ಅಂಬೇಡ್ಕರ್ ನಡೆದಾಡಿದ ಮಣ್ಣ ಕಣಗಳು

ನಮ್ಮ ದೇಶದ ಇತಿಹಾಸದಲ್ಲಿ ಅದೆಷ್ಟೋ ರಾಜಮಹಾರಾಜರುಗಳು ಕೆಲವರು ಸಾಮ್ರಾಜ್ಯಗಳನ್ನು ಕಟ್ಟಿದರು, ಕೆಲವರು ಕೆಡವಿದರು. ಆದರೆ ಮಹಾನ್ ನೇತಾರರು ಹಾಗಲ್ಲ, ಜನ ಸಾಮಾನ್ಯರ ಶೋಷಿತ ದೀನ ದುರ್ಬಲರ  ನಡುವೆ ಬಂದು ಅವರ ಉದ್ಧಾರಕ್ಕಾಗಿ ಶ್ರಮಿಸಿ, ಹೊಸ ಬೆಳಕು ಮೂಡಿಸಿದವರು. ದಕ್ಷಿಣದ ನಾರಾಯಣ ಗುರು, ಕುದ್ಮುಲ್ ರಂಗರಾವ್, ಉತ್ತರದ ಮಹಾತ್ಮ ಗಾಂಧಿ, ಸಾವಿತ್ರಿ -ಜ್ಯೋತಿಬಾ ಫುಲೇ,‌ ರಾಜಾರಾಮ್ ಮೋಹನ ರಾಯ್, ಡಾ ಬಿ ಆರ್.ಅಂಬೇಡ್ಕರ್- ಮೊದಲಾದವರು ಈ ಸಾಲಿನವರು.

ಡಾ ಬಾಬಾ ಸಾಹೇಬ್ ಅಂಬೇಡ್ಕರ್ (1891-1956) ಅವರ ವಿಶೇಷತೆ ಎಂದರೆ ಅವರು ಬಹುಮುಖಿ ಚಿಂತಕ,  ಅರ್ಥಶಾಸ್ತ್ರಜ್ಞ, ಅಸ್ಪೃಶ್ಯತೆ, ಜಾತಿ ಪದ್ಧತಿಯ ವಿರುದ್ಧದ ಪ್ರಬಲ ಹೋರಾಟಗಾರ, ಭಾರತದ ಸಂವಿಧಾನ ಶಿಲ್ಪಿ. ಸ್ವತಂತ್ರ ಭಾರತದ ರಾಷ್ಟ್ರ ಸಂವಿಧಾನವನ್ನೇ ರೂಪಿಸಿದ ಕರಡು ಸಮಿತಿಯ ಅಧ್ಯಕ್ಷರಾಗಿ, ದೇಶದ ಸರ್ವೋಚ್ಚ ಕಾಯಿದೆಯನ್ನು ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ದೇಶದಲ್ಲಿ ಸಮಾನತೆ, ಮೂಲಭೂತ ಹಕ್ಕುಗಳು, ಮತ್ತು ಸಾಮಾಜಿಕ ನ್ಯಾಯಕ್ಕೆ ಭದ್ರ ಅಸ್ತಿವಾರವನ್ನು ಹಾಕಿದವರು. 29-08-1947 ರಿಂದ 24-01-1950 ರ ಅವಧಿಯಲ್ಲಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ, ( ಆಗ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರು-ಸಂವಿಧಾನ ತಜ್ಞರೂ ಆಗಿದ್ದ ಮಂಗಳೂರು ಮೂಲದ ಬೆನಗಲ್ ನರಸಿಂಹ ರಾವ್ ಕೂಡಾ -ಅದರ ಓರ್ವ ಸದಸ್ಯರಾಗಿದ್ದರು ) ಡಾ ಅಂಬೇಡ್ಕರ್ 15-08-1947 ರಿಂದ 24-01-1950 ರ ವರೆಗೆ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿದ್ದರು. ದಲಿತರು ಮತ್ತು ದಲಿತ ಮಹಿಳೆಯರ ಹಕ್ಕುಗಳಿಗಾಗಿ ತನ್ನ ಜೀವಮಾನವನ್ನು ಮುಡಿಪಾಗಿಟ್ಟರು. ಸ್ವಂತಕ್ಕೆ ಎಲ್ಲವನ್ನೂ ಪಡಕೊಳ್ಳುವ ಶಕ್ತಿ ಇದ್ದರೂ, ಜನ ಸಮುದಾಯದ ಪರಿಹಾರ ಕಾಣದ ಜಾತೀಯ ಶೋಷಣೆಗೆ ನೊಂದು, ನಾಗಪುರದಲ್ಲಿ ಮೂರು ಲಕ್ಷಕ್ಕೂ ಮಿಕ್ಕ ದಲಿತ ಅನುಯಾಯಿಗಳೊಂದಿಗೆ 1956 ರ ಅಕ್ಟೋಬರ್ 14 ರಂದು ಬೌದ್ಧ ಧರ್ಮ ಸ್ವೀಕಾರ ಮಾಡಿದರು. ಅದರ ದಿವ್ಯ ಸ್ಮಾರಕವೇ ನಾಗಪುರದ ದೀಕ್ಷಾಭೂಮಿ.

1956 ರ ಡಿಸೆಂಬರ್ 6 ರಂದು ನಿಧನರಾದ ಅವರ ಸೇವೆ ಯನ್ನು ಗುರುತಿಸಿ, ಭಾರತದ ಅತ್ಯುನ್ನತ ನಾಗರಿಕ ಗೌರವವಾದ “ಭಾರತ ರತ್ನ “ವನ್ನು ಮರಣೋತ್ತರವಾಗಿ ಅವರಿಗೆ ಪ್ರದಾನಿಸಲಾಯಿತು.

ಅಂಬೇಡ್ಕರ್ ಅವರು ಈಗಿನ ಮಧ್ಯಪ್ರದೇಶದ “ಮ್ಹೋವ್ (Mhow),  ಎಂಬಲ್ಲಿ ದಿನಾಂಕ 14 ಏಪ್ರಿಲ್ 1891 ರಲ್ಲಿ ಜನಿಸಿದರು. ತಂದೆ ರಾಮ್ ಜೀ ಮೂಲೋಜಿ ಸಕ್ಪಾಲ್, ತಾಯಿ ಮುಂಬೈ ಪ್ರಾಂತದ ಭೀಮಾ ಬಾಯಿ. ತಂದೆ ಅಂದಿನ ಬ್ರಿಟಿಷ್ ಸರಕಾರದಲ್ಲಿ ಸುಬೆದಾರ್ ಹುದ್ದೆಯಲ್ಲಿದ್ದರು. ಇವರು ಅತೀ ಹಿಂದುಳಿದ ‘ಮಹರ್ ‘ ಜನಾಂಗಕ್ಕೆ ಸೇರಿದವರಾಗಿದ್ದರು.

ಬಾಬಾ ಅವರು ಬಾಲ್ಯದಿಂದಲೇ ತೀವ್ರ ಜಾತಿ ತಾರತಮ್ಯದ ನೋವು ಅನುಭವಿಸಿದರು. ಆದರೂ ಇವರಲ್ಲಿದ್ದ ಅಪಾರ ಬೌದ್ಧಿಕ ಪ್ರತಿಭೆ ಗಮನಿಸಿದ ಬರೋಡ ಸಂಸ್ಥಾನದ ಮಹಾರಾಜ ಸಯಾಜಿ ರಾವ್ ಗಾಯಕ್ವಾಡ್ ಇವರ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದರು. ಮುಂಬೈ ಯ ಎಲ್ಫಿನ್ ಸ್ಟನ್ ಕಾಲೇಜಿನಲ್ಲಿ ಪದವಿ ಪಡೆದು, ಮುಂದೆ ಅಮೇರಿಕೆಗೆ ತೆರಳಿ, ಕೊಲಂಬಿಯಾ ವಿ ವಿ ಮತ್ತು ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ಗಳಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದರು. 1920 ರಲ್ಲಿ ಡಾಕ್ಟರೇಟ್ ಮತ್ತು 1923 ರಲ್ಲಿ ಬ್ಯಾರಿಸ್ಟರ್ ಪದವಿ ಪಡೆದರು. ಸ್ವದೇಶಕ್ಕೆ ಹಿಂತಿರುಗುತ್ತಲೇ ಅವರ ಗಮನವಿದ್ದುದು ಅಂದಿನ ಶೋಷಿತರು ಮತ್ತು ದಲಿತರ ಸ್ವಾತಂತ್ರ್ಯಕ್ಕಾಗಿ ಹೋರಾಟ. 1927 ರಲ್ಲಿ ಮಹಾಡ್ ನ ಬೇಹಾಡ್ ಕೆರೆ ಸತ್ಯಾಗ್ರಹ, ದಲಿತರಿಗೆ ಸಾರ್ವಜನಿಕ ನೀರಿನ ಮೂಲ ಗಳನ್ನು ಬಳಸುವ ಹಕ್ಕಿಗಾಗಿ ಐತಿಹಾಸಿಕ ಸತ್ಯಾಗ್ರಹದ ನೇತೃತ್ವ ವಹಿಸಿದರು.

ದಲಿತರ ಹಕ್ಕುಗಳ ದನಿಯಾಗಲು ‘ಮೂಕ್ ನಾಯಕ್’ ( 1920) ‘ ಬಹಿಷ್ಕೃತ್ ‘ ಪತ್ರಿಕೆ ಗಳನ್ನು ಆರಂಭಿಸಿದರು. 1927 ರಲ್ಲಿ ಮುಂಬಯಿ ಶಾಸಕಾಂಗ ಸಭೆಯ ಸದಸ್ಯರಾಗಿ ಆಯ್ಕೆ ಗೊಂಡರು.

 ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂಬೇಡ್ಕರ್ ದೇಶದ ಮೊದಲ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದರು. ಕಾನೂನು ತಜ್ಞರಾಗಿ ಇಡೀ ವಿಶ್ವವೇ ಬೆರಗಾಗುವಂತಹ ಸರ್ವ ಸಮಗ್ರ ಹಾಗೂ ಪ್ರಜಾಸತ್ತಾತ್ಮಕ ಸಂವಿಧಾನ ರಚಿಸಿದರು. ಮಹಿಳೆಯರ ಹಕ್ಕು ಗಳು, ಕಾರ್ಮಿಕರ ಕಲ್ಯಾಣ ಮತ್ತು ಅಲ್ಪ ಸಂಖ್ಯಾತರ ರಕ್ಷಣೆಗಾಗಿ ವಿಶೇಷ ಕಾಯ್ದೆಗಳನ್ನು ಜ್ಯಾರಿಗೆ ತಂದರು.

ಅವರ ಮೊದಲ ಪತ್ನಿ ( ಬಾಲ ವಯಸ್ಸಿನಲ್ಲೇ ಆಗಿದ್ದ ಮದುವೆ ) ರಮಾಬಾಯಿ ತೀರಿಕೊಂಡ ಮೇಲೆ ಮದುವೆಯಾದ ಸವಿತಾ ಅಂಬೇಡ್ಕರ್ ಪತಿಯ ಎಲ್ಲ ಸಾಮಾಜಿಕ ಸೇವಾ ಕಾರ್ಯದಲ್ಲೂ ಕೊನೆವರೆಗೂ ಜತೆಯಾಗಿದ್ದರು. ಇವರಿಗೆ ಯಶವಂತ ಎಂಬ ಓರ್ವ ಪುತ್ರ.

ದೀಕ್ಷಾ ಭೂಮಿಯ ಎದುರು ಲೇಖಕರು

ಆ ಕಾಲಘಟ್ಟದಲ್ಲಿದ್ದ ದಲಿತರ ಶೋಷಣೆ ಅಸಮಾನತೆ ವಿರುದ್ಧ ನಿರಂತರ ಹೋರಾಡುತ್ತಲೇ ಬಂದ ಅಂಬೇಡ್ಕರ್ ಜಾತಿ ವ್ಯವಸ್ಥೆ ಯ ಪ್ರತಿಭಟನೆಯ ಕೊನೆಯ ಹಂತವಾಗಿ 1956 ಅಕ್ಟೋಬರ್ 14 ರಂದು ನಾಗಪುರದಲ್ಲಿ ಲಕ್ಷಾಂತರ ದಲಿತ ಅನುಯಾಯಿಗಳ ಜತೆ ಈಗಿರುವ ಬೋಧಿ ವೃಕ್ಷ ಲಾಂಛನದಡಿ ಬೌದ್ಧ ಧರ್ಮ ಸ್ವೀಕರಿಸಿದರು. 1956  ಡಿಸೆಂಬರ್ 6 ರಂದು ಅಂಬೇಡ್ಕರ್ ನಿಧನರಾದರು.

ನಾಗಪುರ ರೈಲ್ವೆ ನಿಲ್ದಾಣಕ್ಕೆ 5 ಕಿ ಮೀ. ದೂರದಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಮಹಾರಾಷ್ಟ್ರ – ಮಧ್ಯಪ್ರದೇಶ ಗಡಿ ಭಾಗ ದಲ್ಲಿರುವ ನಾಗಪುರ ದೀಕ್ಷಾ ಭೂಮಿ ಈಗ ಪವಿತ್ರ ಬೌದ್ಧ ಯಾತ್ರಾ ಸ್ಥಳವಾಗಿದೆ. ಇಲ್ಲಿ ವಿಶ್ವದ ಅತೀ ದೊಡ್ಡ ಬೌದ್ಧ

ಸ್ತೂಪವಿದೆ. ಒಳಗಡೆ ಟೊಳ್ಳಾಗಿದ್ದು, ಸಾಂಚಿ ಸ್ತೂಪದ ಮಾದರಿಯಲ್ಲಿ ನಿರ್ಮಿಸಲಾದ ಈ ಸ್ತೂಪದ ಒಳಗಡೆ ಭಗವಾನ್ ಬುದ್ಧನ ಸುಂದರವಾದ ಕಂಚಿನ ಪ್ರತಿಮೆ ಇದೆ.

ಮುದ್ದು ಮೂಡುಬೆಳ್ಳೆ

ಜಾನಪದ ವಿದ್ವಾಂಸರು

ಇದನ್ನೂ ಓದಿ- ಪಿ.ಲಂಕೇಶರ ‘ಅವ್ವ’: ನಿರಾಕರಣೆಯ ಅಸ್ತಿತ್ವ

More articles

Latest article

Most read