ಸಿನೆಮಾ | ʼಸತ್ಲುಜ್‌ʼ ಸತ್ಯಕ್ಕೆ ಬೆದರಿದ ಸರಕಾರ

ಸತ್ಲುಜ್‌ ಬಗ್ಗೆ ಯಾಕೆ ಸರಕಾರಕ್ಕೆ ಭಯ? 1995 ರಲ್ಲಿ ಪೊಲೀಸರು ಮಾಡಿದ ಅತಿರೇಕಗಳು, ಮಾನವಹಕ್ಕುಗಳ ಉಲ್ಲಂಘನೆ ಈಗಲೂ ನಡೆಯುತ್ತಿದೆ ಎಂದೇ? ಅಂತಹ ಅತಿರೇಕಗಳಿಗೆ ಅಂದಿನ ಸರಕಾರ ಬೆಂಬಲ ಕೊಟ್ಟಂತೆ ಈಗಿನ ಸರಕಾರವೂ ಬೆಂಬಲ ರಕ್ಷಣೆ ನೀಡುತ್ತಿದೆ ಎಂದೇ? ಸತ್ಯ ಜನರಿಗೆ ತಿಳಿಯಬಾರದು ಎಂದೇ? ಶ್ರೀನಿವಾಸ ಕಾರ್ಕಳ, ಸಮಾಜ ಚಿಂತಕರು.

ʼಜಸ್ವಂತ್‌ ಸಿಂಗ್‌ ಕಾಲ್ರಾʼ ಅಮೃತಸರದ ಓರ್ವ ಸಾಮಾನ್ಯ ಬ್ಯಾಂಕ್‌ ಉದ್ಯೋಗಿ. ಆತ 1984-1994 ರ ನಡುವೆ, ಪಂಜಾಬ್‌ ನಲ್ಲಿ ಉಗ್ರಗಾಮಿ ಚಟುವಟಿಕೆ ಉಗ್ರ ರೂಪ ತಾಳಿದ್ದ ಕಾಲಘಟ್ಟದಲ್ಲಿ, ಪಂಜಾಬ್‌ ಪೊಲೀಸರು ರಹಸ್ಯವಾಗಿ ಶವಸಂಸ್ಕಾರ ಮಾಡಿದ 25,000 ಕ್ಕೂ ಅಧಿಕ ಅಪರಿಚಿತ ಶವಗಳ ಪ್ರಕರಣವನ್ನು ಬಯಲಿಗೆಳೆದ. ಇವರೆಲ್ಲರೂ‌ ಪೊಲೀಸರು ನಡೆಸಿದ ನ್ಯಾಯ ಬಾಹಿರ (ಎಕ್ಸ್ಟ್ರಾ ಜುಡಿಶಿಯಲ್) ಕೊಲೆಗಳ ಸಂತ್ರಸ್ತರು ಮತ್ತು ಬಲವಂತವಾಗಿ ಕಾಣೆ ಮಾಡಲ್ಪಟ್ಟವರು!

ಜಸ್ವಂತ್‌ ಸಿಂಗ್‌ 2000 ಕಾನೂನುಬಾಹಿರ ಶವಸಂಸ್ಕಾರ ಪ್ರಕರಣಗಳ ಸಾಕ್ಷ್ಯಗಳನ್ನು ಸಂಗ್ರಹಿಸಿ 1995 ರ ಜನವರಿ 16 ರಂದು ಪತ್ರಿಕಾ ಪ್ರಕಟಣೆಯ ಮೂಲಕ ವಿಷಯವನ್ನು ಜಗತ್ತಿಗೆ ಬಹಿರಂಗಪಡಿಸಿದರು. ಶವಸಂಸ್ಕಾರ ಪ್ರಕರಣ ಮತ್ತು  ನ್ಯಾಯಬಾಹಿರ ಕೊಲೆ, ಕಸ್ಟೋಡಿಯಲ್‌ ಕೊಲೆ, ಅಪಹರಣ, ಚಿತ್ರಹಿಂಸೆ ಹೀಗೆ 42 ಇತರ ಪ್ರಕರಣಗಳಲ್ಲಿ, 1988-1993 ರ ನಡುವೆ ತರಣ್‌ ತಾರಣ್‌ ಎಸ್‌ ಎಸ್‌ ಪಿ ಯಾಗಿದ್ದ ಅಜಿತ್‌ ಸಿಂಗ್‌ ಸಂಧು ಪ್ರಮುಖ ಆರೋಪಿ.

ಅಜಿತ್‌ ಸಿಂಗ್‌ ಸಂಧು ಎ ಎಸ್‌ ಐ ಹುದ್ದೆಯಿಂದ ಎಸ್‌ ಎಸ್‌ ಪಿ ಹುದ್ದೆಗೆ ಏರಿದವ. ಒಂದೊಂದು ಎನ್‌ ಕೌಂಟರ್‌ ಕೊಲೆ ಮಾಡಿದಾಗಲೂ ಆತ ಡಿಜಿಪಿ ಕೆ ಪಿ ಎಸ್‌ ಗಿಲ್‌ ಗೆ ಹತ್ತಿರವಾಗುತ್ತ ಹೋದ. ಮಿಂಚಿನ ಗತಿಯ ಪ್ರಮೋಶನ್‌ ಗಳು ಆತನಿಗೆ ಲಭಿಸಿದವು.

ಅಜಿತ್‌ ಸಿಂಗ್‌ ಸಂಧು ಇಂಡಿಯಾದ ಪರಮಶ್ರೇಷ್ಠ ದೇಶಭಕ್ತ ಭಗತ್‌ ಸಿಂಗ್‌ ನ ಅಳಿಯ ಕುಲ್ಜಿತ್‌ ಸಿಂಗ್‌ ನನ್ನೂ ಬಿಡಲಿಲ್ಲ. ಕುಲ್ಜಿತ್‌ ಆಗ ಹೋಶಿಯಾರ್‌ಪುರ ಜಿಲ್ಲೆಯ ಅಂಬಾಲಾ ಜತ್ತನ್‌ ಗ್ರಾಮದ ಸರಪಂಚನಾಗಿದ್ದ. ಆತನನ್ನು ಅಪಹರಿಸಿ ಪೊಲೀಸ್‌ ಕಸ್ಟಡಿಯಲ್ಲಿ ಮುಗಿಸಲಾಯಿತು.

ಸಂಧುವಿನ ಈ ಅತಿರೇಕಗಳಲ್ಲಿ ಒಂದು ನಿರ್ದಿಷ್ಟ ಕ್ರಮವಿತ್ತು. ಮನೆಗಳಿಂದ ನಿರ್ದಿಷ್ಟ ವ್ಯಕ್ತಿಗಳನ್ನು ಅಪಹರಿಸಲಾಗುತ್ತಿತ್ತು. ಆ ವ್ಯಕ್ತಿಯ ಮನೆ ಮಂದಿ ತಮ್ಮವನನ್ನು ಪತ್ತೆ ಹಚ್ಚಲು ಕಚೇರಿ ಕಚೇರಿ ಅಲೆಯುತ್ತಿದ್ದರು. ಕೆಲವು ದಿನಳ ಬಳಿಕ ಅವರಿಗೆ ಸಿಗುವ ಮಾಹಿತಿ ಎಂದರೆ, ʼಉಗ್ರನು ಎನ್‌ ಕೌಂಟರ್‌ ನಲ್ಲಿ ಸತ್ತಿದ್ದಾನೆʼ. ಮೃತದೇಹವನ್ನು ಮನೆಮಂದಿಗೆ ಮರಳಿಸುತ್ತಿರಲೂ ಇಲ್ಲ. ಸುರ್ಜಿತ್‌ ಸಿಂಗ್‌ ವಲ್ತೋಹನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ‘ಸು ಮೋಟೋ’ (Suo Motu) ಆಗಿ ಪ್ರಕರಣವನ್ನು ಕೈಗೆತ್ತಿಕೊಂಡಿತು. ಸುರ್ಜಿತ್‌ ಸಿಂಗ್‌ ನಿಗೆ ಗುಂಡು ಹಾರಿಸಿ ಬಳಿಕ ಪೋಸ್ಟ್‌ ಮಾರ್ಟಂ ಗೆ ಆತನನ್ನು ಸಿವಿಲ್‌ ಆಸ್ಪತ್ರೆಗೆ ಒಯ್ಯಲಾಗಿತ್ತು. ಆತ ಇನ್ನೂ ಸತ್ತಿಲ್ಲ ಎನ್ನುವುದು ಅಲ್ಲಿನ ವೈದ್ಯರಿಗೆ ತಿಳಿಯಿತು. ಆಗ ಪೊಲೀಸರು ಆತನನ್ನು ಬೇರೆಡೆಗೆ ಒಯ್ದು ಮತ್ತೆ ಗುಂಡು ಹಾರಿಸಿ ಕೊಂದರು.

ಧಾರ್ಮಿಕ ನಾಯಕ ಬಾಬಾ ಚರಣ್‌ ಸಿಂಗ್‌ ನನ್ನು ಕೊಂದು ಆತನ ಡ್ರೈವರ್‌ ನ ಕಾಲುಗಳಿಗೆ ಹಗ್ಗ ಕಟ್ಟಿ ಎರಡು ಜೀಪುಗಳಿಗೆ ಕಟ್ಟಿ ಜೀಪು ಓಡಿಸಿ ದೇಹ ಛಿದ್ರ ಛಿದ್ರವಾಗುವಂತೆ ಮಾಡಿದ್ದ ಸಂಧು.

ಜಸ್ವಂತ್‌ ಸಿಂಗ್‌ ಕಾಲ್ರಾ ಹತ್ಯೆ, ಕೋರ್ಟ್‌ ವಿಚಾರಣೆ

ಸೆಪ್ಟಂಬರ್‌ 6 1995 ರಂದು ತರಣ್‌ ತಾರಣ್‌ ಪೊಲೀಸರು ಜಸ್ವಂತ್ ಸಿಂಗ್‌ ಕಾಲ್ರಾನನ್ನು ಆತನ ಮನೆಯ ಹೊರಗಡೆಯಿಂದ ಅಪಹರಿಸಿದರು. ಆ ಸಮಯ ಕಾಲ್ರಾ ನಾಲ್ಕು ಸ್ಫೋಟಕ ಪ್ರಕರಣಗಳ ಹಿಂದೆ ಬಿದ್ದಿದ್ದ. ಆ ಪ್ರಕರಣಗಳೆಂದರೆ- ಪಂಜ್ವಾರ್‌ ನ ತಾಯಿಯ ಕಸ್ಟೋಡಿಯಲ್‌ ಕೊಲೆ, ಬೆಹ್ಲಾ ಮಾನವ ಶೀಲ್ಡ್‌ ನರಮೇಧ, 25 ಸಾವಿರ ಶವಗಳ ಅಂತ್ಯಸಂಸ್ಕಾರ, ಸಾಮೂಹಿಕ ಹತ್ಯೆಗೆ ಒಪ್ಪದ 2000 ಪೊಲೀಸರ ಕೊಲೆ.

ಪೊಲೀಸ್‌ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಜಸ್ವಂತ್‌ ಸಿಂಗ್‌ ಕಾಲ್ರಾನನ್ನು ಕೊಲ್ಲಲಾಯಿತು. ಆತನ ಮೃತದೇಹ ಎಂದೂ ಪತ್ತೆಯಾಗಲಿಲ್ಲ.

ಇಷ್ಟೆಲ್ಲ ಹತ್ಯೆ ನಡೆಸಿದ ಕೊಲೆಗಡುಕ ಪೊಲೀಸ್‌ ಅಧಿಕಾರಿ ಸಂಧುಗೆ ಕೊನೆಗೂ ಶಿಕ್ಷೆಯಾಗಲೇ ಇಲ್ಲ. ಯಾಕೆಂದರೆ ಕೋರ್ಟ್‌ ವಿಚಾರಣೆ ಮುಗಿಯುವ ಮುನ್ನವೇ ಅಂದರೆ, 1997, ಮೇ 23 ರಂದು ಚಂಡೀಗಢ- ಅಂಬಾಲಾ ರೈಲ್ವೇ ಹಳಿಯಲ್ಲಿ ಆತ ಸತ್ತು ಬಿದ್ದಿದ್ದ. ಆತನ ಕಿಸೆಯಲ್ಲಿ ಆತ ಕೆಲ ದಿನಗಳ ಹಿಂದೆ ಬರೆದ ಒಂದು ಅಂತಿಮ ಟಿಪ್ಪಣಿಯ ಚೀಟಿ ಕೂಡಾ ಸಿಕ್ಕಿತ್ತು.

ಸುಪ್ರೀಂ ಕೋರ್ಟ್‌ ಈ ಸಂಬಂಧ ಸಿಬಿಐ ತನಿಖೆಗೆ ಆದೇಶಿದಾಗ 2097 ಕಾನೂನು ಬಾಹಿರ ಶವಸಂಸ್ಕಾರಗಳು (ಪಟ್ಟಿ, ತರಣ್‌ ತಾರಣ್‌, ಅಮೃತಸರ) ನಡೆದುದು ರುಜುವಾತಾಯಿತು. ಇದೊಂದು ಬಹುದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆ.

2005 ರ ನವೆಂಬರ್‌ 18 ರಂದು ಸಿಬಿಐ ವಿಶೇಷ ನ್ಯಾಯಾಲಯ 6 ಮಂದಿ ಪಂಜಾಬ್‌ ಪೊಲೀಸರನ್ನು ಕಾಲ್ರಾ ಅಪಹರಣ ಕೊಲೆ ಸಂಬಂಧ ದೋಷಿ ಎಂದು ಘೋಷಿಸಿತು. 2007 ಅಕ್ಟೋಬರ್‌ 16 ರಂದು ಪಂಜಾಬ್‌ ಹರ್ಯಾಣಾ ಸರಕಾರ ನಾಲ್ವರು ಪೊಲೀಸರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಏರಿಸಿತು.

2011 ಎಪ್ರಿಲ್‌ 11 ರಂದು ಇಂಡಿಯಾದ ಸುಪ್ರೀಂ ಕೋರ್ಟ್‌ ಎಲ್ಲಾ ಜೀವಾವಧಿ ಶಿಕ್ಷೆಗಳನ್ನು ಎತ್ತಿ ಹಿಡಿಯಿತು. ಮೇಲ್ಮನವಿಯನ್ನು ತಳ್ಳಿ ಹಾಕಿತು, ಉಗ್ರಗಾಮಿ ಚಟುವಟಿಕೆಯ ಯುಗದಲ್ಲಿ ಪಂಜಾಬ್‌ ಪೊಲೀಸರು ನಡೆಸಿದ ಅತಿರೇಕಗಳನ್ನು ತೀವ್ರವಾಗಿ ಖಂಡಿಸಿತು.

ತರಣ್‌ ತರಣ್‌ ಪೊಲೀಸರು 1993 ರಲ್ಲಿ ಗುಲ್ಶನ್‌ ಕುಮಾರ್‌ ಎಂಬ ಹಣ್ಣು ಹಂಪಲು ಮಾರಾಟಗಾರನನ್ನು ನಕಲಿ ಎನ್‌ ಕೌಂಟರ್‌ ನಲ್ಲಿ ಕೊಂದರು. ಮೂರು ದಶಕಗಳ ಬಳಿಕ ಈ ಸಂಬಂಧ ಓರ್ವ ಮಾಜಿ ಡಿಐಜಿ ಮತ್ತು ಮಾಜಿ ಡಿಎಸ್‌ ಪಿ ಗೆ ಶಿಕ್ಷೆಯಾಯಿತು.

ಕೆಲವರು ಕೊಲೆಗಾರರಿಗೆ ಜೀವಾವಧಿ ಶಿಕ್ಷೆಯಾಯಿತು. ಆದರೆ ಮೇಲಧಿಕಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರು.

ಜಸ್ವಂತ್‌ ಸಿಂಗ್‌ ಕಾಲ್ರಾ

ಸತ್ಲುಜ್‌ ಗೆ ಸರಕಾರಿ ನಿರ್ಬಂಧ!

ಈ ನಿಜ ಕತೆಯನ್ನು ಆಧರಿಸಿ ದಿಲ್ಜಿತ್‌ ದೊಸಾಂಜ್‌ ಅಭಿನಯದ, ಹಾನಿ ಟ್ರೆಹಾನ್‌ ನಿರ್ದೇಶಿತ ʼಸತ್ಲುಜ್‌ʼ ಸಿನಿಮಾ ತಯಾರಾದುದು ನಾಲ್ಕು ವರ್ಷಗಳ ಹಿಂದೆ. ಸಿ ಬಿ ಎಫ್‌ ಸಿ ಆದೇಶದ ಮೇರೆಗೆ 127 ಕತ್ತರಿ ಪ್ರಯೋಗಗಳನ್ನು ಅದು ಅನುಭವಿಸಿತು. ಇಷ್ಟಾಗಿಯೂ ಅದು ಥಿಯೇಟರ್‌ ಗಳಲ್ಲಿ ಬಿಡುಗಡೆಯಾಗಲು ಸರಕಾರ ಬಿಡಲಿಲ್ಲ. ಈಗ ZEE5 India  ದ ಒಟಿಟಿಯಲ್ಲಿ ಬಿಡುಗಡೆಯಾದ 48 ಗಂಟೆಗಳಲ್ಲಿ ಅದನ್ನು ಅಲ್ಲಿಂದಲೂ ತೆಗೆಸಲಾಯಿತು.

ಮೊದಲು ಅದರ ಹೆಸರು ʼಘಲ್ಲುಘರʼ ಎಂದಿತ್ತು, ಬಳಿಕ ಅದನ್ನು ʼಪಂಜಾಬ್‌ 1995ʼ ಎಂದು ಬದಲಾಯಿಸಲಾಯಿತು. ಅಂತಿಮವಾಗಿ ಈ ಸಿನಿಮಾವನ್ನು ʼಸತ್ಲುಜ್‌ʼ ಎಂದು ಹೆಸರಿಸಲಾಯಿತು.

1995 ರಲ್ಲಿ ಕಾಲ್ರಾರನ್ನು ಮೌನಗೊಳಿಸಲಾಯಿತು, ಸುಪ್ರೀಂ ಕೋರ್ಟ್‌ ಖಚಿತ ಪಡಿಸಿದ ಆಧಾರಗಳ ಬಳಿಕವೂ ಅವರನ್ನು ಮತ್ತೆ ಮೌನಗೊಳಿಸಲು ಈಗಿನ ಸರಕಾರ ಯತ್ನಿಸುತ್ತಲೇ ಇದೆ. ಆದರೆ ಆನ್‌ ಲೈನ್‌ ನ ಯುಗದಲ್ಲಿ ಹೀಗೆ ಏನನ್ನಾದರೂ ದಬ್ಬಿ ಹಿಡಿಯುವುದು, ನಿಷೇಧಿಸುವುದು ಸಾಧ್ಯವೇ?

ಸತ್ಲುಜ್‌ ಅನ್ನು ಥಿಯೇಟರ್‌ ನಲ್ಲಿ ಬಿಡದಿದ್ದಾಗ ಅದು ಒಟಿಟಿಯಲ್ಲಿ ಕಾಣಿಸಿಕೊಂಡಿತು. ಒಟಿಟಿಯಿಂದ ಕೆಳಗಿಳಿಸಿದಾಗ ಯುಟ್ಯೂಬ್‌ ನಲ್ಲಿ ಬಂತು. ಯೂಟ್ಯೂಬ್‌ ನಿಂದ ಇಳಿಸಿದಾಗ ಫೇಸ್‌ ಬುಕ್‌ ನಲ್ಲಿ ಪ್ರತ್ಯಕ್ಷವಾಯಿತು, ಫೇಸ್‌ ಬುಕ್‌ ನಿಂದ ಮಾಯಗೊಳಿಸಿದಾಗ ಟ್ವಿಟರ್‌ ನಲ್ಲಿ ಹಾಜರಾಯಿತು. ಲಕ್ಷಾಂತರ ಮಂದಿ ಡೌನ್‌ ಲೋಡ್‌ ಮಾಡಿಕೊಂಡರು, ಹಲವು ಲಕ್ಷ ಮಂದಿ ಈಗಾಗಲೇ ಸಿನಿಮಾ ವೀಕ್ಷಿಸಿಯೂ ಆಯಿತು. ಅಂದರೆ ಸದರಿ ಸಿನಿಮಾ ಜನರನ್ನು ತಲಪಿಯೂ ಆಯಿತು. ಸರಕಾರಿ ನಿಷೇಧದಿಂದಾಗಿ ಅದನ್ನು ಹೆಚ್ಚು ಹೆಚ್ಚು ಜನ ವೀಕ್ಷಿಸಿದರು. ಸಿನಿಮಾ ತಯಾರಿಯ ಉದ್ದೇಶ ಈಡೇರಿತು.

ಅಜಿತ್‌ ಸಿಂಗ್‌ ಸಂಧು

ಕಾಶ್ಮೀರ್‌ ಫೈಲ್ಸ್‌, ಬಂಗಾಳ ಫೈಲ್ಸ್‌, ಕೇರಳ ಸ್ಟೋರಿ, ಎಮರ್ಜೆನ್ಸಿ, ದುರಂದರ್ ಮೊದಲಾದ ಪ್ರೊಪಗಾಂಡಾ ಸಿನಿಮಾಗಳಿಗೆ ಅವಕಾಶ ಮಾಡಿಕೊಡುವುದು ಮಾತ್ರವಲ್ಲ, ಸ್ವತಃ ಪ್ರಧಾನಿಯೇ ಅವುಗಳ ಪ್ರಚಾರ ರಾಯಭಾರಿಯಾಗಿ ಆ ಸಿನಿಮಾಗಳಿಗೆ ಪ್ರಚಾರ ನೀಡುತ್ತಾರೆ. ಹಾಗಿರುವಾಗ ಸತ್ಲುಜ್‌ ಬಗ್ಗೆ ಯಾಕೆ ಸರಕಾರಕ್ಕೆ ಭಯ? 1995 ರಲ್ಲಿ ಪೊಲೀಸರು ಮಾಡಿದ ಅತಿರೇಕಗಳು, ಮಾನವಹಕ್ಕುಗಳ ಉಲ್ಲಂಘನೆ ಈಗಲೂ ನಡೆಯುತ್ತಿದೆ ಎಂದೇ? ಅಂತಹ ಅತಿರೇಕಗಳಿಗೆ ಅಂದಿನ ಸರಕಾರ ಬೆಂಬಲ ಕೊಟ್ಟಂತೆ ಈಗಿನ ಸರಕಾರವೂ ಬೆಂಬಲ ರಕ್ಷಣೆ ನೀಡುತ್ತಿದೆ ಎಂದೇ? ಸತ್ಯ ಜನರಿಗೆ ತಿಳಿಯಬಾರದು ಎಂದೇ?

ಪ್ರತೀ ವರ್ಷ ಜೂನ್‌ 25 ರಂದು ʼಸಂವಿಧಾನ ಹತ್ಯಾ ದಿವಸʼ ಆಚರಿಸುವ ಈಗಿನ ಒಕ್ಕೂಟ ಸರಕಾರ ತಾನು ಸ್ವತಃ ಮಾಡುತ್ತಿರುವುದು ಏನು? ‌ʼಇಂಡಿಯಾವು ಪ್ರಜಾತಂತ್ರದ ತಾಯಿ, ಪ್ರಜಾತಂತ್ರ ನಮ್ಮ ಡಿ ಎನ್‌ ಎ ಯಲ್ಲಿಯೇ ಇದೆʼ ಎಂದು ನರೇಂದ್ರ ಮೋದಿಯವರು ವಿದೇಶದಲ್ಲಿ ಎದೆ ತಟ್ಟಿಕೊಂಡು ಹೇಳುತ್ತಿರುತ್ತಾರೆ. ಇದುವೇ ಏನು ಅವರ ಪ್ರಕಾರದ ಪ್ರಜಾತಂತ್ರ?! ಅವರ ಪ್ರಕಾರದ ಅಭಿವ್ಯಕ್ತಿ ಸ್ವಾತಂತ್ರ್ಯ?!

ಶ್ರೀನಿವಾಸ ಕಾರ್ಕಳ

ಸಮಾಜ ಚಿಂತಕರು

ಇದನ್ನೂ ಓದಿ- https://kannadaplanet.com/its-a-big-story-autobiography-series-24/ ಅದೊಂದು ದೊಡ್ಡ ಕತೆ –ಆತ್ಮಕಥನ ಸರಣಿ- 24 | ಸಾಹಿತ್ಯದ ಹಾದಿಯಲ್ಲಿ ಸಣ್ಣ ಹೆಜ್ಜೆಗಳು

More articles

Latest article

Most read