ಕ್ರಿಶ್ಚಿಯನ್ ಪಾದ್ರಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ನಿಂದ ತಾತ್ಕಾಲಿಕ ತಡೆ: ಪ್ರಾರ್ಥನೆಯಲ್ಲಿ ಆಡಿದ ಮಾತೂ ಅಪರಾಧವೇ?

ನವದೆಹಲಿ, ಏಪ್ರಿಲ್ 10: ಕ್ರಿಶ್ಚಿಯನ್ ಧರ್ಮವೇ ಏಕೈಕ ಸತ್ಯ ಧರ್ಮ ಎಂದು ಪ್ರಾರ್ಥನಾ ಸಭೆಯಲ್ಲಿ ಹೇಳಿದ್ದಕ್ಕಾಗಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಕ್ರಿಶ್ಚಿಯನ್‌ ಪಾದ್ರಿಯೊಬ್ಬರಿಗೆ ಸುಪ್ರೀಂ ಕೋರ್ಟ್‌ ತಾತ್ಕಾಲಿಕ ರಿಲೀಫ್‌ ನೀಡಿದೆ. ಪ್ರಕರಣದ ಕ್ರಿಮಿನಲ್ ವಿಚಾರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡಿದೆ.

ರೆವರೆಂಡ್ ಫಾದರ್ ವಿನೀತ್ ವಿನ್ಸೆಂಟ್ ಪೆರೀರಾ ಎಂಬ ಪಾದ್ರಿ 2023ರಲ್ಲಿ ಉತ್ತರಪ್ರದೇಶದ ಮೌ ಜಿಲ್ಲೆಯಲ್ಲಿ ನಡೆಸಿದ ಪ್ರಾರ್ಥನಾ ಸಭೆಗಳಲ್ಲಿ “ಕ್ರಿಶ್ಚಿಯನ್ ಧರ್ಮವೇ ಏಕೈಕ ಸತ್ಯ ಧರ್ಮ” ಎಂದು ಹೇಳಿದ್ದಾರೆ ಎಂದು ಆರೋಪಿಸಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295A ಅಡಿಯಲ್ಲಿ FIR ದಾಖಲು ಮಾಡಿದ್ದರು. ಈ ಸೆಕ್ಷನ್ ಯಾವುದೇ ಧರ್ಮದ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವ ಕೃತ್ಯಗಳನ್ನು ಶಿಕ್ಷಾರ್ಹವಾಗಿಸುತ್ತದೆ.

ಟ್ರಯಲ್ ಕೋರ್ಟ್ ಈ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸ್ವೀಕರಿಸಿ ಕ್ರಮ ತೆಗೆದುಕೊಂಡಿತ್ತು. ಆ ನಂತರ ಪಾದ್ರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಪ್ರಕರಣವನ್ನು ರದ್ದುಗೊಳಿಸುವಂತೆ ಕೇಳಿದ್ದರು. ಆದರೆ ಮಾರ್ಚ್ 2026ರಲ್ಲಿ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರ ಏಕ ಸದಸ್ಯ ಬೆಂಚ್ ಆ ಅರ್ಜಿಯನ್ನು ತಿರಸ್ಕರಿಸಿತು. ಭಾರತ ಸೆಕ್ಯುಲರ್ ದೇಶ. ಯಾವುದೇ ಧರ್ಮವನ್ನು ಏಕೈಕ ಸತ್ಯ ಎಂದು ಹೇಳುವುದು ಇತರ ಧರ್ಮಗಳನ್ನು ಅವಮಾನಿಸುವಂತೆ. ಇದು ಸೆಕ್ಷನ್ 295A ಅಡಿಯಲ್ಲಿ ಬರುತ್ತದೆ ಎಂದು ಹೈಕೋರ್ಟ್‌ ಪೀಠ ಅಭಿಪ್ರಾಯಪಟ್ಟಿತ್ತು. ಈ ತೀರ್ಪಿನ ವಿರುದ್ಧ ಪಾದ್ರಿ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದರು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಬೆಂಚ್ ಪಾದ್ರಿಯ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿದ್ದು, ಉತ್ತರಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಪೂರ್ಣ ವಿಚಾರಣೆ ಮುಗಿಯುವವರೆಗೆ ಕ್ರಿಮಿನಲ್ ಪ್ರಕರಣ ಮತ್ತು ಟ್ರಯಲ್ ವಿಚಾರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಆದೇಶ ನೀಡಿತು.

ಈ ಪ್ರಕರಣವು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಭಾವನೆಗಳ ರಕ್ಷಣೆ ನಡುವಿನ ಸೂಕ್ಷ್ಮ ಸಮತೋಲನದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

More articles

Latest article

Most read