SIR ಘೋಷಿಸಿದ  ಚುನಾವಣಾ ಆಯೋಗಕ್ಕೆ 4 ಪ್ರಶ್ನೆಗಳು

ಎಸ್‌ಐಆರ್‌ನಿಂದ ಮುಸ್ಲಿಮರ ವೋಟ್‌ಗಳು ಮಾತ್ರ ಡಿಲೀಟ್ ಆಗುತ್ತವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಅಪ್ಪಟ ಸುಳ್ಳು. ಇತ್ತೀಚೆಗೆ ಎಸ್‌ಐಆರ್ ನಡೆದ ಪಶ್ಚಿಮ ಬಂಗಾಳದಲ್ಲಿ 31 ಲಕ್ಷ ಮುಸ್ಲಿಮರ ವೋಟ್‌ ಡಿಲೀಟ್ ಆದರೆ 57 ಲಕ್ಷ  ಹಿಂದೂಗಳ ವೋಟು ಡಿಲೀಟ್ ಆಗಿದೆ. ಈಗ ಹೇಳಿ ಈ ಎಸ್‌ಐಆರ್ ಬೇಕಾ?‌ಮುತ್ತುರಾಜ್, ಹೋರಾಟಗಾರರು.

ಕರ್ನಾಟಕದಲ್ಲಿಯೂ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಜೂನ್ 30 ರಿಂದ ಆರಂಭಿಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ನಾಡಿನ ಪ್ರಜ್ಞಾವಂತರು, ಸಾಮಾಜಿಕ ಸಂಘಟನೆಗಳು ಈ ಎಸ್‌ಐಆರ್ ಅನ್ನು ತೀವ್ರವಾಗಿ ವಿರೋಧಿಸುತ್ತಿವೆ. ಇದು ಹಿಂಬಾಗಿಲ ಮೂಲಕ ಎನ್‌ಆರ್‌ಸಿ ಜಾರಿಗೊಳಿಸುವ ಹುನ್ನಾರ ಎಂದು ಆರೋಪಿಸಿವೆ. ಆದರೆ ಬಿಜೆಪಿ ಮತ್ತು ಚುನಾವಣಾ ಆಯೋಗ ಈ ಎಸ್‌ ಐ ಆರ್ ಪರವಾಗಿ ಬ್ಯಾಟ್ ಬೀಸುತ್ತಿವೆ. ಅವರು ಯಾವ ಕಾರಣಕ್ಕಾಗಿ ಎಸ್‌ಐಆರ್ ಬೇಕು ಅನ್ನುತ್ತಿದ್ದಾರೆ ಮತ್ತು ಅದರ ಹಿಂದಿನ ಹುನ್ನಾರವೇನೆಂದು ಈ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತಿಳಿದುಕೊಳ್ಳಬಹುದಾಗಿದೆ.

  1. ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಒಳ್ಳೆಯದು ಅಲ್ಲವೇ? ಪಟ್ಟಿ ಶುದ್ಧವಾಗಿರಬೇಕು, ಡುಪ್ಲಿಕೇಟ್ ಮತಗಳಿರಬಾರದು ಅಲ್ಲವೇ?

ಖಂಡಿತ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ಇದುವರೆಗೂ 8ಕ್ಕೂ ಹೆಚ್ಚು ಬಾರಿ ತೀವ್ರ ಪರಿಷ್ಕರಣೆ ನಡೆದಿದೆ. ಆಗ ಮತದಾರರ ವಿವರಗಳನ್ನು ಪರಿಶೀಲಿಸಿ ಪಟ್ಟಿಗೆ ಸೇರಿಸುವುದು, ತೆಗೆಯುವುದು ಸರ್ಕಾರದ ಕರ್ತವ್ಯವಾಗಿತ್ತು. ಬಿಎಲ್‌ಒಗಳು ಪ್ರತಿ ಮನೆಗೂ ಭೇಟಿ ನೀಡಿ ವಿಚಾರಿಸಿ, 18 ವರ್ಷ ತುಂಬಿದವರನ್ನು ಪಟ್ಟಿಗೆ ಸೇರಿಸುತ್ತಿದ್ದರು. ಮೃತರಾದವರ ಹೆಸರು ಡಿಲೀಟ್ ಮಾಡುತ್ತಿದ್ದರು. ಬೇರೆಡೆಗೆ ವಲಸೆ ಹೋದವರು ಅಲ್ಲಿ ಪಟ್ಟಿಗೆ ಸೇರಿದ್ದರೆ ಇಲ್ಲಿ ಡಿಲೀಟ್ ಮಾಡುತ್ತಿದ್ದರು.  ಈ ಕೆಲಸವನ್ನು ವರ್ಷ ಪೂರ್ತಿ ಮಾಡಲಿ. ಚುನಾವಣೆ ನಡೆಯುವ ಒಂದು ತಿಂಗಳು ಬಿಟ್ಟು ಉಳಿದಂತೆ 24*7 ಮಾಡಬೇಕು ಎಂಬುದೇ ನಮ್ಮ ಆಗ್ರಹ. ಅತ್ಯುತ್ತಮ ತಂತ್ರಜ್ಞಾನ ಬಳಸಿ ಇದನ್ನು ಮಾಡಿದರೆ ನಮ್ಮ ಅಭ್ಯಂತರವಿಲ್ಲ.

ಆದರೆ ಈಗ ಮಾಡುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಪ್ರತಿ ಮತದಾರರು 2025 ಮತ್ತು 2002ರ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರು, ತಂದೆಯ/ಗಂಡನ ಹೆಸರು, ಅವರ ಮತ್ತು ಅವರ ಪೋಷಕರ ಸೀರಿಯಲ್ ನಂಬರ್, ಬೂತ್ ನಂಬರ್, ಎಪಿಕ್ ನಂಬರ್ ಇತ್ಯಾದಿ ಮಾಹಿತಿಗಳನ್ನು ಹುಡುಕಿ ಎನ್ಯುಮರೇಷನ್ ಫಾರ್ಮ್ ತುಂಬಬೇಕು. ಅದನ್ನು ತೆಗೆದುಕೊಂಡು ಬಿಎಲ್‌ಒಗಳು ಸಾಪ್ಟ್‌ವೇರ್‌ ಗೆ ಅಪ್ಡೇಟ್ ಮಾಡಬೇಕು. ಸಾಫ್ಟ್‌ವೇರ್ ರನ್ ಮಾಡಿ ಕರಡು ಮತದಾರರ ಪಟ್ಟಿ ಕೊಡುತ್ತದೆ. ಒಂದೇ ಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೂ ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. ಆಗ ನೀವು, ‘ನಾನೇ ಆ ಮತದಾರ’ ಎಂದು ನಿರೂಪಿಸಲು ತನ್ನ ದಾಖಲೆ ಮತ್ತು ತನ್ನ ತಂದೆ ತಾಯಿಗಳು ಭಾರತೀಯರು ಎಂದು ನಿರೂಪಿಸುವ ಪೌರತ್ವದ ದಾಖಲೆಗಳನ್ನು ಬಿಎಲ್‌ಒಗೆ ಕೊಡಬೇಕು. ಅವರಿಗೆ ಅದು ಸಮಂಜಸ ಅನಿಸಿದರೆ ನಿಮ್ಮನ್ನು ಫೈನಲ್ ಮತದಾರರ ಪಟ್ಟಿಗೆ ಸೇರಿಸುತ್ತಾರೆ. ಹೆಚ್ಚು ಸ್ಪೆಲ್ಲಿಂಗ್ ಮಿಸ್ಟೇಕ್ ಇರುವವರಿಗೆ, ಮತದಾರನ ತಂದೆ – ತಾಯಿಗೂ, ಮತದಾರನಿಗೂ ವಯಸ್ಸಿನ ಅಂತರ 14 ವರ್ಷಕ್ಕಿಂತ ಕಡಿಮೆ ಮತ್ತು 45 ವರ್ಷಕ್ಕಿಂತ ಹೆಚ್ಚು ಇರುವವರು ಮತ್ತು ಯಾವುದೇ ದಂಪತಿಗಳಿಗೆ 6ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಆ ಮಕ್ಕಳಿಗೆಲ್ಲ ಲಾಜಿಕಲ್ ಡಿಸ್ಕ್ರಿಪ್ರೆನ್ಸಿ ಹೆಸರಿನಲ್ಲಿ ನೋಟಿಸ್ ಕಳಿಸಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುತ್ತದೆ. ಆಗ ಅವರು ತಹಶೀಲ್ದಾರ್, ಎಸಿ ಅಥವಾ ಡಿಸಿ ಎದುರು ವಿಚಾರಣೆಗೆ ಹಾಜರಾಗಿ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒದಗಿಸಿದರೆ ಮಾತ್ರ ಅವರು ಹೆಸರು ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳುತ್ತದೆ. ಇಲ್ಲ ಅಂದ್ರೆ ಡಿಲೀಟ್ ಆಗುತ್ತದೆ.

ಇಷ್ಟೆಲ್ಲ ಪ್ರಕ್ರಿಯೆಯನ್ನು ನಮ್ಮ ದೇಶದ ಬಡವರು, ಮಹಿಳೆಯರು ಮಾಡಲು ಸಾಧ್ಯವೇ? ಅವರಿಗೆ 2002ರ ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಿ ತಮ್ಮ ಹೆಸರು, ಕ್ರಮ ಸಂಖ್ಯೆ ಹುಡುಕಲು ಸಾಧ್ಯವೇ? ಬಹಳಷ್ಟು ಮಂದಿಗೆ 2002ರಲ್ಲಿ ತಮ್ಮ ಬೂತ್ ಯಾವುದು, ಅದರ ನಂಬರ್ ಏನು ಎಂಬುದೇ ಗೊತ್ತಿರುವುದಿಲ್ಲ. ಏಕೆಂದರೆ 2008ರಲ್ಲಿ ಡಿಲಿಮಿಟೇಶನ್ ಕಾರಣಕ್ಕೆ, ಮತದಾರರು ಹೆಚ್ಚಾದಾಗ ಬೂತ್‌ಗಳು ಹೆಚ್ಚಾದ ಕಾರಣಕ್ಕೆ ಬೇರೆ ಬೇರೆಯಾಗಿವೆ. ಅವರೆಲ್ಲ ಏನು ಮಾಡಬೇಕು?

ಇನ್ನೂ ದಾಖಲೆಗಳು ಅಂದರೆ ಸರ್ಕಾರವೇ ನೀಡಿರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಇವು ಯಾವುವೂ ಆಗುವುದಿಲ್ಲವಂತೆ. ಬದಲಾಗಿ ಪಾಸ್‌ಪೋರ್ಟ್, ಮಾರ್ಕ್ಸ್ ಕಾರ್ಡ್, ಟಿ.ಸಿ, ಪರ್ಮನೆಂಟ್ ರೆಸಿಡೆನ್ಸ್ ಸರ್ಟಿಫಿಕೇಟ್ ರೀತಿಯ ದಾಖಲೆ ತನ್ನಿ ಅಂತಿದ್ದಾರೆ.  ಬಡವರು, ಕೂಲಿ ಕಾರ್ಮಿಕರು ಹೊಟ್ಟೆಪಾಡು ಬಿಟ್ಟು ದಾಖಲೆಗಳಿಗಾಗಿ ತಹಶೀಲ್ದಾರ್ ಕಚೇರಿ ಅಲೆಯಬೇಕಾ? ಬಡಜನರು ಅಂದು ದುಡಿದು ಅಂದು ತಿನ್ನುವವರು. ಅವರು ದಾಖಲೆ ಮಾಡಿಸಲು ಎರಡು ಮೂರು ದಿನ ರಜೆ ಹಾಕಿ ತಿರುಗಾಡಬೇಕು. ಇದೆಲ್ಲಾ ಸಾಧ್ಯವೇ? ಸರಿಯಾದ ದಾಖಲೆ ಕೊಡಲಿಲ್ಲ ಎಂದು ಇವರ ಮತದಾನದ ಹಕ್ಕು ಕಿತ್ತುಕೊಳ್ಳುವುದು ಕ್ರೂರತನ ಅಲ್ಲದೇ ಮತ್ತೇನು? ಆನಂತರ ಅವರು  ಈ ದೇಶದ ಪೌರರೇ ಅಲ್ಲ ಎಂದರೆ ಏನು ಮಾಡುವುದು? ಈಗಾಗಲೇ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಲ್ಲಿ ಕೈಬಿಟ್ಟವರಿಗೆ ಕಲ್ಯಾಣ ಯೋಜನೆಗಳನ್ನು ನೀಡುವುದಿಲ್ಲ, ಅವರ ಬ್ಯಾಂಕ್ ಪಾಸ್‌ಬುಕ್ ಸಹ ಡಿಲೀಟ್ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ.

ಈಗಾಗಲೇ 5 ಕೋಟಿಗೂ ಅಧಿಕ ಮತದಾರರು ಪಟ್ಟಿಯಿಂದ ಡಿಲೀಟ್ ಆಗಿದ್ದಾರೆ. ಇಲ್ಲೇ ಹುಟ್ಟಿ ಬೆಳೆದ ಅವರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡಿರುವುದು ಪ್ರಜಾಪ್ರಭುತ್ವವೇ?

2. ನುಸುಳುಕೋರರನ್ನು ಪತ್ತೆ ಹಚ್ಚಲು ಎಸ್‌ಐಆರ್ ಬೇಕು

ಅಕ್ರಮ ನುಸುಳುಕೋರರನ್ನು ಹಿಡಿಯಲು ಇದನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನುಸುಳುಕೋರರನ್ನು ಖಂಡಿತ ಹಿಡಿಯಲೇಬೇಕು. ಆದರೆ ಇದುವರೆಗೂ ದೇಶದ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆದಿದೆಯಲ್ಲ, ಎಷ್ಟು ಜನ ನುಸುಳುಕೋರರನ್ನು ಹಿಡಿದಿದ್ದೀರಿ?  ಸೊನ್ನೆ. ಹೌದು, ಉತ್ತರ ಸೊನ್ನೆ! ಬೇಕಾದ್ರೆ ನೀವು ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡಿ. 13 ರಾಜ್ಯಗಳಲ್ಲಿ ಸಿಗದ ನುಸುಳುಕೋರರು ಕರ್ನಾಟಕದಂತಹ ಯಾವುದೇ ದೇಶದೊಂದಿಗೆ ಗಡಿ ಹಂಚಿಕೊಳ್ಳದ ರಾಜ್ಯದಲ್ಲಿ ಹೇಗೆ ಸಿಗುತ್ತಾರೆ? ಇದಕ್ಕೆ ಚುನಾವಣಾ ಆಯೋಗ ಉತ್ತರಿಸುತ್ತದೆಯೇ?

ಆದರೆ, ದಾಖಲೆಗಳ ಮ್ಯಾಚಿಂಗ್ ಹೆಸರಿನಲ್ಲಿ, ಸಣ್ಣಪುಟ್ಟ ಸ್ಪೆಲ್ಲಿಂಗ್ ಮಿಸ್ಟೇಕ್‌ಗಳ ನೆಪವೊಡ್ಡಿ ದೇಶಾದ್ಯಂತ ಸುಮಾರು 5 ಕೋಟಿಗೂ ಅಧಿಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಇದು ನ್ಯಾಯವೇ?” ಅವರೆಲ್ಲಾ ಅಕ್ರಮ ನುಸುಳುಕೋರರೇ?

3. ಅಕ್ರಮ ಬಾಂಗ್ಲಾದೇಶಿಯರನ್ನು ಹಿಡಿಯಲು ಇದನ್ನು ಮಾಡುತ್ತಿರುವುದು

ಅಂದ್ರೆ ಬಾಂಗ್ಲಾದೇಶಿಯರು ನುಸುಳಿ ಬಂದು ಇಲ್ಲಿ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಮಾಡಿಸಿಕೊಂಡಿದ್ದಾರಾ? 12 ವರ್ಷದಿಂದ ಅಧಿಕಾರದಲ್ಲಿದ್ದು ಅವರಿಗೆ ಇವೆಲ್ಲ ದಾಖಲೆ ಮಾಡಿಕೊಟ್ಟವರು ಯಾರು? ಮಾಡಿಕೊಟ್ಟವರಿಗೆ ಏನು ಶಿಕ್ಷೆ? ಇಷ್ಟು ವರ್ಷ ಅವರನ್ನು ಹಿಡಿಯದೇ ಗೃಹ ಇಲಾಖೆ ಕತ್ತೆ ಕಾಯ್ತಿದ್ಯ? ಈ ಪ್ರಶ್ನೆಗಳಿಗೆ ಉತ್ತರ ಯಾರು ಕೊಡ್ತಾರೆ?

4. ನೀವು ಮುಸ್ಲಿಮರ ಪರ. ಹಾಗಾಗಿ ಎಸ್‌ಐಆರ್ ವಿರೋಧಿಸುತ್ತೀರಿ..

ನಾವು ಒಳ್ಳೆಯ ಮನುಷ್ಯರ ಪರ. ಮನುಷ್ಯರು ಅಂದ್ರೆ ಎಲ್ಲಾ ಧರ್ಮದ, ಜಾತಿಯ, ಲಿಂಗದ ಮನುಷ್ಯರ ಪರ. ತಪ್ಪು ಮಾಡಿದ್ರೆ ಅವರು ಯಾವುದೇ ಧರ್ಮ, ಜಾತಿ ಆದ್ರೂ ವಿರೋಧಿಸುತ್ತೇವೆ. ನಮ್ಮ ಪ್ರಕಾರ ಒಳ್ಳೆಯವರು ಎಲ್ಲಾ ಜಾತಿ, ಧರ್ಮದಲ್ಲಿಯೂ ಇದ್ದಾರೆ. ಅದೇ ರೀತಿ ಕೆಟ್ಟವರು ಸಹ.

ಇನ್ನೂ ಎಸ್‌ಐಆರ್‌ನಿಂದ ಮುಸ್ಲಿಮರ ವೋಟುಗಳು ಮಾತ್ರ ಡಿಲೀಟ್ ಆಗುತ್ತವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಅಪ್ಪಟ ಸುಳ್ಳು. ಇತ್ತೀಚೆಗೆ ಎಸ್‌ಐಆರ್ ನಡೆದ ಪಶ್ಚಿಮ ಬಂಗಾಳದಲ್ಲಿ 31 ಲಕ್ಷ ಮುಸ್ಲಿಮರ ವೋಟು ಡಿಲೀಟ್ ಆದರೆ 57 ಲಕ್ಷ  ಹಿಂದೂಗಳ ವೋಟು ಡಿಲೀಟ್ ಆಗಿದೆ. ಈಗ ಹೇಳಿ ಈ ಎಸ್‌ಐಆರ್ ಬೇಕಾ?

ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರ ಮತಗಳು ಹೆಚ್ಚಾಗಿ ಡಿಲೀಟ್ ಆಗಿವೆ. ಏಕೆಂದರೆ 2002ರ ಅವರ ಹೆಸರು ತವರು ಮನೆಯ ವೋಟರ್ ಲಿಸ್ಟ್‌ನಲ್ಲಿ ಇರುತ್ತೆ. ಈಗ ಅವರ ವೋಟು ಗಂಡನ ಮನೆಯಲ್ಲಿ ಇರುತ್ತದೆ. ಆಗ ಮ್ಯಾಪ್ ಮಾಡುವುದು ಸ್ವಲ್ಪ ಕಷ್ಟ. ಜೊತೆಗೆ ಅವರು ತಮ್ಮ ತಂದೆಯ ತಾಯಿಯ ದಾಖಲೆಗಳನ್ನು ತವರು ಮನೆಗೆ ಹೋಗಿ ಸಂಗ್ರಹಿಸಿ ಕೊಡಬೇಕು. ಇಷ್ಟೆಲ್ಲ ತಾಪತ್ರಯಗಳು ಇರುವುದರಿಂದ ಅವರ ವೋಟು ಡಿಲೀಟ್ ಆಗುತ್ತದೆ. ಇದುವರೆಗೂ ನಡೆದ ಎಸ್‌ಐಆರ್‌ನಲ್ಲಿ ಡಿಲೀಟ್ ಆದ ಮತಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಮಹಿಳೆಯರದೇ ಆಗಿವೆ!

ಹಾಗಾಗಿ ನಮಗೆ ನಿಮ್ಮಗಳ ವೋಟಿನ ಹಕ್ಕಿನ ಬಗ್ಗೆಯೂ ಗೌರವವಿದೆ. ಯಾರೊಬ್ಬ ಅರ್ಹ ಮತದಾರರ ಓಟು ಸಹ ಡಿಲೀಟ್ ಆಗಬಾರದು ಎಂದರೆ ಈ ಎಸ್‌ಐಆರ್ ಬೇಡ, ಹಿಂದಿನ ರೀತಿಯ ತೀವ್ರ ಪರಿಷ್ಕರಣೆಯಷ್ಟೆ ಸಾಕು ಅನ್ನುತ್ತಿರುವುದು.

ಎಸ್‌ಐಆರ್ ಎಂಬುದು “ಅಗತ್ಯವಿಲ್ಲದ ಮತ್ತು ಕಿರುಕುಳ ನೀಡುವ ಪ್ರಕ್ರಿಯೆ”. ಸಾಫ್ಟ್‌ವೇರ್ ಮತ್ತು ಅಲ್ಗಾರಿದಮ್‌ಗಳ ಮೂಲಕ ಮತದಾರರನ್ನು ಪಟ್ಟಿಯಿಂದ ಕೈಬಿಡುತ್ತಿರುವುದು, ಸಣ್ಣಪುಟ್ಟ ಸ್ಪೆಲ್ಲಿಂಗ್ ಮಿಸ್ಟೇಕ್‌ಗಳಿಗಾಗಿ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ನಾಗರಿಕರ ಹಕ್ಕಿನ ಮೇಲೆ ನಡೆಯುತ್ತಿರುವ ಪ್ರಹಾರ. ಇಷ್ಟು ದೊಡ್ಡ ಮಟ್ಟದ ಪರಿಷ್ಕರಣೆಯನ್ನು ಅತ್ಯಲ್ಪ ಕಾಲದಲ್ಲಿ ಮುಗಿಸಲು ಹೊರಟಿರುವುದು ಆಡಳಿತಾತ್ಮಕವಾಗಿ ದೊಡ್ಡ ಅನಾಹುತಕ್ಕೆ (Administrative Disaster) ದಾರಿ ಮಾಡಿಕೊಡುತ್ತದೆ ಎಂದು ಮಾಜಿ ಚುನಾವಣಾ ಆಯುಕ್ತರಾದ ಡಾ. ಎಸ್.ವೈ. ಖುರೇಷಿ ಎಚ್ಚರಿಸಿದ್ದಾರೆ.

ಇನ್ನೊಬ್ಬ ಮಾಜಿ ಆಯುಕ್ತ ಓ.ಪಿ. ರಾವತ್ ಅವರು ‘ಪ್ರತಿಯೊಬ್ಬ ನಾಗರಿಕನೂ ಪೌರತ್ವ ಸಾಬೀತುಪಡಿಸಬೇಕು ಎಂದು ಕೇಳುವುದು ಕಾನೂನುಬಾಹಿರ’ ಎಂದು ಎಚ್ಚರಿಸಿದ್ದಾರೆ. ಅನುಭವವಿರೋ ಅಧಿಕಾರಿಗಳೇ ಇದನ್ನು ವಿರೋಧಿಸುತ್ತಿದ್ದಾರೆ ಎಂದರೆ, ಇದರ ಹಿಂದೆ ಏನೋ ಸಂಚಿದೆ ಅಂತ ಅರ್ಥವಲ್ಲವೇ?” ಹಾಗಾಗಿ ಈ ಎಸ್‌ಐಆರ್ ವಿರುದ್ಧ ನಿರಂತರ ಜನಾಂದೋಲನ ಅಗತ್ಯವಿದೆ. ಜೊತೆಗೆ ನಮಗೆ ಬೇಡದಿದ್ದರೂ ಸುಪ್ರೀಂ ಕೋರ್ಟ್‌ ಸಹ ಎಸ್‌ಐಆರ್ ಪರ ಇರುವುದರಿಂದ ಇದು ಜಾರಿ ಆಗಿಯೇ ಆಗುತ್ತದೆ. ಆ ಸಂದರ್ಭದಲ್ಲಿಯೂ ಒಬ್ಬ ಅರ್ಹ ಮತದಾರರ ಹೆಸರು ಸಹ ಬಿಟ್ಟು ಹೋಗದಂತೆ ತಡೆಯುವ ಜವಾಬ್ದಾರಿ ನಮ್ಮ ಮೇಲಿದೆ.

ಮುತ್ತುರಾಜು, ಬೆಂಗಳೂರು.

ಬರಹಗಾರರು ಮತ್ತು ಹೋರಾಟಗಾರರು

ಇದನ್ನೂ ಓದಿ- ಪ್ರಧಾನಿ ಮತ್ತು ಪತ್ರಿಕಾಗೋಷ್ಠಿ!

More articles

Latest article

Most read