ಎದೆಯ ತೇವದ ಉಸಿರು |ಹಾಸನ ಎಂಬ ನನ್ನೂರಿನ  ಹೆಣ್ಣು ದನಿಗಳುʼ

ಈ ಕೃತಿಯು ಆಗಿ ಹೋದ ಮಹಿಳೆಯರ ಸಾಧನೆಗಳ ಹೆಜ್ಜೆ ಗುರುತುಗಳನ್ನು ದಾಖಲಿಸುವಷ್ಟೇ ಸಮರ್ಥವಾಗಿ ಹಾಸನದಲ್ಲಿರುವ ವರ್ತಮಾನದ, ಭವಿಷ್ಯದಲ್ಲಿನ ಮಹಿಳೆಯರ  ಇತಿಹಾಸದ ಸಾಧನೆಯ ವಿವಿಧ ಮೈಲಿಗಲ್ಲುಗಳ  ಹಿನ್ನೆಲೆಯ ಹೊರಳು ದಾರಿಗಳನ್ನು  ವಿವಿಧ  ಕೋನಗಳಲ್ಲಿ ಒಡ ಮೂಡಿಸಿದೆ. ಹಾಸನ ಜಿಲ್ಲಾ ಮಹಿಳಾ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಒಂದು ಪೂರಕ ಪಠ್ಯವಾಗಿ ಈ ಕೃತಿ ಉಪಯೋಗವಾಗುತ್ತದೆ. ಬದುಕು ಸಂಸ್ಕೃತಿಯ ಬಹುಮುಖ ಕಾರ್ಯ ಕಾರಣ ಸಂಬಂಧಗಳ ಹೂರಣವಾದ ಒಂದು ಸಂಗ್ರಹ ಯೋಗ್ಯ ಕೃತಿಯಾಗಿ ಇದು  ಮೂಡಿ  ಬಂದಿದೆ ದೇವಿಕಾ ನಾಗೇಶ್‌, ಲೇಖಕಿ.

ಬಡವರ ಊಟಿ ಯೆಂದು ಕರೆಯುವ ಹಾಸನ ಎಂಬ ಬೆರಗನ್ನು  “ಹಾಸನ ಮಣ್ಣಿನ ಹೆಣ್ಣು ದನಿಗಳು”  ತೆರೆದಿಡುವ ರೀತಿ ಕುತೂಹಲಕರವಾಗಿದೆ. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಯ ಮೂಲಕ ಅಯೋಜಿಸಲಾಗುವ “ಮಹಿಳಾ ಚೈತನ್ಯ ದಿನ”ವನ್ನು  ಮಾರ್ಚ್ 2025 ರಂದು ಕರ್ನಾಟಕದ ಹಾಸನದಲ್ಲಿ ಆಚರಿಸಲಾಯಿತು. ಇದರ ಅಂಗವಾಗಿ ಲೇಖಕಿ ರೂಪ ಹಾಸನ ಅವರ ಸಂಪಾದಕತ್ವದಲ್ಲಿ  ವಿನ್ಯಾಸಗೊಂಡ ಹೊತ್ತಿಗೆ ವಾಟ್ಸ್ ಆಪ್ ಗ್ರೂಪ್ ನಲ್ಲಿ ಅರಳಿದ  ಕೂಸು. ಹಾಸನದ ಮಹಿಳೆಯರ ಸಮಷ್ಟಿ  ಪ್ರಜ್ಞೆಯ ಸಾಕಾರ ರೂಪ ಪಡೆದದ್ದು ಅವಸರದಲ್ಲಿಯೇ ಆದರೂ ಕೃತಿಯೊಳಗೆ ಬರಹಗಾರರು ಕಲೆ ಹಾಕಿದ ಒಂದಷ್ಟು ಮಹಿಳೆಯರ ಸಂಕಥನದಲ್ಲಿ ಶ್ರದ್ಧೆ, ಸಾಮರ್ಥ್ಯ, ಅನಾವರಣ ಗೊಂಡ ಪರಿ ಅಪರೂಪದ್ದು.

ಕೃತಿಯ ಮೊದಲ ಭಾಗ ತಾಯಿಬೇರು: ಇಲ್ಲಿ 10 ಲೇಖನ, ಸಾಮುದಾಯಿಕ ಬೇರು-20, ಸಂಫಟನಾ, ಸೇವಾಬೇರು-5,

ಸಾಂಸ್ಥಿಕ ಬೇರು-3

ಭಾಗ-2 ರಲ್ಲಿ ಕಾಂಡಗಳು-22, ಕೊಂಬೆರೆಂಬೆಗಳು-3, ಚಿಗುರು-3. ಒಟ್ಟು  306 ಪುಟಗಳಿರುವ ಕೃತಿ.

ಸಂಪಾದಕರು ಹೇಳುವ ಮಿತಿಗೂ ಮೀರಿ  ಇಲ್ಲಿರುವ  ಅಗಾಧತೆಯನ್ನು ಪರಿಚಯಿಸುವ ರೀತಿಯಲ್ಲಿ ಇದು ವಿನ್ಯಾಸ ಗೊಂಡಿದೆ.

ಹುಟ್ಟಿನಿಂದ ಹಾಸನದವಳು ನಾನು ಎನ್ನುವ ಅಂತರಂಗದ ತೇವಕ್ಕೆ ಪಿಸುನುಡಿಗಳಾಗಿ ಕೇಳಿಸುವ ಇಲ್ಲಿನ ಧ್ವನಿಗಳು ಸಾಂಸ್ಕೃತಿಕ ವೈವಿಧ್ಯತೆಯಿರುವ ಹಾಸನವನ್ನು ನನ್ನೊಳಗೆ ಇಳಿಸಿತು. “ನೆಲದ ಅಸ್ಮಿತೆಯನ್ನು ಎತ್ತಿ ಹಿಡಿಯುವ ದಸ್ತವೇಜು ”ಎನ್ನುವ ಭಾನು ಮುಷ್ತಾಕ್ ಅವರ ಮುನ್ನುಡಿಯ ಮಾತುಗಳು ನ್ಯಾಯದ ಮರು ಸ್ಥಾಪನೆಯಾಗಿ ಭೂತಕಾಲದ ಸ್ಮರಣೆಯಾಗಿ ಇತಿಹಾಸದ ಪುಟಗಳಲ್ಲಿ ಉದ್ದೇಶ ಪೂರ್ವಕವಾಗಿ ಮರೆತ ಹೆಣ್ಣು ಧ್ವನಿಯ ಪ್ರತಿರೋಧವಾಗಿ ಮೂಡಿದ ಪ್ರಜ್ಞಾ ಪೂರ್ವಕ ಹೋರಾಟದ ದಾಖಲೆಯಾಗಿ, ಹಾಸನ ಮಣ್ಣಿನ ಅವಳ ಹೆಜ್ಜೆ ಗುರುತುಗಳ ಕಾಣ್ಕೆಯ ಸಾಮಾಜಿಕ ಜಾಗೃತಿಯಾಗಿ ಈಕೃತಿ ಮುಖ್ಯವಾಗುತ್ತದೆ.

ಸಾಮಾಜಿಕ ನ್ಯಾಯದ ತಕ್ಕಡಿಯಲ್ಲಿ ವಿಶ್ಲೇಷಿಸುವಾಗ ಹಾಸನದ ಪರಿಸರದಲ್ಲಿ ಈ ಜಿಲ್ಲೆಯ ಮೊದಲ ಡಾಕ್ಟರ್ ಪುಟ್ಟಮ್ಮ ನಷ್ಟೇ ಮುಖ್ಯರು ಸರಕಾರಿ ಶಾಲೆಯ ಸೇವೆಯಲ್ಲಿ ನಾಲ್ಕನೇ ದರ್ಜೆ ನೌಕರಿ ಮಾಡುತ್ತ ಶಾಲೆ ಬಿಟ್ಟ ಕೂಲಿಕಾರರ ಮಕ್ಕಳನ್ನು ಶಾಲೆಗೆ ಕರೆ ತಂದು ಮಕ್ಕಳ ಪ್ರೀತಿಯಲ್ಲಿ ಸಾರ್ಥಕ್ಯ ಕಂಡ, ಶಿಕ್ಷಣವು ಮಕ್ಕಳ ಉಸಿರಾಗಿಸುವಲ್ಲಿ ಶ್ರಮಿಸಿದ ಹಿರಿ ಜೀವ ಹನುಮವ್ವನದು. ಜಿಲ್ಲೆಯ ಮೊದಲ ಶಾಸಕಿ ದ್ಯಾವಮ್ಮ ಮಂಜಪ್ಪ ಕೃಷಿಕ ಮಹಿಳೆ.   ಜನ, ಜಾನುವಾರುಗಳ  ನಾಡಿ ಮಿಡಿತ ಬಲ್ಲ ಈಕೆ ಚುನಾವಣೆಯಲ್ಲಿ ಗೆದ್ದ ಸುದ್ದಿ ಬಂದಾಗ ನಾಟಿಮಾಡುತ್ತ ಹೊಲದಲ್ಲಿದ್ದರು. ಪ್ರತಿ ಗ್ರಾಮಕ್ಕೆ ಕುಡಿಯುವ ನೀರು, ಶಾಲೆ, ಮೂಲಭೂತ ಸೌಕರ್ಯ ದೊರೆಯಲಿ ಎಂಬ ಕಾಳಜಿ ಇವರದಾಗಿತ್ತು. ಸಮಾಜ ಕಲ್ಯಾಣ ಸಚಿವೆಯಾಗಿ ಕಾಂಗ್ರೆಸ್ ಪಕ್ಷದ ಮೊದಲ ಅಧ್ಯಕ್ಷೆಯಾಗಿ ಕರ್ನಾಟಕದ ಇತಿಹಾಸದಲ್ಲಿ ಜನಸೇವಾಸಕ್ತೆಯಾಗಿ ತನ್ನದೇ ಮಾದರಿ ಹುಟ್ಟು ಹಾಕಿದವರು ಯಶೋದರ ದಾಸಪ್ಪ. ಸಾರ್ವಜನಿಕ ಸೇವೆ, ಸಂಘಟನೆ ಅಧಿಕಾರ, ರಾಜಕಾರಣಗಳಲ್ಲಿ ತೊಡಗಿದ್ದು ಗಾಂಧಿ ತತ್ತ್ವದ ಅನುಯಾಯಿಯೂ ಆಗಿದ್ದು ಜನಸೇವಕಿಯಾಗಿ ರೂಪುಗೊಂಡವರು.

ಮೈಸೂರನ್ನು ಕರ್ಮ ಭೂಮಿಯಾಗಿಸಿಕೊಂಡು ಮಹಿಳೆಯರ ಹಕ್ಕುಗಳು, ಸ್ವಾತಂತ್ರ್ಯ ಸಮಾನತೆಯ ಉದ್ದೇಶದಿಂದ  ಹುಟ್ಟು ಹಾಕಿದ ಸಮತಾ ವೇದಿಕೆಯ ಮೂವರು ಗೆಳತಿಯರಲ್ಲಿ ಒಬ್ಬರಾದ ಡಾ. ವಿಜಯಾ ದಬ್ಬೆ ಹಾಸನ ಜಿಲ್ಲೆಯವರು. ಹಳ್ಳಿಯ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಹಗಲು ಗನಸಾಗಿದ್ದ ದಿನಗಳಲ್ಲಿ ಸ್ತ್ರೀವಾದಿ ಚಿಂತಕಿ, ಮಹಿಳಾ ಪರ ಹೋರಾಟಗಾರ್ತಿಯಾಗಿ ಸಾಹಿತ್ಯದ ಜೊತೆಗೆ ಜನಜಾಗೃತಿ ಮೂಡಿಸುವ ದೆಸೆಯಲ್ಲಿ ರತಿರಾವ್ ಮತ್ತು ಮೀರಾನಾಯಕ್ ಜೊತೆ ಕಣಕ್ಕಿಳಿದವರು ಈಕೆ.

ಇತಿಹಾಸವನ್ನು ಜನರ ಚರಿತ್ರೆಯಾಗಿ ಕಂಡ ಇತಿಹಾಸ ತಜ್ಞೆ ಡಾ ವಸು ಮಳಲಿ ಅವರನ್ನು ಪೊರೆದ ಮಣ್ಣು ಹಾಸನ ಜಿಲ್ಲೆ. ʼರಾಜಕೀಯ ದಾರ್ಶನಿಕ’ ನಾಗಿ ಬುದ್ಧನನ್ನು ಕಂಡ ಈಕೆ ಅಲ್ಲಮ, ಮಂಟೆಸ್ವಾಮಿ, ಅಂಬೇಡ್ಕರ್ ಇವರಲ್ಲಿ ಅಡಗಿದ್ದ ಬುದ್ಧ ಚಿಂತನೆ ಯ ಎಳೆಯನ್ನು  ಗುರುತಿಸಿದ್ದರು.

ಹಾಸನ ಜಿಲ್ಲೆಯ ಇತಿಹಾಸ ಪ್ರಸಿದ್ಧ ದೇವಾಲಯಗಳು ಬಸದಿಗಳು ಬೇಲೂರು, ಹಳೆಬೀಡು, ಶ್ರವಣ ಬೆಳಗೊಳದಲ್ಲಿವೆ. ಇಲ್ಲಿನ ಜನಜೀವನದ ಇತಿಹಾಸ ಶೈವ, ಜೈನ, ವೈಷ್ಣವ ಪರಂಪರೆ ಗಳ ನಡುವಿನ ಸಮಾನತೆ, ಸೌಹಾರ್ದತೆ ಮತ್ತು ಪರಧರ್ಮ ಸಹಿಷ್ಣುತೆ ಮತ್ತು ಇವರು ಮಹಿಳೆಯರನ್ನು ಸಮಾನ ಗೌರವದಿಂದ ಕಂಡು ನಾಡು ಕಟ್ಟಿದ ಹಿನ್ನೆಲೆಯ ಕತೆಗಳನ್ನು ಹೇಳುವ ಸಾವಿರಾರು ಶಿಲಾ ಶಾಸನಗಳು ಇಲ್ಲಿವೆ.

ಕರ್ನಾಟಕದ ರೈತ ಚಳುವಳಿಯ ರೋಮಾಂಚಕ ಇತಿಹಾಸದಲ್ಲಿ ಅಸಮಾನತೆಯ ಬೇಲಿ ಮುರಿದು ಮುಂಚೂಣಿಯಲ್ಲಿರುವ ಮಂಡ್ಯದ ಮಹಿಳಾ ಚೇತನಗಳಾದ ನಂದಿನಿ ಜಯರಾಮ್ ಮತ್ತು ಸುನಂದಾ ಜಯರಾಮ್ ಅವರ ಸಾಲಿನಲ್ಲಿ ನಿಲ್ಲುವವರು ಹಾಸನದ ಸರಳಾ ಜಗದೀಶ್, ತಿಮ್ಮಾಜಮ್ಮ ಮತ್ತು ದೇವಿರಮ್ಮ. ರೈತ ಸಂಘದಲ್ಲಿ ಮಹಿಳೆ ಪುರುಷರಿಬ್ಬರು ಸಮಾನರು ಎಂಬ ಸ್ಪಷ್ಟತೆಯಿದ್ದವರು ಸರಳ. ಇಲ್ಲಿನ ದುದ್ದ ಫೈರಿಂಗ್ ನಲ್ಲಿ ಮಗನನ್ನು ಕಳೆದುಕೊಂಡು ನೊಂದ ಜೀವ ದೇವಿರಮ್ಮ ಈ ನೋವನ್ನೇ ಹೋರಾಟದ ಕಿಚ್ಚಾಗಿಸಿಕೊಂಡು ಉರಿದ ಮೋಂಬತ್ತಿ .

ದಲಿತ ಸಂಘರ್ಷ ಸಮಿತಿಯ ಹೋರಾಟದಲ್ಲಿ ಹಾಸನದ ದಲಿತ ಮಹಿಳಾ ಮಣಿಗಳು ದೇಣಿಗೆಯೂ ಇದೆ. ಗಂಗಮ್ಮ, ರಂಗಮ್ಮ, ಕಮಲಮ್ಮ ಜಮೀನ್ದಾರಿ ಮೂಲದ ಕ್ರೂರ ವ್ಯವಸ್ಥೆಯ ಕುಲುಮೆಯಲ್ಲಿ ಬೆಂದು ಭುಗಿಲೆದ್ದ ದಲಿತ ಮಹಿಳೆಯರಾದರೆ ಹೆತ್ತವರ ವಲಸೆಯ ಮೂಲಕ ಹಾಸನ ಮಣ್ಣಿನಲ್ಲಿ ಅರಳಿದ ಆಂಧ್ರ ಮೂಲದ ಪ್ರಮೀಳ ಕೊಟ್ಟೂರು ಮತ್ತು ಶ್ರೀನಿವಾಸ ದಂಪತಿಗಳು ಈನೆಲದಲ್ಲಿ ಸಂಘಟನೆ ಶಕ್ತಿಯಾಗಿ ಬೆಳೆಯಲು ತಾಯಿಬೇರು ಗಳಿಗೆ ನೀರುಣಿಸಿ ಪೊರೆದವರು.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆ.ಎಸ್. ನಾಗರತ್ನಮ್ಮ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಉಪಾಧ್ಯಕ್ಷರಾಗಿ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ನಂತರ ಮೈಸೂರಿನ ಕ್ಷೇತ್ರವಾದ ಗುಂಡ್ಲು ಪೇಟೆಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಕರ್ನಾಟಕ ವಿಧಾನ ಸಭೆಯ ಮಹಿಳಾ ವಿರೋಧ ಪಕ್ಷದ ನಾಯಕಿ ಹಾಗೂ ಮೊದಲ ಮಹಿಳಾ ಸಭಾಪತಿಯಾಗಿ ಕಲಾಪವನ್ನು ಸಮರ್ಥವಾಗಿ ನಿಭಾಯಿಸಿದವರು. ರಾಜಕೀಯದಲ್ಲಿ90 ರ ನಂತರದ ದಶಕಗಳಲ್ಲಿ ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ಅವಕಾಶ ಪಡೆದು ಹಾಸನ ಜಿಲ್ಲೆಯಲ್ಲೂ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತುಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು  ಆಡಳಿತ ದ ಚುಕ್ಕಾಣಿ  ಹಿಡಿದು ಸಮರ್ಥವಾಗಿ ನಿಭಾಯಿಸಿಕೊಂಡು ಬಂದರೂ ಇವರು ಯಾರೂ ಶಾಸಕ,  ಸಂಸದರ ಸ್ಥಾನಕ್ಕೆ  ಸ್ಪರ್ಧಿಸಲಿಲ್ಲ.  ನಿರ್ಣಯ ತೆಗೆದುಕೊಳ್ಳುವ ಸ್ಥಾನಗಳಲ್ಲಿ  ಮಹಿಳೆ  ಹೇಗೆ ಕಡೆಗಣಿಸಲ್ಪಡುತ್ತಾಳೆ  ಎನ್ನುವುದನ್ನು ಇದು ಸೂಚ್ಯವಾಗಿ  ಹೇಳುತ್ತದೆ.

ಲಿಂಗ ಸಮಾನತೆಯನ್ನು ಆಗು ಮಾಡುವಲ್ಲಿ ನಿರ್ಧಾರವನ್ನು ತೆಗೆದು ಕೊಳ್ಳುವ ಸ್ಥಾನದಲ್ಲಿ ಮಹಿಳೆಯರು ಬರಬೇಕು ಎನ್ನುವ ಬೇಡಿಕೆ ತೀರ  ಹಳೆಯದು. ಈ  ಹಿನ್ನೆಲೆಯಲ್ಲಿ  ಗಮನಿಸುವಾಗ  ಹಾಸನದ ಮಹಿಳೆಯರು  ಉನ್ನತ  ಆಡಳಿತಗಳಲ್ಲಿ  ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ನಾವು  ಕಾಣುತ್ತೇವೆ. ಕೆ.ಎಂ. ಜಾನಕಿ, ವಿಜಯಲಕ್ಷ್ಮಿ  ನುಗ್ಗೇಹಳ್ಳಿ, ವಿ. ರಶ್ಮಿ ಮಹೇಶ್, ಕೆ. ಜ್ಯೋತಿ ಹಾಗೂ ಇನ್ನೂ ಹಲವರಿದ್ದಾರೆ. ಕಮಲ ಕಲಿವೀರ್ ಅವರು ಗಾಂಧಿ ಮತ್ತು ಅಂಬೇಡ್ಕರ್ ಪ್ರಭಾವಕ್ಕೊಳಗಾಗಿ ದಲಿತ ಹೆಣ್ಣು ಮಕ್ಕಳಿಗೆ ಆಲೂರು, ಆಡುವಳ್ಳಿಗಳಲ್ಲಿ ಶಾಲೆಗಳನ್ನು  ತೆರೆದರು. ಮಲೆನಾಡಿನ  ಕೂಲಿ ಕಾರ್ಮಿಕ  ಮಕ್ಕಳಿಗೆ  ಬಾಳುಪೇಟೆ ಯಲ್ಲಿ ಇವರು ತೆರೆದ  ಶಾಲೆ ಒಂದಷ್ಟು  ಬಡ ಹೆಣ್ಣು ಮಕ್ಕಳ ಬದುಕಿನಲ್ಲಿ ಅರಿವಿನ ಬೆಳಕು ಹಚ್ಚಿದೆ. ಸಹಕಾರಿ  ಧುರೀಣ ಎಲ್.ಟಿ.ಕಾರ್ಲೆಯವರ ಕಾರ್ಲೆಗ್ರಾಮದಲ್ಲಿ ಕ್ರಿ.ಶ 1972ರಲ್ಲಿ ಯಶೋಧರಾ ದಾಸಪ್ಪ ‘ಕಸ್ತೂರ ಬಾ  ಕನ್ಯಾ ವಿದ್ಯಾಲಯ’ ಎನ್ನುವ ಶಿಕ್ಷಣ ಸಂಸ್ಥೆಯನ್ನು ಗ್ರಾಮೀಣ ಹೆಣ್ಣು  ಮಕ್ಕಳ ಶಿಕ್ಷಣಕ್ಕಾಗಿ  ಸ್ಥಾಪಿಸಿದ್ದರು.

ಅರಸೀಕೆರೆಯ ಕಸ್ತೂರ ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾಸನ ಜಿಲ್ಲೆಯ ಲೇಖಕಿಯರ ಬಳಗ, ಕೆಂಪು  ಚೆಲುವಾ ಜಮ್ಮಣ್ಣಿ  ಸಮಾಜ  ಈ ಮೂರೂ ಸಂಸ್ಥೆಗಳು ಹಾಸನ ಜಿಲ್ಲೆಯ ಮಹಿಳಾ ಸಬಲೀಕರಣ ದ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ನೀರೆರೆದು ಪೋಷಿಸಿದ  ಸಾಂಸ್ಥಿಕ  ಬೇರುಗಳು.

ಬಾನು ಮುಷ್ತಾಕ್ ಲೇಖಕಿಯಾಗಿ, ವಕೀಲೆಯಾಗಿ ಹಾಸನದಲ್ಲಿ ಖ್ಯಾತರದವರು. ವಕೀಲರಾಗಿ, ಪರಿಸರ, ಸಮಾಜ ಸೇವೆಯಲ್ಲಿ ತೊಡಗಿಕೊಂಡ ಇನ್ನೊಬ್ಬರು ಎಂ. ಬಿ. ಗಿರಿಜಾಂಬಿಕ. ಮಹಿಳೆಯರಿಗೆ, ಮಕ್ಕಳಿಗೆ ಉಚಿತ ಕಾನೂನು ನೆರವು ನೀಡುವ ಮೂಲಕ ಜನಾನುರಾಗ ಗಳಿಸಿದ್ದರು. ಸಮಾಜಮುಖಿಯಾಗಿ ತೊಡಗಿಸಿಕೊಂಡ ಹೀಗೆ ಇನ್ನೂ ಹಲವು ಮಹಿಳಾ ವಕೀಲರಾಗಿ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವವರು ಇಲ್ಲಿ  ಇದ್ದಾರೆ.

ಗಾರ್ಮೆಂಟ್ ಉದ್ದಿಮೆಗಳಲ್ಲಿ ಮಹಿಳೆಯರು ಬಹು ಸಂಖ್ಯೆಯಲ್ಲಿ ತೊಡಗಿ ಕೊಂಡಿದ್ದಾರೆ. ಉದ್ಯಮಿಗಳಾಗಿ ಮುನ್ನುಗ್ಗಿದವರು ಕೆಲವರು. ಇವರಲ್ಲಿ ನಾಗರಾತ್ನ  ಹುಚ್ಚವೀರಯ್ಯ, ಶ್ವೇತಾ ಮಂಜುನಾಥ್ ಆಹಾರ ಉದ್ಯಮ ದಲ್ಲಿ ತೊಡಗಿದ್ದಾರೆ. ಶ್ವೇತಾ ‘ಅವೇಕ್ ರೈಸಿಂಗ್ ಸ್ಟಾರ್ ಅವಾರ್ಡ್’ ಪಡೆದಿದ್ದಾರೆ. ನವ್ಯ (‘ಕಾರ್ಗೋಡ್ಸ್ ವೈಲ್ಡ್ ಫಾರೆಸ್ಟ್‘) ಮತ್ತು ಶೃತಿ (’ಅವನಿ ಅರ್ಗ್ಯಾನಿಕ್‘ )ಸಾವಯುವ ಕೃಷಿಯ ಒಲವು ಇದ್ದವರು. ಉದ್ಯಮಿಗಳಾಗಿ ಹೊಸ ಶಕೆ ಬರೆದವರು. ಹೀಗಿದ್ದೂ ಪ್ರಯೋಗ ಶೀಲತೆಯಲ್ಲಿ  ಒಲವು ಇರುವ ಉದ್ಯಮ ಶೀಲ ಮಹಿಳೆಯರ  ಸಂಖ್ಯೆ  ಇಲ್ಲಿ ಬಹುತೇಕ  ಕಡಿಮೆಯೇ ಇದೆ ಎನ್ನುವುದು ಗಮನಾರ್ಹ.

ಪ್ರಸಿದ್ಧ ಮಹಿಳಾ ಬರಹಗಾರ್ತಿಯರ ಸಾಲಿನಲ್ಲಿ ಕವಯಿತ್ರಿಯರಾದ ಸ.ಉಷಾ, ಜ.ನಾ.ತೇಜಶ್ರೀ, ಎಂ.ಆರ್.ಕಮಲ, ಕಾದಂಬರಿಗಾರ್ತಿಯಾರಾದ ಮಂಗಳಾ ಸತ್ಯನ್, ನುಗ್ಗೇಹಳ್ಳಿ ಪಂಕಜ, ಪತ್ರಿಕೋದ್ಯಮದ ಸುಶೀಲ ಸುಬ್ರಮಣ್ಯ ಹೀಗೆ ಇನ್ನೂ ಹಲವರಿದ್ದಾರೆ. ಈ  ಕೃತಿ ಯ  ಸಂಪಾದಕಿ  ರೂಪ ಹಾಸನ  ಈ  ನೆಲವನ್ನು ಕರ್ಮ ಭೂಮಿ ಯಾಗಿ ಮಾಡಿಕೊಂಡು ದುಡಿದದ್ದು ಬರೀ ಬರಹಗಾರ್ತಿಯಾಗಿ ಮಾತ್ರವಲ್ಲ. ಇವರು ಮಹಿಳೆಯರ ಮತ್ತು  ಮಕ್ಕಳ ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ನಡೆಸಿದ ಹೋರಾಟ ಉಲ್ಲೇಖನೀಯವಾದದ್ದು.

ಕನ್ನಡ ಚಿತ್ರ ರಂಗದಲ್ಲಿ ಎರಡು ದಶಕ ಕಾಲ ನಟಿಯಾಗಿ ಜನಮನ್ನಣೆ ಗಳಿಸಿದ ಆರತಿ ಹಾಸನದವರು. ಶೃತಿ, ಪ್ರಣೀತ ಸುಭಾಷ್, ನಂದಿತಾ, ಸಂಗೀತ ಹೀಗೆ ಇನ್ನೂ ಹಲವರು ಕನ್ನಡ ಹಾಗೂ ಇತರ ಬೇರೆಬೇರೆ ಭಾಷೆಯ ಚಲನ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ.

ಹಾಸನ ಜೆಲ್ಲೆಯ ಹೆಮ್ಮೆ ಗಂಗಮ್ಮ ಎಚ್, ಜಿ.ಅಪ್ಸರ, ಸಿಂಚನಾ,ಕೆ.ಎನ್, ಮಧುರ ಹೀಗೆ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆದ ಕ್ರೀಡಾ ಪ್ರತಿಭೆಗಳು.

ಖ್ಯಾತ ಸಂಗೀತ ಕಲಾವಿದ ರಾದ ರತ್ನಮಾಲ ಪ್ರಕಾಶ್ ಹಾಸನದವರು. ನಾಟ್ಯರಾಣಿ ಶಾಂತಲೆಯ ಆಡುಂಬೊಲವಾಗಿದ್ದ ಬೇಲೂರು, ಹಳೇಬೀಡು ಇರುವುದು ಹಾಸನದಲ್ಲಿಯೇ. ಹೊಯ್ಸಳ ಶಿಲ್ಪಕಲೆ ಲೋಕ ಪ್ರಸಿದ್ಧವಾದದ್ದು. ಖ್ಯಾತ ನೃತ್ಯ ಕಲಾವಿದರಾದ ಉಷಾ ದಾತಾರ್ ಗೆ  ಕೆಲ ಕಾಲ ಹಾಸನದಲ್ಲಿ  ಕೇರಳ ಮೂಲದ ಕಣ್ಣನ್ ಮಾರಾರ್ ಗುರುವಾಗಿದ್ದರಂತೆ. ಇವರಲ್ಲದೆ ಇನ್ನೂ ಹಲವು ಹಿರಿ  ಕಿರಿಯ  ಪ್ರತಿಭೆ ಗಳ  ಪಟ್ಟಿ  ಇಲ್ಲಿದೆ.

ಸೌಭಾಗ್ಯ. ಸಿ ವೃತ್ತಿ ಯಲ್ಲಿ  ಶಿಕ್ಷಕರು. ಪ್ರವೃತ್ತಿಯಲ್ಲಿ  ಸಮಾಜ ಸೇವಕರು. ಇವರು ಬೇಲೂರಿನವರು, ಸಂಘಟನೆ ಹೋರಾಟದಲ್ಲಿ ತೊಡಗಿಕೊಂಡವರು. ಹಾಸನದಂತಹ ಜಿಲ್ಲೆಯಲ್ಲಿ ನೆಲೆ ನಿಂತು 1962ರಲ್ಲಿ ‘ಸದರ್ನ್ ಎಕನಾಮಿಸ್ಟ್’ ಎಂಬ ಆಂಗ್ಲ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿ ಇದೀಗ 92ರ ಹರೆಯದಲ್ಲೂ ಅದನ್ನು  ಮುನ್ನಡೆಸುವ ಅಪರೂಪದ ಅರ್ಥಶಾಸ್ತ್ರಜ್ಞೆ  ಸುಶೀಲ  ಸುಬ್ರಮಣ್ಯ  ಹಾಸನದ “ನಿತ್ಯ  ಹಸಿರಿನ ಯುವತಿ”.

ಸಮುದಾಯ/ಸೇವಾಬೇರುಗಳಾಗಿ ಕೃತಿಯಲ್ಲಿ ಗುರುತಿಸಿರುವ ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಆಶಾ, ಬಿಸಿಯೂಟ ತಾಯಂದಿರು ಒಂದಲ್ಲ ಒಂದು ರೀತಿಯಲ್ಲಿ ಸಮುದಾಯದ ಜೀವನಾಡಿಗಳು. ಶಿಕ್ಷಣ ಮತ್ತು ಆರೋಗ್ಯ ಸೇವೆ ಜನ ಸಾಮಾನ್ಯರ ಬಳಿಗೆ ತಲುಪುವಂತೆ ಶ್ರಮಿಸುವ ಇವರ ಸೇವೆ ಹಾಸನ ಜಿಲ್ಲೆಯಲ್ಲಿಯೂ ಸ್ಮರಿಸಲೇ ಬೇಕಾಗಿರುವಂತಹದ್ದು.

ಹಾಸನ ಜಿಲ್ಲೆಯ ಭವಿಷ್ಯದ ಭರವಸೆಗಳಾಗಿ ಹಿರಿಯರು ಗುರುತಿಸಿರುವ ಚಿಗುರುಗಳು ಡಾ.ಶ್ರೀಯಾ ವೈದ್ಯಕೀಯ ವೃತ್ತಿಯಲ್ಲಿರುವ ನತ್ಯ ಹೀಗೆ ವಿವಿಧ ಹವ್ಯಾಸಗಳಿರುವ ಬಹುಮುಖ ಪ್ರತಿಭೆಗಳು. ದೇಶ ಸೇವೆಗಾಗಿ ಸೈನಿಕಳಾಗಿ ವಿಶ್ವಶಾಂತಿ ಸೇನಾ ಪಡೆಯಲ್ಲಿರುವ ಎಂ.ಬಿ.ಪ್ರೀತಿ, ಡೆಕ್ಕನ್ ಹೆರಾಲ್ಡ್  ಚೇಂಜ್ ಮೇಕರ್ ಪ್ರಶಸ್ತಿ ಪಡೆದಿರುವ ಶ್ವೇತ ಎಚ್ .ಕೆ. ರಂಗಭೂಮಿಯಲ್ಲಿ ತನ್ನ ಛಾಪು ಮೂಡಿಸುತ್ತಿರುವಾಕೆ. ಈ ಮೂವರೂ ಸ್ವಾತಂತ್ರ್ಯ, ಸಮಾನತೆ, ಮೈತ್ರಿಭಾವವನ್ನು ಬದುಕಿನ ಧ್ಯೇಯವಾಗಿರಿಸಿಕೊಂಡು ಮುನ್ನಡೆಯುತ್ತಿರುವವರು.

ಒಟ್ಟಾರೆಯಾಗಿ ಹಾಸನ ಜಿಲ್ಲೆ ಮಲೆನಾಡು ಮತ್ತು ಬಯಲು ಸೀಮೆಯ ಒಂದು ವಿಶಿಷ್ಟ ಸಂಗಮ. ಇಲ್ಲಿನ ಮಲೆನಾಡಿನ ಹಳ್ಳಿ  ಮೂಲೆಯ ಕಾಫಿ ಎಸ್ಟೇಟ್ ನಲ್ಲಿ ಹುಟ್ಟಿ ಬಾಲ್ಯ ಕಳೆದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬದುಕುತ್ತಿರುವ ನನಗೆ ಕಾಣಲಾಗದ ಹಾಸನದ ಏನುಂಟು ಏನಿಲ್ಲ ಇಲ್ಲಿ ಎನ್ನುವ ವೈವಿಧ್ಯಮಯ ಜಗತ್ತನ್ನು ಈ  ಕೃತಿ ಪರಿಚಯಿಸಿದೆ. ಆಡು ಮುಟ್ಟದ ಸೊಪ್ಪಿಲ್ಲ ಮಹಿಳೆಯರು ಕೈಯಾಡಿಸದ ಕ್ಷೇತ್ರವಿಲ್ಲ ಎನ್ನುವ ಮಾತಿಗೆ ಹಾಸನ ಜಿಲ್ಲೆಯ ಮಹಿಳೆಯರೂ ಹೊರತಾಗಿಲ್ಲ. ಈ ನೆಲದ ಕಂಪನ್ನು ಸಾಹಿತ್ಯ, ಕಲೆ, ಕ್ರೀಡೆ, ಸಾಮಾಜಿಕ, ಆರ್ಥಿಕ, ರಾಜಕೀಯ ಹೀಗೆ ವಿವಿಧ ರಂಗಗಳಲ್ಲಿ ಪಸರಿಸಿದ ಇಲ್ಲಿನ ಮಹಿಳೆಯರು ಪುರುಷರಷ್ಟೇ ಸಮರ್ಥರು. ಈ ಕೃತಿಯು ಆಗಿ ಹೋದ ಮಹಿಳೆಯರ ಸಾಧನೆಗಳ ಹೆಜ್ಜೆ ಗುರುತುಗಳನ್ನು ದಾಖಲಿಸುವಷ್ಟೇ ಸಮರ್ಥವಾಗಿ ಹಾಸನದಲ್ಲಿರುವ ವರ್ತಮಾನದ, ಭವಿಷ್ಯದಲ್ಲಿನ ಮಹಿಳೆಯರ  ಇತಿಹಾಸದ ಸಾಧನೆಯ ವಿವಿಧ ಮೈಲಿಗಲ್ಲುಗಳ  ಹಿನ್ನೆಲೆಯ ಹೊರಳು ದಾರಿಗಳನ್ನು  ವಿವಿಧ  ಕೋನಗಳಲ್ಲಿ ಬರಹದಲ್ಲಿ  ಒಡ ಮೂಡಿಸಿದೆ.   ಹಾಸನ ಜಿಲ್ಲಾ ಮಹಿಳಾ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಒಂದು ಪೂರಕ ಪಠ್ಯವಾಗಿ ಈ ಕೃತಿ ಉಪಯೋಗವಾಗುತ್ತದೆ. ಬದುಕು ಸಂಸ್ಕೃತಿಯ ಬಹುಮುಖ ಕಾರ್ಯ ಕಾರಣ ಸಂಬಂಧಗಳ ಹೂರಣವಾದ ಒಂದು ಸಂಗ್ರಹ ಯೋಗ್ಯ ಕೃತಿಯಾಗಿ ಇದು  ಮೂಡಿ ಬಂದಿದೆ.

ದೇವಿಕಾ ನಾಗೇಶ್, ಮಂಗಳೂರು
ಲೇಖಕಿ

ಇದನ್ನೂ ಓದಿ- ಕೃಷ್ಣ ಬೈರೇಗೌಡರ ಕಾರ್ಪೊರೇಟ್ ಸ್ಟೈಲೂ ಪ್ರಜಾತಂತ್ರದ ಸೋಲೂ

More articles

Latest article

Most read