ಯುವ ವಿಮರ್ಶಕ ಡಾ. ರವಿ ಎಂ. ಸಿದ್ಲಿಪುರ ಅವರಿಗೆ ಪ್ರತಿಷ್ಠಿತ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’

ಬೆಂಗಳೂರು: ‘ಕನ್ನಡ ಪ್ಲಾನೆಟ್’ ಆನ್‌ಲೈನ್ ಪತ್ರಿಕೆಯ ‘ವಿಚಾರ ಕನ್ನಡ’ ಅಂಕಣದ ಬರಹಗಾರ ಹಾಗೂ ಯುವ ವಿಮರ್ಶಕ ಡಾ. ರವಿ ಎಂ. ಸಿದ್ಲಿಪುರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ 2025ನೇ ಸಾಲಿನ `ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ ಲಭಿಸಿದೆ.

ಇವರು, ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಎಂ.ಎ. ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪಡೆದಿದ್ದಾರೆ. ಇದೇ ವಿಶ್ವವಿದ್ಯಾಲಯದಿಂದ ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಇವರು, ಪ್ರಸ್ತುತ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಸುಣ್ಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಾಗೂ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ‘ಕನ್ನಡ ಪ್ಲಾನೆಟ್’ ಆನ್‌ಲೈನ್ ಪತ್ರಿಕೆಯಲ್ಲಿ ಇವರು ಬರೆಯುತ್ತಿರುವ ‘ವಿಚಾರ ಕನ್ನಡ’ ಹೆಸರಿನ ಪಾಕ್ಷಿಕ ಅಂಕಣವು ಕನ್ನಡ ಸಾಹಿತ್ಯ, ಸಂಸ್ಕೃತಿ, ರಾಜಕೀಯ ಹಾಗೂ ವರ್ತಮಾನದ ವಿದ್ಯಮಾನಗಳ ಚರ್ಚೆಯ ಮೂಲಕ ನಾಡಿನ ಓದುಗರ ಗಮನ ಸೆಳೆದಿದೆ. ಇವರ ವೈಚಾರಿಕ ಲೇಖನಗಳು ನಾಡಿನ ಪ್ರತಿಷ್ಠಿತ ಮಾಸಪತ್ರಿಕೆಗಳಾದ ಹೊಸತು, ಸಮಾಜಮುಖಿ, ಸೇರಿದಂತೆ ವಿವಿಧ ದಿನಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿವೆ.

ಪ್ರಮುಖ ಕೃತಿಗಳು

ಡಾ. ರವಿ ಸಿದ್ಲಿಪುರ ಅವರು ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿದ್ದು, ಅವರ ಪ್ರಮುಖ ಕೃತಿಗಳು ಹೀಗಿವೆ:
​‘ಪರ್ಯಾಯ’ (ವಿಮರ್ಶೆ)
​‘ವಿಮರ್ಶೆ ಓದು’
​‘ಶಾಸನ ಓದು’
​‘ಪ್ರಭುತ್ವ, ಯುದ್ಧ ಮತ್ತು ಜನತೆ’ (ಸಂಶೋಧನೆ)
​‘ಸಮರ ವ್ಯಾಪಾರ’ (ವಿಮರ್ಶೆ)

ಪ್ರಶಸ್ತಿ ಪುರಸ್ಕಾರಗಳು

ಕಾಮ್ರೆಡ್ ಯು.ಎಸ್. ವೆಂಕಟರಾಮನ್ ಪುರಸ್ಕಾರ (2019): ‘ಹೊಸತು’ ಪತ್ರಿಕೆಯಲ್ಲಿ ಪ್ರಕಟವಾದ ‘ಸಫಾಯಿ ಕರ್ಮಚಾರಿಗಳಿಗೆ ಪಾದಪೂಜೆ ಸಾಕೆ?’ ಲೇಖನಕ್ಕೆ ಈ ಗೌರವ ಸಂದಿದೆ.

ಅತ್ಯುತ್ತಮ ಸಂಶೋಧನ ಲೇಖನ ಪ್ರಶಸ್ತಿ: ಕನ್ನಡ ಸಂಶೋಧನ ಅಕಾಡೆಮಿಯು (ನೋಂ.) ಇವರ ‘ಬಾನು ಮುಷ್ತಾಕ್ ಕಥನಗಳಲ್ಲಿ ಅಧಿಕಾರ, ಅಸ್ಮಿತೆ ಮತ್ತು ಪ್ರತಿರೋಧ’ ಎಂಬ ಸಂಶೋಧನಾ ಲೇಖನಕ್ಕೆ ಈ ಪ್ರಶಸ್ತಿ ನೀಡಿ ಗೌರವಿಸಿದೆ.

ಯುವ ಚಿಂತಕ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ರವಿ ಎಂ. ಸಿದ್ಲಿಪುರ ಅವರಿಗೆ ಕಸಾಪದ ಅತ್ಯುನ್ನತ ದತ್ತಿ ಪ್ರಶಸ್ತಿ ಲಭಿಸಿರುವುದಕ್ಕೆ ಸಾಹಿತ್ಯ ವಲಯ, ವಿದ್ಯಾರ್ಥಿ ಬಳಗ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.

More articles

Latest article

Most read