಯಕನ ಮೇಲೆ ಇಡಿ ದಾಳಿ ನಡೆದಿಲ್ಲ, ಏಕೆ?
  4. ಶೋಷಿತ ಸಮುದಾಯದವರು ಮಾತ್ರ ಏಕೆ ಇ.ಡಿ. ದಾಳಿಗೆ ಗುರಿ?

ಈ ಪ್ರಶ್ನೆಗಳ ಪತ್ರಕ್ಕೆ ಸಹಿ ಹಾಕಿರುವವರು : ವೆಂಕಟೇಶ್‌ ಎಚ್‌ ಆರ್‌, ನಾಗರಾಜ್‌ ಎಚ್‌, ಮದನ ಮೋಹನ ನಾಯಕ್‌, ಎಸ್ ಟಿ ಕೊಟ್ರೀಶ ಹೊನ್ನಜ್ಜರು ದೂರ, ಮಂಜುನಾಥ್‌ ಜೆ, ಪರಶುರಾಮ ಕುಮಾರ್ ಎ ಸ್ ಆರ್, ಲಕ್ಷ್ಮಣ ಮಂಡಲಗೇರಾ, ರಾಮು.ಎಚ್.ಎಸ್, ಕಂಬರಾಜ ಕೆಜೆ, ಎಸ್ ಟಿ ಕೊಟ್ರೀಶ ನಾಯಕ, ಮಂಜನಾಥ ಎನ್‌ ಆರ್‌, ಅಣ್ಣಪ್ಪ ಎಮ್‌ ಹೊದಿಗೆರ,
ಶ್ರೀನಿವಾಸ ವಿ, ನವೀನ್‌ ಕುಮಾರ್‌ ಟಿ ಎಸ್, ಶಿವಕುಮಾರ್‌ ಮಾಡಳ್‌, ಅನಿಲ್‌ ಕುಮಾರ್‌ ಚಿಕ್ಕದಾಳವಟ್ಟ, ನಿರುಪಾದಿ ಬ್ಯಾಡಗಿ

More articles

Latest article

Most read