ಎಸ್‌ಐಆರ್‌ ನೆಪದಲ್ಲಿ ಮತಗಳ್ಳತನ : ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿ ಚುನಾವಣಾ ಆಯೋಗದ ಕಚೇರಿ ಮುಂಭಾಗ ಸಿಎಂ ಸೇರಿ ಸಚಿವರಿಂದ ಧರಣಿ

ಬೆಂಗಳೂರು : SIR ನೆಪದಲ್ಲಿ ವೋಟ್ ಚೋರಿ ಆರೋಪದ ಹಿನ್ನಲೆ ತಪ್ಪಿತಸ್ಥರ ವಿರುದ್ಧ FIR ಆಗುವವರೆಗೂ ಇಲ್ಲಿಂದ ಕದಲಲ್ಲ. ಚುನಾವಣಾ ಆಯೋಗದ ಕಚೇರಿಯಿಂದ ಹೋಗಲ್ಲ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಾನು ನ್ಯಾಯ ಸಿಗುವವರೆಗೂ ಇಲ್ಲೇ ಕಾಯುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚುನಾವಣಾ ಆಯೋಗದ ಮುಂಭಾಗ ಹಠ ಹಿಡಿದು ಕುಳಿತಿದ್ದಾರೆ.

ಕ್ಯಾಬಿನೆಟ್‌ ಸಭೆ ರದ್ದುಗೊಳಿಸಿ ರಾಜ್ಯ ಚುನಾವಣಾ ಆಯೋಗದ ಕಚೇರಿ ಮುಂದೆ ಸಿ ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆಗೆ ಸಿಎಂ ಡಿಕೆಶಿ ಧರಣಿ ನಡೆಸುತ್ತಿದ್ದಾರೆ. ಚುನಾವಣಾ ಆಯೋಗದ ಕಚೇರಿ ಮೆಟ್ಟಿಲಲ್ಲೇ ಧರಣಿಗೆ ನಿರ್ಧರಿಸಿದ್ದಾರೆ.

ಪ್ರಕರಣ ದಾಖಲಿಸುವ ತನಕ ಇಲ್ಲಿಂದ ತೆರಳುವುದಿಲ್ಲ ಎಂದು ಚುನಾವಣಾ ಆಯೋಗದ ಕಚೇರಿಯಲ್ಲಿ ಸಿಎಂ ಡಿಕೆ ಶಿವಕುಮಾರ್​ ಪಟ್ಟು ಹಿಡಿದಿದ್ದಾರೆ. ಈ ವೇಳೆ ದಾಖಲೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲು 2-3 ದಿನ ಆಯೋಗ ಕಾಲಾವಕಾಶ ಕೇಳಿದೆ. ಎಫ್ಐಆರ್ ಪ್ರತಿಗಳನ್ನು ನಿಮಗೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳ ಜೊತೆಗೂ ಮಾತನಾಡಿಸುತ್ತೇನೆ. ತಕ್ಷಣ ಎಫ್ಐಆರ್ ಮಾಡಿ ಎಂದು ಡಿ.ಕೆ ಶಿವಕುಮಾರ್ ಪಟ್ಟು ಹಿಡಿದರು.

ಚುನಾವಣಾಧಿಕಾರಿಗೆ ಪತ್ರ ಬರೆದ ಸಿಎಂ
ಸೆ.22, 23, 24ರಂದು ಬಲ್ಕ್ ಆಗಿ ಫಾರ್ಮ್-7 ಸಲ್ಲಿಸಲಾಗಿದೆ. ಹೀಗಾಗಿ ಬಲ್ಕ್ ಆಗಿ ಫಾರ್ಮ್-7 ಸಲ್ಲಿಸಿದವರ ವಿರುದ್ಧ ತನಿಖೆ ಮಾಡಿ, ಅರ್ಹ ಮತದಾರರ ಹಕ್ಕು ರಕ್ಷಣೆ ಮಾಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಡಿಕೆ ಶಿವಕುಮಾರ್​ ಪತ್ರ ಬರೆದಿದ್ದಾರೆ

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 3,000, ಮೂಡಿಗೆರೆ ಕ್ಷೇತ್ರದಲ್ಲಿ 6,259, ಬಬಲೇಶ್ವರ ಕ್ಷೇತ್ರದಲ್ಲಿ 1,373, ನರಸಿಂಹರಾಜ ಕ್ಷೇತ್ರದಲ್ಲಿ 1,200, ನರಸಿಂಹರಾಜ ಕ್ಷೇತ್ರದಲ್ಲಿ 1,200 ಮತ್ತು ಭಾಲ್ಕಿ ಕ್ಷೇತ್ರದಲ್ಲಿ 2,285 ಫಾರ್ಮ್-7 ಸಲ್ಲಿಸಲಾಗಿದೆ. ಅಲ್ಪಸಂಖ್ಯಾತ, SC-ST, ಒಬಿಸಿ ಮತದಾರರನ್ನು ಗುರಿಯಾಗಿಸಿದ್ದಾರೆ. ರಾಜ್ಯದ ಇತರೆ ಕ್ಷೇತ್ರಗಳಲ್ಲಿ ಫಾರ್ಮ್-7 ಸಲ್ಲಿಸಲಾಗಿದೆ. ಹೀಗಾಗಿ ಕೂಡಲೇ ತನಿಖೆ ಮಾಡುವಂತೆ ಸಿಎಂ ಡಿಕೆ ಶಿವಕುಮಾರ್​ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಅಕ್ರಮವಾಗಿ ಫಾರ್ಮ್-7 ಸಲ್ಲಿಸಿದವರ ಮತ್ತು ನೀಡಿದವರು ವಿರುದ್ಧ ಕೇಸ್ ಹಾಕಿ. ಎಫ್ಐಆರ್ ದಾಖಲಾದ ನಂತರ ಕ್ರಿಮಿನಲ್ ಆ್ಯಕ್ಷನ್ ಆಗಬೇಕು ಎಂದಿದ್ದಾರೆ. ಇನ್ನು ಇದೇ ವೇಳೆ ಹಲವು ಕ್ಷೇತ್ರಗಳಲ್ಲಿ ನಡೆದ ಅಕ್ರಮಗಳ ಬಗ್ಗೆಯೂ ಚುನಾವಣಾ ಆಯೋಗಕ್ಕೆ ಸಿಎಂ ಡಿ.ಕೆ.ಶಿವಕುಮಾರ್​ ದಾಖಲೆ ಸಲ್ಲಿಸಿದರು.

More articles

Latest article

Most read