ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧ, ಬಂದ್‌ನಿಂದ ಯಾವುದೇ ಪರಿಹಾರ ಸಿಗುವುದಿಲ್ಲ, ನಿರ್ಧಾರದಿಂದ ಹಿಂದೆ ಸರಿಯುವಂತೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ

ಇಂತಹ ಸಂದರ್ಭದಲ್ಲಿ ಸಿಎಂ ವಿಜಯ್‌ರನ್ನು ಕರೆಸುವುದು ಸರಿಯಲ್ಲ

ಬೆಂಗಳೂರು :‌ ಯಾವುದೇ ಡ್ಯಾಂ ನಿಂದ ನೀರು ಬಿಟ್ಟಿಲ್ಲ, ನೂರು ವರ್ಷಗಳ ಇತಿಹಾದಲ್ಲಿ ಈ ಜುಲೈ ತಿಂಗಳಲ್ಲಿ ಅತಿ ಕಡಿಮೆ ಎಂದರೆ 0.6 ಟಿಎಂಸಿ ಅಷ್ಟೇ ನೀರನ್ನು ಬಿಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್‌, ಡಿಸಿಎಂ ಜಿ.ಪರಮೇಶ್ವರ, ಸಚಿವ ರಾಮಲಿಂಗಾ ರೆಡ್ಡಿ, ಸಚಿವರು, ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟ ಕಾಲದಲ್ಲಿ ಇಂತಹ ತೀರ್ಪು ಬಂದಿದೆ. ಕಳೆದ ವರ್ಷ ಸಾಕಷ್ಟು ಮಳೆಯಾಗಿ, 400ಕ್ಕೂ ಹೆಚ್ಚು ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಈ ವರ್ಷವೂ ಶಾಸಕರ ಸಭೆ ಕರದು ರೈತರ ರಕ್ಷಣೆ,ಕೆರೆ ತುಂಬಿಸಿ ಜನರ ರಕ್ಷಣೆ ಮಾಡಿದೆ. ಎಲ್ಲಾ ಸಂದರ್ಭದಲ್ಲೂ ಎಲ್ಲಾ ತರಹದ ರಕ್ಷಣೆಗೆ ನಿಲ್ಲಲಾಗಿದೆ ಎಂದರು.

ಸರ್ವಪಕ್ಷಗಳ ಸಭೆ ಕರೆದಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಸಲಹೆ ಪಡೆದುಕೊಳ್ಳುತ್ತೇನೆ. ಭಾನುವಾರ ಎಲ್ಲರೂ ಬಂದು ಸಲಹೆ ನೀಡಲಿ.

ಸಿಎಂ ವಿಜಯ್‌ ಆಗಮನ ಇಂತಹ ಸಂದರ್ಭದಲ್ಲಿ ಸರಿಯಲ್ಲ
ತಮಿಳುನಾಡು ಸಿಎಂ ವಿಜಯ್‌ ಆಗಮನದ ಬಗ್ಗೆ ಪತ್ರ ಬರೆದಿದ್ದಾರೆ. ನಾನೂ ಸಹ ವಿಜಯ್‌ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಆಗಸ್ಟ್‌ 3 ರ ಬದಲು ಬೇರೆ ದಿನ ಬರುವಂತೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇಂತಹ ವಾತಾವರಣರಲ್ಲಿ ವಿಜಯ್ ಅವರನ್ನ ಕರೆಸೋದು ಸೂಕ್ತ ಅಲ್ಲ, ನಾನು ಅವರನ್ನ ಕರೆಸೋದು, ಯಾರೋ ಕೂಗೋದು, ಮುತ್ತಿಗೆ ಹಾಕೋದು ಸರಿಯಲ್ಲ. ಕೆಲವರು ಅವರ ಭೇಟಿ ವಿಚಾರದಲ್ಲಿ ನಡೆದುಕೊಳ್ಳುತ್ತಿರುವುದು ಸರಿ‌ ಇಲ್ಲ, ನನಗೇಕೋ ಸಮಾಧಾನ ತರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನೂರು ವರ್ಷದ ಇತಿಹಾಸದಲ್ಲಿ ಜುಲೈನಲ್ಲಿ ತಮಿಳುನಾಡಿಗೆ ಹರಿಸಿದ್ದು, 0.6 ಟಿಎಂಸಿ ಮಾತ್ರ. ರೆಗ್ಯುಲರ್‌ ಫ್ಲೋ ನಲ್ಲಿ ಮಾತ್ರ ನೀರು ಹರಿದು ಹೋಗಿದೆ.
ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದಾರೆ. ವಾಸ್ತವ ನಮ್ಮ ಸರ್ಕಾರ ಎಲ್ಲಾ ಸಂದರ್ಭದಲ್ಲೂ ರಾಜ್ಯದ ಹಿತ ಕಾಪಾಡಲಾಗಿದೆ. ರೈತರ ಕೈಬಿಟ್ಟಿಲ್ಲ. ಇದು ನಮ್ಮ ಸರ್ಕಾರದ ಬದ್ಧತೆ. ಬಂದ್‌ನಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಕೋರ್ಟ್‌ ಆದೇಶವೇ ಬೇರೆ ಇದೆ. ಬಂದ್‌ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

More articles

Latest article

Most read