ಪ್ರಹಸನ |ಅವತಾರ ಪುರುಷ ಮೋದಿ ಮಹಾತ್ಮೆ

(ರಸ್ತೆಯಲ್ಲಿ ಇಬ್ಬರು ಹಳೆಯ ಸ್ನೇಹಿತರು ಅಚಾನಕ್ ಆಗಿ ಭೇಟಿಯಾಗುತ್ತಾರೆ)

ವ್ಯಕ್ತಿ: ತೊ ಥೋ ಈ ದೇಶಕ್ಕೆ ಇಂತಾ ಪ್ರಧಾನಿ ಬೇಕಿತ್ತಾ.

ಭಕ್ತ : ಬೇಕಿತ್ತು. ಇದಕ್ಕಾಗಿ ಈ ದೇಶ ಶತಮಾನಗಳಿಂದ ಕಾಯ್ತಾ ಇತ್ತು. ಇಂತಹ ಪ್ರಧಾನಿ ಹಿಂದೆಂದೂ ಬಂದಿಲ್ಲ, ಮುಂದೂ ಬರೋದಿಲ್ಲ. ಪವಾಡ ಪುರುಷ..

ವ್ಯಕ್ತಿ : ಪವಾಡವಾ ಅದೆಂಗೆ?

ಭಕ್ತ : ಎಲ್ಲರಿಗೂ ಒಂದು ಬದುಕಲ್ಲಿ ಎಷ್ಟು ಸಲ ಜನ್ಮತಾಳಬಹುದು?

ವ್ಯಕ್ತಿ : ಇದೆಂತಾ ಪ್ರಶ್ನೆ? ಒಂದು ಸಲ. ಸತ್ತರೆ ಪುನರ್ಜನ್ಮ..

ಭಕ್ತ : ನಮ್ಮ ಪ್ರಧಾನಿಗಳು ಎರಡು ಬಾರಿ ಜನ್ಮ ತಾಳಿದರು ಎಂದರೆ ಎಲ್ಲರೂ ನಂಬಲೇ ಬೇಕು.

ವ್ಯಕ್ತಿ : ನಾನಂತೂ ನಂಬೋದಿಲ್ಲ. ಅದೆಂಗೆ ಸಾಧ್ಯ?

ಭಕ್ತ : ಮೋದಿ ಹೈ ತೋ ಸಬ್ ಮುನ್ಕಿಮ್ ಹೈ. ನಾನು ಆಧಾರ ಸಮೇತ ಸಾಬೀತು ಪಡಿಸಬಲ್ಲೆ

ವ್ಯಕ್ತಿ : ಆಯ್ತಪ್ಪಾ ಅದೇನು ಪಡಿಸ್ತೀಯಾ ಪಡಿಸು.

ಭಕ್ತ : ಮೋದಿಯವರ ಪದವಿ ಪತ್ರದ ಪ್ರಕಾರ ಅವರು ಜನಿಸಿದ್ದು ಯಾವಾಗ?

ವ್ಯಕ್ತಿ : ಯಾವಾಗ?

ಭಕ್ತ : 1949 ಆಗಸ್ಟ್ 29. ಅವತ್ತೇ ಆಗಸದಿಂದ ಈ ನಕ್ಷತ್ರ ಭೂಮಿಗಿಳಿದು ಬಂತು.

ವ್ಯಕ್ತಿ : ಆಮೇಲೆ..

ಭಕ್ತ : ಸಾರ್ವಜನಿಕರಿಗೆ ಲಭ್ಯವಿರುವ ಮಾಹಿತಿ ಪ್ರಕಾರ ಎರಡನೇ ಸಲದ ಜನುಮ ದಿನ 1950 ಸೆಪ್ಟಂಬರ್ 17. ಅಂದ್ರೆ ನಮ್ಮ ಅವತಾರ ಪುರುಷರು ಒಂದು ವರ್ಷದ ಅವಧಿಯಲ್ಲಿ ಎರಡು ಸಲ ಜನ್ಮ ತಾಳಿದರು.

ವ್ಯಕ್ತಿ : ಅರೆ ಹೌದಾ.. ಮತ್ತೆ ಅವರೇ ಹೇಳಿದ್ದರಲ್ಲಾ ನಾನು ಅಜೈವಿಕವಾಗಿ ಅವತರಿಸಿದೆ, ಎಲ್ಲರಂತೆ ತಾಯಿ ಹೊಟ್ಟೆಯಿಂದ ಜನಿಸದವನಲ್ಲ ಎಂದು.

ವ್ಯಕ್ತಿ : ಅದಕ್ಕೆ ಅವರನ್ನು ಅವತಾರ ಪುರುಷ ಎನ್ನುವುದು. ಇಂತಹ ಮಹಾತ್ಮರು ಲೋಕೋದ್ಧಾರಕ್ಕಾಗಿ ಎಲ್ಲಿ ಯಾವಾಗ ಹೇಗೆ ಅವತಾರ ಎತ್ತುತ್ತಾರೆ ಎನ್ನುವುದು ಹುಲು ಮಾನವರಾದ ನಮಗೆಲ್ಲಿ ತಿಳಿಯುತ್ತೆ.

ವ್ಯಕ್ತಿ : ಹೌದೌದು ಇದ್ರು ಇರಬೋದು.

ಭಕ್ತ : ಮೋದಿಯವರ ಬಾಲ ಲೀಲೆಗಳನ್ನು ಕೇಳ್ತಾ ಇದ್ರೆ ಅವರು ಅವತಾರ ಪುರುಷ ಎನ್ನುವುದರಲ್ಲಿ ಸಂದೇಹವೇ ಬಾರದು.

ವ್ಯಕ್ತಿ : ಏನಪ್ಪಾ ಅದು ಬಾಲಲೀಲೆ.. ಹೇಳು. ಅಲ್ಪಮತಿಯಾದ ನಾನೂ ಕೇಳಿ ಪಾವನವಾಗುತ್ತೇನೆ.

ಭಕ್ತ : ನಮ್ಮ ನರೇಂದ್ರರು ತಮ್ಮ 6 ನೇ ವಯಸ್ಸಿನಲ್ಲಿ ಏನು ಮಾಡ್ತಾ ಇದ್ರಪಾ ಅಂದ್ರೆ..

ವ್ಯಕ್ತಿ : ಮಕ್ಕಳಾಟ ಆಡ್ತಿರಬೋದು ಅಲ್ವಾ.

ಭಕ್ತ : ಥೂ. ಅದೆಲ್ಲಾ ಆರ್ಡಿನರಿ ಮಕ್ಕಳಿಗೆ. ಹುಟ್ಟಿನಿಂದಲೇ ಶ್ರಮಜೀವಿಗಳಾಗಿದ್ದರು. ಯಾರಿಗೂ ಹೊರೆ ಆಗದಂತೆ ದುಡಿದು ತಿಂತಾ ಇದ್ದರು. ಗುಜರಾತಿನ ವಡ್ನಗರ್ ರೈಲ್ವೇ ಸ್ಟೇಶನ್ನಿನಲ್ಲಿ ಚಹಾ ಮಾರತಿದ್ರು.

ವ್ಯಕ್ತಿ : ಸುಮ್ಕೆ ತಮಾಷೆ ಮಾಡಬ್ಯಾಡ. ಅದೆಲ್ಲಾ ಅದೆಂಗೆ ಸಾಧ್ಯ? ಅಲ್ಲಿ ರೈಲ್ವೆ ಸ್ಟೇಶನ್ನು ಅಂತಾ ನಿರ್ಮಾಣ ಆಗಿದ್ದು 1973 ರಲ್ಲಿ ಅಂತಾ ದಾಖಲೆಗಳಿವೆ. ಅಂದರೆ ಸ್ಟೇಷನ್ ಶುರು ಆದಾಗ ನಿಮ್ಮ ನರೇಂದ್ರರಿಗೆ 23 ವರ್ಷ ವಯಸ್ಸಾಗಿರಬೇಕಲ್ಲಾ. ಸುಮ್ಮನೇ ಬುರಡೆ ಬಿಡಬ್ಯಾಡ.. ನನ್ನ ಕಿವಿಯಲ್ಲಿ ಹೂ ಇಡಬ್ಯಾಡ.

ಭಕ್ತ : ನೋಡು ಮಹಾತ್ಮರನ್ನ ಪ್ರಶ್ನೆ ಮಾಡಿದರೆ ಪಾಪ ಸುತ್ತಿಕೊಳ್ಳೋದಂತೂ ಗ್ಯಾರಂಟಿ. ಪವಾಡ ಪುರುಷರಿಗೆ ಈ ಕಾಲ ತರ್ಕದ ಅಗತ್ಯವೇ ಇಲ್ಲ. ಮುಂದೆ ರೈಲು ನಿಲ್ದಾಣ ಆಗುತ್ತದೆ ಎಂದು ತಮ್ಮ ದಿವ್ಯ ದೃಷ್ಟಿಯಿಂದ ಗ್ರಹಿಸಿ ಅಲ್ಲೇ ಚಹಾ ಮಾರ್ತಾ ಇರಬಹುದು. ಅದನ್ನೆಲ್ಲಾ ಪ್ರಶ್ನೆ ಮಾಡದೇ ಅವತಾರ ಪುರುಷರ ಬಾಲಲೀಲೆಗಳನ್ನು ಭಕ್ತಿಯಿಂದ ಕೇಳಬೇಕಪ್ಪಾ.

ವ್ಯಕ್ತಿ : ಆಯ್ತು. ಮುಂದೆ ಹೇಳು.

ಭಕ್ತ : ಅತ್ಯಂತ ಬುದ್ಧಿವಂತರಾದ ಈ ನಮ್ಮ ಪವಾಡ ಪುರುಷರು ಹುಣ್ಣಿಮೆಯ ಚಂದ್ರನಂತೆ ಹೊಳೆಯುತ್ತಾ ಬೆಳೆಯುತ್ತಾ 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.

ವ್ಯಕ್ತಿ : ಹೌದಾ.. ಆದರೆ ಆಗ ತುರ್ತು ಪರಿಸ್ಥಿತಿ ಇದ್ದಾಗ ಭೂಗತನಾಗಿದ್ದೆ ಅಂತಾ ಸ್ವತಃ ಅವತಾರಿಗಳೇ ಹೇಳಿದ್ದರಲ್ಲಾ. ಮತ್ಯಾವಾಗ ಕಾಲೇಜಿಗೆ ಹೋದರು, ಯಾವಾಗ ಓದಿದರು, ಯಾವಾಗ ಪರೀಕ್ಷೆ ಬರೆದರು, ಯಾವಾಗ ಪದವಿ ಪಡೆದರು.

ಭಕ್ತ : ಮಹಾತ್ಮರ ಬಗ್ಗೆ ಪ್ರಶ್ನೆ ಕೇಳಬಾರದು ಅಂತಾ ಹೇಳಿಲ್ವಾ. ಮತ್ತದೇ ಕುತರ್ಕ.

ವ್ಯಕ್ತಿ : ಆಯ್ತಪ್ಪಾ ನೀ ಮುಂದುವರೆಸು. ಕೇಳೋದಕ್ಕೆ ಇಂಟ್ರೆಸ್ಟಿಂಗ್ ಆಗಿದೆ ಈ ಪವಾಡ ಪುರಾಣ.

ಭಕ್ತ : ಹಾಂ. ಹಂಗ್ ದಾರಿಗೆ ಬಾ. ಮುಂದೆ 1983 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ “ಎಂಟೈಯರ್ ಪಾಲಿಟಿಕಲ್ ಸಾಯನ್ಸ್” ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಆ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದರು.

ವ್ಯಕ್ತಿ : ಎಷ್ಟೂಂತ ಹಳಿ ಇಲ್ಲದೇ ರೈಲು ಬಿಡ್ತೀಯಾ. ಆಗ ಅಂತಹುದೊಂದು ಪದವಿ ಕೋರ್ಸ ಇರಲೇ ಇಲ್ಲ. ಗುಜರಾತ್ ವಿವಿ ಪ್ರೊಫೆಸರ್ ಳಿಗೂ ಅಂತಹುದೊಂದು ಪದವಿ ಇದೆ ಅಂತಾ ನರೇಂದ್ರರು ಪ್ರಧಾನಿಯಾದ 2014 ರಲ್ಲೇ ಗೊತ್ತಾಗಿರಬೇಕು.

ಭಕ್ತ : ಅದೆಲ್ಲಾ ಇಲ್ಲಿ ಅಪ್ರಸ್ತುತ. ಇಡೀ ದೇಶದಲ್ಲಿ ಅಷ್ಟೇ ಯಾಕೆ ವಿಶ್ವದಲ್ಲೇ “ಸಂಪೂರ್ಣ ರಾಜಕೀಯ ವಿಜ್ಞಾನ” ದಲ್ಲಿ ಸ್ನಾತಕೋತ್ತರ ಪದವಿ ಪಡೆದ ಏಕೈಕ ವ್ಯಕ್ತಿ ಅಂದ್ರೆ ನಮ್ಮ ನರೇಂದ್ರರು ಎಂಬುದು ಈ ದೇಶಕ್ಕೆ ದೊಡ್ಡ ಹೆಮ್ಮೆ.

ವ್ಯಕ್ತಿ : ಹೌದಾ. ನಂಬೊಕಾಗ್ತಿಲ್ಲ.. ಆದರೂ ನಂಬತ್ತೇನೆ. ನಂಬದಿದ್ರೆ ನೀನು ಬಿಡಬೇಕಲ್ಲ. (ಸ್ವಗತದಲ್ಲಿ ಜಿಗಣೆ ಜಾತಿಯವ ಇವಾ) ಹೋಗಲಿ ಆ ಪುಣ್ಯಾತ್ಮರ ಜೊತೆಗೆ ಓದಿದ ಒಬ್ಬನಾದ್ರೂ ಸಹಪಾಠಿ ಇರಲೇಬೇಕಲ್ವಾ.. ಪಾಠ ಮಾಡಿದ ಅಧ್ಯಾಪಕರಾದರೂ.

ಭಕ್ತ: ಹಾಂ ಮಹಾತ್ಮರ ಪುರಾಣವನ್ನು ಕೇಳಿ ಪುಣ್ಯ ಸಂಪಾದಿಸಬೇಕಷ್ಟೇ.

ವ್ಯಕ್ತಿ : ಅಂದರೆ ಅಸ್ತಿತ್ವದಲ್ಲಿ ಇಲ್ಲದ ಪದವಿ ಕೋರ್ಸಿಗೆ ನಿಮ್ಮ ಅವತಾರ ಪುರುಷರೊಬ್ಬರೇ ಪ್ರವೇಶ ಪಡೆದರು, ಒಬ್ಬರೇ ಪರೀಕ್ಷೆ ಬರೆದರು, ಅವರೊಬ್ಬರೇ ಪದವಿ ಪಡೆದರು ಹೌದಲ್ವಾ. ಅವರ ಬಗ್ಗೆ ಇನ್ನೊಂದು ಪವಾಡದ ಬಗ್ಗೆ ನಾನು ಕೇಳಿದ್ದೆ.

ಭಕ್ತ : ಯಾವುದಪ್ಪಾ ಅದು ನನಗೆ ಗೊತ್ತೇ ಇಲ್ಲದ ಪವಾಡ.

ವ್ಯಕ್ತಿ : ಭಾರತಕ್ಕೆ ಕಂಪ್ಯೂಟರ್ ಬಂದಿದ್ದು 1978 ರಲ್ಲಿ ಅಲ್ವಾ? ಅದಕ್ಕೂ ಮುಂಚೆಯೇ ನರೇಂದ್ರರವರ ಪದವಿ ಪ್ರಮಾಣ ಪತ್ರ ಕಂಪ್ಯೂಟರಿನಲ್ಲಿ ಮುದ್ರಿತವಾಗಿತ್ತಂತೆ. 1988 ರ ವರೆಗೂ ವಿಶ್ವವಿದ್ಯಾಲಯದವರು ಪದವಿ ಪತ್ರಗಳನ್ನು ಮ್ಯಾನುವಲ್ ಆಗಿ ಫಿಲಪ್ ಮಾಡ್ತಿದ್ದರಂತೆ. 1992 ರಲ್ಲಿ ಮೈಕ್ರೋಸಾಫ್ಟ್  ನವರು ಪೇಟೆಂಟ್ ಪಡೆದ ಫಾಂಟ್ ಅಂದ್ರೆ ಅಕ್ಷರ ವಿನ್ಯಾಸವನ್ನು 1978ರಲ್ಲೇ ಮೋದಿಯವರ ಪದವಿ ಪತ್ರ ಮುದ್ರಿಸಲು ಬಳಸಿದ್ದು ವಿಸ್ಮಯದ ವಿಷಯ ಅಲ್ವಾ.

ಭಕ್ತ : ಅಯ್ಯೋ ನನಗೆ ಗೊತ್ತಿಲ್ಲದ ಪವಾಡದ ಸುದ್ದಿಗಳು ನಿನಗೆ ಗೊತ್ತಿವೆಯಲ್ಲಾ..

ವ್ಯಕ್ತಿ : ಇನ್ನೂ ಇದೆ ಕೇಳು. ಮೋದಿ ಮಹಾತ್ಮರ ಪದವಿ ಪ್ರಮಾಣ ಪತ್ರವು ಕಚೇರಿಗಳಿಗೆ ರಜೆ ಇರುವ ಭಾನುವಾರದಂದು ಮುದ್ರಣ ಮಾಡಲಾಗಿತ್ತು ಗೊತ್ತಾ?.

 ಭಕ್ತ : ಇರಬಹುದು. ಅದೆಲ್ಲಾ ಇಲ್ಲಿ ಮುಖ್ಯವಲ್ಲ ಬಿಡು. ಮೋದಿ ಹೈತೋ

ವ್ಯಕ್ತಿ : ಸಬ್ ಮುನ್ಕಿನ್ ಹೈ. ಜೈ ಹೋ..

ಭಕ್ತ : ಇನ್ನೂ ನಮ್ಮ ಅವತಾರ ಪುರುಷರ ಬಗ್ಗೆ ಹೇಳುವುದು ಬೇಕಾದಷ್ಟಿದೆ. ಅವರು ಲೋಕಕಲ್ಯಾಣಕ್ಕಾಗಿ ಒಂದಲ್ಲಾ ಎರಡಲ್ಲಾ ಒಟ್ಟು ಮೂವತೈದು ವರ್ಷಗಳ ಕಾಲ ಭಿಕ್ಷಾಟನೆ ಮಾಡುತ್ತಾ ದೇಶಪರ್ಯಟನೆ ಮಾಡಿ ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಆತ್ಮನಿರ್ಭರ ಪರಿಹಾರಗಳನ್ನು ಕಂಡುಕೊಂಡರು.  ಅಷ್ಟೇ ಅಲ್ಲ ಆಗಲೇ ಹಾಲಿವುಡ್‌ನ ಯುನಿವರ್ಸಲ್ ಸ್ಟುಡಿಯೋ ಮತ್ತು ಪ್ಯಾರಿಸಿನ ಐಫೆಲ್ ಟವರ್ ಮುಂದೆ ಕೋಟು ಸೂಟು ಧರಿಸಿ ಫೋಟೋ ತೆಗೆಸಿಕೊಂಡು ವಿಶ್ವಗುರುಗಳಾದರು.

ವ್ಯಕ್ತಿ:  ಹೌದು ನಾನೂ ಕೇಳಿದ್ದೇನೆ! ಡಿಜಿಟಲ್ ಕ್ಯಾಮರಾ ಬರೋದಕ್ಕೂ ಮೊದಲೇ ಕ್ಯಾಮರಾ ಹಿಡಿದು ಫೋಟೋಗ್ರಫಿ ಮಾಡಿದರು. ಗಟಾರಿನಿಂದ ಕರೆಂಟ್ ಉತ್ಪಾದಿಸುವ ಟೆಕ್ನಿಕ್ ಕಂಡು ಹಿಡಿದರು.

ಭಕ್ತ : ಮತ್ತೆ ನಮ್ಮ ನರೇಂದ್ರ ಮಹಾರಾಜ್ ರವರು ಎಂದರೆ ಸುಮ್ನೇನಾ? ನಮ್ಮ ಅಲೌಕಿಕ ಅಜೈವಿಕ ಮಹಾಪುರಷನ ಲೀಲೆಗಳ ಬಗ್ಗೆ ಒಂದು ಮಹಾಕಾವ್ಯವನ್ನೇ ಬರೆಯಬಹುದು. ಹಾಗೇನಾದರೂ ಬರೆದರೆ ಅದು ಸೂರ್ಯ ಚಂದ್ರ ಭೂಮಿ ಇರುವವರೆಗೂ ಪ್ರಸಿದ್ಧಿಯಾಗಿರುತ್ತದೆ. ಬರೆಯೋರು ಮುಂದೆ ಬರಬೇಕಷ್ಟೇ. ಹೇಳೋದು ಇನ್ನೂ ಬೇಕಾದಷ್ಟಿದೆ. ಆ ದೇವಲೋಕ ಸ್ವರ್ಗಕ್ಕೆ ದೇವೇಂದ್ರ, ನಮ್ಮ ಈ ಭೂಲೋಕಕ್ಕೆ ನರೇಂದ್ರ. ‌ಇವತ್ತಿಗೆ ಇಷ್ಟು ಸಾಕು. ಈಗ ಹೇಳು. ಮೋದೀಜಿ ಮಹಾರಾಜರಿಗೆ..

ವ್ಯಕ್ತಿ : ಜೈ.

ಭಕ್ತ : ಜಗತ್ ಸಂಚಾರಿ ವಿಶ್ವಗುರು ಶ್ರಿ ಶ್ರೀ ನಮೋ ಮಹಾರಾಜಕೀ

ವ್ಯಕ್ತಿ : ಜೈ ಜೈ ಜೈ.

ಭಕ್ತ : ಈಗ ಹೀಗೆ ಮೋದೀಜಿ ಭಜನೆ ಮಾಡಿ..

ಹಾಡು..

ಕೇಳಿರಣ್ಣಾ ಹೇಳಿರಣ್ಣಾ ಹಾಡಿರಣ್ಣಾ

ಮೋದಿ ಇದ್ದರೆ ಎಲ್ಲವೂ ಸಾಧ್ಯ

ಕೋರಸ್ : ಎಲ್ಲವೂ ಸಾಧ್ಯ ಎಲ್ಲವೂ ಸಾಧ್ಯ

ಮೋದಿ ಹೆಸರೇ ಪದ್ಯ ಮೋದಿ ಎಂದರೆ ಗದ್ಯ

ಅಸಾಧ್ಯವೆಂಬುದು ಯಾವುದು ಇಲ್ಲಾ

ಮೋದಿ ಇಲ್ಲದಿರೆ ಈ ದೇಶವೇ ಇಲ್ಲಾ

ಕೋರಸ್ : ಯಾವುದು ಇಲ್ಲಾ, ದೇಶವೇ ಇಲ್ಲಾ

ಇಂದ್ರಜಾಲ ಮಹೇಂದ್ರಜಾಲ ಪವಾಡ

ಮೋದಿ ಇದ್ದರೆ ಯಾವ ಚಿಂತೆಯೇ ಬೇಡ

ಕೋರಸ್ : ಚಿಂತೆ ಬೇಡ, ಚಿಂತೆಯೇ ಬೇಡ

ಹಾ ಅಲೌಕಿಕ ಅಜೈವಿಕ ಅವತಾರ

ಮೋದಿ ಒಬ್ಬರೇ ಜಗದ ಸಂಕಟಕೆ ಪರಿಹಾರ

ಹಾಂ ಗುರು ಗುರು ಮಹಾಗುರು ವಿಶ್ವಗುರು

ಇಡೀ ವಿಶ್ವಕೆ ಅವರೇ ದಾರಿ ಅವರೇ ಗುರಿ ಅವರೇ ನಮ್ಮ ದೇವರು

ಕೋರಸ್ : ಮೋದಿಯೇ ದೇವರು

ಜಯಾ ನಮಃ ಮೋದೀಜಿ ಮಹಾರಾಜಕೀ

ಕೋರಸ್ : ಜೈ ಜೈ ಜೈ

(ಭಕ್ತ ಜೈಕಾರ ಹಾಕುತ್ತಾ ಹೊರಡುತ್ತಾನೆ. ವ್ಯಕ್ತಿ ಪ್ರೇಕ್ಷಕರನ್ನುದ್ದೇಶಿಸಿ)

ವ್ಯಕ್ತಿ : ಕೇಳಿದ್ರಲ್ಲಾ ಮಹಾಜನಗಳೇ, ಇದು ಅಂಧ ಭಕ್ತರ ಪ್ರಲಾಪ. ಇಲ್ಲದ್ದನ್ನು ಇದೆ ಎಂದು ಆರೋಪಿಸಿ, ಭ್ರಮಾಧೀನರಾಗಿ ವ್ಯಕ್ತಿಯನ್ನು ಸರ್ವಶಕ್ತನೆಂದು ಆರಾಧಿಸಿ ಜೈಕಾರ ಹೇಳುತ್ತಲೇ ಇರುತ್ತಾರೆ. ತರ್ಕಬದ್ಧವಾಗಿ ಪ್ರಶ್ನೆ ಕೇಳಿದರೆ ಪ್ರಶ್ನಿಸಿದವರನ್ನೇ ದ್ರೋಹಿಗಳಂತೆ ದ್ವೇಷಿಸುತ್ತಾರೆ. ಇದು ಈಗ ನಮ್ಮ ದೇಶದ ಪರಿಸ್ಥಿತಿ. ವಿಚಾರಗಳನ್ನೇ ಮರೆತು ಹುಸಿ ಆಚರಣೆಗಳನ್ನು ಆಚರಿಸುತ್ತಾ ಭ್ರಮೆಯನ್ನು ಬಿತ್ತಿ ವ್ಯಕ್ತಿಪೂಜೆಯನ್ನು ಮೆರೆಸುವ ವ್ಯಸನ ಅತಿಯಾಗಿದೆ. ಸುಳ್ಳಿನ ಗುಳ್ಳೆ ಒಂದಿಲ್ಲಾ ಒಂದು ದಿನ ಒಡೆಯಲೇಬೇಕು. ಭ್ರಮೆಯ ಮೋಡಗಳು ಸೂರ್ಯಸತ್ಯಕ್ಕೆ ಚದುರಲೇಬೇಕು. ಅಲ್ಲಿವರೆಗೂ ಕಾಯಬೇಕು ನಾವು ನೀವು ಎಲ್ಲರೂ. ಸುಮ್ಮನಿದ್ದಷ್ಟೂ ನಮ್ಮ ಮೆದುಳಿನ ಮೇಲೆ ಸವಾರಿ ಮಾಡುತ್ತಾರೆ ಹುಷಾರು.. ಯಾರು ಏನೇ ಹೇಳಲಿ ಪ್ರಶ್ನಿಸದೇ ಯಾರನ್ನೂ ಏನನ್ನೂ ನಂಬಬೇಡಿ. ನಿಮ್ಮ ಬುದ್ದಿಯನ್ನು ಅಂಧಭಕ್ತಿಗೆ ಅಡವಿಡಬೇಡಿ. ಇಷ್ಟರ ಮೇಲೆ ನಿಮ್ಮಿಷ್ಟ.. ಸುಳ್ಳೋ ಸತ್ಯವೋ, ಭ್ರಮೆಯೋ ವಾಸ್ತವವೋ.. ಆಯ್ಕೆ ನಿಮ್ಮದು. ನಮಸ್ಕಾರ..

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- http://“ಡಾರ್ಕ್ ಸಿಟಿ, ಡಾರ್ಕರ್ ಸೀಕ್ರೆಟ್ಸ್” https://kannadaplanet.com/dark-city-darker-secrets/

More articles

Latest article

Most read