ಆರೆಸ್ಸೆಸ್ ನೋಂದಣಿ ಕಡ್ಡಾಯ ಯಾಕೆಂದರೆ…..

ಕಾನೂನಿನ ಅಡಿಯಲ್ಲಿ ಸಂಘ ನೋಂದಣಿಯಾಗಿ ಕಾರ್ಯನಿರ್ವಹಿಸಬೇಕು ಇಲ್ಲವಾದರೆ ಅದರ ಚಟುವಟಿಕೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಇದನ್ನು ಮಾಡುವ ಧೈರ್ಯವನ್ನು ಗೃಹ ಸಚಿವರು ತೋರಿಸುತ್ತಾರಾ? ಸಾಫ್ಟ್ ಹಿಂದುತ್ವದ ಪ್ರತಿಪಾದಕರಾದ ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿಸುತ್ತಾರಾ? ಆರೆಸ್ಸೆಸ್ ನಿರ್ಬಂಧಿಸಲು ಮುಂದಾದರೆ ಕಾಂಗ್ರೆಸ್ಸಿನಲ್ಲಿರುವ ಅತೃಪ್ತರನ್ನು ಸೆಳೆಯುವ ಮೂಲಕವೋ, ಆಪರೇಶನ್ ಕಮಲದ ಮೂಲಕವೋ ಇಲ್ಲಾ ಇಡಿ ಐಟಿ ಸಿಬಿಐ ಬಳಸುವ ಮೂಲಕವೋ ಬಿಜೆಪಿಯು ರಾಜ್ಯ ಸರಕಾರವನ್ನೇ ಬೀಳಿಸುತ್ತದಾ? SIR ಹಾಗೂ EVM ನಂತಹ  ಅಸ್ತ್ರಗಳ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನೇ ಸೋಲಿಸಲಾಗುತ್ತದಾ? – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಮಾನ್ಯ ಪ್ರಿಯಾಂಕ್ ಖರ್ಗೆಯವರು ಮೊದಲಿನಿಂದಲೂ ನೋಂದಣಿ ರಹಿತ ಆರೆಸ್ಸೆಸ್ ಸಂಘಟನೆ ಕುರಿತು ಆಕ್ಷೇಪಣೆ ಎತ್ತುತ್ತಲೇ ಬಂದಿದ್ದರು. ಯಾವಾಗ ಅವರು ಕರ್ನಾಟಕದ ಗೃಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರೊ ಆಗ “ಆರೆಸ್ಸೆಸ್ ನೋಂದಣಿಗೆ ಸಿದ್ಧತೆ ಮಾಡಿಕೊಳ್ಳಲಿ” ಎಂದು ಎಚ್ಚರಿಸಿದ್ದರು. ಹಾಗೆಯೇ ಜೂನ್ 13 ರಂದು ಆರೆಸ್ಸೆಸ್ಸಿನ ಉನ್ನತ ನಾಯಕರಾದ ಮೋಹನ್ ಭಾಗವತರಿಗೆ ಅಧಿಕೃತವಾಗಿ ಪತ್ರ ಬರೆದು ಹೀಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.

* ನೂರು ವರ್ಷ ಪೂರೈಸಿದ ಆರೆಸ್ಸೆಸ್ ತನ್ನನ್ನು ತಾನು ನೋಂದಣಿ ಯಾಕೆ ಮಾಡಿಸಿಲ್ಲ?

* ರೆಜಿಸ್ಟರ್ ಮಾಡುವ ಮೂಲಕ ಸಂವಿಧಾನಾತ್ಮಕ ಅವಕಾಶವನ್ನು ಯಾಕೆ ಉಪಯೋಗಿಸಿಲ್ಲ.

* ಸಂಘದ ಕಾನೂನುಬದ್ಧ ಸ್ಥಾನಮಾನ ಏನು?

* ಸಂಘದ ಸಂಘಟನಾ ರಚನೆಯ ವಿವರಗಳೇನು?

* ಸಂಘದ ಹಣಕಾಸಿನ ಮೂಲಗಳು ಯಾವುವು?

* ಸಾರ್ವಜನಿಕ ಉತ್ತರದಾಯಿತ್ವಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಯಾಕಿಲ್ಲ?

* ಸಾರ್ವಜನಿವಾಗಿ ಮಹತ್ವದ ಪ್ರಭಾವ ಮತ್ತು ವ್ಯಾಪಕ ಜಾಲ ಹೊಂದಿರುವ ಸಂಘವು ಸಂವಿಧಾನ ಬದ್ಧತೆಯ ಉನ್ನತ ಮಾನದಂಡಗಳನ್ನು ಯಾಕೆ ಪಾಲಿಸಿಲ್ಲ?

* ಕರ್ನಾಟಕದಲ್ಲಿ ಸಾವಿರಾರು ಶಾಖೆಗಳು, ವಾರದ ಸಭೆಗಳು, ಲಕ್ಷಾಂತರ ಕಾರ್ಯಕರ್ತರು ಇರುವ ಸಂಘ ಕೇವಲ ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ ಎಂದು ಹೇಗೆ ಪರಿಗಣಿಸಲು ಸಾಧ್ಯ?

* ಆರೆಸ್ಸೆಸ್ ಸಂಘಟನೆಯ ಕಾನೂನುಬದ್ಧ ಸ್ಥಾನಮಾನ, ಹೊಣೆಗಾರಿಕೆ, ಆರ್ಥಿಕ ಪಾರದರ್ಶಕತೆ, ಕಾನೂನು ಪಾಲನೆ ಕುರಿತ ದಾಖಲೆಗಳೇನಿವೆ?

* ಅನಾಮಧೇಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತಿರುವುದರ ಹಿಂದಿನ ಕಾನೂನಾತ್ಮಕ ಆಧಾರಗಳೇನು?

* ಸಂವಿಧಾನದ ಅಡಿಯಲ್ಲಿ ಯಾವುದೇ ಸಂಘ ಸಂಸ್ಥೆ ಕಾನೂನಿನ ವ್ಯಾಪ್ತಿಯಿಂದ ಹೊರತಾಗಿರಲು ಸಾಧ್ಯವೇ?

* ಸಾಮಾನ್ಯ ನಾಗರಿಕರು, ಸ್ವಯಂಸೇವಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್‌ಗಳು ಹಾಗೂ ಕಂಪನಿಗಳು ಪಾಲಿಸಬೇಕಾದ ನಿಯಮಗಳು ಆರೆಸ್ಸೆಸ್ಸಿಗೂ ಅನ್ವಯವಾಗಬೇಕಲ್ಲವೆ?

* ದೇಣಿಗೆ, ಕೊಡುಗೆ, ಆದಾಯ, ವೆಚ್ಚ ಹಾಗೂ ಆಸ್ತಿಗಳ ವಿವರ ಹಾಗೂ ತೆರಿಗೆ ಪಾವತಿಸಿದ ಮಾಹಿತಿಗಳು ಎಲ್ಲಿವೆ?

* ಸಾರ್ವಜನಿಕ ಉತ್ತರದಾಯಿತ್ವ ಇಲ್ಲದೇ ವ್ಯಾಪಕವಾಗಿ ಕಾರ್ಯ ನಿರ್ವಹಿಸುವ ಹಕ್ಕು ಯಾವ ಕಾನೂನು ಅಥವಾ ಸಾಂವಿಧಾನಿಕ ಚೌಕಟ್ಟಿನ ಅಡಿಯಲ್ಲಿ ಆರೆಸ್ಸೆಸ್ಸಿಗೆ ದೊರಕಿದೆ?

* ಸಾರ್ವಜನಿಕ ಸಭೆಗಳು, ಪಥಸಂಚಲನಗಳು, ಇತರೆ ಸಂಘಟಿತ ಕಾರ್ಯಕ್ರಮಗಳಿಗೆ ಪಡೆದಿರುವ ಅನುಮತಿಗಳ ಮಾಹಿತಿಗಳೆಲ್ಲಿ?

ಹೀಗೆ.. ಹಲವಾರು ವಿವರಗಳನ್ನು ಕೋರಿ ಮಾನ್ಯ ಪ್ರಿಯಾಂಕ ಖರ್ಗೆಯವರು ಪತ್ರವನ್ನು ಬರೆದಿದ್ದಾರೆ. ಇದರಲ್ಲಿ ತಪ್ಪೇನೂ ಕಂಡು ಬರುತ್ತಿಲ್ಲ. ಯಾಕೆಂದರೆ ಆರೆಸ್ಸೆಸ್ ಸಂಘಟನೆಯಾಗಲಿ ಇಲ್ಲವೇ ಅದರ ನಾಯಕರಾಗಲಿ ಪ್ರಶ್ನಾತೀತರೇನಲ್ಲ. ಒಬ್ಬ ಗೃಹಮಂತ್ರಿಯಾಗಿ ತನ್ನ ರಾಜ್ಯದಲ್ಲಿ ಅನಧಿಕೃತವಾಗಿ ಹಾಗೂ ಅಸಾಂವಿಧಾನಾತ್ಮಕವಾಗಿ ಚಟುವಟಿಕೆಗಳನ್ನು ಮಾಡುತ್ತಿರುವ ನೋಂದಣಿ ರಹಿತ ಸಂಘಟನೆಯ ದಾಖಲೆ ಹಾಗೂ ವಿವರಗಳನ್ನು ಕೇಳುವುದರಲ್ಲಿ ತಪ್ಪೇನೂ ಇಲ್ಲ. ಇಲ್ಲಿವರೆಗೂ ಹೀಗೆ ಆರೆಸ್ಸೆಸ್ ಎನ್ನುವ ಅಕ್ಟೋಪಸ್ ಸಂಘಟನೆಯನ್ನು ಪ್ರಶ್ನಿಸಿ ದಾಖಲೆ ಕೇಳುವ ಸಾಹಸವನ್ನು ಯಾರೂ ಮಾಡಿರಲಿಲ್ಲ. ಈ ನಿಟ್ಟಿನಲ್ಲಿ ಗೃಹ ಸಚಿವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕೇಳಿದ ಪ್ರಶ್ನೆಗಳಿಗೆ ಲಿಖಿತ ಉತ್ತರ ಕೊಡಬೇಕೆಂದು ಸಂಘದ ಸರಸಂಚಾಲಕರಾದ ಮೋಹನ್ ಭಾಗವತರನ್ನು ಆಗ್ರಹಿಸಿದ್ದಾರೆ. ದಾಖಲೆ ಕೊಡುವುದಾದರೆ ಸಂಘದ ಕಚೇರಿಯಾದ ಕೇಶವಕೃಪಾಕ್ಕೆ ಖುದ್ದಾಗಿ ಬರುವುದಾಗಿಯೂ ತಿಳಿಸಿದ್ದಾರೆ. ಇದಕ್ಕೆಲ್ಲಾ ದಾಖಲೆಗಳ ಸಮೇತ ಉತ್ತರಿಸುವ ಹೊಣೆಗಾರಿಕೆ ಈಗ ಆರೆಸ್ಸೆಸ್ ಸಂಘದ ನಾಯಕರ ಮೇಲಿದೆ.

ಪ್ರಿಯಾಂಕ್‌ ಖರ್ಗೆ ಮತ್ತು ಮೋಹನ್‌ ಭಾಗವತ್

ಕೇರಳದ ತ್ರಿಶ್ಯೂರಿನಲ್ಲಿ ನಡೆದ ಆರೆಸ್ಸೆಸ್ ಶತಮಾನೋತ್ಸವ ಜನಸಂಪರ್ಕ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮೋಹನ್ ಭಾಗವತರು ಈ ಕೆಳಗಿನಂತೆ ಹಾರಿಕೆಯ ಉತ್ತರಗಳನ್ನು ಕೊಟ್ಟಿದ್ದಾರೆ.

* ಬ್ರಿಟಿಷರ ಕಾಲದಲ್ಲಿ ಹುಟ್ಟಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘವ (ಆರೆಸ್ಸೆಸ್) ನ್ನು ನೋಂದಣಿ ಮಾಡುವ ಅಗತ್ಯವಿಲ್ಲ.

* ಹಿಂದೂ ಧರ್ಮವೂ ನೋಂದಣಿಯಾಗಿಲ್ಲ.

* ಸಂಘವು ರಹಸ್ಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಾರ್ವಜನಿಕರ ನಿಗಾದಿಂದಲೂ ದೂರ ಉಳಿದಿಲ್ಲ. ನಮ್ಮಲ್ಲಿ ರಹಸ್ಯವಾಗಿ ಇಡುವಂತಹುದು ಏನೂ ಇಲ್ಲ.

* ನಮ್ಮ ಕಾರ್ಯಕರ್ತರು ಜನರೊಂದಿಗೆ ಇರುತ್ತಾರೆ. ನಾವು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ.

* ನೋಂದಣಿ ವಿಷಯ ರಾಜಕೀಯ ಪ್ರೇರಿತ. ಇಂತಹ ಪ್ರಯತ್ನಗಳು ಸಂಘಕ್ಕೆ ಹೊಸದೇನಲ್ಲ.

* ಸರಕಾರದ ನಿಧಿ ಪಡೆಯಲು ಬಯಸುವವರು ಮಾತ್ರ ನೋಂದಣಿಯಾಗುವ ಅಗತ್ಯವಿದೆ.

*  ಸಂಘವನ್ನು ಎರಡು ಸಲ ನಿಷೇಧಿಸಿದ್ದರಿಂದ ಸಂಘದ ಅಸ್ತಿತ್ವದ ಬಗ್ಗೆ ಸರಕಾರಕ್ಕೂ ತಿಳಿದಿದೆ.

*  ಕಳೆದ ನೂರು ವರ್ಷಗಳಿಂದ ಯಾರೂ ನೋಂದಣಿ ಮಾಡಿ ಎಂದು ಹೇಳಿಲ್ಲ. ಸಂಘಕ್ಕೆ ತನ್ನದೇ ಆದ ಲಿಖಿತ ಸಂವಿಧಾನ ಇದೆ. 1950 ರಲ್ಲಿ ಅದನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಆಗ ಸರಕಾರ ‘ಮೊದಲು ನೋಂದಣಿ ಮಾಡಿ ಆಮೇಲೆ ಸರಕಾರ ಒಪ್ಪಿಕೊಳ್ಳುತ್ತದೆ’ ಎಂದು ಹೇಳಿರಲಿಲ್ಲ.

ಎನ್ನುವ ಸಮರ್ಥನೆಗಳನ್ನು ಮೋಹನ್ ಭಾಗವತರು ಮಾಡಿಕೊಂಡರು. ಸಂವಿಧಾನದ ಪ್ರಕಾರ ಯೋಚನೆ ಮಾಡಿದರೆ ಭಾಗವತರ ಸಮರ್ಥನೆಗಳು ಕಾನೂನಾತ್ಮಕವಾಗಿಲ್ಲ. ಯಾರೂ ಕೇಳಿಲ್ಲ ಎನ್ನುವುದಾದರೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎನ್ನುವುದಾದರೆ ಲಕ್ಷಾಂತರ ಬೇನಾಮಿ ಸಂಘ ಸಂಸ್ಥೆಗಳು ದೇಶಾದ್ಯಂತ ಹುಟ್ಟಿಕೊಳ್ಳುತ್ತವೆ. ಇದೇ ಮಾನದಂಡವನ್ನು ಸಂಘ ಪರಿವಾರದ ಸಂಘಟನೆಗಳಿಗೂ ಅನ್ವಯಿಸಬಹುದಾಗಿತ್ತು. ಯಾಕೆಂದರೆ ಸಂಘದ ಅಂಗ ಸಂಸ್ಥೆಗಳು ಅಧಿಕೃತವಾಗಿ ನೋಂದಣಿ ಮಾಡಿಕೊಂಡಿವೆ. ಅವುಗಳ ಮಾತೃ ಸಂಸ್ಥೆ ಮಾತ್ರ ನೋಂದಣಿ ರಹಿತವಾಗಿದೆ. ಸಂಘದ ಈ ನಿಲುವು ಖಂಡಿತಾ ಭಾರತದ ಸಂವಿಧಾನದ ವಿರುದ್ಧವಾಗಿದೆ. ಮೊದಲಿನಿಂದಲೂ ಭಾರತದ ಸಂವಿಧಾನವನ್ನು ವಿರೋಧಿಸಿಕೊಂಡು ಬಂದ ಆರೆಸ್ಸೆಸ್ ಸಂಘಟನೆಗೆ ಬಾಬಾಸಾಹೇಬರ ಸಮಾನತೆಯ ಸಂವಿಧಾನದಲ್ಲಿ ನಂಬಿಕೆ ವಿಶ್ವಾಸಗಳೇ ಇಲ್ಲವಾಗಿವೆ. ಹೇಗಾದರೂ ಮಾಡಿ ಮನುಸ್ಮೃತಿ ಆಧಾರಿತ ಸಂವಿಧಾನವನ್ನು ಹಾಗೂ ವರ್ಣಾಶ್ರಮ ಪದ್ಧತಿಯ ಪ್ರತಿಪಾದಕ ಸರಕಾರವನ್ನು ಅಸ್ತಿತ್ವಕ್ಕೆ ತರುವುದೇ ಆರೆಸ್ಸೆಸ್ಸಿನ ಗುರಿ ಧ್ಯೇಯವಾಗಿದೆ.

ಹಿಂದೂ ಧರ್ಮ ನೋಂದಣಿಯಾಗಿದೆಯಾ?

ಆಗಿಲ್ಲ ಎನ್ನುವುದಾದರೆ ಆರೆಸ್ಸೆಸ್ ನೋಂದಣಿಯಾಗುವ ಅಗತ್ಯವಿಲ್ಲ ಎನ್ನುವುದು ಮೋಹನ್ ಭಾಗವತರ ವ್ಯರ್ಥ ಸಮರ್ಥನೆಯಾಗಿದೆ. ಅಲ್ಲಾ ಸ್ವಾಮಿ ಭಾಗವತರೇ ಯಾವ ಧರ್ಮವೂ ರೆಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವುದಿಲ್ಲ. ಹಾಗೆ ನೋಂದಣಿ ಮಾಡುವ ಅವಕಾಶವೂ ಸಂವಿಧಾನದಲ್ಲಿಲ್ಲ. ಹಿಂದೂ, ಇಸ್ಲಾಂ, ಕ್ರೈಸ್ತ, ಬೌದ್ಧ, ಸಿಖ್ ಮುಂತಾದ ಧರ್ಮಗಳು ಸಂವಿಧಾನದ ಮಾನ್ಯತೆ ಪಡೆದಿವೆ. ಇಷ್ಟಕ್ಕೂ ಹಿಂದೂ ಧರ್ಮಕ್ಕೂ ಹಾಗೂ ಆರೆಸ್ಸೆಸ್ ಪ್ರತಿಪಾದಿಸುವ ಹಿಂದುತ್ವವಾದಿ ವೈದಿಕ ಪ್ರಣೀತ ಧರ್ಮಕ್ಕೂ ಬೇಕಾದಷ್ಟು ಭಿನ್ನತೆ ಇದೆ. ಹಿಂದೂ ಧರ್ಮವೇ ಬೇರೆ ವೈದಿಕ ಧರ್ಮವೇ ಬೇರೆ ಎಂದು ದಿವಂಗತ ಪೇಜಾವರ ಸ್ವಾಮಿಗಳು ಹೇಳಿದ್ದಾರೆ. ಎಲ್ಲಾ ಭಾರತೀಯರೂ ಹಿಂದೂಗಳಾಗಿದ್ದಾರೆ. ಹಿಂದೂ ಎನ್ನುವುದು ರಾಷ್ಟ್ರೀಯತೆ ಎಂದು ಹಿಂದೂ ಮಹಾ ಸಭಾದ ಅಧ್ಯಕ್ಷರಾಗಿದ್ದ ಸಾವರ್ಕರ್ ರವರೇ ಸ್ಪಷ್ಟಪಡಿಸಿದ್ದಾರೆ. ಹಿಂದೂ ಧರ್ಮವನ್ನು ಹಿಂದುತ್ವವಾದಿ ಆರೆಸ್ಸೆಸ್ಸಿಗೆ ಹೋಲಿಸುವುದೇ ಅನಪೇಕ್ಷಿತ. ಹಿಂದೂ ಧರ್ಮವೇ ನೋಂದಣಿ ಆಗದೇ ಇರುವಾಗ ಆ ಧರ್ಮದ ರಕ್ಷಣೆಯ ಸಂಘಕ್ಕೆ ಯಾಕೆ ನೋಂದಣಿ? ಎನ್ನುವ ವಾದವೇ ಅಸಾಂವಿಧಾನಿಕ.

ಹೀಗಾಗಿ..

ದೇಶದಲ್ಲಿ ಆಸ್ತಿ ಹೊಂದಿರುವ, ನೂರಾರು ಕೋಟಿಯ ಕಚೇರಿ ಇರುವ, ಸಾರ್ವಜನಿಕರ ಹಣವನ್ನು ಬಳಸುತ್ತಿರುವ ಸರಕಾರೇತರ ಸಂಘಟನೆಯಾದ ಆರೆಸ್ಸೆಸ್ ನೋಂದಣಿ ಕಡ್ಡಾಯವಾಗಿದೆ.

ಸಾವಿರಾರು ಕೋಟಿಗಳ ವ್ಯವಹಾರ ಮಾಡುವ ಲಾಭದಾಯಕ ಸಂಘಟನೆ ಸಾರ್ವಜನಿಕ ಉತ್ತರದಾಯಿತ್ವವನ್ನು ತೋರಲೇ ಬೇಕಿದೆ. ಸರಕಾರದ ಅನುದಾನ, ನಿಧಿ ಪಡೆಯುವವರು ಮಾತ್ರವಲ್ಲ, ಯಾವುದೇ ರೀತಿಯ ಕಾಣಿಕೆ, ಕೊಡುಗೆ, ಹಣಕಾಸಿನ ಸಂಗ್ರಹ ಮಾಡುವ ಸಂಸ್ಥೆ ಸಂವಿಧಾನದ ಅಡಿಯಲ್ಲಿ ಕಾನೂನಾತ್ಮಕವಾಗಿ ನೋಂದಾಯಿಸಿದ ನಂತರವೇ ಕಾರ್ಯಚಟುವಟಿಕೆ ಮಾಡಬೇಕಿದೆ.

ಯಾವುದೇ ರೀತಿಯ ನೋಂದಣಿ ಹಾಗೂ ಅಕೌಂಟೆಬಿಲಿಟಿ ಇಲ್ಲದೇ ಕಾರ್ಯ ನಿರ್ವಹಿಸುವವರು, ಸಂಘದ ವ್ಯವಹಾರಗಳನ್ನು ರಹಸ್ಯವಾಗಿ ನಡೆಸುವವರು ದೇಶದ್ರೋಹಿಗಳಾಗುತ್ತಾರೆ.

ಈ ನೆಲದ ಕಾನೂನು ಎಲ್ಲರಿಗೂ ಒಂದೇ ರೀತಿಯದ್ದಾಗಿರುತ್ತದೆ. ಅದು ದೇವಸ್ಥಾನವೇ ಆಗಿರಲಿ, ಯಾವುದೇ ಸಂಘ ಸಂಸ್ಥೆಯೇ ಆಗಿರಲಿ,  ಜನರಿಂದ ಯಾವುದೇ ರೀತಿಯಲ್ಲಿ ಹಣ ಸಂಗ್ರಹ ಮಾಡಿದಲ್ಲಿ ಲೆಕ್ಕಪತ್ರಗಳನ್ನು ಕೊಡಲೇಬೇಕಾಗುತ್ತದೆ. ತೆರಿಗೆ ವ್ಯಾಪ್ತಿಗೆ ಬರಬೇಕಾಗುತ್ತದೆ. ಸಂಘದ ಸಂರಚನೆ, ಬೈಲಾಗಳನ್ನು ಸಾರ್ವತ್ರಿಕ ಗೊಳಿಸಲೇಬೇಕಾಗುತ್ತದೆ.

ಆದ್ದರಿಂದ.. ಪ್ರಿಯಾಂಕ ಖರ್ಗೆಯವರು ಎತ್ತಿರುವ ಆಕ್ಷೇಪಣೆ ಹಾಗೂ ಪ್ರಶ್ನೆಗಳು ಸೂಕ್ತವಾಗಿವೆ ಹಾಗೂ ಕಾನೂನು ಕ್ರಮಕ್ಕೆ ಒಳಗೊಳ್ಳಬಹುದಾಗಿದೆ.

ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿರುವಾಗ ಆರೆಸ್ಸೆಸ್ ಕಾನೂನು ಮೀರಿ ಕಾರ್ಯಚಟುವಟಿಕೆ ನಡೆಸುವುದು ಸಂವಿಧಾನ ದ್ರೋಹದ ಕೆಲಸವಾಗಿದೆ. ಕೂಡಲೇ ಆರೆಸ್ಸೆಸ್ ಅಧಿಕೃತವಾಗಿ ನೋಂದಣಿ ಮಾಡಿಕೊಂಡು ತನ್ನ ಹಣಕಾಸಿನ ವ್ಯವಹಾರ ಹಾಗೂ ಆಸ್ತಿಗಳ ವಿವರಗಳನ್ನು ಘೋಷಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಆ ಸಂಘವನ್ನೇ ನೋಂದಣಿ ರಹಿತ ಸಂಘಟನೆ ಎಂದು ನಿಷೇಧಿಸಬೇಕಿದೆ.

ಇದನ್ನು ಮಾಡುವ ಧೈರ್ಯವನ್ನು ಗೃಹ ಸಚಿವರು ತೋರಿಸುತ್ತಾರಾ? ಸಾಫ್ಟ್ ಹಿಂದುತ್ವದ ಪ್ರತಿಪಾದಕರಾದ ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿಸುತ್ತಾರಾ? ಆರೆಸ್ಸೆಸ್ ನಿರ್ಬಂಧಿಸಲು ಮುಂದಾದರೆ ಕಾಂಗ್ರೆಸ್ಸಿನಲ್ಲಿರುವ ಅತೃಪ್ತರನ್ನು ಸೆಳೆಯುವ ಮೂಲಕವೋ, ಆಪರೇಶನ್ ಕಮಲದ ಮೂಲಕವೋ ಇಲ್ಲಾ ಇಡಿ ಐಟಿ ಸಿಬಿಐ ಬಳಸುವ ಮೂಲಕವೋ ಬಿಜೆಪಿಯು ರಾಜ್ಯ ಸರಕಾರವನ್ನೇ ಬೀಳಿಸುತ್ತದಾ?  SIR ಹಾಗೂ EVM ನಂತಹ  ಅಸ್ತ್ರಗಳ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನೇ ಸೋಲಿಸಲಾಗುತ್ತದಾ?

ಗೊತ್ತಿಲ್ಲ. ಆದರೆ ಆರೆಸ್ಸೆಸ್ ಬೇರಿಗೆ ಕೈಹಾಕಿದರೆ ಸಂಘ ಪರಿವಾರ ಏನು ಬೇಕಾದರೂ ಮಾಡಬಹುದು. ಸರಕಾರದ ಬುಡವನ್ನೇ ಅಲ್ಲಾಡಿಸಬಲ್ಲುದು. ಹಾಗಂತ ಕಾನೂನು ಬಾಹಿರವಾಗಿ ಕಾರ್ಯಚಟುವಟಿಕೆ ನಡೆಸುವ ಸಂಘವನ್ನು ಪ್ರಶ್ನಿಸದೇ ಇರಲಾಗದು. ನೋಂದಣಿ ಮಾಡಿಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಸಂಘದ ಮೇಲೆ ಒತ್ತಡ ತರಬೇಕಿದೆ. ಪ್ರಗತಿಪರ ಸಂಘಟನೆಗಳು, ಹೋರಾಟಗಾರರು, ಪ್ರಜ್ಞಾವಂತರು ಈ ನಿಟ್ಟಿನಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಬೇಕಿದೆ. ಹಾಗೂ ಕಾನೂನು ಮಾನ್ಯತೆ ಇಲ್ಲದೇ ಮತೀಯ ಚಟುವಟಿಕೆಗಳನ್ನು ಮಾಡುತ್ತಿರುವ, ಕೋಮುವಾದಿ ಭಾವನೆಗಳನ್ನು ಕೆರಳಿಸುತ್ತಿರುವ, ಯುವಕರಲ್ಲಿ ಹಿಂದುತ್ವದ ಮೇನಿಯಾ ಸೃಷ್ಟಿಸುತ್ತಿರುವ ಆರೆಸ್ಸೆಸ್ ಎನ್ನುವ ಸಂಘಟನೆಯ ಬಗ್ಗೆ ಜನಜಾಗೃತಿ ಮಾಡಬೇಕಿದೆ. ಇಲ್ಲದೇ ಹೋದರೆ ಈ ದೇಶ  ದ ಸಂವಿಧಾನ ಸಡಿಲವಾಗುತ್ತದೆ. ಮನುವಾದಿ ಸಂವಿಧಾನ ಜಾರಿಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೋಗಿ ವರ್ಣಾಶ್ರಮ ಧರ್ಮದ ಸರ್ವಾಧಿಕಾರತ್ವ ಹೇರಲ್ಪಡುತ್ತದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಪದ್ದಮ್ಮನ ರಾಜಕೀಯ

More articles

Latest article

Most read