ಈ ಒಪ್ಪು ಒಪ್ಪಿತವೇ…?

ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಹೋರಾಟಗಳು ಯಾವತ್ತೂ ದೇಶದ್ರೋಹವಲ್ಲ. ಅಂತಹ ಪ್ರಶ್ನಿಸುವ ಅವಕಾಶವಿದ್ದರಷ್ಟೆ ಅದು ಪ್ರಜಾಪ್ರಭುತ್ವವೆನ್ನಲು ಸಾಧ್ಯ. ಅಸಲಿಗೆ ನಮಗೆ ಸ್ವಾತಂತ್ರ್ಯ ದೊರೆತಿದ್ದೇ ಇಂತಹ ಹೋರಾಟಗಳಿಂದ ಎನ್ನುವುದನ್ನು ಮರೆಯಲಾಗದು. Gen Z ಗಳ ಈ ಗೆಲುವು ಮತ್ತಷ್ಟು ಸಮಾಜಮುಖಿ ಹೋರಾಟಗಳಿಗೆ ಪ್ರೇರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ ಶಂಕರ್‌ ಸೂರ್ನಳ್ಳಿ, ಲೇಖಕರು.

ಇವತ್ತು ದೇಶ ಮತ್ತು ರಾಜ್ಯದಲ್ಲಿ ಎರಡು ಬಗೆಯ ಒಪ್ಪು (ತಿದ್ದುಪಡಿ / ಸಮಜಾಯಿಶಿಕೆ) ಗಳು ಸುದ್ದಿಯಲ್ಲಿವೆ. ಒಂದು ನಮ್ಮ ರಾಜ್ಯ ಬಿಜೆಪಿ ಪಕ್ಷದ ನಾಯಕ ಸಿಟಿ ರವಿಯವರ ಮುಲ್ಲಾನಿಗೂ ಈ ನೀಟ್ ಗೂ ಏನ್ ಸಂಬಂಧ? ಮುಲ್ಲನ ಎದೆ ಸೀಳಿದರೆ ನಾಲ್ಕ್ ಅಕ್ಷರ ಇರೋಲ್ಲ  ಅಂತಂದು ಭಾರೀ ವಿರೋಧ ಎದುರಾದ ಮೇಲೆ ಅದು ಹಾಗಲ್ಲ ಮುಲ್ಲಾ ಅಂದರೆ ಮುಸಲ್ಮಾನ ಅಂತ ನಾ ಹೇಳಿದ್ದಲ್ಲ ಕಾರಿಗೆ ಬೆಂಕಿ ಹಚ್ಚುತ್ತಿದ್ದನಲ್ಲ ಅವನಿಗಷ್ಟೇ ಅದನ್ನು ಹೇಳಿದ್ದು (ಅಸಲಿಗೆ ಆ ವೀಡಿಯೋಗೂ ಮೊನ್ನಿನ ಪ್ರತಿಭಟನೆಗೂ ಸಂಬಂಧವೇ ಇದ್ದಿರಲಿಲ್ಲ ಅದು ಬಿಹಾರದ ಹಳೆಯ ವೀಡಿಯೊ) ಎಂದು ಸಮಜಾಯಿಶಿಕೆ ಕೊಡ ಹೋದರು. ಅವರ ಚರಿತ್ರೆ ನೋಡಿದಾಗ ಅವರು ನಿಜಕ್ಕೂ ಯಾರ ಕುರಿತಾಗಿ ಇದನ್ನು ಅಂದಿದ್ದು  ಅನ್ನೋದು ಅರ್ಥೈಸೋದು ಕಷ್ಟವೇನಲ್ಲ  ಅದರೂ ಒಂಥರ ಇದೊಂದು ಗೇಮ್. ಅಂದರೆ ನಾಳೆ ಮತ್ತದೇ ಇದೇ ಕಥೆ.

ಮತ್ತೊಂದು ಸಿ ಜೆ ಐ ಸಾಹೇಬರದ್ದು ಅವರ ಪ್ರಕಾರ ಅವರ ಕುಖ್ಯಾತ ’ಕಾಕ್ರೋಚ್” ಹೇಳಿಕೆ ಯುವ ಜನರ ಕುರಿತಾಗಿ ಹೇಳಿದ್ದಲ್ಲವಂತೆ, ಅದನ್ನು ತಪ್ಪಾಗಿ ಅರ್ಥೈಸಲಾಗಿದೆಯಂತೆ. ಇದು ಇನ್ನೊಂದು ಕಥೆ. ಇಲ್ಲಿ ಗಮನಿಸಲೇ ಬೇಕಿರುವಂತಹದ್ದೇನೆಂದರೆ ಮೇಲಿನ ಇಬ್ಬರು ಮಹನೀಯರುಗಳು ಕೂಡ ಸಾಮಾನ್ಯರಲ್ಲ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವಂತವರು. ಒಬ್ಬರು ನ್ಯಾಯಾಂಗಕ್ಕೆ ಸಂಬಂಧಿಸಿದಂತವರಾಗಿದ್ದರೆ  ಮತ್ತೊಬ್ಬರು ಶಾಸಕಾಂಗಕ್ಕೆ ಸಂಬಂಧಿಸಿದಂತವರು.

ಮಾನ್ಯ ಸಿಟಿ ರವಿಯವರು ಹಿಂದುತ್ವದ ಹೋರಾಟ ಗೌಜು ಗದ್ದಲದ ಹಿನ್ನೆಲೆಯಿಂದಲೇ ಪರಿಚಿತರಾದಂತವರು. ಶೂದ್ರ ಸಮುದಾಯಕ್ಕೆ ಸೇರಿದ ಇವರ ಹೋರಾಟದ ಒಡನಾಡಿ ದಿವಂಗತ ಮಹೇಂದ್ರ ಕುಮಾರ್ ರವರು ಸಂಘಟನೆಗಳ ರಾಜಕೀಯ ಹಪಾಹಪಿತನಗಳಿಗೆ ಬೇಸತ್ತು ಅಲ್ಲಿಂದ ಹೊರ ಬಂದು ಜನಪರವಾಗಿ ಬದುಕುವ ಸಲುವಾಗಿ ಬಳಿಕ ಜನಜಾಗೃತಿಯ ಕಾರ್ಯಕ್ಕಿಳಿದಿದ್ದರು. ಒಂದು ವೇಳೆ ಅವರು ಮನಸ್ಸು ಮಾಡಿದ್ದರೆ ಸಿಟಿ ರವಿಯವರಿಗೂ ಹೆಚ್ಚಿನ ಸಂಘಟನಾತ್ಮಕ ಗುಣವನ್ನು ಹೊಂದಿದ್ದ ಅವರು ಪಕ್ಷದಲ್ಲಿ ಇವರಿಗಿಂತಲೂ ಎತ್ತರಕ್ಕೆ ಮಿಂಚುತ್ತಿದ್ದರು. ಆದರೆ, ಧರ್ಮಕಾರಣದ ವಾಸ್ತವತೆಯ ಅರಿವಾದ ಬಳಿಕ ಅವರು ತಮ್ಮ ಹಿಂದಿನ ನಿಲುವನ್ನು ಬದಲಿಸಿ ಅಲ್ಲಿಂದ ಹೊರಬಂದರು. ಹಾಗಂತ ಸಿಟಿ ರವಿಯವರದ್ದು ಇಲ್ಲಿ ತಪ್ಪು ಎಂದು ಹೇಳಲಾಗದು. ಧರ್ಮ ಧರ್ಮಗಳೊಳಗೆ ದ್ವೇಷ ಕಾರುವ,  ಪ್ರಚೋದಿಸುವ ಕೆಲಸ ನಿಲ್ಲಿಸಹೋದರೆ ಪಕ್ಷದಲ್ಲಿ ಅವರ ಮಾರ್ಕೆಟ್ ವ್ಯಾಲ್ಯೂ ಕುಸಿಯುವುದೆಂದು ಅವರಿಗೂ ಗೊತ್ತು. ಹಾಗಾಗಿ ಈ ರೀತಿಯ ಕೋಮು ಸೈಕಲ್ ತುಳಿಯುತ್ತಲೇ ಇರಬೇಕು. ನಿಲ್ಲಿಸಿದರೆ ಮೂಲೆಗುಂಪು ಅಷ್ಟೆ.

1982 ರ ಹಳೆಯ ನಾಣ್ಯವನ್ನು ನೋಡಿದರೆ ಅದರಲ್ಲಿ ಒಂದು ಚಿತ್ರವನ್ನು ಅಚ್ಚು ಹಾಕಲಾಗಿದೆ. ಅದು 82ರ ಏಷ್ಯನ್ ಗೇಮ್ಸ್ ನೆನಪಲ್ಲಿ ಮುದ್ರಿಸಲಾದ ಜಂತರ್ ಮಂತರ್ ನ ಖಗೋಳ ವೀಕ್ಷಣಾಲಯಕ್ಕೆ ಸಂಬಂಧಿಸಿದ ಸನ್ ಡಯಲ್ ಚಿತ್ರ.  18 ನೇ ಶತಮಾನದಲ್ಲಿ ಮಹಾರಾಜಾ ಸವಾಯಿ ಜೈ ಸಿಂಗ್ ನಿರ್ಮಿಸಿದ ಜಂತರ್ ಮಂತರ್ ಮೊನ್ನೆ ಮತ್ತೆ ಸುದ್ದಿಗೆ ಬಂತು. ಸೂರ್ಯ ಚಂದ್ರ ಇತ್ಯಾದಿ ಖಗೋಳ ವಿಜ್ಞಾನದ ಅಧ್ಯಯನಕ್ಕಾಗಿರುವ ಈ ಸ್ಥಳ ಮೊನ್ನೆ ಮಾನವ ಚಂದ್ರನ ಮೇಲೆ ಕಾಲಿಟ್ಟ ದಿನದಂದು (ಜುಲೈ 20) ಮತ್ತೊಂದು ಇತಿಹಾಸವನ್ನು ಬರೆದಿತ್ತು.  ಪ್ರಸ್ತುತ ಸರಕಾರ ಅಧಿಕಾರಕ್ಕೇರುವ ಹೊತ್ತಲ್ಲಿ (12 ವರ್ಷದ ಹಿಂದೆ) ಟಿ ವಿ ಮುಂದೆ ಕೂತು ಕಾರ್ಟೂನ್ ನೋಡುವ ಚಿಲ್ಟುಗಳಾಗಿದ್ದ ಒಂದು ವರ್ಗ (Gen Z) ಎಲ್ಲರೂ ಅನುಮಾನದಿಂದಲೇ ನೋಡುತ್ತಿದ್ದರೂ (ಇವೇನ್ ಮಾಡ್ತವೆ ಎಂದು) ಸಹ ಅದನ್ನೆಲ್ಲ ಮೆಟ್ಟಿ ನಿಂತು ತಮ್ಮ ಶಕ್ತಿಯನ್ನು ಜಗತ್ತಿಗೇ ತೋರಿದಂತಹ ದಿನವದು.

ಬ್ರಿಟಿಷರ ಕಾಲದಲ್ಲಿನ ಪಳೆಯುಳಿಕೆಯ ಪದ ಲಾರ್ಡ್, ಮೈ ಲಾರ್ಡ್ ಗಳ ಪ್ರಸ್ತುತತೆ ಈಗ ಚರ್ಚಾರ್ಹ ವಿಚಾರ. ಆದರೂ ಇಂದಿಗೂ ಸಹ ನ್ಯಾಯಾಧೀಶರೆಂದರೆ ಅದು ನಿಸ್ಸಂಶಯವಾಗಿ ಗೌರವದ ಮತ್ತು ಘನತೆವೆತ್ತ ಸ್ಥಾನವೆಂದೇ ಜನರ ನಂಬಿಕೆಯಿದೆ. ಹೀಗಿದ್ದೂ ಕೂಡ ಅವರೂ ಕೂಡ ಮನುಷ್ಯರೇ. ಅವರಲ್ಲೂ ತಪ್ಪು ಒಪ್ಪುಗಳೆಲ್ಲ ಸಹಜವೇ. ಅದರಲ್ಲೇನು ವಿಶೇಷವಿರದು. ಅಂಥವರಿಂದ  ಯಾವುದೋ ತರಾತುರಿಯಲ್ಲಿ ಬಂದಂತಹ ’ಕಾಕ್ರೋಚ್” ಎನ್ನುವ ಪದ ಬಳಿಕ ದೇಶದಲ್ಲಿ ದೊಡ್ಡ ಸಂಚಲನಕ್ಕೇ ನಾಂದಿಯಾಯಿತು  

ಈ ರೀತಿ ಹೀಗಳಿಕೆಗೆ ಬಳಸಲ್ಪಟ್ಟ ಪದವೇ ಬಳಿಕ ಒಂದು ದೊಡ್ಡ ಚಳುವಳಿಗೆ ನಾಂದಿಯಾಗಿ ಅನೇಕ ಅಡೆತಡೆ (ಖರೀದಿತ ಮಾಧ್ಯಮಗಳ ವ್ಯವಸ್ಥಿತ ಅಪಪ್ರಚಾರ, ಪ್ರಭುತ್ವದ ತಡೆಗಳು ಇತ್ಯಾದಿ) ಗಳನ್ನು ಮೆಟ್ಟಿನಿಂತು ಕಾರ್ಯಸಾಧನೆ ಮಾಡಿದ್ದೂ ವಿಶೇಷವೇ. ಇಲ್ಲಿ ಯಾರೋ ಮಂತ್ರಿಯೊಬ್ಬನ  ರಾಜೀನಾಮೆ ಪಡೆದದ್ದು ದೊಡ್ಡ ಸಂಗತಿ ಖಂಡಿತ ಅಲ್ಲ. ಹಿಂದೆಯೂ ದೊಡ್ಡ ಮಟ್ಟದ ರೈತ ಹೋರಾಟ ಇನ್ನಿತರ ವಿರೋಧಗಳನ್ನು ವ್ಯವಸ್ಥಿತವಾಗಿ ಮಟ್ಟ ಹಾಕಿ ಬೀಗಿದ ಒಂದು ವ್ಯವಸ್ಥೆಯನ್ನು ಹಠ ಬಿಡದೇ ಮಣಿಸಿದ್ದೇ ಇಲ್ಲಿ ಮುಖ್ಯ.  ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಹೋರಾಟಗಳು ಯಾವತ್ತೂ ದೇಶದ್ರೋಹವಲ್ಲ. ಅಂತಹ ಪ್ರಶ್ನಿಸುವ ಅವಕಾಶವಿದ್ದರಷ್ಟೆ ಅದು ಪ್ರಜಾಪ್ರಭುತ್ವವೆನ್ನಲು ಸಾಧ್ಯ. ಅಸಲಿಗೆ ನಮಗೆ ಸ್ವಾತಂತ್ರ್ಯ ದೊರೆತಿದ್ದೇ ಇಂತಹ ಹೋರಾಟಗಳಿಂದ ಎನ್ನುವುದನ್ನು ಮರೆಯಲಾಗದು. Gen Z ಗಳ ಈ ಗೆಲುವು ಮತ್ತಷ್ಟು ಸಮಾಜಮುಖಿ ಹೋರಾಟಗಳಿಗೆ ಪ್ರೇರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿಶೇಷವೆಂದರೆ ಕಾಕ್ರೋಚ್ ಹೇಳಿಕೆ ನೀಡಿ ಹೋರಾಟಕ್ಕೆ ನಾಂದಿಯಾದ ಮಹಾನುಭಾವರಿಗೂ ಹೋರಾಟಗಾರರು ಕೊನೆಯಲ್ಲಿ ಕೃತಜ್ಞತೆ ಸಲ್ಲಿಸಿದ್ದರು. ಆರಂಭದಲ್ಲಿ ’ಚಿಲ್ಟು“ ಗಳ ಬಗ್ಗೆ ಏನೂ ಆಗದು ಎಂದು ಅಸಡ್ಡೆ ತೋರಿದ್ದವರು ಬಳಿಕ ಹೋರಾಟದ ತೀವ್ರಗತಿ ಕಂಡು ಬರೋಬ್ಬರಿ 70 ದಿನಗಳ ಬಳಿಕ ನಾನಂದಿದ್ದು  ಹಾಗಲ್ಲ ಎಂಬ ತಪ್ಪು -ಒಪ್ಪಿನ ಸಮಜಾಯಿಶಿಕೆ ನೀಡಬೇಕಾಗಿ ಬಂತು.  

ಅದಕ್ಕೆ ಅನ್ನೋದು ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ… ಎಂದು.  ಅದೂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರಂತೂ ಬಾಯಿ ಬಿಡದಿರೋದೇ ಲೇಸು. ಇಲ್ಲವೆಂದರೆ ಜಿರಳೆ, ಹಲ್ಲಿ, ಕಪ್ಪೆಗಳೆಲ್ಲ ಬಂದು ನುಂಗಿ ಹಾಕೀಯಾವು ಹಾಂ…!! 

ಶಂಕರ್ ಸೂರ್ನಳ್ಳಿ
ಲೇಖಕರು
                                                                                                                                                                                
ಇದನ್ನೂ ಓದಿ- ವೀರಗೊಲ್ಲಾಳರ ಹಿಕ್ಕೆಯೊಳಗಿನ ಇಷ್ಟಲಿಂಗ

More articles

Latest article

Most read