ರಾಮನ ಹೆಸರಲ್ಲಿ ಹರಾಮಿತನ

ಶ್ರೀರಾಮ ಜನ್ಮಭೂಮಿ ಚಳವಳಿಯ ಕಾರ್ಯಕರ್ತ ಸಂತೋಷ್ ದುಬೆಯವರು  ನೀಡಿದ ದೂರಲ್ಲಿ ಚಳವಳಿ ಸಂದರ್ಭದಲ್ಲಿ ಮಾರಿಷಸ್ ಭಕ್ತರೊಬ್ಬರು ಕಳುಹಿಸಿದ ವಜ್ರಗಳಿಂದ ಅಲಂಕೃತವಾದ ಇಟ್ಟಿಗೆಗಳು ಕಾಣೆಯಾಗಿವೆ ಎಂದು ದೂರಲಾಗಿದೆ. ಇಂತಹ ಅನೇಕ ಅಮೂಲ್ಯ ಇಟ್ಟಿಗೆಗಳನ್ನು ದೇಶಾದ್ಯಂತ ಭಕ್ತರಿಂದ ಸ್ವೀಕರಿಸಲಾಗಿತ್ತು. ಆದರೆ ಅವೆಲ್ಲ ಎಲ್ಲಿ ಕಾಣೆಯಾಗಿವೆ ಎಂಬ ಮಾಹಿತಿ ಯಾರಿಗೂ ಇಲ್ಲ ಎನ್ನಲಾಗಿದೆ ಶಂಕರ್‌ ಸೂರ್ನಳ್ಳಿ, ಲೇಖಕರು.

ಆರಾಮ್ ಹರಾಮ್ ಹೈ (ಎಲ್ಲವನ್ನೂ  ಶ್ರಮವಿಲ್ಲದೆ  ದಕ್ಕಿಸಿಕೊಳ್ಳುತ್ತೇವೆಂಬ ಭಾವನೆ ಪಾಪಕ್ಕೆ ಸಮ). ಇದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂರವರ ಪ್ರಸಿದ್ಧ ಮಾತು. ಅಂದು ಪ್ರಾಸಯುಕ್ತವಾಗಿ ಕೆಲಸಗಳ್ಳತನ (ಆರಾಮ್) ವನ್ನು ಹರಾಮ್ (ಪಾಪ) ಎಂದು ಕರೆದರೆ  ಇಂದು ಕೆಲ ಸೋ ಕಾಲ್ಡ್ ಧರ್ಮರಕ್ಷಕರುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ವಂಚನೆಯ  ಹೆಸರಲ್ಲಿ ಸ್ವಯಂ  ಶ್ರೀರಾಮನನ್ನೇ  ಹರಾಮೀಕರಿಸಲು ಹೊರಟಿರುವುದು ಮಾತ್ರ ನಿಜಕ್ಕೂ ಖೇದಕರ

ಭಗವಾನ್ ಶ್ರೀರಾಮನ ಹೆಸರು ಭಾರತದ ರಾಜಕೀಯ ಮತ್ತು ಐತಿಹಾಸಿಕ ಚಿತ್ರಣವನ್ನೇ ಬದಲಿಸಿದಂತಹ ಹೆಸರು.  ಪರಿಣಾಮ ಋಣಾತ್ಮಕವೋ ಧನಾತ್ಮಕವೋ ಒಟ್ಟಾರೆಯಾಗಿ ಇದು ದೇಶದ ರಾಜಕೀಯ ಮತ್ತು ಸಾಮಾಜಿಕ ಪಲ್ಲಟವನ್ನೇ ಮಾಡಿದ್ದಂತೂ ಸತ್ಯ.  ಕೇವಲ ಎರಡು ಮೂರು ಸೀಟುಗಳಿಗೆ ಒದ್ದಾಡುತ್ತಿದ್ದ ಪಕ್ಷವೊಂದು ಇಡೀ ದೇಶವನ್ನೇ ವ್ಯಾಪಿಸುವಷ್ಟರ ಮಟ್ಟಿಗೆ ಬೆಳೆದುದರಲ್ಲಿ ಈ ರಾಮನಾಮದ  ಕೃಪೆಯ ಪಾತ್ರ  ಬಹು ದೊಡ್ಡದು.

ಶ್ರೀರಾಮಚಂದ್ರನ ಹೆಸರಲ್ಲಿ ಸಾವು ನೋವುಗಳು, ಬೆಂಕಿಗಳು, ಲೂಟಿಗಳು,  ಪ್ರತೀಕಾರಗಳು ಎಲ್ಲವೂ ನಡೆದು ಕೊನೆಗೆ ಭವ್ಯ ದೇಗುಲ  ಕಟ್ಟಲ್ಪಟ್ಟು  ಏನೋ ಒಂದು ಒಟ್ಟಾರೆ ಸುಖಾಂತ್ಯ ಕಂಡಿತೆಂದು ಭಾವಿಸಿಕೊಂಡರೆ ಈಗ ಆ ಮರ್ಯಾದಾ ಪುರುಷೋತ್ತಮನ ದೇಗುಲದಲ್ಲೂ ಅರಂಭದಲ್ಲೇ ಲೂಟಿ, ವಂಚನೆಯಂತಹ ಪ್ರಕರಣಗಳು ಅದರ ಫಲಾನುಭವಿ ಪಕ್ಷದ ನೇತಾರರುಗಳ ಬಾಯಿಯಿಂದಲೇ ಹೊರಬರುತ್ತಿವೆಯೆಂದರೆ ತನ್ನ ಹೆಸರಿನಲ್ಲಿ  ನಡೆಯುತ್ತಿರುವ ಈ ಪಾಪ (ಹರಾಮೀ )ಕೃತ್ಯಗಳಿಗೆ ಆ ಕೋದಂಡಪಾಣಿ ಎಷ್ಟು ನೊಂದು ಕೊಳ್ಳುತ್ತಿರುವನೋ ಪಾಪ..!! ರಾಮನ ಹೆಸರಲ್ಲಿ ಅನ್ಯ ನಂಬಿಕೆಯ ವ್ಯಕ್ತಿಯಿಂದ ಜೈ ಶ್ರೀ ರಾಮ್ ಹೇಳಿಸುವುದು, ಹೇಳದಿದ್ದಲ್ಲಿ ಹಲ್ಲೆ ನಡೆಸುವುದು, ರಾಮನ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಬೇಕಾಬಿಟ್ಟಿಯಾಗಿ ವರ್ತಿಸುವುದು ಇವನ್ನೆಲ್ಲ ಸ್ವತಃ ಶ್ರೀರಾಮನೂ ಕೂಡ ಒಪ್ಪಲಾರ.

ಸಾಂದರ್ಭಿಕ ಚಿತ್ರ

ಅಯೋಧ್ಯೆಯಲ್ಲಿ ಭವ್ಯವಾಗಿ ಕಟ್ಟಲ್ಪಟ್ಟ ರಾಮಮಂದಿರದ ದೇಣಿಗೆಗಳಲ್ಲಿ ಸುಮಾರು ಏಳು ಕೋಟಿಯ  ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಬಂದಿದ್ದವು. ಫಲಾನುಭವಿ ಪಕ್ಷದ ನೇತಾರ ಬ್ರಿಜ್ ಭೂಷಣ್ ಸಿಂಗ್ ರಂತವರೇ ಈ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನ್ನಾಡಿದ್ದರು. ಈ ಕುರಿತಂತೆ SIT ರಚನೆಯಾದ ಬಳಿಕ ಅಧಿಕಾರಿಗಳು ಮಂದಿರದ ಕೆಲ ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು ಹಾಗು ಅವರಲ್ಲೊಬ್ಬನ ಮನೆಯಿಂದ ಲಕ್ಷಾಂತರ ರೂ ನಗದನ್ನು ಜಪ್ತಿ ಮಾಡಲಾಗಿದೆಯಂತೆ. ಮಂದಿರದಲ್ಲಿ  20,000 ಮಾಸಿಕ ವೇತನವುಳ್ಳ ಸಿಬ್ಬಂದಿಯೊಬ್ಬ ಇತ್ತೀಚೆಗೆ ೧.೫ ಕೋಟಿ  ಮೌಲ್ಯದ ಅಸ್ತಿ ಖರೀದಿಸಿರುವ ಬಗ್ಗೆಯೂ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.

ಶ್ರೀರಾಮ ಜನ್ಮಭೂಮಿ ಚಳವಳಿಯ ಕಾರ್ಯಕರ್ತ ಸಂತೋಷ್ ದುಬೆಯವರು  ನೀಡಿದ ದೂರಲ್ಲಿ ಚಳವಳಿ ಸಂದರ್ಭದಲ್ಲಿ ಮಾರಿಷಸ್ ನ ಭಕ್ತರೊಬ್ಬರು ಕಳುಹಿಸಿದ ವಜ್ರಗಳಿಂದ ಅಲಂಕೃತವಾದ ಇಟ್ಟಿಗೆಗಳು ಕಾಣೆಯಾಗಿವೆ ಎಂದು ದೂರಲಾಗಿದೆ. ಇಂತಹ ಅನೇಕ ಅಮೂಲ್ಯ ಇಟ್ಟಿಗೆಗಳನ್ನು ದೇಶಾದ್ಯಂತ ಭಕ್ತರಿಂದ ಸ್ವೀಕರಿಸಲಾಗಿತ್ತು. ಆದರೆ ಅವೆಲ್ಲ ಎಲ್ಲಿ ಕಾಣೆಯಾಗಿವೆ ಎಂಬ ಮಾಹಿತಿ ಯಾರಿಗೂ ಇಲ್ಲ ಎನ್ನಲಾಗಿದೆ.

ಸಾಮಾನ್ಯವಾಗಿ ಅನ್ಯ ಧರ್ಮೀಯರ ಚರ್ಚ್, ಮಸೀದಿ, ಬಸದಿ, ಇಂಥವುಗಳಲ್ಲಿ ಸಂಬಂಧಿತ ಧರ್ಮೀಯರು ಕಳ್ಳತನ ಮಾಡುವ ಸಂಭವ ತುಂಬಾ ಕಡಿಮೆ. ಆದರೆ, ನೈಜ ಭಕ್ತಿಯ ಬದಲು ರಾಜಕೀಯ ಅಥವಾ ವ್ಯಾವಹಾರಿಕ ಹಿನ್ನೆಲೆಗಾಗಿ ದೇವರನ್ನು ಸಾಧನವಾಗಿ ಬಳಸಿಕೊಳ್ಳುವ ಮನಸ್ಥಿತಿ ಇರುವೆಡೆ  ಇಂತಹ ಹರಾಮಿತನ (ಪಾಪ ಕೃತ್ಯ) ಗಳೆಲ್ಲ  ನಡೆಯುವದು ವಿಶೇಷವೇನಲ್ಲ. ಅದು ಆಸ್ತಿಕ ಜನರು ನಂಬಿ ಆರಾಧಿಸುವ ತಿರುಪತಿ ಇರಬಹುದು ಅಥವಾ ಶಬರಿಮಲೆಯೇ ಇದ್ದಿರಬಹುದು ದೇವರ ಬುಡದಲ್ಲಿ ನಡೆಯುವ  ಇಂತಹ  ಅವ್ಯವಹಾರಗಳ ಬಗ್ಗೆ ಇಲ್ಲೂ ಸಹ  ಇಂತಹುದೇ  ಸುದ್ದಿಗಳು ಆಗಾಗ ಕೇಳಿ ಬರುತ್ತಿರುತ್ತವೆ.  ಸಣ್ಣಪುಟ್ಟ ದೇಗುಲಗಳೂ ಕೂಡ  ಇದಕ್ಕೆ ಹೊರತೇನಲ್ಲ

ಶ್ರೀರಾಮನ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ದೇಶಾದ್ಯಂತ ಭಕ್ತರುಗಳಿಂದ ಚಿನ್ನ ಬೆಳ್ಳಿ ವಜ್ರಾಭರಣಗಳು ಹಾಗು ಕೋಟ್ಯಂತರ  ರೂ. ನಗದು ಕಾಣಿಕೆಗಳು ಅಯೋಧ್ಯೆಗೆ ದಿನೇ ದಿನೇ  ಹರಿದು ಬರುತ್ತಿವೆ. ದೇಗುಲದ ಸಿಬ್ಬಂದಿಗಳು ಅವುಗಳನ್ನು ಎಗ್ಗಿಲ್ಲದೆ ಲಪಟಾಯಿಸುತ್ತ ಆ ಮೂಲಕ ದೇಶ ಮತ್ತು ವಿದೇಶಗಳ ಭಕ್ತ ಜನರ ಭಾವನೆಗಳೊಂದಿಗೆ  ಚೆಲ್ಲಾಟವಾಡುತ್ತಿರುವುದು ಮಾತ್ರ ದುರ್ದೈವಕರ.

ಶಂಕರ್ ಸೂರ್ನಳ್ಳಿ

ಲೇಖಕರು    

ಇದನ್ನೂ ಓದಿ- ರೈ ವಿರುದ್ಧ ತಿರುಗಿ ಬಿದ್ದ ಮಾರಿಕೊಂಡ ಮಾಧ್ಯಮಗಳು

More articles

Latest article

Most read