ತಮ್ಮ‌‌ ರಾಶಿ ಭವಿಷ್ಯ ತಿಳಿಯದೇ ಯುದ್ಧದಲ್ಲಿ ಸಿಕ್ಕಿಕೊಂಡ ಜ್ಯೋತಿಷಿಗಳು

ಅವರಿವರ ಭವಿಷ್ಯ ಹೇಳ್ತೀವಿ, ಜ್ಯೋತಿಷ್ಯ ಹೇಳ್ತೀವಿ ಅಂತ ಹೇಳುವ ಜ್ಯೋತಿಷಿಗಳಿಗೆ ತಮ್ಮದೇ ಭವಿಷ್ಯ ತಿಳಿಯದೇ ಇರಾನ್ ಯುದ್ಧದಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡುತ್ತಿರುವ ಸುದ್ದಿ ಬಂದಿದೆ.

ಇತ್ತೀಚೆಗೆ ಜ್ಯೋತಿಷಿಗಳ ತಂಡ ರಾಜಸ್ಥಾನದ ಡೀಗ್ ಜಿಲ್ಲೆ ಯಿಂದ ಸುಮಾರು 10 ಕ್ಕೂ ಹೆಚ್ಚು ಜ್ಯೋತಿಷಿಗಳ ಒಂದು ತಂಡವು  ಫೆಬ್ರುವರಿ 28ರಂದು ದುಬೈನ ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ  ಜ್ಯೋತಿಷ್ಯ ಸಮ್ಮೇಳನಕ್ಕಾಗಿ ತೆರಳಿದ್ದರು.
ಸಮ್ಮೇಳನ ಮುಗಿಸಿಕೊಂಡು  ಮಾರ್ಚ್ 1ರಂದು ಇಂಡಿಗೋ ಅಥವಾ ಏರ್ ಇಂಡಿಯಾ ವಿಮಾನಗಳ ಮೂಲಕ ಜೈಪುರಕ್ಕೆ ತಿರಿಗಿ ಬರಬೇಕಾಗಿತ್ತು. ಆದರೆ ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧದ ಪರಿಣಾಮ ದುಬೈನಲ್ಲಿ ವಿಮಾನ ಸಂಚಾರದಲ್ಲಿ ಯಚ ಯ ಉಂಟಾಗಿದೆ. ಇದರಿಂದಾಗಿ ಜ್ಯೋತಿಷಿಗಳ ತಂಡ ದುಬೈನಲ್ಲಿ ಸಿಲುಕಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಯುಎಇ  ದುಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಬು ಧಾಬಿ ವಿಮಾನ ನಿಲ್ದಾಣಗಳಲ್ಲಿ ಮೊದಲ  ದಿನದಿಂದ 21,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಜ್ಯೋತಿಷಿಗಳು ಭಾರತಕ್ಕೆ ವಾಪಸ್‌ ಬರಲು ತೊಂದರೆಯಾಗಿದೆ.
ರಂಗನಾಥ್ ಶರ್ಮ  ತಂಡ ಡೀಗ್‌ನ ಪ್ರಮುಖ ಜ್ಯೋತಿಷಿಗಳು.  ದುಬೈನಲ್ಲಿ ಸಿಲುಕಿರುವ ಬಗ್ಗೆ ಖಚಿತಪಡಿಸಿದ್ದಾರೆ.  ಈ ಬಗ್ಗೆ ಸ್ವತಃ ಮಾತನಾಡಿರುವ ಅವರು, ಸಮ್ಮೇಳನದಲ್ಲಿ ಜಾಗತಿಕ ಭವಿಷ್ಯಗಳ  ಬಗ್ಗೆ ಚರ್ಚೆ ಮಾಡುತ್ತಿದ್ದಾಗಲೇ ಯುದ್ಧ ಹಾಗೂ ವಿಮಾನಗಳ ರದ್ಧತಿಗೆ ಬಗ್ಗೆ  ಬಂದಿದೆ ಎಂದಿದ್ದಾರೆ. 
ಇದೊಂದು ವಿಪರ್ಯಾಸ ಎನ್ನಬಹುದು. ಭಾರತದಲ್ಲಿ ಜ್ಯೋತಿಷ್ಯ ಹಾಗೂ ಜ್ಯೋತಿಷಿಗಳಿಗೆ ದಿನದಿಂದ ದಿನಕ್ಕೆ ಬೆಲೆ ಹೆಚ್ಚುತ್ತಲೇ ಇದೆ. ಭಾರತೀಯ ವೃತ್ತಿ ಸಂಬಂಧ ಮುಂದುವರಿದ ದೇಶಗಳಿಗೆ ಹೋದರೂ ಇಲ್ಲಿನ ಪಂಚಾಂಗ, ರಾಶಿ ಭವಿಷ್ಯ ಮರೆಯುತ್ತಿಲ್ಲ. ಜ್ಯೋತಿಷ್ಯವನ್ನು ಅನುಸರಿಸುತ್ತಲೇ ಇದ್ದಾರೆ.
ದುಬೈನಂತಹ ಅರಬ್‌ ದೇಶದಲ್ಲಿ ಅಂತಾರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನ ನಡೆಯುವುದು ಸಾಮಾನ್ಯದ ಸಂಗತಿಯಲ್ಲ. ಅರಬ್‌ ದೇಶದಲ್ಲಿ ಭಾರತೀಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ವೃತ್ತು ಅಥವಾ ಪ್ರವೃತ್ತಿಯಿಂದ ಹೊರ ದೇಶಗಳಲ್ಲಿ ಮನೆ ಮಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ಇದೆಲ್ಲದರ ಮಧ್ಯೆ , ನೊಂದವರಿಗೆ ಸಾಂತ್ವಾನದ ರೂಪದಲ್ಲಿ ಭವಿಷ್ಯ ಹೇಳುವ ಜ್ಯೋತಿಷಿಗಳಿಗೆ ಪ್ರಪಂಚದ ಆಗು ಹೋಗುಗಳ ಅರಿವು ಇರಲಿಲ್ಲವೇ ಎಂಬ ಮಾತುಗಳು ಕೇಳಿಬರುತ್ತಿವೆ.
ಇರಾನ್‌ ಮೇಲೆ ಇಸ್ರೇಲ್‌ ಹಾಗೂ ಅಮೆರಿಕ ದೇಶಗಳು ಯುದ್ಧ ಸಾರಲಿವೆ. ಸಾವಿರಾರು ನೋವುಗಳು ಸಂಭವಿಸಲಿದೆ. ಪೌರಾಣಿಕ ಕಥೆಗಳಲ್ಲಿ ಹಾರಿ ಬರುತ್ತಿದ್ದ ಬಿಲ್ಲು ಬಾಣ, ಚಕ್ರಗಳಂತೆ ಆತ್ಯಾಧುನಿಕ ಮಿಸೈಲ್‌ ಗಳು, ಕ್ಷಿಪಣಿ ದಾಳಿಗಳು ದೇಶದಿಂದ ದೇಶಕ್ಕೆ ಹಾರಲಿವೆ ಎಂಬ ಸೂಚನೆ ಜ್ಯೋತಿಷಿಗಳಿಗೆ ಸಿಗಲಿಲ್ಲವೇ? ಇಂತಹ ಕಾಮನ್‌ಸೆನ್ಸ್‌ ಪ್ರಶ್ನೆಗಳು ಸಾಮಾನ್ಯ ಜನರನ್ನು ಕಾಡುತ್ತಿರುವುದಂತು ಸತ್ಯ.
ಅರಬ್ಬರ ನಾಡಿನಲ್ಲಿ ಪಟ್ಟ ಹಿಂದೂಗಳು ಎಂದು ಹಣೆಪಟ್ಟಿ ಧರಿಸಿಕೊಂಡು ವಿಜ್ಞಾನಕ್ಕೆ ಸಡ್ಡು ಹೊಡೆಯಲು ಅಂತಾರಾಷ್ಟ್ರೀಯ ಜ್ಯೋತಿಷಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಗಂಟಾನುಗಟ್ಟಲೆ ಭಾಷಣ ಬಿಗಿದ ನಂತರ ಭಾರತಕ್ಕೆ ವಾಪಸ್ಸು ಹೋಗಲು ವಿಮಾನವಿಲ್ಲ ಎಂಬ ಸತ್ಯ ಯಾವುದೇ ಜ್ಯೋತಿಷ್ಯಾಶ್ತ್ರದ ಪುಸ್ತಕಗಳಲ್ಲಿ, ನಕ್ಷತ್ರಗಳು, ರಾಹು ಕೇತು, ಗ್ರಹಗಳ ಸಂಚಾರದಲ್ಲಿ ಕಾಣಲಿಲ್ಲವೇ?
ಇದು ಜ್ಯೋತಿಷ್ಯ ಎನ್ನು ಎತ್ತ ಎಂಬುದು ಗೊತ್ತಿಲ್ಲದ ಸಾಮಾನ್ಯರನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆಯಾಗಿದೆ.
ಹಾಗಿದ್ದರೆ ಜ್ಯೋತಿಷ್ಯ ಸಮ್ಮೇಳನದಲ್ಲಿ ದಿನಗಟ್ಟಲೆ ಚರ್ಚೆಯಾದ ವಿಷಯಗಳು ಕೇವಲ ʼಟೈಂಪಾಸ್‌ʼ ಅಷ್ಟೇನಾ ಅಥವಾ ಮತ್ತೊಂದು ದೇಶದ ನೆಲದಲ್ಲಿ ಜ್ಯೋತಿಷ್ಯದ ಬಗ್ಗೆ ವಾದ ಮಾಡಿ ಬಂದಿದ್ದೇವೆ ಎಂಬುದು ʼಸ್ಟೇಟಸ್‌ʼ ವಿಷಯವೇ ಆಗಬಹುದು.
ಏನೇ ಆಗಲಿ ಜ್ಯೋತಿಷ್ಯ ಹಾಗೂ ವಿಜ್ಞಾನ ಎರಡನ್ನು ಮೀರಿ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ನಿಂತಿದ್ದಾರೆ. ಅಮೆರಿಕದಲ್ಲಿ ನಾಲ್ಕು ಪಟ್ಟು ಶಸ್ತ್ರಾಸ್ತ್ರ ಗಳನ್ನು ಉತ್ಪಾದನೆ ಹೆಚ್ಚಿಸುವಂತೆ ಟ್ರಂಪ್‌ ಸೂಚನೆ ಭವಿಷ್ಯವನ್ನು ಊಹೆಗೂ ನಿಲುಕದಂತೆ ಮಾಡಿದೆ.

More articles

Latest article

Most read