ಬಿಜೆಪಿ ತೊರೆದ ನಟ ದೇವನ್ ಹೇಳಿದ್ದೇನು.?

ಕೇರಳ : ನಟ ದೇವನ್ ಶ್ರೀನಿವಾಸನ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅಲಪ್ಪುಳದ ದೇವಾಲಯವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಘೋಷಣೆ ಮಾಡಿದರು.

ನಟ ದೇವನ್ ಹೇಳಿದ್ದಿಷ್ಟು:

” ಶ್ರೀ ನಾರಾಯಣ ಗುರುಗಳ ಆದರ್ಶಗಳು ಮತ್ತು ಸಿದ್ಧಾಂತಗಳನ್ನು ಒಳಗೊಂಡಿರುವ ರಾಜಕೀಯ ವ್ಯವಸ್ಥೆಯನ್ನು ನಾನು ಬಯಸುತ್ತೇನೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ನನಗೆ ಅಂತಹ ವಾತಾವರಣ ಕಂಡುಬರಲಿಲ್ಲ. ಇದು ನನ್ನ ಹಾದಿಯಲ್ಲ ಎಂದು ನನಗೆ ಅರಿವಾಯಿತು, ಅಲ್ಲದೆ
ಹಲವು ವಿಷಯಗಳಲ್ಲಿ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದು, ಮತ್ತು ಪಕ್ಷದೊಳಗೆ ಕಾರ್ಯನಿರ್ವಹಿಸಲು ನನಗೆ ಸಾಕಷ್ಟು ಅವಕಾಶಗಳು ಸಿಗುತ್ತಿರಲಿಲ್ಲ” ಎಂದು ತಿಳಿಸಿದರು

“ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ನೆಮೋಮ್ ಕ್ಷೇತ್ರದ ಶಾಸಕ ರಾಜೀವ್ ಚಂದ್ರಶೇಖರ್, ಮತ್ತು ಬಿಜೆಪಿಯ ಇತರ ಪ್ರಭಾವಿ ನಾಯಕರು ನನ್ನ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಎಂದು ಅವರು ಆರೋಪಿಸಿದರು.

“ನಾನು ಬಿಜೆಪಿಗಾಗಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದೇನೆ. ತಿರುವನಂತಪುರದಲ್ಲಿ ರಾಜೀವ್ ಚಂದ್ರಶೇಖರ್ ಅವರ ಗೆಲುವಿಗೆ ಹಗಲಿರುಳು ದುಡಿದಿದ್ದೇನೆ, 2024ರಲ್ಲಿ ರಾಜ್ಯ ಉಪಾಧ್ಯಕ್ಷ ಹುದ್ದೆಯಿಂದ ತಮ್ಮನ್ನು ತೆಗೆದುಹಾಕಲು ನಿರ್ಧರಿಸಿದ ನಂತರ, ಪಕ್ಷದ ನಾಯಕತ್ವವು ತಮ್ಮನ್ನು ಸಂಪರ್ಕಿಸಲಿಲ್ಲ ಎಂದು ಅವರು ಆರೋಪಿಸಿದರು.

ಬಿಜೆಪಿಯಲ್ಲಿ ಕಾರ್ಯನಿರ್ವಹಿಸಲು ನನಗೆ ಇಷ್ಟವಿಲ್ಲ ಸದ್ಯಕ್ಕೆ ಸ್ವತಂತ್ರವಾಗಿ ಉಳಿದು 2024ರಲ್ಲಿ ಸ್ಥಾಪಿಸಿದ್ದ ‘ಕೇರಳ ಪೀಪಲ್ಸ್ ಪಾರ್ಟಿ’ಯನ್ನು ಪುನಶ್ಚೇತನಗೊಳಿಸುತ್ತೇನೆ” ಎಂದು ಹೇಳಿದರು.

More articles

Latest article

Most read