ನಂದಿನಿ ಹಾಲಿನ ದರ ಏರಿಕೆಗೆ ಸಿಎಂಗೆ ಒಕ್ಕೂಟಗಳ ಪ್ರಸ್ತಾವ: ಇಂದೇ ಬೆಲೆ ಏರಿಕೆ ಸಾಧ್ಯತೆ

ಬೆಂಗಳೂರು ಸೆ. 26: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ. ನಂದಿನಿ ಹಾಲಿನ ದರ ಹೆಚ್ಚಳದ ಕುರಿತು ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಾಲು ಒಕ್ಕೂಟಗಳ ಪ್ರತಿನಿಧಿಗಳು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಿದ್ದಾರೆ.

ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಕನಿಷ್ಠ 10 ರೂಪಾಯಿ ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳು ಒತ್ತಾಯಿಸಿವೆ. ಕಳೆದ ಕೆಲವು ತಿಂಗಳಿಂದ ಉತ್ಪಾದನಾ ವೆಚ್ಚ, ಆಡಳಿತ ವೆಚ್ಚ ಸೇರಿದಂತೆ ವಿವಿಧ ಖರ್ಚುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗೆ ಒಕ್ಕೂಟಗಳು ಮನವಿ ಮಾಡಿವೆ.

ಆದರೆ, ಅಂತಿಮವಾಗಿ ಗ್ರಾಹಕರಿಗೆ ಎಷ್ಟು ಹೆಚ್ಚಳದ ಹೊರೆ ಬೀಳಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ವರದಿಗಳ ಪ್ರಕಾರ ಒಕ್ಕೂಟಗಳು ಆರಂಭದಲ್ಲಿ ₹8ರಿಂದ ₹10ರವರೆಗೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರೂ, ₹5ರಷ್ಟು ಹೆಚ್ಚಳದ ಪ್ರಸ್ತಾವನೆಯೂ ಚರ್ಚೆಯಲ್ಲಿದೆ. ಸರ್ಕಾರದ ಅಂತಿಮ ತೀರ್ಮಾನದ ಬಳಿಕವಷ್ಟೇ ಹೊಸ ದರ ಸ್ಪಷ್ಟವಾಗಲಿದೆ.

ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರ ಪ್ರಕಾರ, ರೈತರ ಹಿತ ಕಾಪಾಡುವುದು ಹಾಗೂ ನಂದಿನಿ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ದರ ಪರಿಷ್ಕರಣೆಯ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಇತರ ರಾಜ್ಯಗಳ ಹಾಲು ಉತ್ಪಾದಕರಿಗೆ ಸಿಗುತ್ತಿರುವ ದರ ಮತ್ತು ಕರ್ನಾಟಕದ ದರದ ನಡುವಿನ ವ್ಯತ್ಯಾಸವನ್ನೂ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ.

ಮೊಸರು, ಬೆಣ್ಣೆ, ತುಪ್ಪಕ್ಕೂ ದರ ಏರಿಕೆ ಸಾಧ್ಯತೆ

ಹಾಲಿನ ದರ ಏರಿಕೆಯಾದರೆ ನಂದಿನಿಯ ಮೊಸರು, ಬೆಣ್ಣೆ, ತುಪ್ಪ ಸೇರಿದಂತೆ ಇತರ ಹಾಲಿನ ಉತ್ಪನ್ನಗಳ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಅಂತಿಮ ನಿರ್ಧಾರ ಸರ್ಕಾರದ ಅನುಮೋದನೆಯ ನಂತರವೇ ಹೊರಬೀಳಲಿದೆ.

ಹೋಟೆಲ್‌ಗಳಲ್ಲಿ ಟೀ, ಕಾಫಿ ದುಬಾರಿ ಸಾಧ್ಯತೆ

ಗ್ರಾಹಕರಿಗೆ ಮತ್ತೊಂದು ಹೊಡೆತವಾಗಿ, ಹಾಲಿನ ದರ ಹೆಚ್ಚಳವಾದರೆ ಹೋಟೆಲ್‌ಗಳಲ್ಲಿ ಟೀ, ಕಾಫಿ ದರವನ್ನೂ ಹೆಚ್ಚಿಸಬೇಕಾಗುತ್ತದೆ ಎಂದು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.

ಈಗಾಗಲೇ ವಿವಿಧ ಕಾರಣಗಳಿಂದ ಹೋಟೆಲ್‌ಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹಾಲಿನ ದರದಲ್ಲಿ ₹4ರಿಂದ ₹5ರಷ್ಟು ಹೆಚ್ಚಳವಾದರೂ ಅದರ ಪರಿಣಾಮ ಟೀ, ಕಾಫಿ ಸೇರಿದಂತೆ ಹೋಟೆಲ್‌ಗಳ ಆಹಾರ ಪದಾರ್ಥಗಳ ಬೆಲೆಯ ಮೇಲೂ ಬೀಳಲಿದೆ ಎಂದು ಅವರು ಹೇಳಿದ್ದಾರೆ.

ಹಾಲಿನ ದರ ಎಷ್ಟು ಹೆಚ್ಚಾಗಲಿದೆ? ಮೊಸರು, ತುಪ್ಪ, ಬೆಣ್ಣೆ ದರ ಏರಿಕೆಯಾಗುತ್ತಾ? ಟೀ-ಕಾಫಿ ಬೆಲೆಯೂ ಹೆಚ್ಚಾಗುತ್ತಾ? ಎಂಬ ಪ್ರಶ್ನೆಗಳಿಗೆ ಇಂದು ನಡೆಯಲಿರುವ ಸರ್ಕಾರ–ಹಾಲು ಒಕ್ಕೂಟಗಳ ಸಭೆಯ ಬಳಿಕ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆಯಿದೆ.

More articles

Latest article

Most read