ಶಾಲೆಯಿದು, ನಾಜಿಗಳ ಶಿಬಿರವಲ್ಲ

ಶಾಲೆಯಿದು, ನಾಜಿಗಳ ಶಿಬಿರವಲ್ಲ

ತಲೆ ಎತ್ತಿ
ಒಳಗೆ ಬಾ ವಿದ್ಯಾರ್ಥಿ,

ಶಾಲೆಯಿದು,
ನಾಜಿಗಳ ಶಿಬಿರವಲ್ಲ…
ಕಲಿಕೆಯ ಕ್ರೀಡಾಂಗಣ

ಶಾಲೆಯಿದು
ಹೇಳಿದ್ದನ್ನೆಲ್ಲ
ಕೇಳಬೇಕಾದ ಸೇನೆಯಲ್ಲ

ಪ್ರತಿಯೊಂದನ್ನು ಪ್ರಶ್ನಿಸುವ
ಪ್ರಯೋಗಶಾಲೆ…

ಹಳಸಿದ ಹಳತನ್ನು
ಎಸೆದು
ಹೊಸತಿನ ಎಸಳನ್ನು ಬೆಸೆಯುವ ಸೃಜನಶಾಲೆ

ಶಾಲೆಯಿದು,

ಗೋಣಿಚೀಲಕ್ಕೆ
ಹುಲ್ಲು ತುಂಬುವ

ಸನಾತನ ಕೊಟ್ಟಿಗೆಯಲ್ಲ..

ಹಂಗಿಲ್ಲದೆ ಬೆಳೆಯುವ
ವಿವೇಕದ ಗಿಡಕೆ
ನೀರು ಹಾಯಿಸುವ

ಹೂದೋಟ…

  • ಶಿವಸುಂದರ್

ಶಾಲೆಯಿದು, ನಾಜಿಗಳ ಶಿಬಿರವಲ್ಲ

ತಲೆ ಎತ್ತಿ
ಒಳಗೆ ಬಾ ವಿದ್ಯಾರ್ಥಿ,

ಶಾಲೆಯಿದು,
ನಾಜಿಗಳ ಶಿಬಿರವಲ್ಲ…
ಕಲಿಕೆಯ ಕ್ರೀಡಾಂಗಣ

ಶಾಲೆಯಿದು
ಹೇಳಿದ್ದನ್ನೆಲ್ಲ
ಕೇಳಬೇಕಾದ ಸೇನೆಯಲ್ಲ

ಪ್ರತಿಯೊಂದನ್ನು ಪ್ರಶ್ನಿಸುವ
ಪ್ರಯೋಗಶಾಲೆ…

ಹಳಸಿದ ಹಳತನ್ನು
ಎಸೆದು
ಹೊಸತಿನ ಎಸಳನ್ನು ಬೆಸೆಯುವ ಸೃಜನಶಾಲೆ

ಶಾಲೆಯಿದು,

ಗೋಣಿಚೀಲಕ್ಕೆ
ಹುಲ್ಲು ತುಂಬುವ

ಸನಾತನ ಕೊಟ್ಟಿಗೆಯಲ್ಲ..

ಹಂಗಿಲ್ಲದೆ ಬೆಳೆಯುವ
ವಿವೇಕದ ಗಿಡಕೆ
ನೀರು ಹಾಯಿಸುವ

ಹೂದೋಟ…

  • ಶಿವಸುಂದರ್

More articles

Latest article

Most read