ಒಂದು ವರ್ಷಗಳ ಕಾಲ ಗುಟ್ಕಾ, ಪಾನ್‌ ಮಸಾಲಾ ನಿಷೇಧಿಸಿದ ಸರ್ಕಾರ

ಬೆಂಗಳೂರು : ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು, ನಿಕೋಟಿನ್‌ ಒಳಗೊಂಡಿರುವ ಗುಟ್ಕಾ ಮತ್ತು ಪಾನ್‌ ಮಸಾಲಾ ಪದಾರ್ಥಗಳನ್ನು ಅಧಿಸೂಚನೆಯ ದಿನದಿಂದ ಅಂದರೆ ಮುಂದಿನ ಒಂದು ವರ್ಷಗಳ ಕಾಲ ನಿಷೇಧಿಸಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಸೆಕ್ಷನ್ 30ರ ಉಪ-ವಿಭಾಗ (2)ರ ಖಂಡ (ಎ) ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ, 2011ರ ನಿಯಮ 2.3.4ನ್ನು ಪರಿಗಣಿಸಿ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ರಾಜ್ಯದ ಆಹಾರ ಸುರಕ್ಷತಾ ಆಯುಕ್ತರು ಈ ಮೂಲಕ ಈ ಕೆಳಗಿನವುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಸಾಗಾಣಿಕೆ ಮತ್ತು ಮಾರಾಟವನ್ನು ನಿಷೇಧಿಸಿದೆ.

ತಂಬಾಕು ಮತ್ತು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಮತ್ತು ಅಂತಿಮ ಉತ್ಪನ್ನದಲ್ಲಿ ತಂಬಾಕು ಅಥವಾ ನಿಕೋಟಿನ್ ಅನ್ನು ಹೊಂದಿದ್ದು ಪ್ರತ್ಯೇಕವಾಗಿ ಮಾರುಕಟ್ಟೆ ಮಾಡಲಾಗುವ ಯಾವುದೇ ಇತರ ಉತ್ಪನ್ನಗಳು (ಅವುಗಳನ್ನು ಏನೇ ಹೆಸರಿನಿಂದ ಕರೆದರೂ, ಪ್ಯಾಕ್ ಮಾಡಿರಲಿ ಅಥವಾ ಮಾಡದಿರಲಿ ಮತ್ತು/ಅಥವಾ ಒಂದೇ ಉತ್ಪನ್ನವಾಗಿ ಮಾರಾಟವಾಗಲಿ, ಅಥವಾ ಪ್ರತ್ಯೇಕ ಉತ್ಪನ್ನಗಳಾಗಿ ಪ್ಯಾಕ್ ಮಾಡಿದ್ದರೂ ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಲು ಅನುಕೂಲವಾಗುವ ರೀತಿಯಲ್ಲಿ ಮಾರಾಟ ಅಥವಾ ವಿತರಣೆ ಮಾಡಲಾಗುತ್ತಿರಲಿ). ತಂಬಾಕು ಮತ್ತು ನಿಕೋಟಿನ್ ಅನ್ನು ಘಟಕಾಂಶವಾಗಿ ಹೊಂದಿರುವ ಹಾಗೂ ಸ್ಯಾಚೆಟ್‌ಗಳು, ಪೌಚ್‌ಗಳು, ಪ್ಯಾಕೇಜ್‌ಗಳು, ಕಂಟೈನರ್‌ಗಳು ಇತ್ಯಾದಿಗಳಲ್ಲಿ ಪ್ಯಾಕ್ ಮಾಡಲಾದ ಗುಟ್ಕಾ ಪಾನ್ ಮಸಾಲಾ (ಅಥವಾ ಅವುಗಳನ್ನು ಏನೇ ಹೆಸರಿನಿಂದ ಕರೆದರೂ), ಇವುಗಳನ್ನು ಕರ್ನಾಟಕ ರಾಜ್ಯದಾದ್ಯಂತ ಅಧಿಸೂಚನೆಯ ದಿನಾಂಕದಿಂದ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಿಷೇಧಿತ ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಮಾರಾಟ ಅಥವಾ ವಿತರಣೆ ಕಂಡು ಬಂ ದಲ್ಲಿ, ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇ ಕು. ಆರ ಗ್ಯಕರ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಮನವಿ ಮಾಡಿದ್ದಾರೆ.

ವಿಶೇಷ ತಪಾಸಣೆ ಮತ್ತು ಕಾರ್ಯಾಚರಣೆ
ಆಹಾರ ಸುರಕ್ಷತಾ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯದಾದ್ಯಂತ ವಿಶೇಷ ತಪಾಸಣೆ ಹಾಗೂ ಜಾರಿ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ನಿಷೇಧಿತ ಉತ್ಪನ್ನಗಳನ್ನು ಮಾರಾಟ ಮಾಡುವ ಅಥವಾ ಸಂಗ್ರಹಿಸಿಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

More articles

Latest article

Most read