ನವದೆಹಲಿ : ಮಹಿಳಾ ಮೀಸಲಾತಿ ಹೆಸರಲ್ಲಿ ಪ್ರಜಾಪ್ರಭುತ್ವದ ಕೊಲೆ ನಡೆಯುತ್ತಿದೆ. ಈ ಮಸೂದೆ ಜಾರಿಯಾದರೆ ಪ್ರಜಾಪ್ರಭುತ್ವದ ಅಂತ್ಯ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದರು.
ಮಹಿಳಾ ಮೀಸಲಾತಿ ಮೇಲೆ ನಡೆದ ಚರ್ಚೆಯಲ್ಲಿ ಪ್ರಧಾನಿ ಮಾತಿಗೆ ಪ್ರತಿಕ್ರಿಯಿಸಿದ ಅವರು, ವಾಸ್ತವದಲ್ಲಿ ಈ ಶಾಸನವು ಮಹಿಳೆಯರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮಹಿಳಾ ಮೀಸಲಾತಿಯ ಪರವಾಗಿ ನಿಲ್ಲುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ವಾಸ್ತವವೆಂದರೆ ಇದು ಮಹಿಳಾ ಮಸೂದೆಯ ಬಗ್ಗೆ ಅಲ್ಲ. ಈ ಮಸೂದೆಗಳನ್ನು ಪರಿಚಯಿಸುವ ಮೂಲಕ ಕೇಂದ್ರವು ಇತರ ಹಿಂದುಳಿದ ವರ್ಗಗಳ (ಒಬಿಸಿ) ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತದೆ ಎಂದು ಅವರು ಆರೋಪಿಸಿದರು.
ಜಾತಿ ಜನಗಣತಿಯನ್ನು ನಡೆಸದೆ ಮತ್ತು 2011 ರ ಜನಗಣತಿಯ ಅಂಕಿಅಂಶಗಳಿಗೆ ಅನುಸಾರ ಸರ್ಕಾರವು ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತದೆ. ಈ ಮಸೂದೆ ಅಂಗೀಕಾರವಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದರು.
ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿದೆ. ಹೀಗೆ ಚುನಾವಣಾ ಸಮಯದಲ್ಲಿ ಸಂಸತ್ತಿನ ಅಧಿವೇಶನ ಕರೆಯುವುದು, ಸರ್ವಪಕ್ಷ ಸಭೆ ನಡೆಸದಿರುವುದು ಮತ್ತು ಮಸೂದೆಯ ಕರಡನ್ನು ಕೇವಲ ಒಂದು ದಿನ ಮುಂಚಿತವಾಗಿ ಹಂಚಿಕೊಳ್ಳುವುದರ ಹಿಂದೆ ವಿರೋಧ ಪಕ್ಷಗಳಿಗೆ ಚರ್ಚಿಸಲು ಅವಕಾಶ ನೀಡಬಾರದು ಎಂಬ ಸಂಚಿದೆ ಎಂದು ಆರೋಪಿಸಿದರು.
ಮಹಿಳಾ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ದೊಡ್ಡ ಹೆಜ್ಜೆ ಇಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಚರ್ಚೆ ಶುರು ಮಾಡಿಸಿ, ವಿರೋಧ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು ಇವರ ತಂತ್ರ. ರಾಜಕೀಯದಲ್ಲಿ ಚತುರತೆ ಇರುವುದು ಒಂದು ವಿಷಯ. ಬಹುಶಃ ನಾವು (ವಿರೋಧ ಪಕ್ಷಗಳು) ಈ ವಿಷಯದಲ್ಲಿ ಸ್ವಲ್ಪ ಹೆಚ್ಚು ಚತುರರಾಗಬೇಕಿರಬಹುದು. ಆದರೆ ಅಧಿಕಾರ ಹಿಡಿಯುವ ಆಕಾಂಕ್ಷೆಯನ್ನು ಬದಿಗಿಟ್ಟು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮತ್ತೊಂದು ವಿಷಯ ಎಂದು ಪ್ರಿಯಾಂಕಾ ಹೇಳಿದರು.
ಮಹಿಳಾ ಮೀಸಲು ಮೂಲಕ ಒಬಿಸಿ ಹಕ್ಕು ಕಸಿಯುವ ತಂತ್ರ: ಪ್ರಿಯಾಂಕಾ ಗಾಂಧಿ