ನವದೆಹಲಿ/ಟೆಹ್ರಾನ್: ಅಂತರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ಭಾರತೀಯ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ವಿನಂತಿಯನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಿರಸ್ಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕೂರಿತಾಗಿ X ಖಾತೆಯಲ್ಲಿ ಇರಾನ್ ಪ್ರೆಸ್ (Iran Press) ವರದಿಮಾಡಿದೆ.
ಭಾರತದ ಮೌನವೇ ಮುಳುವಾಯಿತೇ?
ವಿಶ್ವದ ಎಲ್ಲಾ ಬಲಿಷ್ಠ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವ ಭಾರತ, ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ತೀವ್ರ ದಾಳಿಗಳ ಸಂದರ್ಭದಲ್ಲಿ ಕೇವಲ ‘ಕಳವಳ’ ವ್ಯಕ್ತಪಡಿಸುವುದಕ್ಕೆ ಸೀಮಿತವಾಗಿತ್ತು. ಸಂಕಷ್ಟದ ಸಮಯದಲ್ಲಿ ಭಾರತವು ನಿರೀಕ್ಷಿತ ಬೆಂಬಲ ನೀಡದೆ ಮೌನ ವಹಿಸಿರುವುದು ಇರಾನ್‌ನ ಈ ತೀವ್ರ ಅಸಮಾಧಾನಕ್ಕೆ ಕಾರಣವಿರಬಹುದು.
ಭಾರತಕ್ಕಿರುವ ಸವಾಲೇನು?
ಪರ್ಷಿಯನ್ ಗಲ್ಫ್‌ನಲ್ಲಿ ಪ್ರಸ್ತುತ 28 ಭಾರತೀಯ ಹಡಗುಗಳು ಹಾಗೂ 788 ಭಾರತೀಯ ಸಿಬ್ಬಂದಿಗಳು ಸಿಲುಕಿಕೊಂಡಿದ್ದಾರೆ. ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಈ ಜಲಸಂಧಿ ಅತ್ಯಂತ ನಿರ್ಣಾಯಕವಾಗಿದ್ದು, ಇರಾನ್‌ನ ಈ ಕಠಿಣ ನಿಲುವು ಜಾಗತಿಕ ವ್ಯಾಪಾರ ಮತ್ತು ತೈಲ ಸಾಗಣೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಮೂಡಿಸಿದೆ.

