ಕ್ಷೇತ್ರ ಪುನರ್‌ ವಿಂಗಡಣೆಯಿಂದ ರಾಜ್ಯದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಹೆಚ್ಚಳ

ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗದು: ಅಮಿತ್‌ ಶಾ

ನವದೆಹಲಿ : ಕ್ಷೇತ್ರ ಪುನರ್‌ವಿಂಗಡಣೆಯಿಂದ ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಹೆಚ್ಚಾಗುತ್ತದೆ ಮತ್ತು ಲೋಕಸಭೆಯಲ್ಲಿಅದರ ಶೇಕಡಾವಾರು ಪ್ರಮಾಣವು ಶೇ. 5.44ಕ್ಕೆ ಹೆಚ್ಚಾಗುತ್ತದೆ ಎಂದು ಕೇಂದ್ರ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಮಹಿಳಾ ಮೀಸಲು, ಕ್ಷೇತ್ರ ಪುನರ್‌ವಿಂಗಡಣೆ ಸೇರಿ ಮೂರು ವಿಧೇಯಕಗಳ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಈ ವೇಳೆ ಸೀಟುಗಳ ಸಂಖ್ಯೆಗಳ ಬದಲಾವಣೆಯಿಂದ ದಕ್ಷಿಣದ ರಾಜ್ಯಗಳ ಶಕ್ತಿ ಕುಂದುತ್ತದೆ ಎಂಬ ಸುಳ್ಳು. ಅನಗ್ಯದ ಗೊಂದಲಗಳಿಂದ ಹೊರಬರುವಂತೆ ಅವರು ವಿಪಕ್ಷಗಳಿಗೆ ಮನವಿ ಮಾಡಿದರು.

ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಕರ್ನಾಟಕ ಯಾವುದೇ ನಷ್ಟ ಅನುಭವಿಸುವುದಿಲ್ಲ ಎಂದು ತಮ್ಮ ಭಾಷಣದ ವೇಳೆ ಕರ್ನಾಟಕವನ್ನು ಪ್ರಸ್ತಾಪಿಸಿ ಅಮಿತ್‌ ಶಾ ಮಾಹಿತಿ ಒದಗಿಸಿದರು.

ಆಂಧ್ರಪ್ರದೇಶದಲ್ಲಿ 25ರಿಂದ 38ಕ್ಕೆ ಹೆಚ್ಚಳ : ಆಂಧ್ರಪ್ರದೇಶವು 25 ಸ್ಥಾನಗಳನ್ನು ಹೊಂದಿದ್ದು, ಶೇ. 4.60ರಷ್ಟನ್ನು ಹೊಂದಿದೆ. ಮಸೂದೆ ಅಂಗೀಕಾರದ ನಂತರ, ಆ ರಾಜ್ಯದ ಸಂಸದರ ಸಂಖ್ಯೆ 25ರಿಂದ 38ಕ್ಕೆ ಹೆಚ್ಚಾಗುತ್ತದೆ ತೆಲಂಗಾಣವು 17 ಸ್ಥಾನಗಳನ್ನು ಹೊಂದಿದ್ದು, ಇದು 26ಕ್ಕೆ ಹೆಚ್ಚಾಗುತ್ತದೆ ಮತ್ತು ಲೋಕಸಭೆಯಲ್ಲಿ ಅದರ ಶೇಕಡಾವಾರು ಪ್ರಮಾಣವು ಶೇ. 3.18ಕ್ಕೆ ಹೆಚ್ಚಾಗುತ್ತದೆ ಎಂದು ವಿವರಿಸಿದರು.

ತಮಿಳುನಾಡಿನಲ್ಲಿ 59 ಕ್ಕೆ ಹೆಚ್ಚಳ : ತಮಿಳುನಾಡು 49 ಸ್ಥಾನಗಳನ್ನು ಹೊಂದಿದ್ದು, ಸದನದ 543 ಸ್ಥಾನಗಳಲ್ಲಿ ಶೇ. 7.18ರಷ್ಟನ್ನು ಹೊಂದಿದೆ. ಮಸೂದೆ ಅಂಗೀಕಾರದ ನಂತರ, ಆ ರಾಜ್ಯದ ಸಂಸದರ ಸಂಖ್ಯೆ 59ಕ್ಕೆ ಹೆಚ್ಚಾಗುತ್ತದೆ ಮತ್ತು ಲೋಕಸಭೆಯಲ್ಲಿಅದರ ಶೇಕಡಾವಾರು ಪ್ರಮಾಣವು ಶೇ. 7.23ಕ್ಕೆ ಹೆಚ್ಚಾಗುತ್ತದೆ ಎಂದು ಅಮಿತ್‌ ಶಾ ಸದನಕ್ಕೆ ತಿಳಿಸಿದರು.

ಕೇರಳದಲ್ಲಿ 30ಕ್ಕೆ ಏರಿಕೆ : ಕೇರಳ 20 ಸ್ಥಾನಗಳನ್ನು ಹೊಂದಿದ್ದು, ಸದನದ 543 ಸ್ಥಾನಗಳಲ್ಲಿ ಶೇ. 3.68ರಷ್ಟನ್ನು ಹೊಂದಿದೆ. ಮಸೂದೆ ಅಂಗೀಕಾರದ ನಂತರ, ಆ ರಾಜ್ಯದ ಸಂಸದರ ಸಂಖ್ಯೆ 20ರಿಂದ 30ಕ್ಕೆ ಹೆಚ್ಚಾಗುತ್ತದೆ ಮತ್ತು ಲೋಕಸಭೆಯಲ್ಲಿ ಅದರ ಶೇಕಡಾವಾರು ಪ್ರಮಾಣವು ಶೇ. 3.67ಕ್ಕೆ ಹೆಚ್ಚಾಗುತ್ತದೆ” ಎಂದು ಅಮಿತ್‌ ಶಾ ಸ್ಪಷ್ಟಪಡಿಸಿದರು.

ಸದ್ಯ ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ ದಕ್ಷಿಣದ ರಾಜ್ಯಗಳಿಂದ ಪ್ರಸ್ತುತ 129 ಸಂಸದರಿದ್ದಾರೆ. ಇದು ಸದನದ ಸರಿಸುಮಾರು ಶೇ. 23.76ರಷ್ಟಾಗುತ್ತದೆ. ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಅಂಗೀಕಾರದ ಬಳಿಕ, ದಕ್ಷಿಣದ ರಾಜ್ಯಗಳ ಸದಸ್ಯರ ಸಂಖ್ಯೆ 195 ಆಗುತ್ತದೆ. ಆಗ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಶೇಕಡಾವಾರು ಪ್ರಮಾಣ ಶೇ. 23.97ಕ್ಕೆ ಹೆಚ್ಚಾಗುತ್ತದೆ ಎಂದು ಅಮಿತ್‌ ಶಾ ವಿವರಿಸಿದರು.

More articles

Latest article

Most read